ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಜನನಿ-ಜನ್ಮಭೂಮಿ

"ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ..."

ಈ ಮಾತಿನ ಅರ್ಥ: ತಾಯಿ ಮತ್ತು ತಾಯಿನಾಡು ಸ್ವರ್ಗಕ್ಕಿಂತಲೂ ಮಿಗಿಲಾದದ್ದು...

ಅಂದರೆ, ನಮ್ಮನ್ನು ಹೆತ್ತ ತಾಯಿ ಮತ್ತು ನಾವು ಹುಟ್ಟಿರುವ ಈ ದೇಶ ಸ್ವರ್ಗಕ್ಕಿಂತಲೂ ದೊಡ್ಡದು...
ನಮ್ಮ ತಾಯಿಗೆ ಹಾಗೂ ನಮ್ಮ ದೇಶಕ್ಕೆ ನಾವು ಸದಾ ಚಿರಋಣಿಯಾಗಿರಬೇಕು...

ಇದು ನನಗೆ ಅನಿಸಿದ್ದು...
ನಿಮ್ಮ ಅನಿಸಿಕೆ ಏನು?

ಅನೇಕತಾ ಮೆ ಏಕತಾ

[:forum/10879|ಅಶೋಕ್ ಕುಮಾರ್ "ಮಿಲೇ ಸುರ್... " ಹಾಡಿನ ಬಗ್ಗೆ ಬರೆದಿದ್ದಾರೆ]. ಅದೇ ಉದ್ದೇಶವನ್ನಿಟ್ಟುಕೊಂಡ ಮತ್ತೊಂದು ಹಾಡು ದೂರದರ್ಶನದಲ್ಲಿ ಪ್ರಸಾರವಾಗುತ್ತಿತ್ತು. "ಸೂರಜ್ ಏಕ್... ಚಂದಾ ಏಕ್, ತಾರೆ ಅನೇಕ್" ಎಂಬುದಾಗಿ. ನೆನಪಿದೆಯೇ?

ನೋಡಿ:

ಉಱ್/ಉಱು

ಉಱ್(ಕ್ರಿಯಾಪದ)=ಇರು, ಸೇರು, ಸರಿಯಾಗಿ ಹೊಂದು/ಕೂಡು.
ಒಱೆ ಇದು ಇದಱ ಭಾವನಾಮ. ಕತ್ತಿಯ ಚೀಲ ಎಂಬರ್ಥದಲ್ಲಿ ಒಱೆ ಎಂಬ ಬೞಕೆಯಿದೆ. ಕೈಚೀಲ(gloves) ಮತ್ತು ಕಾಲ್ಚೀಲ(socks)ಗಳಿಗೆ ಕ್ರಮವಾಗಿ ಕೈಯೊಱೆ, ಕಾಲೊಱೆ ಶಬ್ದಗಳನ್ನು ಬೞಸಬಹುದು.

ಕ್ರಿಯೆಯಾಗಿ ಒಂದು ಉದಾಹರಣೆ:- ಖಡ್ಗಂ ಒಱೆಯೊಳೊತ್ತುದು.

ವಿಶೇಷಣವಾಗಿ ಉಱು=ವಿಶೇಷವಾದ ಎಂಬರ್ಥದಲ್ಲಿ ಬೞಕೆಯಿದೆ. ಉಱುಸತ್ವಂ.

ಬಂಗಾರಿ ಲಕುಮಿಯ ಸದಾ ನೆನೆವೆ

ಅಗಸ್ಟ್ ೧೫-೨೦೦೮

ಇವತ್ತು ಸ್ವಾತಂತ್ರೋತ್ಸವ, ಮತ್ತೆ ಕಮಲದಲಿ ನಿಂದಿಹ, ಕಮಲವ ಕೈಯಲ್ಲಿ ಹಿಡಿದ, ಕಮಲಮುಖಿಯಾದ ವರಲಕ್ಷ್ಮಿಯ ಪೂಜೆಯ ದಿನ.

ಇವತ್ತು ಸರಸ್ವತಿ ಮತ್ತೆ ಲಕ್ಷ್ಮಿ ಇಬ್ಬರನ್ನೂ ನೆನೆಯಬಹುದಾದ ದಿನ ಅನ್ನಬಹುದು. ಯಾಕಂದ್ರೆ, ನಮ್ಮ ತಾಯಿ ಭಾರತಿ. ಭಾರತಿ ಅಂದರೆ ಸರಸ್ವತಿ ಅನ್ನೋದು ನಮಗೆಲ್ಲ ಗೊತ್ತೇ ಇದೆ. ಇನ್ನು ಶ್ರಾವಣ ಪೂರ್ಣಿಮೆಯ ಮುಂಚಿನ ಶುಕ್ರವಾರದಲ್ಲಿ ಮಾಡುವ ವರಮಹಾಲಕ್ಷ್ಮೀ ಹಬ್ಬದ ಆಚರಣೆ ಸುಮಾರು ದಕ್ಷಿಣಭಾರತದಲ್ಲೆಲ್ಲ ಇದೆ.

ಸಂಗೀತ ತ್ರಿಮೂರ್ತಿಗಳಲ್ಲ್ಲಿ ಒಬ್ಬರು ಮುತ್ತುಸ್ವಾಮಿ ದೀಕ್ಷಿತರು. ಅವರ ಶ್ರೀವರಲಕ್ಷ್ಮೀ ನಮಸ್ತುಭ್ಯಂ ಅನ್ನುವ ರಚನೆ ಪ್ರಖ್ಯಾತವಾಗಿದೆ. ಅದರಲ್ಲಿ ಲಕ್ಷ್ಮಿಯನ್ನು ಭಕ್ತರಿಗೆ ಸುಲಭವಾಗಿ ದೊರೆಯುವ ವರಲಕ್ಷ್ಮಿಯನ್ನು ಸ್ಮರಿಸುತ್ತಾರೆ.

ಸಂಗೀತ ಸರಸ್ವತಿಯ ಉಪಾಸಕರಾದ ಮುತ್ತುಸ್ವಾಮಿ ದೀಕ್ಷಿತರು ಲಕ್ಷ್ಮಿಯನ್ನು (ಅಂದರೆ ಸಂಸಾರ ನಡೆಸಲು ಬೇಕಾದ ಹಣವನ್ನು) ಕಡೆಗಣಿಸಿದ್ದರೆಂದು ಅವರ ಹೆಂಡತಿಗೆ ಸ್ವಲ್ಪ ಅಸಮಾಧಾನವಿತ್ತಂತೆ. ಅದನ್ನು ಅವರು ಗಂಡನೆದುರು ತೋರಿಸಿಯೂಬಿಟ್ಟರಂತೆ. ಯಾರಾದರೂ ರಾಜರದೋ, ಜಮೀನ್ದಾರರದೋ ಆಶ್ರಯ ಹಿಡಿದು ಹಣಗಳಿಸಬಾರದೇ ಅಂದರಂತೆ. ಆಕೆಯದೇನು ತಪ್ಪಿಲ್ಲ ಬಿಡಿ - ಮನೆಯ ಬಗ್ಗೆ ಹರಿಸಬೇಕಾದಷ್ಟು ಗಮನ ಹರಿಸದ ಗಂಡನಾದರೆ, ಯಾವ ಹೆಂಡತಿಯೂ ಅದನ್ನೇ ಅಂದಾಳು!ಅಲ್ಲವೇ?

ಬಾಲ್ಯದ ಸುಂದರದಿನಗಳು ; ಆ ’ಪ್ರಭಾತ್ ಫೇರಿ’, ’ಒಂದೇಮಾತರಂ,’ ಕೂಗು, ಅಬ್ಬ ಅದೇನುಸೊಬಗು, ಏನುರಮ್ಯ !

ನಾನು ಸ್ವಾತಂತ್ರ್ಯಪೂರ್ವದಲ್ಲಿ ಜನಿಸಿ, ಸ್ವಾತಂತ್ರ್ಯೋತ್ತರದ ನಮ್ಮಜನರ, ಜಯೋತ್ಸವದ ಅಮಲಿನಲ್ಲಿ ಮುಳುಗಿತೇಲಿದವನು. ೧೯೪೪ ರ, ಜನವರಿ ೨೪ ರಂದು ನಮ್ಮಪ್ರೀತಿಯ ಕರ್ನಾಟಕರಾಜ್ಯದ, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ಹುಟ್ಟಿಬಂದವನು. ಪ್ರತಿದಿನವೂ ನಮ್ಮ ಅಪ್ಪ-ಅಮ್ಮಂದಿರು ಹೇಳುತ್ತಿದ್ದದ್ದು, ’ದೇಶಕ್ಕೆ ಸ್ವಾತಂತ್ರ್ಯ ಬಂತು.

ಮತ್ತೆ ಬಂದಿದೆ ಸ್ವಾತಂತ್ರ್ಯಹೀನ ಸ್ವಾತಂತ್ರ್ಯ ದಿನ...!

ದೇಶದ ಪ್ರತಿಷ್ಠಿತ ಸಾಪ್ತಾಹಿಕಗಳಲ್ಲೊಂದಾದ "ದಿ ವೀಕ್" ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ವಿಶೇಷ ಸಂಚಿಕೆಯೊಂದನ್ನು ಹೊರತಂದಿದೆ. ಅದರಲ್ಲಿನ "ಕವರ್ ಸ್ಟೋರಿ"ಯಲ್ಲಿ ಈ ವರ್ಷ ಪ್ರತಿಷ್ಠಿತ ಮ್ಯಾಗ್ಸೆಸ್ಸೆ ಪ್ರಶಸ್ತಿಗೆ ಭಾಜನರಾದ ಡಾ.ಪ್ರಕಾಶ್ ಆಮ್ಟೆ(ತಮ್ಮ ಪತ್ನಿ ಮಂದಾಕಿನಿಯವರೊಂದಿಗೆ)ಯವರ ಲೇಖನವೊಂದು ಪ್ರಕಟವಾಗಿದೆ.