ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪ್ರಾಸ ಮತ್ತು ಛಂದಸ್ಸು

ತಾಳದಲಿ ಮೇಳದಲಿ ಸುಶ್ರಾವ್ಯಮಪ್ಪಂತೆ
ಗಾಳಿ ತಾ ಬೀಸುವಂದದಿ
ಬೀೞುಗಳೆಯದೆ ಪ್ರಾಸವನು ಛಂದವನು ನೀ
ಹೇೞೆಂದ ಕನ್ನಡಕಂದ

ಬೀಸುವ ಮೆಲ್ಗಾಳಿಯಂದದಲಿ ಸುಲಭದಲಿ
ತಾಸುಗಟ್ಟಲೆ ಹಾಡಲು
ಪ್ರಾಸದಲಿ ಛಂದದಲಿ ಕವಿತೆಯನೊರೆಯೆಂದು
ಶಾಸಿಸಿದನು ಕನ್ನಡಕಂದ

ಪ್ರಾಸವನು ಹಾಡುವೊಡೆ ನೀನೆನಿತು ಬಿಡಬೇಡ
ತ್ರಾಸಹುದು ಕಾವ್ಯದೋಟಕ್ಕೆ
ಲೇಸಾಗಿ ಸಂಗೀತಮಿಳಿತವಪ್ಪಂತೆ

ಕನ್ನಡಕಂದನ ಪರಿಚಯ

ಚಾಗಕ್ಕೆ ಭೋಗವಕ್ಕರಗೇಯಗ-
ಳ್ಗಾಗರದ ಶಿವಮೊಗ್ಗದೆಡೆಯ
ಸಾಗರದಿಂ ಕನ್ನಡಕಂದ ತೆಂಕಣ
ಭಾಗೀರಥಿನಾಡಿಗೆ ಬಂದ||

ಕನ್ನಡದೇವಿಯ ಸೇವೆಯೊಳು ಸಂಪದವು
ಮುನ್ನವೆ ತಾ ತೊಡಗಿರಲು
ತನ್ನೆಲ್ಲ ಲೇಖನಗಳ ಸಂಪದದೊಳು
ಕನ್ನಡಕಂದ ಬರೆದ||

ತೆಂಕಣಭಾಗೀರಥಿನಾಡು=ಕೊಡಗು

ಹೆಂಗಸರು ಮೇಕಪ್ ಮಾಡ್ಕೊಳ್ಳೋದು ಯಾಕೆ?

ಮುಖಕ್ಕೆ ಮೇಕಪ್ ಮಾಡಿಕೊಳ್ಳುವುದು ಒಂದು ಸೌಂದರ್ಯವರ್ಧಕ ಕ್ರಿಯೆ, ಉಗುರಿಗೆ ಬಣ್ಣ ಹಚ್ಚುವ ಹಾಗೆ, ಕೇಶ ವಿನ್ಯಾಸದ ಹಾಗೆ, ಹುಬ್ಬು ತೀಡುವ ಹಾಗೆ. ಹೆಂಗಸಿನ best features ಇನ್ನೂ ಚೆನ್ನಾಗಿ ಕಾಣುವಂತೆ ಮಾಡುತ್ತದೆ. ನಾನು ಮನೆಯಲ್ಲಿದ್ದರೆ moisturizer ಬಿಟ್ಟು ಮುಖಕ್ಕೆ ಏನೂ ಹಚ್ಚುವುದಿಲ್ಲ. ಆಚೆ ಹೋಗುವಾಗ ಒಂದು foundation, powder ಖಂಡಿತ ಹಚ್ಚುತ್ತೇನೆ. ಇಷ್ಟೂ ಸಹ ಮಾಡದೆ ನಾನು ಇರಲಾರೆ.

ಲಕ್ಷ್ಮೀ.. ಬಾರಮ್ಮಾ..

ಒಂದು ಹಳೇ ಕತೆ-
ಒಬ್ಬ ಹುಡುಗ ಗೆಳೆಯನ ಪೆನ್ಸಿಲ್ ಕದ್ದುತಂದ.
ತಾಯಿ ಜೋರು ಮಾಡಲಿಲ್ಲ.
ಹುಡುಗ ಕಳ್ಳತನ ಮುಂದುವರಿಸಿದ.
ದೊಡ್ಡ ದರೋಡೆಕೋರನಾದ.
ಸಿಕ್ಕಿಬಿದ್ದ-ಗಲ್ಲುಶಿಕ್ಷೆ-ತಾಯಿಯನ್ನು ಬಳಿ ಕರೆದು, ‘ಚಿಕ್ಕವನಿದ್ದಾಗ ಪೆನ್ಸಿಲ್ ಕದ್ದು ತಂದಾಗ ಬುದ್ಧಿಮಾತು ಹೇಳಿದ್ದರೆ ಈ ಕ್ಷಣ ಬರುತ್ತಿರಲಿಲ್ಲ’ ಎಂದನು.

ನಾನೂ ಚಿಕ್ಕವನಿದ್ದಾಗ-

ಮೈಸೂರು ಒಡೆಯರ ಪರಂಪರೆಯ ಮೇಲೆ ಭಾಷಣ + ಸಂಗೀತ ಕಚೇರಿ (ವೀಣಾ ವಾದನ)

ಭಾಷಣ: 'The legacy of the Wodeyars of Mysore'

ಭಾಷಣಕಾರರು: ವಿಕ್ರಮ್ ಸಂಪತ್

(ಇವರ 'Splendours of Royal Mysore: The untold story of the Wodeyars' ಎನ್ನುವ ಪುಸ್ತಕ ಈಚೆಗೆ ಬಿಡುಗಡೆಯಾಗಿದೆ)

ಭಾಷಣದ ನಂತರ, ಮೈಸೂರು ಪರಂಪರೆಯ ಸಂಗೀತ ರಚನೆಗಳನ್ನಾಧರಿಸಿದ ಸಂಗೀತ ಕಚೇರಿ ನಡೆಯಲಿದೆ.

ವೀಣೆ : ಡಾ. ಜಯಂತಿ ಕುಮರೇಶ್

ಬ್ಯಾಂಕುಗಳಲ್ಲಿ ಕನ್ನಡದಲ್ಲಿ ವ್ಯವಹರಿಸುವುದು

ಸ್ನೇಹಿತರೇ ನೀವು ಬ್ಯಾಂಕುಗಳಲ್ಲಿ ವ್ಯವಹರಿಸುವ ಮುನ್ನ ಈ ಕೆಳಕಂಡ ವಿಚಾರಗಳನ್ನು ಗಮನದಲ್ಲಿಡಿ.

ಕರ್ನಾಟಕದಲ್ಲಿರುವ ಯಾವುದೇ ರೀತಿಯ ಬ್ಯಾಂಕು [ಸರ್ಕಾರಿ-ಸಹಕಾರಿ-ಸಾರ್ವಜನಿಕ-ಖಾಸಗಿ]ಸಾರ್ವಜನಿಕರೊಂದಿಗೆ ಕನ್ನಡದಲ್ಲೇ ವ್ಯವಹರಿಸಬೇಕೆಂಬುದು ನಿರ್ವಾವಾದ. ಯಾವುದೋ ಒಂದು ಖಾಸಗಿ ಬ್ಯಾಂಕು ಅಥವ ಅದರ ಶಾಖೆ ಇದಕ್ಕೆ ಹೊರತಾಗಲು ಸಾಧ್ಯವೇ ಇಲ್ಲ.

ಅಭಿನವ್ ಬಿಂದ್ರಾ - ಸ್ವರ್ಣ ಪದಕ ಗೆದ್ದಮೇಲೆ ಏನನಿಸಿತು? - ಅವರ ಮನದಾಳದ ಆಲೋಚನೆಗಳು.

ಬೀಜಿಂಗ್ ಒಲಿಂಪಿಕ್ಸ್‍ನಲ್ಲಿ ಶೂಟಿಂಗ್  ಸ್ವರ್ಣ ಪದಕ ಗೆದ್ದ ಅಭಿನವ್ ಬಿಂದ್ರಾರವರ ಬ್ಲಾಗ್ ಕೊಂಡಿ ಈ ಕೆಳಗಿದೆ.

ಆಭಿನವ್ ಬಿಂದ್ರಾ ಬ್ಲಾಗ್

ಇದರಲ್ಲಿ ವ್ಯಕ್ತವಾದ ಅವರ ಅನಿಸಿಕೆಗಳಿಂದ, ಅವರ ಸರಳ, ಸಂಯಮಯುತ ವ್ಯಕ್ತಿತ್ವದ ಅರಿವು ನಮಗಾಗುತ್ತದೆ.

ಕಾಶ್ಮೀರದ ಬೆಂಕಿ: ಎಚ್ಚರವಿರಲಿ!

ಮ್ಮು ಕಳೆದ ಮೂರು ವಾರಗಳಿಂದ ಹೊತ್ತಿ ಉರಿಯುತ್ತಿದೆ. ಜನ, ಮಕ್ಕಳು ಮಹಿಳೆಯರೆನ್ನದೆ ಬೀದಿಗೆ ಬಂದು ಮೈಯಲ್ಲಿ ದೆವ್ವ ಹೊಕ್ಕಂತೆ ಕುಣಿಯತೊಡಗಿದ್ದಾರೆ, ಸಾರ್ವಜನಿಕ ಆಸ್ತಿಪಾಸ್ತಿಗೆ ಬೆಂಕಿ ಇಡತೊಡಗಿದ್ದಾರೆ. ಅಲ್ಲಿಯ ನಾಗರಿಕ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಜನ, ಪೋಲೀಸ್ ಇಬ್ಬರೂ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ. ದೇಶದ ಇತರ ಭಾಗಗಳೊಡನೆ ಕಾಶ್ಮೀರ ಕಣಿವೆಯ ಸಂಪರ್ಕ ತಪ್ಪಿ ಹೋಗಿದೆ. ಅಲ್ಲಿನ ಜನ ಅವಶ್ಯಕ ಸಾಮಗಿಗಳ ಪೂರೈಕೆ-ವಿಶೇಷವಾಗಿ ಅತ್ಯವಶ್ಯಕ ಔಷಧಿ ಸಾಮಗ್ರಿಗಳು-ಇಲ್ಲದೆ ಸಂಕಷ್ಟಕ್ಕೆ ಸಿಕ್ಕಿದ್ದಾರೆ. ಅವರ ಸೇಬು ಮತ್ತಿತರ ಸರಕು ತುಂಬಿದ ಲಾರಿಗಳು ಜಮ್ಮು ಬಳಿ ತಡೆಯಲ್ಪಟ್ಟಿದ್ದು, ಹಣ್ಣುಗಳು ಕೊಳೆಯತೊಡಗಿವೆ.

ಇಷ್ಟೆಲ್ಲ ಆದರೂ ದೆಹಲಿಯಲ್ಲಿನ ಸಂಯುಕ್ತ ಸರ್ಕಾರ ಮೂಕ ಪ್ರೇಕ್ಷಕನಂತೆ ಕೂತಿದ್ದು, ಅಲ್ಲಿ ಹಿಂಸಾಚಾರ ಪೋಲೀಸರನ್ನೇ ಬಲಿ ತೆಗೆದುಕೊಳ್ಳಲಾರಂಭಿಸಿದ ಮೇಲಷ್ಟೇ ಎಚ್ಚೆತ್ತುಕೊಂಡು ಸರ್ವಪಕ್ಷಗಳ ನಿಯೋಗವೊಂದನ್ನು ಮಾತುಕತೆಗಾಗಿ ಜಮ್ಮು ಶ್ರೀನಗರಗಳಿಗೆ ಕಳಿಸಿ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಮಾಡುತ್ತಿದೆ. ಆದರೆ ಗಲಭೆ ಮುಂದುವರೆದಿದೆ. ಆಗಸ್ಟ್ 14ರವರೆಗೂ ತನ್ನ ಪ್ರತಿಭಟನೆಯನ್ನು ಮುಂದುವರೆಸಲು ನಿರ್ಧರಿಸಿರುವ ಜಮ್ಮು ಸಂಘರ್ಷ ಸಮಿತಿ 62ನೇ ಸ್ವಾತಂತ್ರ್ಯೋತ್ಸವಕ್ಕೆ ತನ್ನ ವಿಶಿಷ್ಟ ಕೊಡುಗೆಯನ್ನು ಸಲ್ಲಿಸಿದೆ ಎಂದೇ ಹೇಳಬೇಕು. ರಾಜ್ಯದ ಈವರೆಗಿನ ರಾಜಕಾರಣ; ಕಾಶ್ಮೀರ ಕಣಿವೆ ಮುಸ್ಲಿಮರದ್ದೂ, ಜಮ್ಮು ತಪ್ಪಲು ಹಿಂದೂಗಳದ್ದು ಎಂಬ ವಿಭಾಗೀಕರಣಕ್ಕೆ ಕಾರಣವಾಗಿರುವುದರಿಂದ ಸದ್ಯದ ಈ ಸಮಸ್ಯೆಗೆ ದಟ್ಟ ಕೋಮು ಬಣ್ಣ ಕೂಡಾ ಬಂದಿದೆ. ಇದರಿಂದ ನಿರಂತರವಾಗಿ ಲಾಭ ಪಡೆಯುತ್ತಿರುವವರೆಂದರೆ, ಕಾಶ್ಮೀರದ ಪ್ರತ್ಯೇಕತಾವಾದಿ ಗುಂಪುಗಳು ಮತ್ತು ಉಗ್ರವಾದಿ ಸಂಸ್ಥೆಗಳು. ಮೊನ್ನೆ ಜಮ್ಮು ಬಂದ್ ವಿರುದ್ಧ ಶ್ರೀನಗರದಲ್ಲಿ ನಡೆದ ಮೆರವಣಿಗೆಯಲ್ಲಿ ಅನೇಕ ಉಗ್ರವಾದಿ ಗುಂಪುಗಳು ಬಹಿರಂಗವಾಗಿ ಕಾಣಿಸಿಕೊಂಡು ರಾಷ್ಟ್ರವಿರೋಧಿ ಘೋಷಣೆಗಳನ್ನು ಕೂಗತೊಡಗಿದ್ದು ಮತ್ತು ಇದನ್ನು ನಮ್ಮ ಭದ್ರತಾ ಪಡೆಗಳು ಮೂಕ ಪ್ರೇಕ್ಷಕರಾಗಿ ನೋಡುತ್ತಾ ನಿಲ್ಲುವಂತಾದದ್ದು ಇದಕ್ಕೊಂದು ಉದಾಹರಣೆ.

ಏಕೆ ಹೀಗೆ ಮಾಡಿದೆ ನೀನು?

 

 

 

ಏಕೆ ಹೀಗೆ ಮಾಡಿದೆ ನೀನು, ಗೆಳೆಯ,

ಅದೇಕೆ ಹೀಗೆ ಮಾಡಿದೆ ನೀನು ||ಪ||

 

ಬದುಕಿನ ಒಂದೊಂದೂ ಹೆಜ್ಜೆಗೂನು,

ಜೊತೆಗಿರುವೆನೆಂದು ಮಾಡಿದ ಆಣೆಯ,