ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ದಿನ ಪತ್ರಿಕೆಯೂ ಪ್ರಾದೇಶಿಕ ಆವೃತ್ತಿಗಳೂ

ದಿನ ಪತ್ರಿಕೆಯ ಪ್ರಾದೇಶಿಕ ಆವೃತ್ತಿಗಳಿಂದ ಸುದ್ದಿಯ ವಿಸ್ತಾರ ಆಯಾ ಪ್ರದೇಶಕ್ಕೆ ಸೀಮಿತವಾಗುತ್ತಿದೆಯೇ?ಆಯಾ ಭಾಗದ ಸಮಾಚಾರವನ್ನು ಸಮಗ್ರವಾಗಿ ಬರೆದು ಇತರೆಡೆಯ ಸುದ್ದಿಯನ್ನು ಪೂರಕವೆಂಬಂತೆ ಪ್ರಕಟಿಸುತ್ತಾರೇನೋ?ಸದ್ಯಕ್ಕೆ ಕನ್ನಡದ ನಂ ೧ ಪತ್ರಿಕೆಯ ಮೂರು ಆವೃತ್ತಿಯನ್ನು ಓದಿ ನನಗೆ ಹೀಗನ್ನಿಸಿತು.

ಪಾಳು ದೇಗುಲದ ಬಾವಲಿಗಳು-೩

ಇಲ್ಲಿರುವ ಚಿತ್ರ ಅದೇ ಮಕ್ಕಳ ವಿಭಾಗದ ಕಾರಿಡಾರ್‍ನದು. ನೀವು ಒಳ ಹೋಗುವಾಗ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಾ ಹೋದರೆ ಒಳಿತು. ಇಲ್ಲವೆಂದಾದಲ್ಲಿ ನೀವು ಅದೇ ಆಸ್ಪತ್ರೆಯಲ್ಲಿ ದಾಖಲಾಗುವುದು ತಪ್ಪಿದ್ದಲ್ಲ! ಇತ್ತೀಚಿಗೆ ಕಟ್ಟಡದ ಅಥವಾ ಕಚೇರಿಗಳ ಉಸ್ತುವಾರಿಯನ್ನು ನಿರ್ವಹಿಸಲು ಸರಕಾರ ಖಸಗಿ ಸಂಸ್ಥೆಗಳಿಗೆ ಗುತ್ತಿಗೆ ನೀಡುತ್ತಿದೆಯಲ್ಲವೆ?

ಪಾಳು ದೇಗುಲದ ಬಾವಲಿಗಳು-೨

ಈ ಚಿತ್ರ ಅಲ್ಲಿಯ ಮಕ್ಕಳ ವಿಭಾಗದ ಒಂದು ವಾರ್ಡಿನದು. ಅಲ್ಲಿಯ ಐ.ಸಿ.ಯು ವಾರ್ಡ್ ಹೇಗಿದೆಯಂದರೆ ಆರೋಗ್ಯವಂತ ಮನುಷ್ಯ ಸಹಜವಾಗಿ ಉಸಿರಾಡಲಾರ!! ಪೂರ್ತಿ ಚಿಂಗು ಚಿಂಗು ವಾಸನೆ! ಅಂಥದರಲ್ಲಿ ಆನಾರೋಗ್ಯದಿಂದ ಬಳಲುವ ಕಂದಮ್ಮಗಳು ಹೇಗೆ ತಾನೆ ಗುಣ ಹೊಂದಿಯಾವು...?!

ಪಾಳು ದೇಗುಲದ ಬಾವಲಿಗಳು

ಕ್ಷಮಿಸಿ ನಾನು ದೇಗುಲಗಳ ಬಗ್ಗೆ ಹೇಳುತ್ತಿಲ್ಲ. ’ಸರಕಾರಿ ಕೆಲಸ ದೇವರ ಕೆಲಸ’ ಅನ್ನುವ ಸ್ಲೋಗನ್‍ ಇದೆಯಲ್ಲ, ಆ ದೇವರ ’ಆಸ್ಪತ್ರೆ’ ಎಂಬ ದೇಗುಲದ ದರ್ಶನ ಪಡೆದು ಧನ್ಯಳಾದ ಕುರಿತು ಮಾತಾಡುತ್ತಿದ್ದೇನೆ. ನಿಮಗೆ ಈ ಕುರಿತು ಎಲ್ಲವನ್ನೂ ಹೇಳುವ ಬದಲಿಗೆ ಕೆಲವು ಛಾಯಾಚಿತ್ರಗಳ ಮೂಲಕ ಈ ಪಾಳು ದೇಗುಲದ ದರ್ಶನ ಮಾಡಿಸಲಿಚ್ಛಿಸುತ್ತೇನೆ.

ಬಣ್ಣ ಸಹಿತ ಗಣಪತಿಯ ಸಾಧಕ-ಬಾಧಕಗಳು- ವಿಚಾರ ಸಂಕಿರಣ

ಧಾರವಾಡದ ಕ್ರಿಯಾಶೀಲ ಗೆಳೆಯರು ಬಳಗ ಪರಿಸರವಾದಿ ಶ್ರೀ ಮುಕುಂದ ಮೈಗೂರ್ ನೇತೃತ್ವದಲ್ಲಿ ಬಣ್ಣ ಸಹಿತ ಗಣಪತಿ ಮೂರ್ತಿ ಪ್ರತಿಷ್ಠಾಪನೆಯಿಂದ ಜೀವಿವೈವಿಧ್ಯದ ಆರೋಗ್ಯ ಹಾಗು ಪರಿಸರದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ವಿಸ್ತೃತವಾಗಿ ಚರ್ಚಿಸಲು ರಾಜ್ಯ ಮಟ್ಟದ ವಿಚಾರ ಸಂಕಿರಣ ಆಯೋಜಿಸಿದೆ.

ವಿಮಾನ,ವಿದೇಶದಲ್ಲಿ ನಮ್ಮ ವರ್ತನೆ ಹೇಗಿದೆ?

ವಿಕದ ಈ ಬರಹ ನೋಡಿ- ಅದರ ಸಂಪಾದಕರೇ ಬರೆದಿರುವುದು.
http://vijaykarnatakaepaper.com/pdf/2008/08/14/20080814a_008101003.jpg
ಹೌದೇ ಇದರಲ್ಲಿ ಬರೆದಂತೆ ಭಾರತೀಯರು ವಿಮಾನ ಮತ್ತು ವಿದೇಶಗಳಲ್ಲಿ ಮಾನಗೇಡಿಗಳಂತೆ ವರ್ತಿಸುವರೇ? ಕೆಲವೆಡೆ ಭಾರತೀಯರಿಗೆ ಪ್ರವೇಶವಿಲ್ಲವಂತೆ. ಇಂತಹದ್ದು ನಿಮ್ಮ ಅನುಭವಕ್ಕೆ ಬಂದಿದೆಯೇ?

ಕನ್ನಡ ಮತ್ತು ಸ್ಟ್ಯಾಂಡರ್ಡ್ ಚಾರ್ಟೆಡ್ ಬ್ಯಾಂಕ್!

ಅನುಪ್ ಕುಮಾರ್ ಅವರ ಈ ಬ್ಲಾಗು.
ನನಗೆ ನನ್ನ ಹಳೆಯ ಅನುಭವವನ್ನು ಇಲ್ಲಿ ಬರೆಯುವಂತೆ ಮಾಡಿತು!

ಪೀಠಿಕೆ ::

ನನ್ನ ಪಾಸ್ಪೋರ್ಟ್ ನಲ್ಲಿ ಕನ್ನಡದ ಸಹಿ ಇದೆ. ಪ್ಯಾನ್ ಕಾರ್ಡ್ ನಲ್ಲೂ ಕನ್ನಡದ ಸಹಿ ಇದೆ. ನನ್ನ ಎಲ್ಲ ಬ್ಯಾಂಕ್ ಗಳ ಉಳಿತಾಯ ಖಾತೆ ಗಳಲ್ಲೂ ಕನ್ನಡ ದ ಸಹಿ ಇದೆ.

ವಿಷಯ ::

’ಆಲ್ಕಟ್ರಾಝ್’

೧೮.೮೬ (೭.೬೩ ಹೆಕ್ಟೇರ್) ಎಕರೆಜಾಗದಲ್ಲಿ ೧೯೩೪ ನೆ ಇಸವಿಯಲ್ಲಿ (ಪೆಸಿಫಿಕ್ ಸಾಗರದ ನೀರಿನ ಮಧ್ಯೆ) ನಿರ್ಮಿಸಲಾಗಿರುವ ಲೈಟ್ ಹೌಸ್, ಹಾಗೂ ಭಾರಿಬಿಗಿ-ಬಂದೋಬಸ್ತ್ ಆದ ಮಿಲಿಟರಿಜೈಲು, ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿಯ ನೀರಿನಮಧ್ಯೆ ಇದೆ. ಈಗ ನಾವು,”ಫಿಷರ್ ಮ್ಯಾನ್ ವಾರ್ಫ್ ’ ಸ್ಥಳದಲ್ಲಿನ ಪವರ್ ಬೋಟ್ ನಲ್ಲಿ ಕುಳಿತು (೩೩ ನೇ ಪಿಯರ್ ಹತ್ತಿರದ), (ಈ ಭಾರಿ-ದೊಡ್ಡಜೈಲು’) ಆಲ್ಕಟ್ರಾಝ್’) ಪ್ರದೇಶಕ್ಕೆ ಹೋಗಬಹುದು. ದುರ್ಗಮವಾದ ಸ್ಥಳದಲ್ಲಿ ಕಟ್ಟಲ್ಪಟ್ಟಿದ್ದರಿಂದ, ಹಿಂದಿನಕಾಲದಲ್ಲಿ ಯಾರೂ ಇದರಹತ್ತಿರ ಸುಳಿಯಲೂ ಅಂಜುತ್ತಿದ್ದರು ! ಸನ್. ೨೦೦೦ ಇಸವಿಯಲ್ಲೂ, ಇಲ್ಲಿಯಾರೂ ವಾಸಿಸಿದ ದಾಖಲೆಗಳಿಲ್ಲ. ಪಶ್ಚಿಮ ಅಮೆರಿಕದ ಸಮುದ್ರ ತೀರದಲ್ಲಿ ಸ್ಥಾಪಿಸಿರುವ ’ಲೈಟ್ ಹೌಸ್’, ನಾವಿಕರಿಗೆ ಕೈಮರವಾಗಿ ಸುಮಾರುಸಮಯ ಸೇವೆಸಲ್ಲಿಸಿತ್ತು. ಅಮೆರಿಕನ್ ಯುವಜನಾಂಗಕ್ಕೆ ಅದು ಚಿರಪರಿತವಾಗಿರುವುದು, ಈ ದ್ವೀಪನಡೆಸಿಕೊಂಡುಬಂದ ’ರಾಕ್ ಸಂಗೀತ,’ ದ ಪರಂಪರೆಯಿಂದಾಗಿ!