ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

(ಮನೆ) ಅಳಿಯ! ಮನೆ ತೊಳಿಯ !!

ದಿನವಿಡೀ ಮುನಿಸು ಎಂದಿಗೂ ವಕ್ರ
ಬಯಸುವನು ಮರಿಯಾದೆಯನು ಸದಾ
ಕನ್ಯಾರಾಶಿಯಲಿ ನೆಲೆನಿಂತಿಹನೋ ಈ
(ಮನೆ*) ಅಳಿಯನೆಂಬ ಹತ್ತನೇ ಗ್ರಹ! 

ಸಂಸ್ಕೃತ ಮೂಲ - ಕನ್ನಡ ಕಂದರ ಕೃಪೆಯಿಂದ

ಸದಾ ರುಷ್ಟಃ ಸದಾ ವಕ್ರಃ ಸದಾ ಪೂಜಾಮಪೇಕ್ಷತೇ
ಕನ್ಯಾರಾಶಿಸ್ಥಿತೋ ನಿತ್ಯಂ ಜಾಮಾತಾ ದಶಮೋ ಗ್ರಹಃ||

*: ಮೂಲದಲ್ಲಿ ಮನೆ ಅಳಿಯನೆಂದಿಲ್ಲ; ಬರೀ ಅಳಿಯನೆಂದಿದೆ

ಸ೦ಪದದಲ್ಲಿ ಲೇಖನಗಳನ್ನ ಬರೆಯೋದಕ್ಕಿ೦ತ ಬೇರೆಯವರ ಬರಹಗಳಿಗೆ ಕಾಮೆ೦ಟ್ ಬರೆಯೋದೆ ಖುಶಿ ತರುತ್ತೆ ನನಗೆ...

ಸ೦ಪದದಲ್ಲಿ ಲೇಖನಗಳನ್ನ ಅಥವ ಬೇರಾವ article ಬರೆಯೋದಕ್ಕಿ೦ತ ಬೇರೆಯವರ ಬರಹಗಳಿಗೆ ಕಾಮೆ೦ಟ್ ಬರೆಯೋದೆ ಖುಶಿ ತರುತ್ತೆ ನನಗೆ...

ನೀವುಗಳೇನ೦ತೀರಾ?

ನಿಮ್ಮವ,

ಕ್ರಿಸ್ನ

ಶಾಯರಿ

ಮನ್ಯಾಗ್ ಎಷ್ಟು ದೀಪ ಇದ್ದರೇನು
ದೇವರ ಮುಂದಿನ ದೀಪಾನೆ ಬೇರೆ

ಮನ್ಯಾಗ್ ಎಷ್ಟು ದೀಪ ಇದ್ದರೇನು
ದೇವರ ಮುಂದಿನ ದೀಪಾನೆ ಬೇರೆ

ಕಣ್ಣ್ ಮುಂದೆ ಎಷ್ಟು ಹುಡ್ಗೀರಿದ್ರೆ ಏನು
ಎದೆ ಗೂಡಲ್ಲಿರುವ ಹುಡ್ಗೀನೆ ಬೇರೆ

ಐ ಡೋಂಟ್ ಕೇರ್...

ನೀವು ಐ ಟಿ ಮ್ಯಾನೇಜರ್ಸೇ ಇಷ್ಟು.
ಬೆಳಿಗ್ಗೆ ಎಲ್ಲ ಆ ಡೆವೆಲಪರ್ ಏನ್ ಮಾಡ್ದ
ಈ ಡೆವೆಲಪರ್ ಏನ್ ಮಾಡ್ದ ಅಂತ ತಲೆ ತಿಂತ
ಇಡೀ ಟೀಮ್ ನ ಅಮೂಲ್ಯವಾದ ಬೆಳಿಗ್ಗೇನ ಹಾಳ್ ಮಾಡ್ತೀರ

ಒಳ್ಳೆ ಡೆವೆಲಪರ್ ನೋಡುದ್ರೆ ನಿಮಗೆಲ್ಲ ಹೊಟ್ಟೆ ಉರಿ ಜೆಲಸಿ!!
ಹುಡುಗ್ರು ಹುಡುಗೀರ ಜೊತೆ ಮಾತಾಡಿದ್ರೆ ಹೊಲಸು ಕಥೆ ಕಟ್ತೀರ
ಲೈನ್ ಹೊಡುದ್ರೆ ಬಹಿಷ್ಕಾರ ಹಾಕ್ತೀರ

ಮುಪ್ಪು .. ಸಾವು

ಆಕೆ ಸುಂದರಿ ಎನ್ನುವ ಪದಕ್ಕೂ ನಿಲುಕದಷ್ಟು ಸುಂದರಿ. ತನ್ನ ಸೌಂದರ್ಯದ ಬಗ್ಗೆ ಬಹಳ ಹೆಮ್ಮೆ ಅವಳಿಗೆ .
ಕೆಲವೇ ತಿಂಗಳ ಹಿಂದೆ ಮದುವೆಯಾಗಿತ್ತು . ಒಮ್ಮೆ ತಮಾಷೆಗೆ ಗಂಡ ಹೇಳಿದ " ಈ ನಿನ್ನ ಸೌಂದರ್ಯ ಎಲ್ಲಾ ನಶ್ವರ ಏನಿದ್ರೂ ಯೌವ್ವನ ಇರುವ ತನಕ . ಆಮೇಲೆ ನಿನ್ನ ಬದಲಿಗೆ ಮತ್ತೊಬ್ಬ ಹೆಣ್ಣು ಸುಂದರಿ ಅಂತ ಅನಿಸ್ಕೋತಾಳೆ"

ರಾತ್ರಿ

ದಿನಾಂಕ: ಜುಲೈ ೨೦, ೨೦೦೮

ರಾತ್ರಿ

ಕತ್ತಲು ಬದುಕ ಮುತ್ತುವ ಮೊದಲೆ
ಮನೆ, ಮನ ಮುಟ್ಟುವ ತವಕ
ಗೂಡತ್ತ ಹಾರುವ ಹಕ್ಕಿಗಳು
ಸೂರ ಹುಡುಕಿ ಹೊರಡುವತ್ತ

ಇಳಿವಯಸ್ಸಿನ ಮುದಿಯನಂತೆ
ಕಡಲಾಳದಿ ಇಳಿದ ಪಡುವಣ ರವಿ
ಬಿಸಿಲು ಕೆಂಪಾಯಿತು, ಕೆಂಪು ಕಪ್ಪಾಯಿತು
ಮತ್ತೆ ಎಲ್ಲ ತಟಸ್ಥ ಅರೆಗಳಿಗೆ

ದೂರದಿ ಜಿರ್ ಜಿರ್
ಚಿಲಿಪಿಲಿಯ ಕಲರವ ಮರೆಸಲು
ಕತ್ತಲ ಸಂದಿನಲಿ

ಕವಲು ದಾರಿ

ದಿನಾಂಕ: ಎಪ್ರಿಲ್ ೯, ೨೦೦೮

ಕವಲು ದಾರಿ

ಇರುಳು ಕಳೆದು ಹಗಲು ಮುತ್ತಿದರೂ
ಬದುಕಿನ್ನೂ ಅರೆಗತ್ತಲಲಿ
ಊಹು! ಏನೂ ಕಾಣಿಸುತ್ತಿಲ್ಲ ಮನಸಿಗೆ
ಮುಚ್ಚಿದ ಕಣ್ಣು ತೆರೆದರೂ
ಬಂದಿಸಿದ ಭಾವನೆಗಳ ಬಿಡಿಸಿದರೂ
ಮನಸ್ಸು, ಕನಸು ಎಲ್ಲಾ
ಗೊಂದಲದ ಗೂಡು

ಜಾಡಿಸಿ ಓಡಿಸುವ ಬವಣೆ
ಕಿಟಕಿಯ ಪಟ ಪಟನೆ ಬಡಿವಂತೆ
ನೆಲಗಚ್ಚಿ ಕೂತ ರಾಡಿಯ ತೊಳೆವಂತೆ
ಮನದಲ್ಲಿ ಭಾವನೆಗಳ ತಿಕ್ಕಾಟ