ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕನಸಿನ ಮಾತುಗಳು

ನೀ ನನ್ನ ಕನಸಿಗೆ ಬಂದು ಹಾಡುವಾಗ ಕವನ
ಎಲ್ಲ ನೋವು ಮರೆತು ನಿನ್ನೆಡೆಗೆ ತಿರುಗಿತು ನನ್ನ ಗಮನ
ಕಂಗಾಲಾದ ಮನಸಿನ ಭಾರ ಇಳಿಸಿದ ನಿನಗೆ ನನ್ನ ನಮನ
ಕಣ್ಣಿಂದಲೇ ಸ್ಪರ್ಶಿಸಿದ ಮನಸು ಪಾವನ

ನಾ ನಿನ್ನ ಕನಸಿಗೆ ಬಂದು ಹೋದರೆ
ನನಗಿರಲಿ ಒಂದೇ ಒಂದು ದೂರವಾಣಿ ಕರೆ
ನಾ ನಿನ್ನ ಮಾತನು ಕೇಳದೆ ಇನ್ನು ಇರಲಾರೆ
ನಿನ್ನ ನಾ ನೋಡದೆ ಕ್ಷಣಕಾಲವು ಜೀವಿಸಲಾರೆ

ಲ೦ಡನ್ ಪ್ರವಾಸಕಥನ ಭಾಗ ೧೪: ಒ೦ದಿಷ್ಟು ಚೂರು ಪಾರು--ಅಡುಗೆ

ನನ್ನ ಕೋಣೆಯ ಪಕ್ಕದಲ್ಲಿ ಕಾಮನ್ ಕಿಚನ್ ಎ೦ದೆ. ದಿನವಹೀ ಅಲ್ಲಿ ಒಬ್ಬರಲ್ಲ ಒಬ್ಬರು ಅಡುಗೆ ಮಾಡುವದು ‘ಕಾಮನ್' ಆದ್ದರಿ೦ದ ಅದನ್ನು ಕಾಮನ್ ಕಿಚನ್ ಅನ್ನುವುದು. ಅಡುಗೆ ಮಾಡಲು ಹೋದಾಗಲೆಲ್ಲ ಸ್ಟೌವಿನ ಮೇಲೆ ಯಾರಾದರೂ ಏನನ್ನಾದರೂ ಬೇಯಿಸಿರುತ್ತಿದ್ದರು. ಜಮೈಕದ ಹುಡುಗಿ ಬೇಯಿಸಿರುತ್ತಿದ್ದ ಅಡುಗೆ ನನ್ನ ಫೇವರಿಟ್--ಏಕೆ೦ದರೆ ಅದು ಯಾವ ಪ್ರಾಣಿಯ ಯಾವ ಭಾಗ ಎ೦ಬುದು ಕೊನೆಗೂ ತಿಳಿಯುತ್ತಿರಲಿಲ್ಲ. ಆದರೆ ಅದರೆ ರುಚಿ ಮಾತ್ರ ಅದ್ವಿತೀಯ. ತವ್ವದ ಮೇಲಿರುತ್ತಿದ್ದ ಹತ್ತಾರು ದೊಡ್ಡ ದೊಡ್ಡ ಮಾ೦ಸದ ತು೦ಡುಗಳಲ್ಲಿ ಒ೦ದು ಬಾರಿಗೆ ಒ೦ದು ಪೀಸನ್ನು ಮತ್ರ ಎತ್ತಿಕೊಳ್ಳುತ್ತಿದ್ದೆ. ಹಾಗೆ ಮಾಡಲು ನನಗೆ ನಾನೇ ಅನುಮತಿ ನೀಡಿಕೊಳ್ಳುತ್ತಿದ್ದೆ. ಬದಲಿಗೆ ಜಮೈಕದ ಹುಡುಗಿ ಮೇರಿಗೆ ಆಗಾಗ ಏನಾದರೂ ಗಿಫ್ಟ್ ನೀಡುತ್ತಿದ್ದೆ. ‘ಕಾರ್ಯಕಾರಣ ಸ೦ಬ೦ಧ'ವೆ೦ದರೇನೆ೦ದು ಕೇಳಿ ತಿಳಿಯದ ಆಕೆಗೆ ಮಟನ್ನಿಗಾಗಿ ನೀಡಲಾಗಿತ್ತಿದ್ದ ಗಿಫ್ಟ್ ಅದು ಎ೦ದು ಹೇಗೆ ತಿಳಿಹೇಳಲಿ ಹೇಳಿ. ‘ಧನ ತಿನ್ನುವವನಿಗೆ ಗೊಬ್ಬರದಾಣೆ' ಎ೦ದ೦ತಾಯ್ತಿದು!        

ಲಿಂಬಿಹಣ್ಣು

ಅಪ್ಪ ತನ್ನ ಮೂರು ಮಂದಿ ಮಕ್ಕಳಿಗೆ ತಲಾ ೧೦ ,೨೦, ೩೦ ಲಿಂಬಿ ಹಣ್ಣು ಕೊಟ್ಟು ಮಾರಲಿಕ್ಕೆ ಕಳಿಸಿದ. ಅವರು ಒಂದೇ ಬಜಾರದಲ್ಲಿ, ಒಂದೇ ಕಡೆ ಕುಳಿತು ತಮ್ಮ ತಮ್ಮ ಎಲ್ಲ ಲಿಂಬಿಹಣ್ಣುಗಳನ್ನು ಒಂದೇ ದರದಲ್ಲಿ ಮಾರಿದರು. ಎಲ್ಲರೂ ಸರಿಸಮ ಹಣ ತಂದರು. ಹಾಗಾದರೆ ಅವರು ಯಾವ ದರದಲ್ಲಿ ಹಣ್ಣು ಮಾರಿದರು ? ಎಷ್ಟು ಹಣ ತಂದರು ?

ಉತ್ತರ :ಉತ್ತರಗಳು :
ಲಿಂಬಿಹಣ್ಣು

ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.

ಮತ್ತೆ ನಿಲ್ಲುವೆ, ನೀ

ಬರುವ ದಾರಿಯಲಿ, ಹೂ

ಚೆಲ್ಲಿ ಕಾಯುತ್ತ.

 

ಎಸ್ಟು ಬಂದರೂ ಬರಗಾಲ,

ಮತ್ತೆ ಬೀಜವ ಬಿತ್ತಿ,

ಹಣೆಗೆ ಕೈ ಹಚ್ಚಿ ರೈತ,

ಮೋಡಗಳ ಕಾಯ್‍ವಂತೆ.

 

ಮತ್ತೆ ನಿಲ್ಲುವೆ, ನೀ

ಬರುವ ದಾರಿಯಲಿ, ಹೂ

ಚೆಲ್ಲಿ ಕಾಯುತ್ತ.

 

ಕಡಲಾಳದಲ್ಲೆಲ್ಲೋ,

ಎಂದೋ ಬರುವ ಸ್ವಾತಿ ಮಳೆಗೆ,

ತೆಲುಗು ಸಿನೆಮಾ ರಂಗದಲ್ಲಿ ಕನ್ನಡಿಗರು

- ಮುಠಾಮೇಸ್ತ್ರಿ ಆಗುವನೆ ಆಂಧ್ರದ ಸಿ.ಎಮ್ಮು. ?
- ಜಯಪ್ರದ, ವಿಜಯಶಾಂತಿ, ರೋಜಾ, ಬಾಲಕೃಷ್ಣ

ಮೇಲಿನ ಲೇಖನಗಳಿಗೆ ಪೂರಕವಾಗಿ ಬರೆದ ಬರಹ ಇದು.

ತೆಲುಗು ಸಿನೆಮಾ ರಂಗದಲ್ಲಿ ಕನ್ನಡಿಗರು
ಕರ್ನಾಟಕಲ್ಲಿ ಕಾಣದ ಒಂದು ಸಂಸ್ಕೃತಿ ಆಂಧ್ರದಲ್ಲಿದೆ. ಅದೇನೆಂದರೆ, ಕುಟುಂಬಸಮೇತರಾಗಿ ಸಿನೆಮಾಗಳಿಗೆ ಹೋಗುವುದು. ಸಿನೆಮಾ ಹುಚ್ಚಿನ ಅಪ್ಪಅಮ್ಮಂದಿರು ಮಕ್ಕಳನ್ನೂ ಕರೆದುಕೊಂಡು ಸಿನೆಮಾ ಎಂಜಾಯ್ ಮಾಡಲು ಹೋಗುತ್ತಾರೆ. ವಾರಕ್ಕೆರಡು ಸಿನೆಮಾ ಬಿಡುಗಡೆ ಆಗುವ ತೆಲುಗು ಸಿನೆಮಾ ರಂಗದಲ್ಲಿ ಹೀಗಾಗಿಯೆ ಅನೇಕ ಸೂಪರ್‌ಸ್ಟಾರ್‌ಗಳು. ಈ ಎಲ್ಲಾ ಸೂಪರ್‌ಸ್ಟಾರ್‌ಗಳಿಗೂ ಪ್ರಕಾಶ್ ರಾಜ್ ಎಂಬ ನಟ ತಮ್ಮ ಚಿತ್ರದಲ್ಲಿ ವಿಲ್ಲನ್ ಆಗಿಯೊ, ಇಲ್ಲದಿದ್ದರೆ ಇನ್ಯಾವುದಾದರೂ ಮುಖ್ಯಪಾತ್ರದಲ್ಲಿಯೂ ಇರಲೇಬೇಕು. ಈ ಪ್ರಕಾಶ್ ರಾಜ್ ಮಹಾನ್ ಕಿರಿಕಿರಿ ಆಸಾಮಿ. ಅನೇಕ ಸಲ ಅಲ್ಲಿನ ಕಲಾವಿದರ ಒಕ್ಕೂಟದಲ್ಲಿ ನಿರ್ಮಾಪಕರು ಈತನ ಮೇಲೆ ದೂರು ಕೊಟ್ಟಿದ್ದಾರೆ. ಒಮ್ಮೆಯಂತೂ ಈತನನ್ನು ಆರು ತಿಂಗಳು ಸಿನೆಮಾದಲ್ಲಿ ನಟಿಸದಂತೆ ಬ್ಯಾನ್ ಮಾಡಲಾಗಿತ್ತು. ಸರಿಯಾಗಿ ಡೇಟ್ಸ್ ಕೊಡುವುದಿಲ್ಲ, ಯಾರ ಮೇಲೆಯೊ ಕೈಮಾಡಿದ್ದ, ಎಂದೆಲ್ಲ ದೂರು. ತಮಿಳಿನಲ್ಲಿಯೂ ಆತ ಬಹಳ ಬ್ಯುಸಿ ನಟ. ಇಷ್ಟಾದರೂ ತೆಲುಗಿನ ಸೂಪರ್‌ಸ್ಟಾರ್‌ಗಳಿಗೆ, ನಿರ್ಮಾಪಕರಿಗೆ ಈ ನಟ ಬೇಕೆ ಬೇಕು. ಯಾಕೆಂದರೆ, ಆತ ಅಂತಹ ಅಗಾಧ ಪ್ರತಿಭಾವಂತ. ತೆರೆಯ ಮೇಲೆ ಪಾತ್ರವನ್ನೆ ಜೀವಿಸಿಬಿಡುತ್ತಾನೆ. ಈ ಪ್ರಕಾಶ್ ರಾಜ್ ಬೇರಾರೂ ಅಲ್ಲ, ನಮ್ಮ ಕನ್ನಡದ ಪ್ರಕಾಶ್ ರೈ.

ಜಯಪ್ರದ, ವಿಜಯಶಾಂತಿ, ರೋಜಾ, ಬಾಲಕೃಷ್ಣ...

(ಜನವರಿ 2008 ರಲ್ಲಿ ಬರೆದ ಲೇಖನ ಇದು. "ವಿಕ್ರಾಂತ ಕರ್ನಾಟಕ" ವಾರಪತ್ರಿಕೆಯ ಜನವರಿ 18, 2008 ರ ಸಂಚಿಕೆಯ ಮುಖಪುಟ ಲೇಖನವಾಗಿ ಪ್ರಕಟವಾಗಿದೆ. ಚಿರಂಜೀವಿ ಈಗ ಅಧಿಕೃತವಾಗಿ ರಾಜಕೀಯ ಪ್ರವೇಶ ಮಾಡುವ ಬಗ್ಗೆ ಘೋಷಣೆ ಮಾಡಿರುವ ಸಮಯದಲ್ಲಿ ಅಂತರ್ಜಾಲದಲ್ಲಿ ಪ್ರಕಟಿಸುತ್ತಿದ್ದೇನೆ. - ರವಿ...)

-ಮೊದಲ ಭಾಗ
-- ಮುಠಾಮೇಸ್ತ್ರಿ ಆಗುವನೆ ಆಂಧ್ರದ ಸಿ.ಎಮ್ಮು. ?"

ಆಂಧ್ರದಿಂದ ಹಾರಿಹೋದ ಶಾಕುಂತಲೆ
ಕನ್ನಡದ ಪ್ರೀತಿಯ ಅಣ್ಣಾವ್ರು ನಟಿಸಿರುವ ಕವಿರತ್ನ ಕಾಳಿದಾಸ ಚಿತ್ರದಲ್ಲಿ ಕಾಳಿದಾಸನ ಹೆಂಡತಿಯಾಗಿ, ಕವಿಕಲ್ಪನೆಯ ಶಾಕುಂತಲೆಯಾಗಿ, "ಪ್ರಿಯತಮಾ, ಕರುಣೆಯಾ ತೋರೆಯಾ?"

ಮುಠಾಮೇಸ್ತ್ರಿ ಆಗುವನೆ ಆಂಧ್ರದ ಸಿ.ಎಮ್ಮು. ?

(ಜನವರಿ 2008 ರಲ್ಲಿ ಬರೆದ ಲೇಖನ ಇದು. "ವಿಕ್ರಾಂತ ಕರ್ನಾಟಕ" ವಾರಪತ್ರಿಕೆಯ ಜನವರಿ 18, 2008 ರ ಸಂಚಿಕೆಯ ಮುಖಪುಟ ಲೇಖನವಾಗಿ ಪ್ರಕಟವಾಗಿದೆ. ಚಿರಂಜೀವಿ ಈಗ ಅಧಿಕೃತವಾಗಿ ರಾಜಕೀಯ ಪ್ರವೇಶ ಮಾಡುವ ಬಗ್ಗೆ ಘೋಷಣೆ ಮಾಡಿರುವ ಸಮಯದಲ್ಲಿ ಅಂತರ್ಜಾಲದಲ್ಲಿ ಪ್ರಕಟಿಸುತ್ತಿದ್ದೇನೆ. - ರವಿ...)

1980 ರಲ್ಲಿ ಇತ್ತ ಕರ್ನಾಟಕದಲ್ಲಿ ಗುಂಡೂರಾವ್ ಎಂಬ ಅರೆ ಜೋಕರ್, ಅರೆ ಗೂಂಡಾ ಮುಖ್ಯಮಂತ್ರಿಯಾದರೆ, ಅತ್ತ ಆಂಧ್ರ ಪ್ರದೇಶದಲ್ಲಿ ಮುಖ್ಯಮಂತ್ರಿಯಾದಾತನ ಹೆಸರು ಅಂಜಯ್ಯ. ಪೂರ್ಣ ಜೋಕರ್. ಯಾವೊಬ್ಬ ಆಂಧ್ರದ ಮುಖ್ಯಮಂತ್ರಿಯೂ ಮುಂದೆ ಸಾಧಿಸಲಾಗದ್ದನ್ನು ಆತ ಮಾಡಿದ. ಏನೆಂದರೆ, 72 ಜನರನ್ನು ಮಂತ್ರಿಗಳನ್ನಾಗಿ ಮಾಡಿದ್ದ! ಆತನನ್ನು ಇಂದಿರಾ ಗಾಂಧಿ ಅಧಿಕಾರದಿಂದ ಕೆಳಗಿಳಿಸಿದಾಗ ಆತ ಹೀಗೆ ಅಂದ ಅನ್ನುತ್ತಾರೆ: "ನಾನು ಮೇಡಮ್ಮಿನ ಆಶೀರ್ವಾದದಿಂದ ಬಂದೆ, ಈಗ ಅವರ ಅದೇಶದ ಮೇರೆಗೆ ಹೋಗುತ್ತಿದ್ದೇನೆ. ನಾನು ಯಾಕೆ ಬಂದೆ, ಈಗ ಯಾಕೆ ಹೋಗುತ್ತಿದ್ದೇನೆ ಎನ್ನುವುದೇನೂ ನನಗೆ ಗೊತ್ತಿಲ್ಲ."

ಪಾಪ. ಇಂತಹ ಕುರಿಯನ್ನೂ, ಆತ ಒಂದು ರಾಜ್ಯದ ಮುಖ್ಯಮಂತ್ರಿ ಎನ್ನುವುದನ್ನೂ ನೋಡದೆ ಹೈದರಾಬಾದಿನ ವಿಮಾನನಿಲ್ದಾಣದಲ್ಲಿ ಆಗಿನ ಪ್ರಧಾನಿಯ ಮಗ ರಾಜೀವ ಗಾಂಧಿ ಅವಮಾನಿಸಿ ಬಿಟ್ಟರು. ಅಷ್ಟು ಸಾಲದೆಂಬಂತೆ,

ಹನ್ನೊಂದು ಸದಸ್ಯರು ಮತ್ತು ಮುನ್ನೂರು ಅತಿಥಿಗಳು!

ಸಂಪದ ಪುಟಕ್ಕೆ ಬಂದಾಗಲೆಲ್ಲಾ ಎಷ್ಟು ಜನರು ಆನ್‌ಲೈನ್‌ನಲ್ಲಿ ಇರುತ್ತಾರೆ ಎಂದು ಕಣ್ಣಿಗೆ ಬೀಳುತ್ತಿರುತ್ತದೆ. ಆದರೆ ಇವತ್ತು ನಾನು ನಿಜಕ್ಕೂ ದಂಗು ಬಡಿದು ಹೋದೆ- ಹನ್ನೊಂದು ಸದಸ್ಯರು ಮತ್ತು ಮುನ್ನೂರು ಅತಿಥಿಗಳು ಆನ್‌ಲೈನ್ ಇದ್ದಾರೆ ಎಂದಿತ್ತು. ಹೆಚ್ಚಾಗಿ ನಲ್ವತ್ತು -ಐವತ್ತು ಮೀರದ ಸಂಖ್ಯೆ ಮುನ್ನೂರು ದಾಟಿದೆ!