ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಜಾತ್ಯತೀತರೆಂಬ ಕೋಮುವಾದಿಗಳು (ಭಾಗ-೨)

ಭಾಗ-೨

(ಈ ಲೇಖನ ಡಿ.ಎಸ್‌. ನಾಗಭೂಷಣ ಅವರ ’ಕಾಶ್ಮೀರ ಬೆಂಕಿ: ಎಚ್ಚರವಿರಲಿ’ ಎಂಬ ಲೇಖನಕ್ಕೆ ನೀಡಿದ ಪ್ರತಿಕ್ರಿಯಾ ಲೇಖನದ ಎರಡನೇ ಭಾಗ. ಮೂಲ ಲೇಖನವನ್ನು http://sampada.net/article/10890 ದಲ್ಲಿ ನೋಡಬಹುದು. ನನ್ನ ಲೇಖನದ ಮೊದಲ ಭಾಗವನ್ನು http://sampada.net/article/10916 ನಲ್ಲಿ ನೋಡಬಹುದು)

ಹಣೆಯಲ್ಲಿ ಬರೆದದ್ದು


ತಾನೆ ಲೋಕಕ್ಕೊಡೆಯ ಮಾವ ಬೆಟ್ಟಗಳೊಡೆಯ
ಗೆಳೆಯನೋ ಸಿರಿಗೊಡೆಯ  ಮಗ ಗಣಗಳೊಡೆಯ
ಅದಕೇನು? ತಿರಿದು ತಿಂಬುದು ತಪ್ಪಲಿಲ್ಲವು ಶಿವಗೆ
ಅದಕೆ ಹೇಳುವೆನಿಂದು ವಿಧಿಯೆ ಬಲವೆಂದು! 

ಮೂಲ ಸಂಸ್ಕೃತ ಪದ್ಯ ಹೀಗಿದೆ:

ಸ್ವಯಂ ಮಹೇಶಃ ಶ್ವಶುರಃ ನಗೇಶಃ ಸಖಾ ಧನೇಶಃ ತನಯಃ ಗಣೇಶಃ |
ತಥಾಪಿ ಭಿಕ್ಷಾಟನಮೇವ ಶಂಭೋಃ ಬಲೀಯಸೀ ಕೇವಲಮೀಶ್ವರಿಚ್ಛಾ! ||

ಸಂಪದದಲ್ಲಿನ My Subscriptions...

ಸಂಪದದಲ್ಲಿ My Subscriptions ಅನ್ನೊ ಕೊಂಡಿ ನನ್ನ ವೆಬ್ ಪೇಜ್ ನಲ್ಲಿ ಕಾಣಿಸ್ತಾ ಇಲ್ಲ. ಇವತ್ತು ಮಧ್ಯಾಹ್ನದಿಂದ ನನ್ನ ವೆಬ್ ಪೇಜ್ ನಲ್ಲಿ My Subscriptions ಬರುತ್ತಾ ಇಲ್ಲ.
ನಾನು Subscribe ಮಾಡಿರುವಂಥಾ ಯಾವುದೇ ಚರ್ಚೆ, ಲೇಖನ ಮತ್ತು ಬ್ಲಾಗ್ ಬಗ್ಗೆ ನನಗೆ ಈ-ಮೇಲ್ ಮೂಲಕ ಮಾಹಿತಿ ಬರುತ್ತದೆ. ಆದರೆ, ಇಂದು ಮಧ್ಯಾಹ್ನದಿಂದ ಈ ಮಾಹಿತಿಗಳು ಬರುತ್ತಿಲ್ಲ... ಯಾಕೆ ಅಂತ ಗೊತ್ತಾಗ್ತಿಲ್ಲ... :-(

ಬೆಚ್ಚಗೆ ನಿನ್ನ ನೆನಪು

ಮುಂಜಾನೆಯ ಚಳಿಯಲ್ಲಿ ಬೆಚ್ಚಗೆ ನಿನ್ನ ನೆನಪು
ನೆನೆ ನೆನೆದು ನಿನ್ನ ಹೆಸರ ಕನವರಿಸುತಿದೆ ಮನವು
ಹುಡುಕಿದರೂ ಸಿಗಲಿಲ್ಲ ಎಲ್ಲು ನಿನ್ನ ಸುಳಿವು
ಮನದಾಳದಲ್ಲಿ ಕಾಡುತಿದೆ ನೀ ಬಿಟ್ಟು ಹೋದ ಒಲವು

ಸೂರ್ಯನು ಬರುವ ಮುಂಚೆಯೇ ನಿನ್ನ ನೋಡಬೇಕೆಂಬ ಕಾತುರ
ಮಲ್ಲಿಗೆ ಅರಳುವ ಮುನ್ನ ನಿನ್ನ ಮಾತಾಡಿಸಬೇಕೆಂಬ ಆತುರ
ನಿನ್ನ ಇಷ್ಟು ಕಾಡೋಕೆ ಕಾರಣ ನೀ ಕೊಟ್ಟ ಸದರ

‘ವಿನಾ ದೈನ್ಯೇನ ಜೀವನಂ..ಅನಾಯಾಸೇನ ಮರಣಂ!’

ಶರೀರವೆಂತೆಂಬುವ ಹೊಲವ ಹಸನು ಮಾಡಿ
ಪರತತ್ವ ಬೆಳೆಯನೆ ಬೆಳೆದುಣ್ಣಿರೋ//

ಶಮೆದಮೆಯೆಂದೆಂಬ ಎರಡೆತ್ತುಗಳ ಹೂಡಿ
ವಿಮಲಮಾನಸವ ನೇಗಿಲವನೇ ಮಾಡಿ
ಮಮಕಾರವೆಂದೆಂಬ ಕರಿಕೆಯ ಕಳೆದಿಟ್ಟು
ಸಮತೆಯೆಂದೆಂಬುವ ಗೊಬ್ಬರ ಚೆಲ್ಲಿ//

ಗುರುವರನುಪದೇಶವೆಂಬ ಬೀಜವ ಬಿತ್ತಿ
ಮೆರೆವ ಸಂಸ್ಕಾರ ವೃಷ್ಠಿಯ ಬಲದಿ
ಅರಿವೆಂಬ ಪೈರನೆ ಬೆಳೆಸುತೆ ಮುಸುಗಿರ್ದ
ದುರಿತದುರ್ಗುಣವೆಂಬ ಕಳೆಯನು ಕಿತ್ತು//

ದಿವಂಗತ ವೆಂಕಟಪ್ಪನು ಮಾಡುವ ವಿಜ್ಞಾಪನೆಗಳು!

ನಾನು ಕೆಲಸ ಮಾಡುತ್ತಿದ್ದ ಹಿಂದಿನ ಕಂಪೆನಿಯಲ್ಲಿ ವೆಂಕಟೇಶ್ ನನ್ನ ಸಹೋದ್ಯೋಗಿ. ಎಲ್ಲರ ಜೊತೆ ತಮಾಷೆಯಾಗಿ ಮಾತಾಡಿಕೊಂಡು , ಲವಲವಿಕೆಯಿಂದ ಓಡಾಡಿಕೊಂಡು ಚನ್ನಾಗಿಯೇ ಇದ್ದರು. ಹೀಗಿರುವಾಗ ಇದ್ದಕ್ಕಿದ್ದಹಾಗೆ ಒಂದು ದಿನ ಸಡನ್ನಾಗಿ ಅವರ ಮದುವೆ ಗೊತ್ತಾಯಿತು!

ಲಿಂಬಿಹಣ್ಣು -೨

ಅಪ್ಪ ತನ್ನ ಮೂರು ಮಂದಿ ಮಕ್ಕಳಿಗೆ ತಲಾ ೧೦ ,೩೦, ೫೦ ಲಿಂಬಿ ಹಣ್ಣು ಕೊಟ್ಟು ಮಾರಲಿಕ್ಕೆ ಕಳಿಸಿದ. ಅವರು ಒಂದೇ ಬಜಾರದಲ್ಲಿ, ಒಂದೇ ಕಡೆ ಕುಳಿತು ತಮ್ಮ ತಮ್ಮ ಎಲ್ಲ ಲಿಂಬಿಹಣ್ಣುಗಳನ್ನು ಒಂದೇ ದರದಲ್ಲಿ ಮಾರಿದರು. ಎಲ್ಲರೂ ಸರಿಸಮ ಹಣ ತಂದರು. ಹಾಗಾದರೆ ಅವರು ಯಾವ ದರದಲ್ಲಿ ಹಣ್ಣು ಮಾರಿದರು ? ಎಷ್ಟು ಹಣ ತಂದರು ?