ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಒಂಚೂರು ಕೋಗಿಲೆ

ಏನು ಹೇಳಲಿ ಮನವೇ

ತಿಳಿಯದು, ಹೊಳೆಯದು
ತಿಳಿದು ಹೊಳೆದರೂ ಸುಮ್ಮನಿರದು
ಹೊಳೆಯ ಸುಳಿಯಂತೆ
ತಿರುಗುತಿವೆ ನೆನಪು

ಸೆಳೆಯುತಿದೆ ಒಳಗೆ
ಬಲು ಆಳಕ್ಕೆ
ಅರೆಗತ್ತಲೆಯ ಮೋಡಿಗೆ
ತಿರುಗಿ ಬಾರದ ಹಾದಿಗೆ

ಬಯಕೆ, ಬಿನ್ನಾಣ, ನೆನಪು, ಕನಸು
ಸಿಹಿ, ಕಹಿ, ಒಗರು, ರುಚಿ
ಎಲ್ಲ ಬಲ್ಲೆಯೇನೆ? ಕೇಳುತಿಹೆ ನೀನು
ಏನು ಹೇಳಲಿ ನಾನು

ಹ-ಕಾರದ ಗೆರೆ

ಏನ್ ಗುರು ಬ್ಲಾಗಿನಲ್ಲಿ ’ಆವೂ ಸರಿ ಹಾವೂ ಸರಿ’ ಓದಿದೆ. ಅದರಲ್ಲಿ ಹ ಕಾರದ ಗೆರೆ ಬಗ್ಗೆ ಹೇಳುತ್ತ, ಗುಲ್ಬರ್ಗ ಮತ್ತು ಶಾಬಾದುಗಳ ಮಧ್ಯೆಯೂ ಹ ಕಾರದ ಗೆರೆ ಇದೆ ಎಂದದ್ದು ನನ್ನ ಕುತೂಹಲ ಕೆರಳಿಸಿತು. ನಾನು ಬೆಳೆದದ್ದು ಗುಲ್ಬರ್ಗದಲ್ಲಿ. ಹಾನ, ಹಾರ, ಹಾಳ, ಹಿಂದಾಗ, ಹನ(ಣ)ಮಪ್ಪ, ಹಿಂಗ, ಮುಂತಾದ ಶಬ್ದಗಳನ್ನ ಹ-ಕಾರ ಸಹಿತವಾಗೇ ಹೇಳುವದನ್ನು ಕೇಳಿದ್ದೇನೆ. ಶಾಬಾದಿನಲ್ಲಿ ಇವನ್ನು ಅಥವ ಇನ್ನಿತರ ಹ-ಕಾರದಿಂದ ಶುರುವಾಗುವ ಶಬ್ದಗಳನ್ನು ಹ-ಕಾರ ಬಿಟ್ಟು ಹೇಳುತ್ತಾರೆಯೇ? ಗುಲ್ಬರ್ಗ ಶಾಬಾದುಗಳೆರಡರ ಪರಿಚಯವಿದ್ದ ಸಂಪದಿಗರು ಇದ್ದರೆ ಇದರ ಬಗ್ಗೆ ಬರೆಯುವಿರಾ ?

ಮನ ಮಿಡಿದ ಕಥೆ

ಒಮ್ಮೊಮ್ಮೆ ಹಾಗೆಯೇ ,
ಯಾವುದೋ ಒಂದು ಭಾವದ ತಂತು,ಎಲ್ಲೋ ಸವಿದ ತಿಂಡಿಯ ರುಚಿ,ಎಲ್ಲೋ ಕೇಳಿದ ಸುಮಧುರ ಹಾಡು ಅಥವಾ ಮನ ಮೀಟ್ಡ ಕೆಲವು ಸಾಲು,ಹೃದಯ ತಟ್ಟಿದ ಕಥೆ ,ನಮ್ಮನ್ನು ಆವರಿಸಿಕೊಂಡು ಬಿಡುತ್ತದೆ.ದಿನವಿಡೀ ಅದರದೇ ಗುಂಗು.

ಯುವ ಬ್ಲಾಗಿಗನ ಸಂದರ್ಶನ

ನಗೆ ಸಾಮ್ರಾಟ್: ನಮಸ್ಕಾರ್ ಸರ್. ಹೇಗಿದ್ದೀರಾ?

ಯುವ ಬ್ಲಾಗಿಗ: Fine dude. How are you?

ನ.ಸಾ: ಚೆನ್ನಾಗಿದ್ದೀನಿ ಸರ್. ಇದು ಕನ್ನಡದ ಪತ್ರಿಕೆಗಾಗಿನ ಸಂದರ್ಶನ. ಕನ್ನಡದಲ್ಲಿ ಮಾತನಾಡಿದರೆ ಚೆಂದ ಇತ್ತು.

ಯು.ಬ್ಲಾ: ನೋ ಪ್ರಾಬ್ಲಮ್ ಡೂಡ್. ಐ ಆಮ್ ಕಂಫರ್ಟಬಲ್ ವಿಥ್ ಕನ್ನಡ ಆಲ್ಸೋ!

ಆರಯ್

ಆರಯ್ (ಕ್ರಿಯಾಪದ)=ಜಾಗರೂಕತೆಯಿಂದ ನೋಡು, ಗಮನಿಸು, ವಿಚಾರಿಸು

ಉದಾಹರಣೆ:
ಪದನಱಿದು ನುಡಿಯಲುಂ ನುಡಿ-
ದುದನಱಿದಾರಯಲುಮಾರ್ಪರಾ ನಾಡವರ್ಗಳ್
ಕೃದಂತ ಭಾವನಾಮ: ಆರಯ್ಕೆ, ಆರೈಕೆ

ತಾಯಿ ಮಗುವಿನ ಆರಯ್ಕೆ ಮಾಡುತ್ತಾಳೆ.

ಭೂತಕೃದ್ವಾಚಿ ರೂಪ: ಆರಯ್ದು
ವರ್ತಮಾನ ಕೃದ್ವಾಚಿರೂಪ: ಆರಯ್ವ

ಪ್ರೀತಿ...

ಕಳೆದು ಹೋದ ಕ್ಷಣಗಳಿಗೆ...
ತುಂಬಿ ಬರುವ ಭಾವಗಳಿಗೆ...
ಮರೆತು ಹೋಗುವ ನಿನ್ನ ನೆನಪಿಗೆ..
ಒಂದೇ ಒಂದು ಅರ್ಥ..
ಅದು ಪ್ರೀತಿ...

-ರೇವನ್...

ಚಲುವೆ...

ನಿನ್ನದು ಅರ್ಥವಾಗದ ಸೌಂದರ್ಯ...
ಇಲ್ಲಿ ಆ ಚಲುವಿಲ್ಲ..ಆದರೂ ಅದೇನೋ
ಸೆಳೆತವಿದೆ...ಜಟಿಲ ಕವಿತೆಯ ಹಾಗೆ...

ನಿನ್ನದು ಅರ್ಥವಾಗದ ಸೌಂದರ್ಯ...
ಇಲ್ಲಿ ಕಣ್ಬೆಳಕಿನ ಚೆಂದನೆಯ ಕಾಂತಿಯಿಲ್ಲ...
ಆದರೂ ಒಂದು ಕವಿತೆ ಹುಟ್ಟುತ್ತದೆ...
ನಿನ್ನ ಸ್ಪರ್ಶದ ಹಾಗೆ....

ನಿನ್ನದು ಅರ್ಥವಾಗದ ಸೌಂದರ್ಯ....
ಇಲ್ಲಿ ಚೆಂದನೆಯ ಮೈಮಾಟವಿಲ್ಲ... ಆದರೂ

ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?

ಸ್ವಾತಂತ್ರ ಬಂದು ಅರುವತ್ತು ವರ್ಷ ಕಳೆದರೂ ಕಾಶ್ಮೀರದ ಜನತೆ ತಾವು ಭಾರತೀಯರು ಅಂತ ಒಪ್ಪಿಕೊಂಡಂತೆ ಕಾಣುವುದಿಲ್ಲ. ಅಲ್ಲಿನ ಭಯೋತ್ಪಾದಕತೆಗೆ ಕಾಶ್ಮೀರಿಗಳ ಬೆಂಬಲ ಇಲ್ಲದೆ ಅದು ಇಷ್ಟು ವರ್ಷಗಳ ಕಾಲ ಮುಂದುವರಿಯುವುದು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ತುಸು ತಣ್ಣಗಾಗಿದ್ದ ಕಾಶ್ಮೀರ ಅಮರನಾಥ ವಿವಾದದ ನಂತರ ಮತ್ತೆ ಅಶಾಂತಿಯಿಂದ ಕೂಡಿದೆ.

ಸೆರಗ ಹಿಂದಿನ ಚಂದ್ರ

ಕೋಟಿ ಕೋಟಿ ಕಣ್ಣುಗಳ ಎದುರು ಪಕ್ಷಕ್ಕೊಮ್ಮೆ ಹಿಗ್ಗಿ ಕುಗ್ಗುವ ಚಂದ್ರನಿಗೆ ಇಂದು ಮಾತ್ರ
ತಾಯ ನೆರಳಿನ ಸೆರಗ ಹಿಂದೆ ಅವಿತುಕೊಳ್ಳುವ ನಾಚಿಕೆ

೦೫:೪೩ಕ್ಕೆ ನೆರಳಾವರಿಸಲು ತೊಡಗಿ ಏಳು ನಿಮಿಷವಾಗಿದೆ ಅಷ್ಟೆ