ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಲ೦ಡನ್ ಪ್ರವಾಸಕಥನ ಭಾಗ ೧೩: ಇ೦ಗ್ಲೆ೦ಡಿನ ಇಲಿಗಳೂ, ವಿಯಟ್ನಾಮಿ ಹೊಟ್ಟೆಯೊ!

www.anilkumarha.com

ಲ೦ಡನ್ ಪ್ರವಾಸಕಥನ ಭಾಗ ೧೩: ಇ೦ಗ್ಲೆ೦ಡಿನ ಇಲಿಗಳೂ, ವಿಯಟ್ನಾಮಿ ಹೊಟ್ಟೆಯೂ

ಲ೦ಡನ್ನಿನಲ್ಲಿ ನನ್ನ ರೂಮಿನದ್ದೇ ಒ೦ದು ಕಥೆ. ಹತ್ತಡಿ, ಹತ್ತಡಿ ಅಗಲದ ಕೋಣೆ. ಇದು ಅಫೀಶಿಯಲ್ಲಾಗಿ ನಾನು ಬಳಸಬಹುದಾಗಿದ್ದ ಸ್ಥಳಾವಕಾಶ. ‘ವಿಲಿಯ೦ ಪಬ್’ ಸ೦ಕಿರಣದ ಮೊದಲ೦ತಸ್ತಿನ ಒ೦ದು ಕೋಣೆ ನನ್ನದು. ಉಳಿದೆರೆಡು ಮೊರು-ಮತ್ತೊ೦ದು ಅ೦ತಸ್ತು ಇದ್ದು ಯಾರ್ಯಾರೋ ಬ೦ದಿರುತ್ತಿದ್ದರಲ್ಲಿ. ಯಾವ್ಯಾವಾಗಲೋ ಬ೦ದಿರುತ್ತಿದ್ದರಲ್ಲಿ. ಆದರೆ ಹೆಚ್ಚು ಜನರಿರುತ್ತಿರಲಿಲ್ಲ. ಹೆಚ್ಚು ದಿನವಿರುತ್ತಿರಲಿಲ್ಲ. ಪರ್ಮನೆ೦ಟಾಗಿ ಅಲ್ಲಿ ದಿನವಹೀ ಇರುತ್ತಿದ್ದವರೆ೦ದರೆ ಒ೦ದಕ್ಷರವೂ ಇ೦ಗ್ಲೀಷ್ ಬರದ, “ಇ೦ಗ್ಲೀಷ್” ಎ೦ಬ ಪದವನ್ನೂ ಸಹಜವಾಗಿ ಹೇಳಲಾಗದ ವಿಯಟ್ನಾಮಿ ಅಡುಗೆಭಟ್ಟ, ಲ೦ಡನ್ನಿನಲ್ಲಿ ಪಾಸ್‍ಪೋರ್ಟ್-ವೀಸಗಳ ಅವಶ್ಯಕತೆ ಲವಲೇಶವೂ ಇರದಿದ್ದ ಅನೇಕ ಇಲಿಗಳು ಮತ್ತು ಎರಡು ಅಡುಗೆ ಮನೆ-ಕಿಚನ್ ರೂಮುಗಳು.

ಕೆಳಗಿನ ಬಾರಿನಲ್ಲಿ ಸ೦ಜೆ ಆರಕ್ಕೆ ಗಲಾಟೆ ಶುರು, ಬೇಸಿಗೆಯಾದರೆ. ಚಳಿಗಾಲವಾದರೆ ಮೊರುಗ೦ಟೆಗೆಲ್ಲ ಗಲಾಟೆ. ಬೇಸಿಗೆಯಲ್ಲಿ ಗು೦ಡು ಬಾರನ್ನು ದಾಟಿ, ಅಲ್ಲಲ್ಲ, ಬಾರನ್ನು ದಾಟಿ ‘ಗು೦ಡು’ ಹೊರಗೆ ರಸ್ತೆಯ ಮೇಲೆಲ್ಲ ಹರಿದು ಬರುತ್ತಿತ್ತು, ಚೇರುಕುರ್ಚಿಗಳ ಸಮೇತ. ಜೊತೆಗೆ ಹೊರಗೆಲ್ಲ ಬೆಳಗುವ ಸೀರಿಯಲ್ ಸೆಟ್‍ಗಳು ಮಾತ್ರ ನಮ್ಮೂರಿನ ಮದುವೆ ಛತ್ರಗಳನ್ನು ನೆನಪಿಗೆ ತರುತ್ತಿದ್ದವು. ಪಬ್ಬಿನ ಒಳಗೇ ಸ್ನೂಕರ್ ಟೇಬಲ್ಲು--ಬಿಸಿಲಿರಲಿ ಮಳೆಯಿರಲಿ. ಆದರ ಪಕ್ಕ ಒ೦ದು ಜೂಕ್ ಬಾಕ್ಸ್. ಅದನ್ನು ನಾವು ‘ಜೋಕ್ ಬಾಕ್ಸ್’ ಎನ್ನುತ್ತಿದ್ದೆವು. ಏಕೆ೦ದರೆ ನಾವು ಹಾಕಿದ ಕಾಸೆಲ್ಲ ಅದರ ಹೊಟ್ಟೆಗೆ, ಮತ್ತದರ ಮೊಲಕ ಅದರ ಒಡೆಯನಿಗೇ ಸ್ವಾಹಾ. ಹಾಗ೦ತ ತಿಳಿದಿದ್ದರೂ ನಾವು ಆಡುವುದು ನಿಲ್ಲಿಸುತ್ತಿರಲಿಲ್ಲವಲ್ಲ!

ಕನ್ನಡಕಂದಂ ದೇವನೆಡೆಯೊಳ್ ರೋಸಿದಂ

ಆಶುಕವಿತೆಯ ತನಗೆ ಸುಲಭದಲಿ ಕೊಡನೆಂದು
ಈಶನ ಮೇಲೆ ಕಿಡಿಗಾರೇ-
ಸೇಸು ತಿಣಿಕಿದರು ಬರದ ಕವಿತೆಯ ಕುಱಿತು
ರೋಸಿದನು ಕನ್ನಡಕಂದ

ಓತದ ಮಟ್ಟಗಳು ಮತ್ತು ಅವುಗಳ ತಾಣಗಳು

ಓದು=ಓತ=ವಿದ್ಯಾಭ್ಯಾಸ

ಚಿಣ್ಣರ ತೋಟ=Kinter gardens
ಮೊದಲೋತ(ದು)=ಪ್ರಾಥಮಿಕ ಶಿಕ್ಷಣ ಮೊದಲೋತ(ದು)ದಾಣ= ಪ್ರಾಥಮಿಕಶಾಲೆ
ನಡುವೋತ=ಮಾಧ್ಯಮಿಕ ಶಿಕ್ಷಣ
ಮೇಲೋತ=ಪ್ರೌಢಶಾಲೆ
ಮುಂಬೇರೋತ= ಮುನ್+ಪಿರಿ(ಹಿರಿ)+ಓತ= ಪದವಿಪೂರ್ವ ಶಿಕ್ಷಣ
ಹೇರೋತ=ಪದವಿ ಶಿಕ್ಷಣ, ಹೇರೋತದಾಣ, ಹೇರೋದುದಾಣ=ಮಹಾವಿದ್ಯಾಲಯ(College)
ಹಲವೇರೋತ(ದು)ದಾಣ=ವಿಶ್ವವಿದ್ಯಾನಿಲಯ
ಮೇಲ್ವೇರೋತ=ಸ್ನಾತಕೋತ್ತರ ಶಿಕ್ಷಣ

ಓದು

ಒದು=ಓದು ಪಠನೇ read

ಉದಾಹರಣೆ: ಕುಱಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್
ಕರೆಯದಲೆ ಬರುವವನ ಬರೆಯದಲೆ ಓದುವವನ
ಬಱಿಗಾಲಲಿ ನಡೆವವನ ಕರೆತಂದು
ಕೆರದಲ್ಲಿ ಹೊಡೆಯೆಂದ ಸರ್ವಜ್ಞ||

ಭಾವನಾಮ ಓದು, ಓತ= ಓದುವ ಕ್ರಿಯೆ

what da

ಸುಮ್ಮನೇ ರಸ್ತೆಯಲ್ಲಿ ಹೋಗುತ್ತಿದ್ದವನಿಗೆ ಪಕ್ಕದಲ್ಲಿ ಕೆಲ ಹುಡುಗಿಯರು ಇ೦ಗ್ಲೀಷನಲ್ಲಿ ಫೋನಿನಲ್ಲಿ ಮಾತನಾಡಿದ್ದು ಕೇಳಿಸಿತು ಒಬ್ಬಳೆ೦ದಳು "why da ..","no da".ನನಗೇನೂ ಆ೦ಗ್ಲಭಾಷೆಯ ಮೇಲೆ ಅದ್ಭುತ ಹಿಡಿತವಿಲ್ಲ.ಆದರೆ ಈ "da" ಪದ ಆ೦ಗ್ಲ ಭಾಷೆಯಲ್ಲಿದೆಯೇ..?ಮಾತನಾಡುತ್ತಿದ್ದ ಹುಡುಗಿ ಮಾತ್ರ ಅಪ್ಪಟ ಕನ್ನಡತಿ!

ನಮ್ಮೂರಲ್ಲಿ...

ತುಂಬಿತ್ತು ಸಭಾಂಗಣ
ಖಾಲಿ ಕುರ್ಚಿಗಳಿಂದ

ವೇದಿಕೆ ಮಾತ್ರ ಫುಲ್‌
ಭಾಷಣಕಾರರಿಂದ

ಮಾತಿಗೆ ಬರವಿಲ್ಲ
ಮೈಕ್‌ ಇದೆಯಲ್ಲ

ಜಾಗತೀಕರಣ, ಕೋಮುವಾದ
ಸಮಾಜವಾದ, ದಲಿತೋದ್ಧಾರ

ತಂತ್ರಜ್ಞಾನದ ಹೀಗಳಿಕೆ
ಯುವಜನಾಂಗದ ಛೀಕರಿಕೆ

ಮಹಿಳೆಯರ ದುರ್ಗತಿ, ಕ್ರೀಡೆಯ ದುಃಸ್ಥಿತಿ
ಎಲ್ಲ ಮಾತುಗಳಾದವು

ಮೈಕ್‌ ಅದನ್ನು ಬಿತ್ತರಿಸಿತು ಎಲ್ಲೆಲ್ಲೂ

ಕತ್ತೆಯನು ಹತ್ತಿದವರು

ಕತ್ತೆಯನು ಏರುವ ಹೀನಾಯಕಿಂತ
ಲೇಸು ಕುದುರೆಯಿಂದೊಂದು ಒದೆತ!
ಮರುವರೊಡನೆ ಕೀಳು ಗೆಳೆತನಕಿಂತ
ಲೇಸು ಅರಿತವರೊಡನೆ ಸೆಣಸಾಟ!!

ಮೂಲ ಸಂಸ್ಕೃತ ಪದ್ಯ ಹೀಗಿದೆ:

ಹರೇ: ಪಾದಾಹತಿ: ಶ್ಲಾಘ್ಯಾ ನ ಶ್ಲಾಘ್ಯಾ ಖರಾರೋಹಣಂ |
ಸ್ಪರ್ಧಾಪಿ ವಿದುಷಾ ಯುಕ್ತಾ ನ ಯುಕ್ತಾ ಮೂರ್ಖ ಮಿತ್ರತಾ ||

-ಹಂಸಾನಂದಿ

ಪೆರು ಮತ್ತು ಚಿಲಿ ನಲ್ಲಿ ಕರ್ನಾಟಕದ ಉದ್ದಿಮೆಯ ಪ್ರದರ್ಶನ

ಕರ್ನಾಟಕವು ಇಂದು ಭಾರತ ಸರ್ಕಾರದ ವ್ಯಾಪಾರ ಅಭಿವೃದ್ದಿ ಸಂಸ್ಥೆ (ITPO) ಯ ಜೊತೆ, ಭಾರತದ ಹೊರಗಡೆ ವ್ಯಾಪಾರ ಪ್ರದರ್ಶನವನ್ನು ಏರ್ಪಡಿಸಲು ಒಡಂಬಡಿಕೆ ಮಾಡಿಕೊಂಡಿದೆಯ೦ತೆ. ಈ ಒಂದು ವರ್ಷದ ಒಪ್ಪ೦ದದಿ೦ದ ಕರ್ನಾಟಕದ ಉದ್ದಿಮೆಗಳಿಗೆ ಭಾರತವೇ ಅಲ್ಲದೆ ಬೇರೆ ದೇಶಗಳಲ್ಲಿಯೂ ಕೂಡ ಮಾರುಕಟ್ಟೆ ದೊರೆಯುವ ಒ೦ದು ಬಿಸಿ ಬಿಸಿ ಸುದ್ದಿ ಬ೦ದಿದೆ.