ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಏನು ಮಾಡಲಿ ನಾನು..?

ಮೊಗ್ಗರಳಿ ಹೂವಾಗಿ,
ಮರಿದುಂಬಿ ಹಾರಾಡಿ,
ಹಸಿರಾದ ಕಾಯಾಗಿ,
ರಸ ತುಂಬಿ ಹಣ್ಣಾಗಿ,
ಕೈ ಬೀಸಿ ಕರೆಯುತಿರೆ...
ಎನ್ನ ಮನೆಯಂಗಳದ ಮಾವು..
ಏನು ಮಾಡಲಿ ನಾನು..?

ಕವನ ಬರೆಯಲೇ...
ಇಲ್ಲ ಕತೆಯ ಕಟ್ಟಲೆ...
ಪದ ಪದಗಳ ಜೋಡಿಸಿ
ಪದ್ಯ ಬರೆಯಲೇ...
ಏನು ಬೇಡವೆನಿಸಿದಾಗ,
ಋತು ಋತುವಿಗೂ
ನಿಸರ್ಗ ಸೃಷ್ಟಿಸುವ ಪ್ರಕೃತಿಯ
ಕೊಂಡಾಡುತ ಸುಮ್ಮನಿರಲೇ..!?!

-ಸವಿತ

No free left turn - ನಾನು ಇಂಗ್ಲೀಷ್ ಓದಲ್ಲ

ನಾನು ರಸ್ತೆಯಲ್ಲಿ ಓಡಾಡುವಾಗ ಬಹಳ ಕಡೆಗಳಲ್ಲಿ ನೋಡುತ್ತೇನೆ. ಟ್ರಾಫಿಕ್ ಸೂಚನೆಗಳನ್ನು ಬರೀ ಇಂಗ್ಲೀಷಿನಲ್ಲಿ ಹಾಕಿರುತ್ತಾರೆ.
ನಾನು ಹೋಗುವ ದಾರಿಯಲ್ಲಿ ಒಂದು ಕಡೆ no free left turn ಎಂದು ಬರೆದಿದ್ದಾರೆ. ಅಲ್ಲಿ ಯಾವುದೇ ಬೇರೆ ಸಿಗ್ನಲ್ ದೀಪವಾಗಲೀ ಅಥವಾ ಚಿನ್ಹೆ ಆಗಲೀ ಇಲ್ಲ.

‘ನಮ್ಮ ಒಕ್ಕಲಿಗ ಒಕ್ಕಿ ಜಗದ ಒಡಲು ತುಂಬಿಸಿದ..ಆದರೆ ಸ್ವತ: ಬಿಕ್ಕಿದ’

ವಿಶ್ವ ಬ್ಯಾಂಕಿನ ಅಂದಾಜಿನ ಪ್ರಕಾರ ಕ್ರಿಸ್ತ ಶಕ ೨೦೧೫ರ ವೇಳೆಗೆ ನಮ್ಮ ದೇಶದಲ್ಲಿ ಸುಮಾರು ೪೦ ಕೋಟಿ ಪ್ರಜೆಗಳು ಕೃಷಿಯನ್ನು ಬಿಟ್ಟು ಬೇರೆ ಉದ್ಯೋಗ ಹುಡುಕಿಕೊಂಡು ನಗರಗಳಿಗೆ ವಲಸೆ ಬರಲಿದ್ದಾರೆ. ಇದು ಯುನೈಟೆಡ್ ಕಿಂಗಡಂ, ಜರ್ಮನಿ ಹಾಗು ಫ್ರಾನ್ಸ್ ಒಟ್ಟು ಜನಸಂಖ್ಯೆಯ ಎರಡು ಪಟ್ಟು!

ಇದು ನಂಬಬಹುದಾದ ಸಂಖ್ಯೆ. ಏಕೆಂದರೆ ನ್ಯಾಶನಲ್ ಸ್ಯಾಂಪಲ್ ಸರ್ವೇಯವರು ನಡೆಸಿದ ಸಮೀಕ್ಷೆಯ ಪ್ರಕಾರ, ಶೇಕಡ ೪೦ರಷ್ಟು ರೈತರು ಈಗಾಗಲೇ ರೋಸಿ ಹೋಗಿದ್ದಾರೆ. ಕೃಷಿಯನ್ನು ಬಿಟ್ಟು ಬೇರೆ ಯಾವುದಾದರೂ ಉದ್ಯೋಗ ಕಂಡುಕೊಳ್ಳುವ ಅನಿವಾರ್ಯ ತರಾತುರಿಯಲ್ಲಿ ಇದ್ದಾರೆ. ನಮ್ಮವರೇ ನಡೆಸಿದ ಅಧ್ಯಯನಗಳ ಪ್ರಕಾರ ತಮಿಳುನಾಡಿನ ಶೇ.೭೦ ರಷ್ಟು ರೈತರು, ಪಂಜಾಬಿನ ೬೫% ರೈತಾಪಿ ಜನ, ಉತ್ತರ ಪ್ರದೇಶದ ಸುಮಾರು ೫೫% ರೈತರು ಬೇಸಾಯದ ಬವಣೆ ತಾಳಲಾರದೇ ನಗರಗಳಿಗೆ ಬರಲಿದ್ದಾರೆ.

ಆಗ ‘ಕೃಷಿ ನಿರಾಶ್ರಿತರು’ ಎಂಬ ಹಣೆಪಟ್ಟಿಯೊಂದಿಗೆ ನಮ್ಮ ದೇಶದಲ್ಲಿ ಹೊಸ ಆತಂಕವೊಂದು ಸೃಷ್ಠಿಯಾಗಲಿದೆ. ಆಣೆಕಟ್ಟು ಪ್ರದೇಶದ ನಿರಾಶ್ರಿತರು, ಪರಿಸರ ನಿರಾಶ್ರಿತರು ಎಲ್ಲರನ್ನೂ ಮೀರಿಸಿ ಈ ಕೃಷಿ ನಿರಾಶ್ರಿತರು ನಗರಗಳಿಗೆ ಬರಲಿದ್ದಾರೆ.

ಗಣನೆ

ಮನೆಯೊಳೋ ಮಠದಳೋ ಸಭೆಯೊಳೋ ಸಂತೆಯೊಳೊ|
ಕೊನೆಗೆ ಕಾಡೊಳೊ ಮಸಾಣದೊಳೊ ಮತ್ತೆಲ್ಲೋ||
ಗಣನೆಗೇರಲಿಕೆಂದು ಜನ ತಪಿಸಿ ತೊಳಲುವುದು|
ನೆನೆಯದಾತ್ಮದ ಸುಖವ-ಮಂಕುತಿಮ್ಮ||

ಜೀವನ

ಮುಳುಗದಿರು; ಜೀವನದ ತೆರೆಯ ಮೇಲೀಜುತಿರು|
ಒಳಿತನಾಗಿಸು, ಕೊಡುತ ಕೊಳುತ ಸಂತಸವ||
ಕಳವಳಂಬಡದೆ ನಡೆ ಕಡೆಯ ಕರೆ ಬಂದಂದು|
ಮಿಳಿತನಿರು ವಿಶ್ವದಲಿ- ಮಂಕುತಿಮ್ಮ||

ಬಾಳದೋಣಿ

ಕಾಲನದಿಯಲಿ ನಮ್ಮ ಬಾಳದೋಣಿಯು ಮೆರೆದು |
ತೇಲುತ್ತೆ ಭಯವ ಕಾಣದೆ ಸಾಗುತಿರಲು ||
ಗಾಳಿಯಾವಗಮೊ ಬಂದೆತ್ತಣಿನೊ ಬೀಸುತ್ತ |
ಮೇಲ ಕೀಳಗಿಪುದು - ಮಂಕುತಿಮ್ಮ||

ಬದುಕು

ದಿವಸದಿಂ ದಿವಸಕ್ಕೆ, ನಿಮಿಷದಿಂ ನಿಮಿಷಕ್ಕೆ|
ಭವಿಷಿಯವ ಚಿಂತಿಸದೆ ಬದುಕ ನೂಕುತಿರು||
ವಿವರಗಳ ಜೋಡಿಸುವ ಯಜಮಾನ ಬೇರಿಹನು|
ಸವೆಸು ನೀಂ ಜನುಮವನು- ಮಂಕುತಿಮ್ಮ||

ಅನ್ನ ಋಣ

ಇಂದು ಮದುವೆಯ ಹಬ್ಬ; ನಾಳೆ ವೈಕುಂಠ ತಿಥಿ|
ಇಂದು ಮೃಷ್ಟಾನ್ನಸುಖ, ನಾಳೆ ಭಿಕ್ಷಾನ್ನ||
ಇಂದು ಬರಿಯುಪವಾಸ, ನಾಳೆ ಪಾರಣೆ-ಯಿಂತು|
ಸಂದಿರುವುದನ್ನ ಋಣ- ಮಂಕುತಿಮ್ಮ||

ಸತ್ಯವೆಲ್ಲಿ?

ಸತ್ಯವೆಂಬುದದೆಲ್ಲಿ? ನಿನ್ನಂತರಂಗದೊಳೊ|
ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ||
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ|
ತತ್ತ್ವದರ್ಶನವಹುದು- ಮಂಕುತಿಮ್ಮ||

ಯತ್ನ

ಅರೆದಿನದ ನಮ್ಮ ಯತ್ನದಿನದೇನೆನ್ನದಿರು|
ಕಿರಿದುಮೊದಗೂಡಿರಲು ಸಿರಿಯಹುದು ಬಾಳ್ಗೆ||
ಪರಿಪೋಷಿಸದೆ ನಿನ್ನೊಡಲ ದಾರಿಮರದ ಫಲ?|
ಕಿರುಜಾಜಿ ಸೊಗಕೊಡದೆ?- ಮಂಕುತಿಮ್ಮ||