ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕನ್ನಡಕ್ಕೆ ಯಾಕೆ ಶಾಸ್ತ್ರಿಯ ಭಾಷೆ ಅನ್ನೋ ಸ್ಥಾನ ಸಿಗುತ್ತಿಲ್ಲ?

ನಮಸ್ಕಾರ,
actually ಕನ್ನಡಕ್ಕೆ ಸಿಗಬೇಕಾದ ಶಾಸ್ತ್ರಿಯ ಸ್ಥಾನಮಾನದ ಕುರಿತು ನಿಮ್ಮೊಂದಿಗೆ ಕೆಲವು ಮಾತುಗಳನ್ನ ಹಂಚಿಕೊಳ್ಳಬೇಕು ಅಂತ ಇದೀನಿ.

ಕೆ.ಜಿ.ಸೋಮಶೇಖರ ಅಪರೂಪದ ಛಾಯಾಪತ್ರಕರ್ತ..

ಕನ್ನಡಕ್ಕೆ ಪ್ರಥಮ ಜ್ನಾನಪೀಠ ಗಳಿಸಿಕೊಟ್ಟ ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ನಕ್ಕಿದ್ದೇ ಅಪರೂಪ!
ಸದಾ ಗಂಭೀರವದನರಾಗಿಯೇ ಇರುತ್ತಿದ್ದ ಅವರು ಅಪರೂಪಕ್ಕೆ ನಕ್ಕಾಗ ಕ್ಲಿಕ್ಕಿಸಿದ ಕಪ್ಪು-ಬಿಳುಪು ಛಾಯಾಚಿತ್ರವನ್ನು ಪ್ರಕಟಿಸದ ಯಾವೊಂದು ಪತ್ರಿಕೆಯೂ ಬಹುಶ: ನಮ್ಮ ಕನ್ನಡ ನಾಡಿನಲ್ಲಿ ಇಲ್ಲ. ರಸರುಷಿ ಕುವೆಂಪು ಸಾರಿದ ‘ವಿಶ್ವಮಾನವತೆ’ ಅರ್ಥಪೂರ್ಣವಾಗಿ ದಿಗಂತದ ಎತ್ತರಕ್ಕೆ ಬಿಂಬಿಸಿದ ಭಾವಪೂರ್ಣ ಚಿತ್ರ ಬಹುಶ: ಅದೊಂದೇ!

ಇತ್ತೀಚೆಗೆ "ಈ ಚಿತ್ರ ನನ್ನದು. ನನಗೆ ಕೊಡಬೇಕಾದ ಗೌರವಧನ ಕೊಡದೇ ಸಾವಿರಾರು ಪ್ರತಿ ಮುದ್ರಿಸಿ ಕವಿಯ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಹಂಚಲಾಗಿದೆ. ಕೊನೆ ಪಕ್ಷ ಸೌಜನ್ಯಕ್ಕಾದರೂ ಛಾಯಾಚಿತ್ರದ ಬುಡದಲ್ಲಿ ಇದು ಕೆ.ಜಿ.ಸೋಮಶೇಖರ ಕ್ಲಿಕ್ಕಿಸಿದ್ದು ಎಂದು ನಮೂದಿಸಿಲ್ಲ" ಎಂದು ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಅಳಲೊಂದು ಪ್ರಕಟಗೊಂಡಿದ್ದನ್ನು ತಾವು ಓದಿರಬಹುದು.
"ದೀಪದ ಬುಡಕ್ಕೆ ಕತ್ತಲೆ!" ಎಂಬಂತೆ ಕನ್ನಡಿಗರ ತಾತ್ಸಾರ, ಅಭಿಮಾನಶೂನ್ಯತೆ ಎಲ್ಲವನ್ನು ಧಿಕ್ಕರಿಸಿ; ಶರಣು ಹೊಡೆದು ಪುಣೆಯಲ್ಲಿ ನೆಲೆಸಲು ಹೊರಟಿರುವ ಹೋರಾಟಜೀವಿ ಕೆ.ಜಿ.ಸೋಮಶೇಖರ ಅವರ ಕಥೆ(ನಮ್ಮ) ವ್ಯಥೆ ಇದು.

ಕಣ್ಣೇ ಮುಚ್ಚೇ, ಕಾಡಬೇಡ್ವೇ...

’ಎಂಥಾ ಹದವಿತ್ತೇ ಹರಯಕೆ ಏನು ಮುದವಿತ್ತೆ...’

ಎನ್‌.ಎಸ್‌. ಲಕ್ಷ್ಮೀನಾರಾಯಣ ಭಟ್ಟರ ಭಾವಗೀತೆ ತೂರಿ ಬರುತ್ತಿದೆ.

ಎಷ್ಟು ಸಾರಿ ಕೇಳಿದ್ದೇನೋ ಗೊತ್ತಿಲ್ಲ. ಆದರೂ ಮನಸ್ಸು ಮತ್ತೆ ಮತ್ತೆ ಅತ್ತಲೇ ಹೊರಳುತ್ತದೆ.

ಕರೆಂಟ್‌ ಹೋದ ಮೇಲೆಯೇ ಸಿಡಿ ಬಂದಾಗಿದ್ದು. ಆದರೆ, ಮನಸ್ಸು ಗುನುಗಲು ಶುರು ಮಾಡಿತು. ಮತ್ತದೇ ಸಾಲುಗಳು ’ಎಂಥಾ ಹದವಿತ್ತೇ, ಹರಯಕೆ ಏನು ಮುದವಿತ್ತೇ...’.

ಓಪನ್ ಡೆಕ್ ಡಬಲ್ ಡೆಕ್ಕರ್ ಬಸ್ ನಲ್ಲೇ, ನಾವು ಸ್ಯಾನ್ ಫ್ರಾನ್ಸಿಸ್ಕೋ ನಗರದ, ಸುಮಾರುಭಾಗಗಳನ್ನು ನೋಡಿಆನಂದಿಸಬಹುದು !

ಪ್ರತಿದಿನ ನಗರ ಪರ್ಯಟನೆಗೆ, ಸಕಲವಿಧವಾದ ಸೌಕರ್ಯಗಳು ಇವೆ. ಟ್ರಾಮ್ ಗಳು, ಟಾಂಗಾಗಾಡಿಗಳು, ಎಲೆಕ್ಟ್ರಿಕ್ ಬಸ್ ಗಳು, ಖಾಸಗೀವಾಹನಗಳು, ಸೈಕಲ್ ಗಳು, ಎಲ್ಲವೂ ಲಭ್ಯ. ನಡೆದೋ ಸ್ಕೇಟ್ ಮಾಡುತ್ತಲೋ ಸಾಗುವ ಎಳೆಯರ ಸಂಖ್ಯೆಗೇನೂ ಕಡಿಮೆಯಿಲ್ಲ.

’ಫಿಶರ್ಮ್ಯಾನ್ಸ್ ವಾರ್ಫ್,’ ನಿಂದ ಆರಂಭವಾಗಿ ಸಾಗುವ ಪುಟ್ಟನಗರದ ವಾಹನಗಳು, ಚೈನಟೌನ್, ಕಾಯಿಟ್ ಟವರ್, ಎಲ್ಲಾ ಸುತ್ತಿಕೊಂಡು ಬರುತ್ತವೆ. ಎಲ್ಲವರ್ಗದ ಜನರಿಗೂ ಅನುಕೂಲವಾಗುವಂತೆ ಏರ್ಪಾಡುಮಾಡಲಾಗಿದೆ. ಆನ್ ಲೈನ್ ಬುಕಿಂಗ್ ಮಾಡಿದರೆ, ವಾಹನಗಳ ಕ್ರಯಗಳುಸೋವಿ. ೩ ತಿಂಗಳು ಮೊದಲೇ ಬುಕ್ ಮಾಡುವ ವ್ಯವಸ್ಥೆಯಿದೆ.

ಪ್ರತಾಪ್ ಸಿಂಹ ವಿರುದ್ಧ ಪ್ರತಿಭಟನೆ,...

ತಮ್ಮ ವಿರುದ್ಧ ನಡೆದ ಪ್ರತಿಭಟನೆ ಬಗ್ಗೆ ಪ್ರತಾಪ್ ಸಿಂಹ ತಮ್ಮ ವೆಬ್-ಸೈಟಿನಲ್ಲಿ ಬರೆದಿದ್ದಾರೆ. ಇಲ್ಲಿ ನೋಡಿ.. http://pratapsimha.com/teeke-tippani/24/

ಸಂಪದಕ್ಕಾಗಿ ಒಂದು ಮಾತು

ನಮ್ಮ ಕನ್ನಡ ಸಂಪದ ನನ್ನ ಮನಸ್ಸಿಗೆ ತುಂಬಾ ಮುದ ನೀಡುತ್ತಿದೆ. ಇಲ್ಲಿ ಎಲ್ಲಾ ಲೇಖನಗಳು ತಮ್ಮ ಮನಸ್ಸಿನ ಅಂತರಂಗವನ್ನು ಭಾವನೆಗಳನ್ನುತಮಗೆ ತೀಳಿದ ಬಾಷೆಯಲ್ಲಿ ಮುದ್ದಾಗಿ ಮುಸುಕಾಗಿ ಸಂತೋಷದಿಂದ ಸಿಟ್ಟಿನಿಂದ ಯೋಚಿಸಿ ಯೋಚಿಸದೇ ಯಾವುದೋ ಒಂದು ರೀತಿ ತಮ್ಮ ಅನಿಸಿಕೆ ವ್ಯಕ್ತ ಪಡಿಸುತ್ತಿದ್ದಾರೆ.

ಪುರಂದರದಾಸರು ರಚಿಸಿರುವ ಈ ಒಗಟಿನ ಕೀರ್ತನೆಯ ಅರ್ಥ ಬಿಡಿಸುವಿರಾ?

ಪ್ರಿಯ ಸಂಪದ್ಬಾಂಧವರೇ,
ನಾನು ಈ ಕೆಳಗೆ ಕೊಟ್ಟಿರುವುದು ಪುರಂದರದಾಸರು ರಚಿಸಿರುವ ಒಂದು ಅತ್ಯಂತ ಜನಪ್ರಿಯ ಆದರೆ ಜಟಿಲ ಕೀರ್ತನೆ. ನನಗಂತೂ ಅದರ ಅರ್ಥವೇ ತಿಳಿಯುತ್ತಿಲ್ಲ. ತಮ್ಮಲ್ಲಿ ಯಾರಾದರೂ ಅರ್ಥ ವಿವರಿಸುವಿರಾ?

ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ ||
ಎರಡು ಬರಿದು ಒಂದು ತುಂಬಲಿಲ್ಲ || ೧ ||

ತುಂಬಲಿಲ್ಲದ ಕೆರೆಗೆ ಬಂದರು ಮೂವರೊಡ್ಡರು ||

ಬದುಕು ಹೀಗೆ ಇರಲಿ ಗೆಳೆಯ .........

ಬದುಕು ಹೀಗೆ ಇರಲಿ ಗೆಳೆಯ .........
ತುತ್ತು ಕೂಳಿಗೂ ಗತಿ ಇಲ್ಲದ ಹೊತ್ತು
ಮೆತ್ತನೆಯ ಕನಸು ಕಾಣಲು ಸಮಯವೆಲ್ಲಿದೆ ಹೇಳು ?
ನೆತ್ತಿ ಮೇಲಿನ ಸೂರಿನಲ್ಲಿಯ ಹತ್ತಾರು ರಂದ್ರದಲ್ಲಿ ಇಳಿವ ..
ಉರಿಯ ತಾಪವ ಎದೆಯಲ್ಲೆ ಹೊತ್ತು
ಮತ್ತೆ ಕೆಲ ಸಮಯದಲ್ಲೇ ತೊಟ್ಟಿಕ್ಕುವ ಹನಿಯ ಹಿಡಿಯುವ ಹರಸಾಹಸದಲ್ಲಿ
ನಿನ್ನ ನೆನಪುಗಳು ಚಿತ್ತವನು ಹೊಕ್ಕು ಕಲಕುವುದು ಬೇಡ .

ಸುದ್ದಿಸೂಳೆಯ ಬೆನ್ನತ್ತಿ ಹೊರಟಿರುವ ಮಾಧ್ಯಮಗಳು!(ಭಾಗ 2)

ಮಾಧ್ಯಮಗಳು ಈ ರೀತಿ ವರ್ತಿಸಿದ ಪ್ರಕರಣ ಇದೇ ಮೊದಲೇನಲ್ಲ. ಈ ಹಿಂದೆ ಬಹುಚರ್ಚಿತ ನಿತಾರಿ ಪ್ರಕರಣ, ಜೆಸ್ಸಿಕಾ ಲಾಲ್ ಪ್ರಕರಣದಲ್ಲೂ ಇದೇ ರೀತಿಯಾಗಿಯೇ ನಡೆದುಕೊಂಡಿದ್ದವು ಎಂದು ಹೇಳುತ್ತ ಅವುಗಳ “ಸಚ್ಚಾರಿತ್ರ್ಯ ಚರಿತ್ರೆ”ಯನ್ನು ನೆನಪಿಸಿಕೊಳ್ಳುವ “ಪುಣ್ಯ” ಕಾರ್ಯವನ್ನು ಮಾಡಬಹುದು.