ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕನ್ನಡಕ್ಕೆ ಶಾಸ್ತ್ರೀಯ ಸ್ತಾನ ನೀಡುವುದರಲ್ಲಿ ವಿಳಂಬ - ಕ.ರ.ವೇ. ಪ್ರತಿಭಟನೆ

ತಮಿಳಿಗೆ ಇರುವ ಎಲ್ಲಾ ಅರ್ಹತೆಗಳೂ ಕನ್ನಡಕ್ಕೆ ಇದ್ದರೂ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡುವುದರಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಕ್ರಮವನ್ನು ವಿರೋಧಿಸಿ ರಾಜ್ಯಾದ್ಯಂತ ಕ.ರ.ವೇ ಪ್ರತಿಭಟನೆ ನಡೆಸಿತು. ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕೆಳಗಿನ ಕೊಂಡಿಯಲ್ಲಿ ನೋಡಿ

http://www.karnatakarakshanavedike.org/modes/view/76/classical-status-for-kannada.html

http://karave.blogspot.com/2008/08/blog-post_09.html

ಮಗುವನ್ನು ಅಡಾಪ್ಟ್ ಮಾಡಿಕೊಂಡರೆ ಸೋಮಾರಿತನವೇ ?

ಒಂದು ಚರ್ಚೆಯಲ್ಲಿ ನಾನು ಮಗುವೊಂದನ್ನು ದತ್ತು ತೆಗೆದುಕೊಂಡು ಅದನ್ನು ಬೆಳೆಸುವ ವಿಚಾರ ಬಂತು.
ಅದು ನನ್ನ ಜೀವನದ ಆಕಾಂಕ್ಷೆಯೂ ಹೌದು. ನನ್ನ ಅಕ್ಕನೂ ಇದೇ ಮಾತನ್ನು ಹೇಳಿದಳು
ಅದಕ್ಕೆ ನನ್ನವರು ಹಾಗು ನನ್ನ ಭಾವ ಹೇಳಿದ್ದೇನೆಂದರೆ

ಬೆತ್ತಲೆ ಚಿತ್ರ ನೋಡಲು ’ಕನ್ನಡ ಪ್ರಭ’ದ ಶಿಫಾರಸ್ಸು !

ಹಿಂದಿನಟಿಯೊಬ್ಬಳು ಬೆತ್ತಲೆ ಫೋಸು ಕೊಟ್ಟಿದ್ದಾಳೆ. ಅದು ಆ ಇಂಗ್ಲೀಷ್ ಪತ್ರಿಕೆಯಲ್ಲಿದೆ ನೋಡಿ ಎಂದು ನಮ್ಮ ಕನ್ನಡಪ್ರಭ ಪತ್ರಿಕೆ ಇವತ್ತು[http://www.kannadaprabha.com/Cinema/cineItems.asp?ID=KPJ20080810104625&Title=Manaranjane&lTitle=%C8%DA%DF%AB%DA%C1%DAMd%AB%E6&Topic=0&Dist=0|ಶಿಫಾರಸ್ಸು ಮಾಡಿದೆ.] ಜೊತೆಗೆ ಸ್ಯಾಂಪಲ್ಲಿಗೆ ಎರಡು ಚಿತ್ರಗಳನ್ನು ಬೇರೆ ಕೊಟ್ಟಿದೆ. ! ಧನ್ಯರಾದರು ಕನ್ನಡಿಗರು. ಮಾಧ್ಯಮಗಳಿಂದ ಉದ್ಧಾರಾದರು ದೇಶದ ಜನರು.

ಅಭಿನವ್ ಬಿಂದ್ರಾ : ಭಾರತಕ್ಕೆ ಒಲಂಪಿಕ್ಸ್ ನ ಮೊದಲ ಚಿನ್ನ


(ಚಿತ್ರ : beijing2008.cn)

ಒಲಂಪಿಕ್ಸ್ ನಲ್ಲಿ ಭಾರತದ ಅಭಿನವ್ ಬಿಂದ್ರಾ ೧೦ಮೀಟರ್ ಏರ್ ರೈಪ್ಲಲ್ ನಲ್ಲಿ ಮೊತ್ತ ಮೊದಲ ವೈಯುಕ್ತಿಕ ಚಿನ್ನವನ್ನ ಪಡೆಯುವುದರ ಮೂಲಕ ಹೊಸ ಇತಿಹಾಸವನ್ನ ದಾಖಲಿಸಿದ್ದಾರೆ. ಈ ಗೆಲುವು ಇತರೆ ಭಾರತೀಯ ಆಟಗಾರರನ್ನು ಹುರಿದುಂಭಿಸಲಿ. 

ಅವಭಿನವ್ ಬಿಂದ್ರಾ ತಮ್ಮೆಲ್ಲಾ ವೈಯುಕ್ತಿಕ ದಾಖಲೆಗಳನ್ನ ಹಿಂದಿಕ್ಕಿ ಈ ಚಿನ್ನ ವನ್ನ ಗೆದ್ದಿದ್ದಾರೆ.

Rank Event Year Venue Result
Olympic Games
7 10m Air Rifle 2004 Athens, GRE 694.6
World Championships
1 10m Air Rifle 2006 Zagreb, CRO 699.1
Asian Championships
4 10m Air Rifle 2005 Bangkok, THA 695.3

(ಮಾಹಿತಿ ಮೂಲ)

ಕೆಲವು ಮಿಂಚುಸೂಜಿಗಲ್ಗದಿರುಗಳಿಗೆ ಕನಡ ಹೆಸರುಗಳು

Radio waves=ಮೆಲ್ಗದಿರ್. ಇವುಗಳ ತೀಕ್ಷ್ಣತೆ ಕಡಿಮೆಯಿದ್ದು ಅಡ್ಡಬರುವ ಗಾಜು, ಕಾಗದ ಮುಂತಾದ ಸಣ್ಣ ವಸ್ತುಗಳಿಂದ ತಡೆಯಲ್ಪಡುವುದಱಿಂದ ಈ ಹೆಸರು ಮೆಲ್=ಮೆಲ್ಲಿತು, ಮೆಲ್ಲ ಕದಿರ್=ಕಿರಣ.
Infrared rays=ಕಿೞ್ಗೆಂಗದಿರ್=ಕಿಗ್ಗೆಂಗದಿರು= ಕೆೞಕೆಂಪು ಕದಿರುಗಳು.
Light rays=ಕದಿರ್ ಅಥವಾ ಕಣ್ಗದಿರ್=ಕಣ್ಣಿಗೆ ಕಾಣುವ ಬೆಳಕು ಅಥವಾ ಬೆಳಕು.
Ultraviolet rays=ಮೇಲೂದಾಗದಿರ್

ಬಂತು ನೋಡಿ ಭಾರತಕ್ಕೆ ಒಲಿಂಪಿಕ್ಸ್ ಚಿನ್ನ

ಅಭಿನವ್ ಬಿಂದ್ರಾಗೆ ಶೂಟಿಂಗಿನಲ್ಲಿ ಚಿನ್ನ ಬಂತು!ವೈಯುಕ್ತಿಕ ಸ್ಪರ್ಧೆಯಲ್ಲಿ ಇದು ಭಾರತದ ಮೊದಲ ಒಲಿಂಪಿಕ್ಸ್ ಚಿನ್ನವಂತೆ.
http://www.ndtv.com/olympics/storypage.aspx?storyid=SPOEN20080060970

ಟೇಕ್ ಕೇರ್...

take care ಗೆ ಕನ್ನಡದಲ್ಲಿ ಏನನ್ನಬೇಕು..ನಾನು ಸಾಮಾನ್ಯವಾಗಿ "ಜೋಪಾನ" ಎನ್ನುತಿದ್ದೆ. ಆದ್ರೆ ಇತ್ತೀಚೆಗೆ ಒಂದು ಜಾಹಿರಾತಿನಲ್ಲಿ takecare ಗೆ "ಕಾಳಜಿ ಮಾಡಿರಿ" ಅಂತ ನೋಡಿದೆ. ಅದೇನೋ, ನನಗೆ ಆ ಬಳಕೆ ಹಿಡಿಸಲಿಲ್ಲ.ನಮ್ಮ ಸೊಗಡಿಗೆ ಸರಿಹೊಂದಲಿಲ್ಲ ಅನ್ನಿಸ್ತು. takecare ಅಂತ ಕನ್ನಡದಲ್ಲಿ, ಮನಸ್ಸಿಗೆ ಆಪ್ತವಾಗುವ ರೀತಿ ಹೇಳುವುದು ಹೇಗೆ?

ವಿಜ್ಞಾನ ಏನೆನ್ನುತ್ತದೆ?

ನೆನ್ನಿನ ಪತ್ರಿಕೆಯೊಂದರಲ್ಲಿ ಒಂದು ವಿಸ್ಮಯಕಾರಿ ಸಂಗತಿಯೊಂದರ ವರದಿ ಬಂದಿದೆ. ಗುಲ್ಬರ್ಗ ಜಿಲ್ಲೆಯ ಮಹಿಳೆಯೊಬ್ಬಳು ಸುಮಾರು ೧೮ ವರ್ಷಗಳಿಂದ ಏನೂ ತಿನ್ನುವ ಆಹಾರ ಸೇವಿಸಿಲ್ಲವಂತೆ. ದಿನಕ್ಕೆ ಎರಡು ಕಪ್ ಚಹಾ ಮತ್ತು ಕೆಲವೊಮ್ಮೆ ನೀರು ಕುಡಿಯುವುದು ಬಿಟ್ಟರೆ ಇನ್ನೇನೂ ಆಹಾರ ಸೇವಿಸಿಲ್ಲವಂತೆ.