ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಗು

ನಗುವು ಸಹಜದ ಧರ್ಮ ನಗಿಸುವುದು ಪರಧರ್ಮ
ನಗುವ ಕೇಳುತ ನಗುವುದತಿಶಯದ ಧರ್ಮ
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ
ಮಿಗೆ ನೀನು ಬೇಡಿಕೊಳೊ ಮಂಕುತಿಮ್ಮ.

ಕನ್ನಡದಲ್ಲಿ ಕಾನೂನು - ಸಿ ಎನ್ ಮಂಜಪ್ಪನವರ ಕಾಣಿಕೆಗಳು

"ಆಡಳಿತದಲ್ಲಿ ಕನ್ನಡ" "ಎಲ್ಲೆಲ್ಲೂ ಕನ್ನಡ" ಈ ಕೂಗು ಬಹಳ ಕಾಲದಿಂದಲೂ ಇದೆ. ಆದರೆ ಅದಕ್ಕೆ ಬೇಕಾದ ತಯಾರಿಯ ಬಗ್ಗೆ ಮಾತ್ರ ನಮ್ಮ ಧೋರಣೆ ಬೇರೆ. ಪ್ರಾಥಮಿಕ ಹಂತದಿಂದ ಇಂಗ್ಲಿಷ್ ಬೇಕೇ ಬೇಕು ಅಂತಲೂ ಅನ್ನುವವರು ನಾವೆ. ಇಂಗ್ಲಿಷಿನ ಬುನಾದಿಯ ಮೇಲೆ ಕನ್ನಡದರಮನೆ ಕಟ್ಟಲು ಸಾಧ್ಯವೇ? ಕನ್ನಡ ಕಲಿಕೆ ಇಲ್ಲದೆ ಕನ್ನಡದಾಡಳಿತ ಎಂತು?

ಕನ್ನಡ ಮಾತನಾಡದ ಶಾಸಕ

ಕರ್ನಾಟಕದಲ್ಲಿ ಹುಟ್ಟಿ ಬೆಳೆದು, ಕರ್ನಾಟಕದ ವಿಧಾನ ಪರಿಷತ್ತಿಗೆ ಎರಡನೇ ಬಾರಿ ನೇಮಕಗೊಂಡಿದ್ದರೂ, ವಿಧಾನ ಸಭೆಯ ಅಧಿವೇಶನದಲ್ಲಿ ಕನ್ನಡದಲ್ಲಿ ಮಾತನಾಡಲು ಆಗುವದಿಲ್ಲ, ನನ್ನ ಮಾತೃಭಾಷೆ ಇಂಗ್ಲೀಷ್ ಎ0ದು ಸಬೂಬು ಕೊಡುತ್ತಿದ್ದ ಡೆರಿಕ್ ಫೂಲಿನ್ ಫಾ ಅವರ ಕ್ರಮವನ್ನು ವಿರೋಧಿಸಿ ಕರವೇ ಕಾರ್ಯಕರ್ತರು ಪ್ರತಿಭಟನೆ ಮಾಡಿ ಅವರಿಂದ ಕ್ಷಮಾಪಣೆ ಕೇಳಿಸಿದರು ಮತ್ತು ಮುಂದಿ

ಜಯ...

ವಿರೋಧ ಎಲ್ಲಿ ಇರುವುದಿಲ್ಲವೋ, ಅಲ್ಲಿ ಜಯವೆಂಬುದೇ ಇರುವುದಿಲ್ಲ...

ಮುತ್ತು

ಮಾತು ಸಾಕು,ಮುತ್ತು ಬೇಕು
ನೀಡೊಂದು ಸಿಹಿಮುತ್ತು
ನಾ ಮರೆಯಬೇಕು ಆ ಮುತ್ತು
ಆ ಮುತ್ತುಗಳ ತೆಪ್ಪದ ಮೇಲೆ
ಸವೆಯಲಿ ನಮ್ಮ ಮುತ್ತಿನ ಪಯಣ
ಹೀಗೆ ಸಾಗುತಿರಲಿ ನನ್ನ ನಿನ್ನ
ಮುತ್ತಿನ ಹುಡುಕಾಟ .........
ನೋಡಿದವರು ಹೇಳ್ತಾರೆ ಇದು ಹುಡುಗಾಟ

ಮುತ್ತಿನ ಅಮಲಿನಲ್ಲಿ ನಾನದೆ ಮಲಿನ
ಅಳಿಯದೆ ಉಳಿಯಲಿ ಆ ಮಿಲನ
ಆ ಮುತ್ತಿನ ಗಮ್ಮತು
ಮರೆತೋಯ್ತು ಈ ಜಗತ್ತು

ನವಿಲುಗರಿ

ನನ್ನ ಪ್ರೇಮದ ಗರಿ ನವಿಲುಗರಿ
ನಾ ನಿನ್ನ ಹೃದಯ ಗಿರಿ
ಕಳೆದು ಹೋದ ರತ್ನ ನಿನ್ನ ನೆನಪು
ಅಳಿಸಿದೆ ಆ ನೆನಪು,ನಯವಾದ ನಿನ್ನ ನುಣುಪು
ನೆಪವಿದ್ದರೆ ನೆನಪಾಗು
ಇಲ್ಲದಿದ್ದರೆ ಕನಸಾಗು
ಮರೆತಿದ್ದರೆ ಮರೆಯಾಗು
ಮಲಗಿದ್ದರೆ ಮಗುವಾಗು..............
ನಾ ನೆನಪಿದ್ದರೆ ನನ್ನ ನೆನಪು ನೀನಾಗು
ನೀ ನಗುತಿದ್ದರೆ ಕಾರಂಜಿ
ಆ ಮುಗುಳ್ನಗು ನನಗೆ ಗುಲಗಂಜಿ

ಉತ್ತರ ಕನ್ನಡದ ಮುಂಗಾರಿನಲ್ಲಿ ೪ ದಿನ

Photography by Palachandra, All rights reserved೨೫ ಜುಲೈ ೨೦೦೮, ಬೆಂಗಳೂರಿನ ಪಾಲಿಗೆ ಕರಾಳ ದಿನ, ಒಂದೇ ದಿನದಲ್ಲಿ ೭ ಕಡೆ ಲಘು ಬಾಂಬ್ ಸ್ಪೋಟ, ಒಂದು ಸಾವು. ತಾವೂ ಬದುಕದೆ ಇತರರಿಗೂ ಬದುಕಲು ಬಿಡದೆ ಮನುಷ್ಯ ಯಾವ ಉದ್ಧೇಶ ಸಾಧಿಸಲು ಹೊರಟಿದ್ದಾನೆಯೋ ತಿಳಿಯುತ್ತಿಲ್ಲ. ಸುಮಾರು ಒಂದು ತಿಂಗಳ ಹಿಂದೆ ಹಮ್ಮಿಕೊಂಡಿದ್ದ ನಮ್ಮ ಉತ್ತರ ಕನ್ನಡದ ಪ್ರವಾಸಕ್ಕೆ, ಹೊರಡುವ ದಿನದಂದೇ ನಡೆದ ಈ ಕಹಿ ಘಟನೆ ಮನಸ್ಸಿಗೆ ಆತಂಕ ತಂದಿತ್ತು. ಹದವಾಗಿ ಮಳೆ ಬೀಳುತ್ತಿದ್ದುದರಿಂದ ಬೇಗನೆ ಮೆಜೆಸ್ಟಿಕ್ ಸೇರುವ ಹಂಬಲದಿಂದ ೮ ಗಂಟೆಗೆ ಮನೆಯನ್ನು ಬಿಟ್ಟಿದ್ದೆ. ಆದರೆ ಬೆಂಗಳೂರಿನಲ್ಲಿ ಎಂದಿನಂತೆ ವಾಹನದ ದಟ್ಟಣಿ ಇರದೇ ಅರ್ಧ ಗಂಟೆಯಲ್ಲೆಲ್ಲ ಮೆಜೆಸ್ಟಿಕ್ ತಲುಪಿದ್ದೆ.

ನಾನು, ನಾಗೇಶ್, ರಾಘವೇಂದ್ರ ಮತ್ತೆ ರವೀಂದ್ರ ಈ ಪ್ರಯಾಣದ ಜೊತೆಗಾರರು. ನಾಗೇಶ್ ಮುಂದಿನ ವ್ಯಾಸಂಗಕ್ಕಾಗಿ ಅಮೇರಿಕಾಗೆ ತೆರಳುವವನಾದ್ದರಿಂದ ಇದು ಅವನೊಂದಿಗಿನ ಕೊನೆಯ ಪ್ರಯಾಣ ಎಂಬ ಭಾವನೆಯಿತ್ತು. ರವೀಂದ್ರ ೧ ವಾರದ ಹಿಂದಷ್ಟೇ ಫಿನ್ಲ್ಯಾಂಡ್ನಿಂದ ಮರಳಿ ಕೋಟದಲ್ಲಿ ರಜೆಯ ಮಜವನ್ನು ಸವಿಯುತ್ತಿದ್ದುದರಿಂದ, ಬೆಂಗಳೂರಿನಿಂದ ನಾವು ಮೂವರು ಹೊರಟು ಶಿರಸಿಯಲ್ಲಿ ಅವನನ್ನು ಸೇರುವುದಾಗಿತ್ತು. ರಾತ್ರಿ ೯:೩೦ ಕ್ಕೆ ಬಂದ ರಾಜಹಂಸ, ಬೆಳಿಗ್ಗೆ ೭ ಗಂಟೆಗೆಲ್ಲ, ಸುಮಾರು ೩೫೦ ಕಿ.ಮೀ. ಗಳಷ್ಟು ದೂರದ ಶಿರಸಿಗೆ ನಮ್ಮನ್ನು ಕೊಂಡೊಯ್ಯಿತು. ಶಿರಸಿಯ ಹಳೆ ಬಸ್ ಸ್ಟ್ಯಾಂಡ್ನಲ್ಲಿ ಮೊದಲೇ ಆಗಮಿಸಿದ್ದ ರವೀಂದ್ರನೊಂದಿಗೆ "ಪಂಚವಟಿ" ಎಂಬ ರೆಸಾರ್ಟ್ಗೆ ತೆರಳಿದೆವು.

ಸಬ್ಬಕ್ಕಿ/ಶಾಬಕ್ಕಿ/ಸೀಮೆಅಕ್ಕಿ ತಯಾರಿಕೆ

ಕೆಲದಿನಗಳ ಹಿಂದೆ [http://vikasavada.blogspot.com/2008/07/blog-post_17.html|ನನ್ನ ಬ್ಲಾಗ್] ನಲ್ಲಿ ’ಸಬ್ಬಕ್ಕಿ’ ಬಗ್ಗೆ ಬರೆದಿದ್ದೆ. ಬಹಳಷ್ಟು ಜನರಿಗೆ ಈ ವಿಷಯ ಗೊತ್ತಿರಲಿಲ್ಲವೆಂದು ಅದಕ್ಕೆ ಬಂದ ಪ್ರತಿಕ್ರಿಯೆಗಳಿಂದ ತಿಳಿಯಿತು. ಆದ್ದರಿಂದ ಸಂಪದದ ಸದಸ್ಯರೊಡನೆಯೂ ಈ ಮಾಹಿತಿ ಹಂಚಿಕೊಳ್ಳುತ್ತಿದ್ದೇನೆ.

ಓದುಗದ್ವೇಷಿ ಪತ್ರಿಕಾ ಏಜೆಂಟರು..ಉಪಟಳಕ್ಕೆ ಓದುಗ ಗಿರಾಕಿ ತತ್ತರ!

ಓದುಗದ್ವೇಷಿ ಗ್ರಂಠಪಾಲಕರಿಂದಾಗಿ ಇಂದು ನಾಡಿನ ಬಹುತೇಕ ಗ್ರಂಥಾಲಯಗಳು ಬಿಕೋ ಎನ್ನುತ್ತಿರುವ ಸಂಗತಿ ತಮಗೆಲ್ಲ ತಿಳಿದಿದೆ. ನಾನು ಕೈಗೊಂಡ ಸರ್ವೆ ಪ್ರಕಾರ ನೂರಕ್ಕೆ ನಾಲ್ಕು ಜನ ಮಾತ್ರ ನಿತ್ಯ ಸಾರ್ವಜನಿಕ ಗ್ರಂಥಾಲಯಕ್ಕೆ ಹೋಗಿ ಓದುವ ಹವ್ಯಾಸ ಇಟ್ಟುಕೊಂಡಿದ್ದಾರೆ. ದುರ್ದೈವವೋ ಸುದೈವವೋ ಅವರಲ್ಲಿ ಇಬ್ಬರು ನಿವೃತ್ತರು!