ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮುಂಬಯಿ ಮುಖಗಳು ಭಾಗ ೧.....

ಸದಾ ತಡವಾಗಿ ಓಡುವ ಲೋಕಲ್ ಟ್ರೇನುಗಳ ರಭಸ, ಸತ್ತ ಮೀನುಗಳೇ ತುಂಬಿರುವ ಬುಟ್ಟಿಗಳ ನಾರು ವಾಸನೆ, ರೈಲು ಹಳಿಯುದ್ದಕ್ಕೂ ಮೈ-ಮರೆತು ಪ್ಲಾಸ್ಟಿಕ್ ತಂಬಿಗೆ ಹಿಡಿದು ಕೂತಿರುವ ಭಯ್ಯಾಗಳ ಕೄತಘ್ನತೆ, ಯಾವ ಬಾಂಬು ಎಲ್ಲಿ ಸಿಡಿಯುವುದೋ ಎಂಬ ಕರಿ ಭಯದ ನೆರಳಲ್ಲೇ ಎದ್ದು ಮೈ ಮುರಿಯುತ್ತದೆ ಮುಂಬಯಿ. ದೂರದ ಬ್ಯಾಂಡ್ ಸ್ಟಾಂಡ್ ನಲ್ಲಿ ಚರಸ್ ಸೇವಿಸಿ, ಹೈರಾಣಾಗಿ, ಗೆಳೆಯನ ಅಪ್ಪನ ಕ್ವಾಲಿಸ್ ಗಾಡಿಯಲ್ಲಿ ಕುಳಿತು ಮನೆಗಡೆ ಹಿಂದಿರುಗುವ ಯೋಚನೆಯಲ್ಲಿ ಕಾಲ್ ಸೆಂಟರ್ ನ ಹೈ-ಟೆಕ್ ಹೈಕಳು ಚರ್ಚಿಸುತ್ತಿದ್ದರೆ, ಈಚೆ ಗಡದ್ದಾಗಿ ಹೊದ್ದು ಮಲಗಿದ ಲಕ್ಷ್ಮಣ ಭಾವೂ ಸುರ್ವೆ ಚಾಳಿನ ಹದಿನೇಳನೇ ನಂಬರ್ ಮನೆಯಲ್ಲಿ ದೀಪ ಝಗ್ಗನೇ ಬೆಳಗುತ್ತದೆ. ವಸಂತರಾವ್ ವಿಠೋಬಾ ಪಾರಂಗೆಯ ಅರೆ-ತೆರೆದ ಕಣ್ಣುಗಳು, ಆತನಿಗೆ ಎಂದೂ ಮೋಸ ಮಾಡಿಲ್ಲ. ಅಡ್ಡಾದಿಡ್ಡಿ ಮಲಗಿದ ಮಕ್ಕಳಿಗೆ ಕಾಲು ತಾಕದಂತೆ ಎಚ್ಚರವಹಿಸಿ, ಚೊಂಬು ಹಿಡಿದು ಆತ ಮೆಲ್ಲನೆ ಹೊರಬರುತ್ತಾನೆ. ಹದಿನಾರು ವರ್ಷಗಳೇ ಕಳೆದು ಹೋಗಿವೆ ನೋಡಿ, ಆತ ಚಾಳಿನ ಪಾಯಖಾನೆಯ ಬಳಕೆಗಾಗಿ ಲೈನಿನಲ್ಲಿ ನಿಂತಿರುವವರ ಜೊತೆ ಜಗಳವಾಡಿ. ಜಗಳಾಡಲು, ಮೂರೂ ಮುಕ್ಕಾಲರ ’ಮಟಮಟ’ ಮುಂಜಾನೆ ಅಲ್ಲಿ ಯಾರಿರುತ್ತಾರೆ? ಪಾಯಖಾನೆಯ ಬಳಿ ಮಲಗಿರುತ್ತಿದ್ದ ಮೋತಿ ಕೂಡ ಹೋದ ಸಾಯಿಬಾಬಾ ದಿಂಡಿಯ ದಿನ ಸತ್ತು ಹೋಯ್ತು. ಆವತ್ತಿನಿಂದ ಪಾರಂಗೆ ಕಾಕಾನ, ಮುಂಜಾವಿನ ಗುಣು ಗುಣು ಭಜನೆಯನ್ನು ಕೇಳುವವರೆ ಇಲ್ಲ. ಪಾರಂಗೆ ಕಾಕಾನ ಬಳಿ ಮರಾಠಿ ಭಜನೆಗಳ ಭಾಂಡಾರವೇ ಇದೆ. "ಆಜ ಆನಂದೀ ಆನಂದ ಝಾಲಾ..", "ವಿಠೂ ಮಾವುಲೀ ತೂ ಮಾವುಲೀ ಜಗಾಚೀ..", " ಬಾಬಾಂಚಾ ಝಾಲಾ ಪ್ರಸಾದ...", ಹೀಗೆ ಒಂದೇ, ಎರಡೇ?. ಪಾರಂಗೆ ಕಾಕಾ ಹಾಡಲು ಕುಳಿತರೆಂದರೆ, ಚಾಲಿಗೆ ಚಾಳೇ ಕಿವಿಯಾಗುತ್ತದೆ. ನಿನ್ನೆ ಸಂಜೆ ತಂದ ಕ್ಯಾಸೆಟ್ ನ ಹೊಸ ಹಾಡೊಂದನ್ನು ಗುಣಗುಣಿಸುತ್ತ, ಕಾಕಾ ಪಾಯಖಾನೆಯ ಬಳಿ ಹೆಜ್ಜೆ ಹಾಕುತ್ತಿದ್ದರೆ, ಅದಕ್ಕೆ ತಾಳ ಹಾಕುವಂತೆ, ಫನ್ಸೆಕರ್ ಮಾವಶಿಯ ಭಯಾನಕ ಕೆಮ್ಮು. "ಈ ಮುದುಕಿ ರಾತ್ರಿ ಇಡೀ ಕೆಮ್ಮುತ್ತೆ. ಹ್ಯಾಗಾದ್ರೂ ಸಹಿಸ್ತಾರೊ ಆ ಜನ? ರಾತ್ರಿ ಅವಕ್ಕೆ ನಿದ್ದೆಯಾದ್ರೂ ಬರುತ್ತೋ? ಒಂದೇ ಒಂದ್ಸಲ ಸತ್ತಾದ್ರೂ ಹೋಗ್ಬಾರದೆ ಈ ಗೊಡ್ಡು" ಎಂದು ಒಂದು ಕ್ಷಣ ಅಂದುಕೊಳ್ಳುತ್ತಾರೆ ಪಾರಂಗೆ ಕಾಕಾ. ಆದರೆ ವಿನಾಯಕನಿಗೆ ಆಕ್ಸಿಡೆಂಟ್ ಆದಾಗ, ದಿನ ರಾತ್ರಿ ಅನ್ನದೇ ಅವನನ್ನು ನೋಡಿಕೊಂಡದ್ದು ಅದೇ ಮುದುಕಿಯಲ್ಲವೇ ಎಂಬುದು ನೆನಪಾಗಿ ತಮ್ಮ ಯೋಚನೆಗೆ ತಾವೇ ಪಶ್ಚಾತ್ತಾಪ ಪಡುತ್ತ, ತಮ್ಮ ಭಜನೆಯನ್ನು ಮುಂದುವರಿಸುತ್ತ, ನಿರ್ಭೀತರಾಗಿ ಪಾಯಖಾನೆಯೊಳಗೆ ನುಗ್ಗುತ್ತಾರೆ.

ಟಿ.ಪಿ. ಕೈಲಾಸಂ ರವರ ನಗೆ ನಾಟಕ "ಬಂಡ್ವಾಳ್ವಿಲ್ಲದ ಬಡಾಯಿ"...

ಸ್ನೇಹಿತರೆ,

ಅವಿರತ ಟ್ರಸ್ಟ್ ನಿಂದ ರಂಗಶಂಕರದಲ್ಲಿ ಟಿ.ಪಿ. ಕೈಲಾಸಂ ರವರ ನಗೆ ನಾಟಕ "ಬಂಡ್ವಾಳ್ವಿಲ್ಲದ ಬಡಾಯಿ" ಹಮ್ಮಿಕೊಂಡಿದ್ದಾರೆ.
ಟಿಕೆಟ್ ಬೇಕಾದವರು ಮೊಬೈಲ್ ನಂ. 9880086300 ಗೆ ಎಸ್.ಎಮ್.ಎಸ್ ಮಾಡಿ ಅಥವಾ kts_gowda@yahoo.com ಗೆ ಈ-ಮೈಲ್ ಮಾಡಿ.

ಒಂದೇ ದಿನದಲ್ಲಿ ದಾಖಲೆ ೧೦೦ ಟಿಕೆಟ್ ಗಳ ಮಾರಾಟ ಆಗಿವೆ... ನಿಮಗು ಆಸಕ್ತಿ ಇದ್ದರೆ ತಕ್ಷಣ ಟಿಕೆಟ್ ಗಾಗಿ ಸಂಪರ್ಕಿಸಿ.

ಗುಟ್ಟು - ಸ್ಫೂರ್ತಿ ಸೆಲೆ ೬

ಗುಟ್ಟುಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಬೇಡಿ.
ನಿಮಗೇ ಅದನ್ನು ಕಾಪಾಡಲು ಆಗುವುದಿಲ್ಲ ಎಂದ ಮೇಲೆ
ಅವರು ಹೇಗೆ ಕಾಪಾಡುತ್ತಾರೆ?

ಕಣ್ಣೀರು - ಸ್ಫೂರ್ತಿ ಸೆಲೆ ೫

ಕಣ್ಣೀರು ನಗೆಗಿಂತ ಹೆಚ್ಚು ವಿಶೇಷ.
ನಗೆಯನ್ನು ಯಾರಿಗಾದರೂ ಬೀರಬಹುದು ಆದರೆ
ನಾವು ಪ್ರೀತಿಸಿದವರಿಗೆ ಮಾತ್ರ ಕಣ್ಣೀರು ಮಿಡಿಯಬಹುದು.

ಜೀವನ - ಸ್ಫೂರ್ತಿ ಸೆಲೆ ೪

ಜೀವನವೆಂದರೆ ಅವಕಾಶಗಳ ನದಿಯಿದ್ದಂತೆ.
ನೀವು ಬಾನಿ(ಬಕೆಟ್) ಹಿಡಿದಿದ್ದೀರೋ, ಚಮಚ ಹಿಡಿದಿದ್ದೀರೋ ಎಂಬುದು ಮುಖ್ಯ.
ಯಾವುದನ್ನು ಹಿಡಿಯಬೇಕೆಂದು ನಿರ್ಧರಿಸುವವರು ನೀವೇ.

ಆಗ ಗಟಾರಿನಲ್ಲಿ ಬಂಗಾರ ಹೆಕ್ಕುತ್ತಿದ್ದವರು..ಈಗ ಸೆಲ್ ಫೋನ್ ಗಳಲ್ಲಿ ಹುಡುಕುತ್ತಿದ್ದಾರೆ!

ಧಾರವಾಡದ ಗಾಂಧಿ ಚೌಕ ಸರಾಫ್ ಕಟ್ಟೆ ಎಂದೇ ಪ್ರಸಿದ್ಧ. ಸುಮಾರು ೨೦೦ ಬಂಗಾರದ ಅಂಗಡಿಗಳಿವೆ. ‘ವಿಶ್ವಕರ್ಮ’ ದೇಸಿ ಪತ್ತಾರರು, ಮಾರವಾಡಿಗಳು, ಗೌಡ ಸಾರಸ್ವತ ಬ್ರಾಹ್ಮಣ ಸಮಾಜದವರು, ದೈವಜ್ನ ಬ್ರಾಹ್ಮಣ ಸಮಾಜದವರು, ಕಾರವಾರಿಗಳು, ಬಂಗಾಲಿಗಳು ಸೇರಿದಂತೆ ಮುಸಲ್ಮಾನರು ಸಹ ಇಲ್ಲಿ ಬಂಗಾರದ ಆಭರಣ ತಯಾರಿಸುವ ಕಾರ್ಖಾನೆಗಳು ಹಾಗು ಶೋ ರೂಂಗಳನ್ನು ಇಟ್ಟು ಕೊಂಡಿದ್ದಾರೆ.

ಸಂತೋಷ - ಸ್ಫೂರ್ತಿ ಸೆಲೆ ೨

ಸಂತೋಷದ ಒಂದು ಬಾಗಿಲು ಮುಚ್ಚಿದರೆ ಮತ್ತೊಂದು ತೆರೆದುಕೊಳ್ಳುತ್ತದೆ.
ಆದರೆ ನಾವು ನುಚ್ಚಿದ ಬಾಗಿಲನ್ನೇ ನೋಡುತ್ತಿರುತ್ತೇವೆ.
ಯಾವುದಕ್ಕೂ ಬೇಸರ ಪಟ್ಟುಕೊಳ್ಳಬಾರದು.

ಹಣ - ಸ್ಫೂರ್ತಿ ಸೆಲೆ ೧

ನಾವು ನಮ್ಮಲ್ಲಿರುವ ಹಣವನ್ನೆಲ್ಲಾ ಕಳೆದುಕೊಂಡಾಗ ಎಷ್ಟು ಬೆಲೆ ಬಾಳುತ್ತೇವೋ ಅದೇ ನಮ್ಮ ಕಿಮ್ಮತ್ತು. ಹಣದಿಂದ ಯಾರನ್ನೂ ಅಳೆಯದಿರಲು ಪ್ರಯತ್ನಿಸಿ.

ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)

"ಬೇಡಾ ಅಂದ್ರೆ ಬೇಡ!!! ನಾಳೆ ಬೆಳಗ್ಗೆ ಎದ್ದು ಬಾ ಪರವಾಗಿಲ್ಲ..."
"ಹೋಗಮ್ಮ...ನಿಂದು ಒಂದು ಯಾವಾಗ್ಲೂ ಗೋಳು..."
"ನಾನು ಎಷ್ಟು ಸರತಿ ಹೇಳಿದ್ರೂ ಕೇಳಲ್ಲ...ಅಮ್ಮನ ಮಾತು ನಿಮಗೆಲ್ಲಿ ಪಥ್ಯ? ಏನಾದ್ರೂ ಮಾಡ್ಕೊ ಹೋಗು"
ಫೊನ್ ಕುಕ್ಕಿದರು ಅಮ್ಮ...

"ಯಾಕಮ್ಮ ಯೋಚನೆ ಮಾಡ್ತೀಯ???...ಎಷ್ಟೋ ಸರತಿ ಪುಟ್ಟಿ ಹೀಗೆ ಬರಲ್ವಾ?"