ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಭಾರತಕ್ಕೆಈ ಬಾರಿಯ ಒಲಿಂಪಿಕ್ಸ್ ನಲ್ಲಿ ಮೊದಲ ಚಿನ್ನ!!!

ಭಾರತದ ಅಭಿನವ್ ಬಿಂದ್ರಾ ಪುರುಷರ ೧೦ಮೀ ಏರ್ ರೈಫೆಲ್ ಶೂಟಿಂಗ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ...

http://en.beijing2008.cn/news/sports/headlines/shooting/n214528114.shtml

ಇಳಿ, ಇೞಿ

ಇಳಿ=ಸೊರಗು, ಕಡಿಮೆಯಾಗು, ಇಳಿದೆಂದು ಕ್ಷೀಣಂ (ಶಬ್ದಮಣಿದರ್ಪಣ)
ಉದಾಹರಣೆ:- ಅವನೆಷ್ಟು ಇಳಿದು ಹೋಗಿದ್ದಾನೆ.

ಜನ್ನನ ಯಶೋಧರಚರಿತೆಯ ಉದಾಹರಣೆ

ಬೇವಂ ಮೆಚ್ಚಿದ ಕಾಗೆಗೆ
ಮಾವಿಳಿದಪ್ಪಂತೆ ಪತಿಯೊಳಿಳಿದಾಯ್ತು ಮನಂ||

ಅಮೃತಮತಿಗೆ ಆಸ್ಥಾನದ ಮಾವಟಿಗನ ಮೇಲೆ ಮನಸ್ಸಾದ ಮೇಲೆ ರಾಜನಾದ ತನ್ನ ಗಂಡನ ಮೇಲೆ ಪ್ರೀತಿ ಕಡಿಮೆಯಾಯ್ತೆಂದು ಹೇೞುವ ಪದ್ಯದ ಭಾಗವಿದು.

ನನ್ನದೊ೦ದು ವಿಚಿತ್ರ ಪ್ರಶ್ನೆ

ನನಗೊ೦ದು ವಿಚಿತ್ರವಾದ ಪ್ರಶ್ನೆಯಿದೆ.ದಯವಿಟ್ಟು ಯಾರೂ ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ

.ಸ೦ಪದದಲ್ಲಿ ಎಷ್ಟು ಜನ ಮಾ೦ಸಹಾರಿಗಳಿದ್ದಾರೆ..?

ಸಂಪದ Podcastನ ೧೧ನೇ ಸಂಚಿಕೆಯಲ್ಲಿ ಡಾ. ಉಲ್ಲಾಸ್ ಕಾರಂತ

ಸಂಪದ Podcastನ ೧೧ನೇ ಸಂಚಿಕೆಗೆ ಡಾ. ಉಲ್ಲಾಸ್ ಕಾರಂತರನ್ನು ಸಂದರ್ಶಿಸಲಿದ್ದೇವೆ. ಸಂಪದ ಸದಸ್ಯರಲ್ಲಿ ಯಾರಿಗಾದರೂ ಉಲ್ಲಾಸ್ ಕಾರಂತರಿಗೊಂದು ಪ್ರಶ್ನೆ ಕೇಳಬೇಕೆನಿಸಿದರೆ, ಇಂದು, ಅಂದರೆ [:contact|ಸೋಮವಾರ ಸಾಯಂಕಾಲದೊಳಗಾಗಿ ಕಳುಹಿಸಬಹುದು].

ಉಲ್ಲಾಸ್ ಕಾರಂತರದು ವನ್ಯಜೀವಿ ಸಂರಕ್ಷಣೆಯಲ್ಲಿ ವಿಶ್ವದಾದ್ಯಂತ ಚಿರಪರಿಚಿತ ಹೆಸರು. ಇವರ ತಂದೆ ಶಿವರಾಮ ಕಾರಂತರು.

ಕೆಂಪು Apache ಬೈಕೂ ... ಕಪ್ಪು ಟೀ ಶರ್ಟೂ... ಒಂದು ಕಹಿ ಅನುಭವ

ಕಳೆದ  ವಾರ  WiFi  router ತಗೋಳೋಣ ಅಂತ  ಆಫೀಸಿಂದ  KT Street(ಮೈಸೂರು) ಕಡೆ ಹೊರಟೆ.  ಕಾಳಿದಾಸ ರಸ್ತೆ ಯಿಂದ ಬಸ್ ಸ್ಟಾಂಡ್ ಕಡೆ ಹೋಗಲು  ಒಂದು ಶಾರ್ಟ್ ಕಟ್ ದಾರಿ ಇದೆ , ಅಲ್ಲಿ ಹೋಗುತ್ತಾ ಇದ್ದೆ. ಒಬ್ಬ  ಪೋಲೀಸಿನವ  ಅಡ್ಡ ಹಾಕಿ ನಿಲ್ಲಿಸಿದ ಅವರು ಹಾಗೇ ನನ್ನನ್ನು ನೋಡಿ ಮತ್ತೆ  ಹೋಗಪ್ಪಾ ಅಂದರು.

ವಿಮಾನ ಆಸುಪಾಸು...

ನಾಗರೀಕತೆ ಅರಣ್ಯಗಳನ್ನು ಹಿಮ್ಮೆಟ್ಟಿಸುತ್ತವೆ ಎಂಬುದು ಹಳೆಯ ಕಲ್ಪನೆ ಅಥವಾ ಮಾತು. ಆದರೀಗ ಇದನ್ನು ಪುನಾರವಲೋಕಿಸಬೇಕಿದೆ. ಜನರಿಗೆ, ಸರ್ಕಾರ ಅಥವಾ ಸಮಾಜ ಅಭಿವ್‌ಋದ್ದಿ ಎಂಬ ವಿಶ್ಲೇಷಣೆ ತಪ್ಪು ನೀಡಿರಬಹುದೇ?

ಹರಿಯುತಿಹಳು ಅದಿರೆಂಬ ಕಾಂಚಾಣ

ಈಗೆ ೨ ವರ್ಷಗಳ ಹಿಂದೆ ಅಂದರೆ, ಅಂತಿಮ ಪದವಿಯಲ್ಲಿ ಓದುತ್ತಿದ್ದಾಗ ಶಿಕ್ಷಣಿಕ ಪ್ರವಾಸ ಕೈಗೊಂಡಿದ್ದೆವು. ಆ ಸಮಯದಲ್ಲಿ ಕುದುರೆಮುಖದ ಮುಖಾಂತರ ನಾವು ಪ್ರಯಾಣಿಸಿದಾಗ "ಲಕ್ಯಾ" ಡ್ಯಾಂಗೆ ಭೇಟಿ ಮಾಡಿದ್ರಿ. ಆದರೆ ಆ ಡ್ಯಾಂ ನಲ್ಲಿ ನಮಗೆ ನೀರಿನ ಬದಲು ಬರೀ ರಾಡಿ ಅಥವಾ ಕೆಸರನ್ನು ಕಂಡು ಸಪ್ಪೆ ಮೋರೆಯಿಂದ ಬರಬೇಕಾಯ್ತು.

ರಾಜ್ಯ ಸರ್ಕಾರದ ಕುದುರೆಮುಖ ಅದಿರು ಕಂಪನಿಯ, ಸಂಸ್ಕರಣದ ನಂತರ ಅಲ್ಲಿ ಉತ್ಪತಿಯಾದ ತ್ಯಾಜ್ಯ ಈ ಡ್ಯಾಂಗೆ ಹರಿದು ನೀರಿನ ಮೂಲ ರೂಪವನ್ನು ಅಳಿಸಿ ಹಾಕಿತ್ತು. ಆದ್ರೆ ಅನೇಕ ಜನಪರ ಸಂಘಟನೆಗಳ ಸತತ ಹೋರಾಟಗಳು ನಿರಂತರ ನಡೆದು, ಕಡೆಗೆ ಹೈಕೋರ್ಟ್‌ ಅಣತಿಯಂತೆ ಕುದುರೆಮುಖ ಎಂಬ ಸರ್ಕಾರಿ ಲಾಭದ ಸಂಸ್ಥೆಯ ಗಣಿಗಾರಿಕೆ ಸ್ತಬ್ಧ ಮಾಡುವಲ್ಲಿ ಸಫಲವಾಗಿರುದು ಈಗ ಇತಿಹಾಸ.

ಇನ್ನು ಬಳ್ಳಾರಿ ಗಣಿಗಾರಿಕೆಗೆ ಪುಲ್‌ ಸ್ಟಾಪ್‌ ಎಂದು ಎಂಬುದು ನನ್ನ ಪ್ರಶ್ನೆ. ರಾಜ್ಯ ಸರ್ಕಾರ ಕೂಡಲೇ ಈ ನಿಟ್ಟಿನಲ್ಲಿ ಕಾರ್ಯಗೊಳ್ಳುವುದೇ? ಗಣಿ ಧಣಿಗಳ ಹಿಡಿತದಲ್ಲಿರುವ ಸರ್ಕಾರಕ್ಕೆ ಗಣಿ ಸಂಪತ್ತು ರಕ್ಷಿಸಲು ಮುಂದಾಗಬೇಕಿದೆ. ಇಲ್ಲಿ ಸರ್ಕಾರಕ್ಕೆ ಬರಬಹುದಾದ ಲಾಭ ಎಷ್ಟು. ಒಂದು ಟನ್‌ ಅದಿರಿಗೆ ಕೇವಲ ೨೭ ರೂಪಾಯಿ ರಾಜಧನ ನೀಡಿ ಅಧಿಕ್‌ಋತವಾಗಿ ಸಾಗಿಸಿದರೆ, ಅನಧಿಕ್‌ಋತವಾಗಿ ೫ ಟನ್‌ ಅದಿರು ಅಲ್ಲಿಂದ ನುಸುಳಿರುತ್ತೆ ಎಂಬುದು ಗುಪ್ತವಾಗಿ ಉಳಿದಿಲ್ಲ. ಅಂದರೆ ಒಂದಕ್ಕೆ ೫ ಪಟ್ಟು ಅಕ್ರಮವಾಗಿ ಸಾಗಿದ ಅದಿರು ಬೇಲೇಕಲ್‌, ಕಾರವಾರ ಹಾಗೂ ಮಂಗಳೂರಿನ ಬಂದರುಗಳಿಗೆ ಸೇರುತ್ತದೆ. ಬಳ್ಳಾರಿಯ ಆಸುಪಾಸಿನಲ್ಲಿ ಲೂಟಿ ಮಾಡಲಾಗುತ್ತಿರುವ ಅದಿರಿನಲ್ಲಿ ಶೇ ೮೦ ರಷ್ಟು ಚೀನಾಕ್ಕೆ ಜಲಸಾರಿಗೆಯ ಮೂಲಕ ನಿರಾಂತಕವಾಗಿ ಹರಿಯುತ್ತಿದೆ.

ಕನ್ನಡ

ಕನ್ನಡ ನಮ್ಮ ಮಾತೃ ಭಾಷೆ. ಜನ್ಮ ಕೊಟ್ಟ ತಾಯಿ ಮೇಲಿನ ಪ್ರೀತಿಗೂ ನಮ್ಮ ತಾಯಿ ಭಾಷೆಗೂ ಸಮಾನ ಸ್ಥಾನಮಾನ. ಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ ಅನ್ನೋ ಹಾಗೆ ನಾವು ಎಷ್ಟೇ ಭಾಷೆ ಕಲಿತರೂ ಕನ್ನಡಿಗರೊಂದಿಗೆ ಆಡುವುದು ಕನ್ನಡವೇ. ಇದು ಕನ್ನಡಿಗರಿಗಷ್ಟೇ ಅನ್ವಯಿಸುತ್ತದೆ ಎನಿಸುತ್ತದೆ. ನಮ್ಮ ನಾಡಿಗೆ ಯಾವ ರಾಜ್ಯದವನು ಬಂದರೂ ಅವರ ಭಾಷೆ ಯಲ್ಲೆ ಸಂಭಾಷಣೆ ನಡೆಸುತ್ತೇವೆ.

ಕನ್ನಡತನ

ಮಾತೃ ಭಾಷೆ ಪ್ರೇಮ ಹುಟ್ಟಿನಿಂದಲೇ ಬಂದಿರಬೇಕೇ ವಿನಃ ಇನ್ನೊಬ್ಬರಿಂದ ನೋಡಿ ಕಲಿಯುವಂತಹದ್ದಲ್ಲ. ನಮ್ಮ ಕನ್ನಡಿಗರು ಬೇರೆಯವರ ಹಾಗಲ್ಲ. ಎಲ್ಲವನ್ನೂ ಸಹಿಸಿಕೊಳ್ಳುತ್ತಾರೆ. ಬೇರೆ ರಾಜ್ಯಗಳಿಂದ ಬಂದವರಿಗೆ ನಮ್ಮ ಕನ್ನಡವನ್ನು ಕಲಿಸುವುದಿಲ್ಲ. ಅವರ ಭಾಷೆಯನ್ನೆ ಕಲಿಯಲು ಪ್ರಯತ್ನಿಸುತ್ತಾರೆ.