ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

Typical ನಲ್ಲನ ಒಲುಮೆಯಳಲು

೧) ನಾನ್ ನಿಮ್ಮನ್ನ ಲವ್ ಮಾಡುವಸ್ಟು ಮತ್ಯಾರೂ ನಿಮ್ಮನ್ನ ಲವ್ ಮಾಡಲ್ಲ.

೨) ನೀವ್ ಸಿಗದಿದ್ದರೂ ಬೇಜಾರಿಲ್ಲ, ಮುಂದಿನ ಜನುಮದಲ್ಲಾದರೂ ನೀವ್ ನನ್ನವಳೇ.

೩) ನನ್ನ ಏಳೇಳು ಜನುಮದಲ್ಲೂ ನೀವೆ ನನೆಂತಿ ಅಂತ ಬ್ರಹ್ಮ ಬರೆದಾಗಿದೆ.

ಓದಬೇಕು & ಓದಿಕೊಳ್ಳಬೇಕು

ಓದಬೇಕು ಮತ್ತು ಓದಿಕೊಳ್ಳಬೇಕು

ಪ್ರಯೋಗದಲ್ಲಿ ಇವೆರಡಕ್ಕೂ ವ್ಯತ್ಯಾಸವಿದೆಯೇ ?

ಅಥವಾ ಎರಡರ ಅರ್ಥವೂ ಒಂದೆಯೇ ?

ದಯವಿಟ್ಟು ತಿಳಿಸಿ.

ಮರುಮರಣ

ಕತ್ತಲೆಯ ರಾತ್ರಿಯಲಿ ಮನಸಾಗಿದೆ ಕಪ್ಪು
ಆ ಕಪ್ಪು ಮನದಲ್ಲಿ ಬಿಳಿ ಚಂದ್ರ ನೀನು
ಬಿಳಿ ಚಂದ್ರ ಬೆಳಕಲ್ಲಿ ಕನಸುಗಳ ಗುಂಪು
ಆ ಕನಸು ರಾಶಿಯಲಿ ತುಂಬಿರುವೆ ನೀನು

ನಡುರಾತ್ರಿ ಬಯಲಲ್ಲಿ ಆ ಗೂಬೆ ಸದ್ದು
ನಾಯಿಗಳ ಒದರಾಟ ಬಾನೇಲ್ಲ ಗುಡುಗಾಟ
ನನಗೇನು ಅರಿವಿಲ್ಲ ಆ ಎಲ್ಲ ಗೊಣಗಾಟ
ಅಡುತಿಹೆ ನಾನು ಕನಸಲ್ಲಿ ನಿನ್ನೊಡನೆ ಆಟ

ತುಂಬಿರಲು ಕ್ಷಣ ಕ್ಷಣವು ಮನದಲಿ ಮೌನ

ವಧು ಪರೀಕ್ಷೆ

ಹುಡುಗಿಗೆ ಮನ್ಮಥನ ಕನಸು...... ನಾಳೆ
ನಡೆಯಲಿರುವ ಪರೀಕ್ಷೆಯಲ್ಲಿ ಮನ್ಮಥನ ಮೆಚ್ಚಿಸುವ ಪರಿಗೆ
ಇಂದೇ ಶುರುವಿಟ್ಟುಕೊಂಡಳು ತಪಸ್ಸು .
ಮಧ್ಯೆ ಅಮ್ಮ ಹೇಳಿದ ಮಂತ್ರಗಳ ಪಟನೆ,
ಕನ್ನಡಿಗೋ ನಾಚಿಕೆ ,ಹುಡುಗಿಗಿಲ್ಲ ಅಂಜಿಕೆ .

ನಾಳೆ ಎಂಬ ನಾಳೆ ಬಂತು .ವರನ ಕಡೆಯ ಕಾರು ಬಂತು .
ಮನೆಮಂದಿಗೆ ಏನೋ ಎಂತೋ ?........
ಹುಡುಗಿ ಇಣುಕಿ ಇಣುಕಿಯೇ ಸುಸ್ತು .

ಬದುಕಿದು ಜಟಕಾ ಬಂಡಿ..ಮೊಹಮ್ಮದ್ ಗೌಸ್ ಅದರ ಸಾಹೇಬಾ!

ನಮ್ಮ ಪರಿಸರ ಸಂರಕ್ಷಣೆಯ ವಿಷಯಕ್ಕೆ ಸಂಬಂಧಿಸಿದಂತೆ `29th Day', ನಿಗದಿಗೊಳಿಸಿದ ಸಮಯಕ್ಕಿಂತ ಒಂಡು ಗಂಟೆ ಮುಂಚೆ `11th Hour', ಹಾಗೆಯೇ ಸುದ್ದಿ ಮನೆಯ ಬಾಣಸಿಗ ಪತ್ರಕರ್ತನಿಗೆ `Dead line' ಸುದ್ದಿ ಹೆಕ್ಕಿ, ಪೋಣಿಸಿ ನೀಡಲು ಲಕ್ಷ್ಮಣ ರೇಖೆ. ಹೀಗೆಯೇ ನಮ್ಮ ಇಂದ್ರಿಯಗಳನ್ನೆಲ್ಲ ಚುರುಕುಗೊಳಿಸಿಕೊಂಡು ಸೂಕ್ಷ್ಮವಾಗಿ ನಮ್ಮ ಸುತ್ತಮುತ್ತಲಿನ ಬೆಳವಣಿಗೆಗಳನ್ನು ಗಮನಿಸಿದರೆ ‘ಅಭಿವೃದ್ಧಿ’ ಎಂಬ ಬೆಳವಣಿಗೆಗಳ ಓಘ ಗಮನಕ್ಕೆ ಬರುತ್ತದೆ. ಬಹುಶ: ಭೂಮಿಯ ಮೇಲೆ ಪ್ರತಿಯೊಂದು ಜೀವಿಯು `Dead line' ಹಾಕಿಕೊಂಡೇ ಬದುಕುತ್ತಿದೆ ಏನೋ?

‘ಬದುಕು ಜಟಕಾ ಬಂಡಿ’ ನಿಜ. ಆದರೆ ನಮ್ಮ ನ್ಯಾನೋ ತಂತ್ರಜ್ನಾನದ ಯುಗದಲ್ಲಿ ‘ವಿಧಿ’ ಅಲ್ಲ ಅದರ ಸಾಹೇಬಾ! ನಿಮ್ಮ, ನಮ್ಮೆಲ್ಲರ ಪರಿಕರಗಳು, ಸಾಂಪ್ರದಾಯಿಕ ಪದ್ಧತಿಗಳು, ಧೋರಣೆಗಳು ಈಗಾಗಲೇ `29th Day' ಕಂಡಿವೆ. ಇದು ಅಭಿವೃದ್ಧಿಯ ಸಂಕೇತವಂತೆ! ಇದನ್ನು ‘ಬೆಳವಣಿಗೆ’ ಎಂದು ನಾನು ಕರೆದು, ಆ ಪ್ರಕ್ರಿಯೆಯ ಭಾಗವಾಗಿರುವ ನಮ್ಮನ್ನು ‘ಅಭಿವೃದ್ಧಿ ರಥದ ಚಕ್ರದಡಿಯಲ್ಲಿ ಸಿಲುಕಿದವರು’ ಎಂದರೆ ಸಮಾಧಾನ ಎನಿಸುತ್ತದೆ.

ನಾಳೆ ಎಂಬುದು ಕತ್ತಲು

ನಾಳೆ ಕತ್ತಲು, ಕಾಣೆ
ಏನು ಅಲ್ಲಿದೆ ಎಂದು
ನಿನ್ನೆಯದು ಬೆತ್ತಲೆಯು
ಉಳಿದಿಲ್ಲ ಒಂದು

ಮಾಡಲೇತಕೆ ನೀನು
ಅದರ ಚಿಂತೆಯನು
ಅಂದಿನ ಕೆಲಸವನು
ಮಾಡಲು ಆಂದಂದು

ಕೀಲು ಕೊಟ್ಟರೆ ಕುಣಿವ
ಗೊಂಬಿಗಳು ನಾವಲ್ಲ
ನಮ್ಮೊಳಗೂ ತುಂಬಿಹವು
ನೂವುಗಳು, ನಲಿವುಗಳು

- 1-

ಯಾರಿಗೋ ಯಾತಕೋ
ಈ ಭೂಮಿ ಬ್ರಹ್ಮಾಂಡ
ಆರೂ ಅರಿದವರಿಲ್ಲ
ಅದರ ಪೂರ್ತಿ ಮರ್ಮ

ಪ್ರೀತಿ ಪ್ರೇಮದ ಜಾತ್ರೆ

ಅಂತೂ ಇಂತೂ ಜಿಗುಪ್ಸೆ ಬಂತು

ಪೇಪರ್ ನವರು ಮತ್ತೆ ನಮಗೆ ಮೋಸಮಾಡಿದರು. ನೆನ್ನೆ ಈ ಚಿತ್ರ ಚೆನ್ಣಾಗಿದೆ ಎಂದು ನಾವುಗಳು ನಂಬಿಕೊಂಡು ಹೋಗಿದ್ದಾಯ್ತು. ಒಬ್ಬನ ಜೊತೆ ಒಂದು ಹುಡುಗಿಯ ಎಂಗೇಜ್ಮೆಂಟಾಗಿರುತ್ತೆ. ಪ್ರೇಮಸುಳಿಯಲ್ಲಿ ಸಿಕ್ಕಿ ಎಂಗೇಜ್ ಮೆಂಟ್ ಆದವನಿಗೆ ಬಿಸ್ಕಿಟ್ ಹಾಕಿ ತನ್ನಿಷ್ಟ ಬಂದವನ ಜೊತೆ ಮದುವೆಯಾಗುವುದು ಈ ಕತೆಯ ತಿರುಳು.

ನಲ್ಲೆಯ ಕೋಪ

ಎನ್ನ ಕುಱಿತೊಂದು ಚಂದದ ಕವನವೊರೆಯೆಂ-
ದೆನ್ನ ನಲ್ಲೆಗೆ ನಾ ನುಡಿಯೆ
ನಿನ್ನ ಮೊಗ ಕಱಿಮಂಗನ ಮೊಗದಂತಿಕ್ಕಿದ-
ಕಿನ್ನೇಕೆ ಕವನವೆಂದಳು||೧||

ಇಲ್ಲೆನ್ನಲಡ್ಡಕ್ಕಹುದೆನ್ನಲುದ್ದ-
ಕ್ಕಲ್ಲಾಡಿಸಲು ಮೊಗವಿರಲು
ನಲ್ಲನೆ ನಿನ್ನೊಡನೆ ಮಾತಿನ ಹಂಗೇಕೆಂದು
ನಲ್ಲೆ ಮಾತ ತೊಱೆದಿಹಳು||೨||

ರಾಮನಗರ: ಕ್ಷೇತ್ರಕ್ಕೆ ಭೇಟಿ ನೀಡದ ಶಾಸಕ ಕುಮಾರಸ್ವಾಮಿ!

ರಾಜ್ಯದಲ್ಲೆ ರಾಮನಗರವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸುವೆ ಎಂದು ಪಣ ತೊಟ್ಟು ಕೋಟ್ಯಾಂತರ ರೂ.ಗಳ ಕಾಮಗಾರಿಗೆ ಕಾರಣರಾಗಿರುವ ಕ್ಷೇತ್ರದ ಶಾಸಕರು ಮತ್ತು ಮಾಜಿ ಮುಖ್ಯ ಮಂತ್ರಿಗಳೂ ಆದ ಹೆಚ್.ಡಿ.ಕುಮಾರಸ್ವಾಮಿ ಚುನಾವಣೆಗಳ ನಂತರ್ ಕ್ಷೇತ್ರಕ್ಕೆ ಭೇಟಿ ನೀಡಿದ್ದು ಒಮ್ಮೆ ಮಾತ್ರ!