ಬಣ್ಣ ಸಹಿತ ಗಣಪತಿಯ ಸಾಧಕ-ಬಾಧಕಗಳು- ವಿಚಾರ ಸಂಕಿರಣ

ಬಣ್ಣ ಸಹಿತ ಗಣಪತಿಯ ಸಾಧಕ-ಬಾಧಕಗಳು- ವಿಚಾರ ಸಂಕಿರಣ

ಧಾರವಾಡದ ಕ್ರಿಯಾಶೀಲ ಗೆಳೆಯರು ಬಳಗ ಪರಿಸರವಾದಿ ಶ್ರೀ ಮುಕುಂದ ಮೈಗೂರ್ ನೇತೃತ್ವದಲ್ಲಿ ಬಣ್ಣ ಸಹಿತ ಗಣಪತಿ ಮೂರ್ತಿ ಪ್ರತಿಷ್ಠಾಪನೆಯಿಂದ ಜೀವಿವೈವಿಧ್ಯದ ಆರೋಗ್ಯ ಹಾಗು ಪರಿಸರದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ವಿಸ್ತೃತವಾಗಿ ಚರ್ಚಿಸಲು ರಾಜ್ಯ ಮಟ್ಟದ ವಿಚಾರ ಸಂಕಿರಣ ಆಯೋಜಿಸಿದೆ.

ಶನಿವಾರ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಚಾಮರಾಜ ಮಂದಿರದಲ್ಲಿ ಈ ವಿಚಾರ ಸಂಕಿರಣ ನಡೆಯಲಿದೆ.

ಮಣ್ಣಿನ ಗಣಪತಿಗೆ ಬಣ್ಣ ಬಳಿಯುವುದರಿಂದ, ಆ ರಾಸಾಯನಿಕ ಬಣ್ಣಗಳಿಂದ ನಮ್ಮ ಆರೋಗ್ಯ, ನೆಲ-ಜಲಗಳ ಮೇಲೆ ಆಗುವ ಪರಿಣಾಮದ ಕುರಿತು ಸೂಕ್ಷ್ಮಜೀವಿ ಶಾಸ್ತ್ರಜ್ನರು, ರಾಸಾಯನಿಕ ತಜ್ನರು, ಪರಿಸರದ ಮೇಲಾಗುವ ದುಷ್ಪರಿಣಾಮಗಳ ಕುರಿತು ಪರಿಸರವಾದಿಗಳು, ಶಾಸ್ತ್ರದಲ್ಲಿ ಉಲ್ಲೇಖಿಸಲ್ಪಟ್ಟಂತೆ ಮೃತ್ತಿಕಾ ಪೂಜೆಯ ಮಹತ್ವ, ಶಾಸ್ತ್ರ ಸಮ್ಮತಿ ಕುರಿತು ಪಂಡಿತರು, ಗಣಪತಿಗೆ ಬಣ್ಣ ಬಳಿಯುವಾಗ ಮೂರ್ತಿ ಕಾರರು, ಅವರ ಕುಟುಂಬದವರು ಎದುರಿಸುವ ದೈಹಿಕ, ಮಾನಸಿಕ ಕಿರಿಕಿರಿಗಳ ಬಗ್ಗೆ ಅನುಭವ ಕಥನ ಜರುಗಲಿದೆ.

ಸಂಕಿರಣದಲ್ಲಿ ಪಾಲ್ಗೊಂಡ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಂವಾದ, ವಿಚಾರ ಮಂಥನ ಹಾಗು ಕೊನೆಗೆ ಕೆಲ ನಿರ್ಣಯಗಳನ್ನು ಸಹ ಅನುಮೋದಿಸಲಾಗುತ್ತದೆ. ೩ ಗೋಷ್ಠಿಗಳು, ಉದ್ಘಾಟನೆ ಹಾಗು ಸಮಾರೋಪ ಅಧಿಕಾರಸ್ಥರು, ಜನಪ್ರತಿನಿಧಿಗಳ ಸಮ್ಮುಖದಲ್ಲಿ ಜರುಗಲಿದೆ.
ಕಳೆದ ೫ ವರ್ಷಗಳಿಂದ ಕ್ರಿಯಾಶೀಲ ಗೆಳೆಯರು ಧಾರವಾಡದಲ್ಲಿ ಬಣ್ಣ ರಹಿತ ಗಣಪತಿ ಹಾಗು ಪರಿಸರ ಸ್ನೇಹಿ ರೀತಿಯಲ್ಲಿ ವಿಸರ್ಜನೆ ಕುರಿತಂತೆ ಆಂದೋಲನ ರೂಪದಲ್ಲಿ ಚಳುವಳಿ ನಡೆಸಿಕೊಂಡು ಬಂದಿದ್ದಾರೆ. ವ್ಯಾಪಕವಾಗಿ ಮನೆ ಮನೆಗೆ ತೆರಳಿ ತಿಳಿವಳಿಕೆ ಕಾರ್ಯಕ್ರಮ ನಡೆಸಿದ್ದಾರೆ.

ನೀವು ಬನ್ನಿ. ಗೆಳೆಯರನ್ನು ಕರೆತನ್ನಿ.