ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನೆಗೞ್

ನೆಗೞ್=ಪ್ರಸಿದ್ಧಿ ಪಡೆ, ಉದ್ಯೋಗದಲ್ಲಿರು, ಹೆಸರು ಪಡೆ.
ನೆಗೞ್ದ ಕನ್ನಡನಾಡೊಳ್ ಎಣಿಕೆಗಳವಲ್ಲದ ಕಬ್ಬಿಗರ್.
ಭಾವನಾಮ ನೆಗೞ್ತೆ

ನೆಗೞ್(ನಾಮಪದ)=ಮೊಸಳೆ

ಭೂತಕೃದ್ವಾಚಿ ನೆಗೞ್ದು ಹೊಸಗನ್ನಡದಲ್ಲಿ ನೆಗೞಿ
ವರ್ತಮಾನಕೃದ್ವಾಚಿ ನೆಗೞ್ವ ಹೊಸಗನ್ನಡದಲ್ಲಿ ನೆಗೞುವ

ಯಾಕೋ ಈ ಪದ ಹೊಸಗನ್ನಡಿಗರು ಬೞಸುತ್ತಿಲ್ಲ.

ನಿಸ್ವಾರ್ಥಿ ಪಾರಂಪರಿಕ ವೈದ್ಯರ ಮುಂದೆ ಸ್ವಾರ್ಥದ ‘ಪೇಟೆಂಟ್’ ಹಾವಳಿ!

ಇತ್ತೀಚೆಗೆ ತರಹೇವಾರಿ ಪರಿಸರ ಮಾಲಿನ್ಯಗಳು (ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನಮ್ಮ ಕೊಡುಗೆಗಳೇ) ನಮ್ಮ ಬುಡ ಅಲ್ಲಾಡಿಸುವ ಮಟ್ಟಿಗೆ ಬೆಳೆದಿವೆ. ಈ ಸಾಲಿಗೆ ‘ಔಷಧ ಮಾಲಿನ್ಯ’ ಸಹ ಸೇರ್ಪಡೆಗೊಂಡು ನಮ್ಮ ಬದುಕಿಗೆ-ಸಾವಿಗೆ ಇದ್ದ ಅಂತರವನ್ನು ಕಡಿಮೆಗೊಳಿಸುತ್ತಿದೆ ಎಂದು ಅಭಿಪ್ರಾಯ ಪಡುತ್ತಾರೆ ಜಾಗೃತಿ ಸಂಸ್ಥೆಯ ಸಂಯೋಜಕಿ ಶ್ರೀಮತಿ ಶಾರದಾ ಗೋಪಾಲ ದಾಬಡೆ.

ಭಾರತಕ್ಕೆ ಮತ್ತೊಂದು ಪದಕ: ಕುಸ್ತಿಯಲ್ಲಿ ಕಂಚು

ಭಾರತದ ಕುಮಾರ್ ಸುಶಿಲ್ ೬೬ಕೇಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಕಂಚು ಗೆದ್ದಿದ್ದಾರೆ. ಅವರು ಕಜ಼ಕಿಸ್ತಾನದ ಲಿಯೋನಿಡ್ ಸ್ಪಿರಿಡೊನೊವ್ ಅವರನ್ನು ೨-೧, ೦-೧, ೧- ೦ ಯಿಂದ ಸೋಲಿಸಿ ಕಂಚನ್ನು ತಮ್ಮದಾಗಿಸಿಕೊಂಡರು. ತುರ್ಕಿಯ ರಮಜ಼ನ್ ಸಹಿನ್ (Ramazan Sahin) ಚಿನ್ನ ಗೆದ್ದರೆ ಸ್ಟಾಡ್ನಿಕ್ ಆಂಡ್ರಿಯ್ (STADNIK Andriy) ಬೆಳ್ಳಿಯ ಪದಕ ಗೆದ್ದರು.
ಜಾರ್ಜಿಯಾದ ತುಶಿಶ್ವಿಲಿ ಒಟಾರ್ (TUSHISHVILI Otar) ಕೂಡ ಇದೇ ಸ್ಪರ್ಧೆಯಲ್ಲಿ ಕಂಚಿನ ಪದಕ ಗಳಿಸಿದರು.
ಅಥೆನ್ಸ್ ನ ಒಲಿಂಪಿಕ್ಸ್ ನಲ್ಲಿ ಕುಮಾರ್ ೧೪ನೇ ಸ್ಥಾನ ಹಾಗೂ ಸ್ಪಿರಿಡೊನೋವ್ ೪ನೇ ಸ್ಥಾನ ಪಡೆದಿದ್ದರು.

ಅವರ ಹಿಂದಿನ ಸಾಧನೆಗಳು ಹೀಗಿವೆ.
ಸ್ಥಾನ ಸ್ಪರ್ಧೆ ವರ್ಷ ಸ್ಥಳ
ಒಲಿಂಪಿಕ್ ಕ್ರೀಡೆಗಳು
14 Freestyle - 60kg 2004 Athens, GRE
ವಿಶ್ವ ಸ್ಪರ್ಧೆಗಳು
7 Freestyle - 66kg 2007 Baku, AZE
ಏಷಿಯಾ ಕ್ರೀಡೆಗಳು
2 Freestyle - 66kg 2007 Bishkek, KGZ
8 Freestyle - 66kg 2005 Wuhan, CHN
ಕುಮಾರ್ ಸುಶಿಲ್ ಅವರಿಗೆ ಎಲ್ಲ ಭಾರತೀಯರ ಅಭಿನಂದನೆಗಳು.

ಸ್ವತಂತ್ರವಾಗಿ ಕಾಶ್ಮೀರ ಆಸ್ತಿತ್ವ ಉಳಿಸಿಕೊಂಡೀತೇ?

"ಜಮ್ಮು ಮತ್ತು ಕಾಶ್ಮೀರಗಳು ಪ್ರತ್ಯೇಕವಾಗಿ ತಮ್ಮ ಆಸ್ತಿತ್ವ ಉಳಿಸಿಕೊಳ್ಳುವುದು ಈಗಿನ ಪರಿಸ್ಥಿಯಲ್ಲಿ ಅಸಾಧ್ಯ. ಸ್ವತಂತ್ರವಾಗಿ ಕಾಶ್ಮೀರವೂ ಆಸ್ತಿತ್ವ
ಉಳಿಸಿಕೊಳ್ಳಲಾರದು", ಹೀಗೆನ್ನುವವರು ಫಾರೂಕ್ ಅಬ್ದುಲ್ಲ.
http://www.ibnlive.com/news/kashmir-cant-survive-as-a-free-state-farooq/71650-3-single.html

ಸಾತ್ವಿಕ,ರಾಜಸ,ಥಾಮಸ ಆಹಾರಗಳು

ಆಹಾರಗಳಲ್ಲಿ ಮೂರುಬಗೆಗಳು ಎಂಬುದನ್ನು ಹಲವಾರು ಬಾರಿ ಕೇಳಿದ್ದೇನೆ, ಓದಿದ್ದೇನೆ. ಸಿಹಿ,ಖಾರ, ಹುಳಿ ಇವುಗಳು ರಾಜಸಗಳೆಂದೂ, ಮೊಸರು, ಈರುಳ್ಳಿ, ಬದನೇಕಾಯಿ, ಕರಿದ ಪದಾರ್ಥಗಳು ಇತ್ಯಾದಿಗಳು ಥಾಮಸ ಆಹಾರಗಳೆಂದೂ, ಯಾವ ಆಹಾರಗಳು ಚಿತ್ತ ಶುದ್ಧಿಗೆ ಇಂಬುಕೊಟ್ಟು ಶಾಂತಮನಸ್ಸಿಗೆ ಸಹಾಯಕಾರಿಯಾಗುವಂಥವು ಸಾತ್ವಿಕ ಆಹಾರಗಳು ಎಂದು ವಿಂಗಡಿಸಲಾಗಿದೆಯಂತೆ.

ಕನಸಿನ ಮಾತುಗಳು

ನೀ ನನ್ನ ಕನಸಿಗೆ ಬಂದು ಹಾಡುವಾಗ ಕವನ
ಎಲ್ಲ ನೋವು ಮರೆತು ನಿನ್ನೆಡೆಗೆ ತಿರುಗಿತು ನನ್ನ ಗಮನ
ಕಂಗಾಲಾದ ಮನಸಿನ ಭಾರ ಇಳಿಸಿದ ನಿನಗೆ ನನ್ನ ನಮನ
ಕಣ್ಣಿಂದಲೇ ಸ್ಪರ್ಶಿಸಿದ ಮನಸು ಪಾವನ

ನಾ ನಿನ್ನ ಕನಸಿಗೆ ಬಂದು ಹೋದರೆ
ನನಗಿರಲಿ ಒಂದೇ ಒಂದು ದೂರವಾಣಿ ಕರೆ
ನಾ ನಿನ್ನ ಮಾತನು ಕೇಳದೆ ಇನ್ನು ಇರಲಾರೆ
ನಿನ್ನ ನಾ ನೋಡದೆ ಕ್ಷಣಕಾಲವು ಜೀವಿಸಲಾರೆ

ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!

ಸದಾ ಸುದ್ದಿಯಲ್ಲಿರಲು ಬಯುಸುವ "ಬುದ್ಧಿಜೀವಿ" ಅರುಂಧತಿ ರಾಯ್ ಮತ್ತೊಂದು ಆಘಾತಕಾರಿ ಹೇಳಿಕೆ ನೀಡಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅವರ ಹೇಳಿಕೆ ಹೀಗಿದೆ.
“And if no one is listening then it is because they don"t want to hear. Because this is a referendum. People don"t need anyone to represent them; they are representing themselves. As somebody who has followed people"s movements and who has been in rallies and at the heart or the edge of things, I don"t think you can dispute what you see here,”

ಪಡು

ಪಡು ಇದಕ್ಕೆ ಸಾಕಷ್ಟು ಅರ್ಥಗಳಿವೆ.
೧) ಪಡು=ಮಲಗು, ಸೂರ್ಯ ಪಡುವ ದಿಕ್ಕು ಪಡುವಲು
ಪಡಸಾಲೆ, ಪಡುಕೋಣೆ=ಮಲಗುವ ಕೊಠಡಿ
ಪೞ್ಕೆ=ಪಕ್ಕೆ= ಮಲಗುವ ಮಗ್ಗುಲು ಮನುಷ್ಯ ಎಡ ಅಥವಾ ಬಲಮಗ್ಗುಲಲ್ಲೆ ಮಲಗುವುದಱಿಂದ ಪೞ್ಕೆ(ಪಕ್ಕೆ)
ಹಾಗೆಯೇ ಪೞ್ಕೆಲುಬು=ಪಕ್ಕೆಲುಬು
೨) ಪಡು=ಅನುಭವಿಸು, ಹೊಂದು
ಉದಾ:- ಅವನು ಸಂತೋಷ ಪಟ್ಟನು. ಅವನು ದುಃಖ ಪಟ್ಟನು
ಭಾವನಾಮ ಪಾಡು=ಅನುಭವ

ಜಾತ್ಯತೀತರೆಂಬ ಕೋಮುವಾದಿಗಳು (ಭಾಗ-೨)

ಭಾಗ-೨

(ಈ ಲೇಖನ ಡಿ.ಎಸ್‌. ನಾಗಭೂಷಣ ಅವರ ’ಕಾಶ್ಮೀರ ಬೆಂಕಿ: ಎಚ್ಚರವಿರಲಿ’ ಎಂಬ ಲೇಖನಕ್ಕೆ ನೀಡಿದ ಪ್ರತಿಕ್ರಿಯಾ ಲೇಖನದ ಎರಡನೇ ಭಾಗ. ಮೂಲ ಲೇಖನವನ್ನು http://sampada.net/article/10890 ದಲ್ಲಿ ನೋಡಬಹುದು. ನನ್ನ ಲೇಖನದ ಮೊದಲ ಭಾಗವನ್ನು http://sampada.net/article/10916 ನಲ್ಲಿ ನೋಡಬಹುದು)