ಪಾಳು ದೇಗುಲದ ಬಾವಲಿಗಳು-೨

ಪಾಳು ದೇಗುಲದ ಬಾವಲಿಗಳು-೨

ಬರಹ

ಈ ಚಿತ್ರ ಅಲ್ಲಿಯ ಮಕ್ಕಳ ವಿಭಾಗದ ಒಂದು ವಾರ್ಡಿನದು. ಅಲ್ಲಿಯ ಐ.ಸಿ.ಯು ವಾರ್ಡ್ ಹೇಗಿದೆಯಂದರೆ ಆರೋಗ್ಯವಂತ ಮನುಷ್ಯ ಸಹಜವಾಗಿ ಉಸಿರಾಡಲಾರ!! ಪೂರ್ತಿ ಚಿಂಗು ಚಿಂಗು ವಾಸನೆ! ಅಂಥದರಲ್ಲಿ ಆನಾರೋಗ್ಯದಿಂದ ಬಳಲುವ ಕಂದಮ್ಮಗಳು ಹೇಗೆ ತಾನೆ ಗುಣ ಹೊಂದಿಯಾವು...?! ಅಲ್ಲಿಯವರನ್ನು ಕೇಳಿದರೆ "ಎಸಿ ಇದೆಯಲ್ಲ ಸೊ ಅಲ್ಲಿ ಕಿಟಕಿಯನ್ನು ಓಪನ್ ಮಾಡಲಾಗದು" ಎಂಬ ಉತ್ತರ ದೊರೆಯುತ್ತದೆ. ಸರಿ ಹಾಗಿದ್ದರೆ ಖಾಸಗಿ ಆಸ್ಪತ್ರೆಯಲ್ಲಿಯ ಐ.ಸಿ.ಯು ನಲ್ಲಿ ಯಾಕೆ ಇಂಥ ಅಸಹ್ಯ ವಾಸನೆ ಇರೋದಿಲ್ಲ? ಇದಕ್ಕವರಲ್ಲಿಯ ಉತ್ತರ" ಹಾಗಿದ್ದರೆ ನೀವು ಅಲ್ಲಿಯೇ ಹೋಗೋದು ತಾನೆ?"