ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಜಾತಿ ಮೀನು

ಮೆಲ್ಲನೆ ಹರಿವ ನೀರು
ಅಲ್ಲೊಂದು ಬಿಳಿ ಮೀನು
ಜೊತೆಗೊಂದು ಕರಿ ಮೀನು
ಬಿಳಿ ಮೀನ್ಗಳಾಟ ಎಲ್ಲರಿಗೂ ಚಂದ
ನನ್ನ್ ಕಣ್ಣ ಸೆಳೆದದ್ದು ಕರಿ ಮೀನಿನ೦ದ

ಕಲ್ಹತ್ತಿ ಇಳಿವಾಗ, ಗಿಡಸುತ್ತಿ ಬರುವಾಗ
ಒತ್ತೊತ್ತಿ ಈಜುವುವು ನವ ಜೋಡಿಯಂತೆ
ಹಗಲೆಲ್ಲ ಅಡುವುವು, ಮುಸ್ಸಂಜೆ ಹರಡುವುವು
ಇಡೀ ಇರುಳ ಕಳೆಯುವುವು ಬೆಳಗಿನ೦ತೆ
ಬಿಳಿ ಮೀನಿಗ೦ತು ಕರಿ ಮೀನಿನದೇ ಚಿ೦ತೆ - ನನ್ನ೦ತೆ

ಅಳಿಯ, ಅನಿಷ್ಟ ಮತ್ತು ಗ್ರಹಚಾರ!

"ಜಾಮಾತೋ ದಶಮಗ್ರಹಃ" ಅನ್ನೋ ಮಾತಿದೆ. ಅಂದ್ರೆ, ಅಳಿಯ ಅನ್ನೋನು ಹತ್ತನೇ ಗ್ರಹ ಅಂತ. ಪಾಪ ಯಾರೋ ಅಳಿಯನ ಕಾಟದಿಂದ ಬೆಂದೋರ ಮಾತಿರ್ಬೇಕು ಇದಂತೂ. ಆದ್ರೆ, ಏನು ಕೆಟ್ಟದಾದ್ರೂ, ಅದನ್ನ ’ಗ್ರಹಚಾರ’ - ಅಂದ್ರೆ, ಗ್ರಹಗಳ ಪ್ರಭಾವದಿಂದ ಅಂದುಬಿಡೋದೊಂದು ಕೆಟ್ಟ ರೂಢಿ ನಮ್ಮಲ್ಲಿ. :(

ನಾವು ನಕ್ಕಾಗ...

ನಂಗು ನಗೆ...ನಿಂಗು ನಗೆ...

ಮಿಂಚಿ ಹೋಗುವ
ನಗೆಗೆ ನಮ್ಮ ಈ ನಗೆ...

ನಂಗು ನಗೆ ನಿಂಗು ನಗೆ...

ಒಮ್ಮೆ ಹಲ್ಲು ಮಿಂಚಿ ಹೋಗುತ್ತವೆ...
ಇನ್ನೊಮ್ಮೆ ಮನಸ್ಸು ಬಿಚ್ಚಿಕೊಳ್ಲುತ್ತದೆ..
ನಂಗು ನಗೆ ನಿಂಗು ನಗೆ... ಅನ್ನೋ ಹಾಗೆ...

-ರೇವನ್...

ಬಾಡದ ಹೂವದು ಸ್ನೇಹ..........

ಬಾಡದ ಹೂವದು ಸ್ನೇಹ..........

ಮತ್ತೆ ಬಂದಿದೆ ಗೆಳೆಯರ ದಿನ ಸ್ನೇಹದ ಅಂಗಳದಲ್ಲಿ ಕಿರು ನಗೆಯ ಬೀರುತ್ತಾ, ಹಳೆಯ ನೆನಪುಗಳ ಕದಡುತ್ತ, ಎಂದೋ ಯಾವುದೋ ಕಾರಣಕ್ಕೆ ಮುನಿಸಿಕೊಂಡ ಸ್ನೇಹಿತರ ಒಂದು ಗೂಡಿಸುತ್ತಾ, ಕಳೆದು ಹೋದವರ ಮತ್ತೆ ತನ್ನ ಸ್ನೇಹದಲ್ಲಿ ಬಂದಿಸುತ್ತಾ, ಬಂದಿತೆ ಮತ್ತೆ ಮೆಲು ನಗೆಯ ಬೀರುತ್ತಾ, ಗೆಳೆಯರ ದಿನ ಆತ್ಮೀಯ ಗೆಳೆಯ ಗೆಳತಿಯರಿಗಾಗಿ,

ಕ್ರೌರ್ಯ ಮತ್ತು ಬಲಿ

ಸಾಹಿತ್ಯಕ್ಕೆ ಕೊಡುವ ನೊಬೆಲ್ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದ ೮೯ ವರ್ಷದ ಅಲೆಕ್ಸಾಂಡರ್‍ ಸೋಲ್ಸನಿತ್ಸಿನ್ ಅಸುನೀಗಿದ್ದಾನೆ.

ಇನ್ನೊಂದು ಕಾಲದವನೋ ಎನಿಸುವಂತವನು. ಆದರೆ ಎಲ್ಲ ಕಾಲಕ್ಕೂ ಸಲ್ಲುವಂತಹದನ್ನು ಉಳಿಸಿ ಹೋದವನು. ಸ್ಟಾಲಿನ್ನನ ಕ್ರೌರ್ಯವನ್ನು ಬಯಲಿಗೆಳೆದು ಲೋಕಕ್ಕೆ ತಿಳಿಸಿದವನು. ಕಡೆಯವರೆಗೂ ಪ್ರಭುತ್ವದ ಜತೆ ಮುಜುಗರದ ಸಂಬಂಧವನ್ನ ಉಳಿಸಿಕೊಂಡವನು. ಬೋರಿಸ್ ಎಲ್ಸಿನ್ ನೀಡಲು ಬಂದ ರಷ್ಯಾದ ಅತಿ ಉನ್ನತ ಪದವಿ "ಆರ್ಡರ್‍ ಆಪ್ ಸೇಂಟ್ ಆಂಡ್ರೂ"ವನ್ನು ತಿರಸ್ಕರಿಸಿದವನು. ಅವನ "ಒನ್ ಡೇ ಇನ್ ದ ಲೈಫ್ ಆಫ್ ಇವಾನ್ ಡೆನಿಸೋವಿಚ್" ಒಮ್ಮೆ ಓದಿದರೆ ಸಾಕು, ಮತ್ತೆ ಮತ್ತೆ ಕಾಡುವಂತಹದು. ಸದಾ ಜತೆಗೆ ಉಳಿಯುವಂತಹದು. ಅಮೇರಿಕಾದ ರಾಜಕೀಯ ಹಂದರವನ್ನೂ ಒಪ್ಪಲಾರದೆ - ರಷ್ಯಾ ತನ್ನ ಜಾಡನ್ನು ತಾನೇ ಕಂಡುಕೊಳ್ಳಬೇಕೆಂದು ಒತ್ತಿ ಒತ್ತಿ ಹೇಳಿದವನು. ಎಲ್ಸಿನ್ ಮಹಾ ಗಡಿಬಿಡಿಯಲ್ಲಿ ರಷ್ಯಾದ ಆರ್ಥಿಕ ಸ್ಥಿತಿಯನ್ನು ಹಾಳುಗೆಡವಿದ್ದನ್ನು ಹೀಗಳೆದವನು. ತನ್ನ ಅದಮ್ಯ ಚೇತನದಿಂದ ಈ ಜಗತ್ತಿನ ಅತ್ಯಂತ ಕ್ರೂರ ಪ್ರಭುತ್ವಕ್ಕೆ ಸೆಡ್ಡು ಹೊಡೆದು-ಕೊಲ್ಲುತ್ತಾರೆ ಎಂದುಕೊಳ್ಳುತ್ತಲೇ ಬದುಕಿದವನು. ಬರೆದದ್ದು ನಾಶಮಾಡುತ್ತಾರೆ ಎನ್ನುತ್ತಲೇ ಉಳಿಸಿಕೊಂಡವನು.

ಧಾರವಾಡದ ಕೋಗಿಲೆ

ದೆಹಲಿ ಆಕಾಶವಾಣಿಯಲ್ಲಿ ಸುಶ್ರಾವ್ಯವಾದ ಹಿಂದೂಸ್ತಾನಿ ಸಂಗೀತ ಕೇಳಿಬರುತ್ತಿತ್ತು. ಅದನ್ನು ಕೇಳುತ್ತಾ ಕುಳಿತಿದ್ದ ಓರ್ವ ಹುಡುಗಿ, “ಆಂಟಿ ಹಾಡ್ತಾರೆ ಅಂತ ಕೂತ್ರೆ ಯಾರೋ ಗಂಡಸರು ಹಾಡ್ತಾ ಇದಾರೆ.” ಎಂದು ಗೊಣಗಿದಳು. ಅದನ್ನು ಕೇಳಿಸಿಕೊಂಡ ಅವಳ ಅಮ್ಮ “ಗಂಡಸಾದರೇನು ಹೆಂಗಸಾದರೇನು? ಸಂಗೀತ ಅಂತೂ ಚೆನ್ನಾಗಿದೆ ಅಲ್ವಾ? ಸುಮ್ಮನೆ ಕೂತು ಕೇಳು” ಎಂದಾಗ,
ಮಗಳು, “ಹೌದು ಸಂಗೀತವೇನೋ ಮೇಲ್ಮಟ್ಟದ್ದೆ. ಕೇಳಲು ಕರ್ಣಾನಂದವಾಗೇ ಇದೆ. ಆದರೂ ಆಂಟಿ ತನ್ನ ಹಾಡು ಬರತ್ತೆ ಕೇಳು ಅಂತ ಹೇಳಿದ್ರು. ಅದು ಯಾಕೆ ಬರಲಿಲ್ಲ ಅಂತ ಆಶ್ಚರ್ಯ ಆಯ್ತು ಅಷ್ಟೆ.” ಅಂದಳು.
ಆ ಆಂಟಿ ಮನೆಗೆ ಬಂದರು. ಅವಳು ಒಳಗೆ ಕರೆದು ಉಪಚರಿಸಿದಳು. ಅವರು ಸುಧಾರಿಸಿಕೊಂಡು ಕೇಳಿದರು, “ ನನ್ನ ಹಾಡು ಕೇಳಿದ್ಯೇನೆ ಹುಡುಗಿ?”
“ರೇಡಿಯೋ ಆನ್ ಮಾಡಿದ್ದೆ ಆಂಟಿ. ಆದರೆ ಯಾರೋ ಗಂಡಸರು ಹಾಡುತ್ತಿದ್ದರು.” ಎಂದಳು ಹುಡುಗಿ.
ಆಗ ಅವರು ಜೋರಾಗಿ ನಕ್ಕು, “ಆ ಗಂಡು ಕೋಗಿಲೆ ನಾನೇಕಣೆ ಹುಡುಗಿ” ಎಂದರು.
ಒಂದು ಕ್ಷಣ ಹುಡುಗಿ ಪೆಚ್ಚಾಗಿ ನಂತರ ಅವರೊಂದಿಗೆ ನಗಲು ಪ್ರಾರಂಭಿಸಿದಳು. “ಹೆಸರು ಅನೌನ್ಸ್ ಮಾಡಿದಾಗ ಯಾರೋ ಬಂದಿದ್ದರು. ಆ ಗಡಿಬಿಡಿಯಲ್ಲಿ ಹೆಸರು ಕೇಳಿಸಿಕೊಳ್ಳಲು ಆಗಲಿಲ್ಲ. ಅದಕ್ಕೆ ಈ ತಾಪತ್ರಯ ಆಗಿದ್ದು.” ಎಂದಳು.

ಈ ವಿಶಿಷ್ಟ ಬಾವಲಿಯ ಬಗ್ಗೆ ಗೊತ್ತೆ?

ಬಾವಲಿಗಳಲ್ಲಿ ೯೦೦ ಪ್ರಜಾತಿಗಳು. ಅವುಗಳಲ್ಲಿ ಬಹುತೇಕ ೬೦೦ ಈಗಾಗಲೇ ನಾಶವಾಗಿವೆ. ೨೫೦ ಪ್ರಜಾತಿಯ ಬಾವಲಿಗಳು ವಿಲುಪ್ತಿಯ ಅಂಚಿನಲ್ಲಿವೆ. ಸುಮಾರು ೫೦ ಜಾತಿಯ ಬಾವಲಿಗಳು ಸದ್ಯ ಕ್ವಚಿತ್ತಾಗಿ ಅಲ್ಲಲ್ಲಿ ಕಂಡು ಬರುತ್ತವೆ. ವಿಲುಪ್ತಿಯ ಅಂಚಿನಲ್ಲಿರುವ ೨೫೦ರ ಪೈಕಿ ಹಾಗು ಬಹುತೇಕ ಸಂತತಿಯೇ ನಾಶಗೊಂಡಿದೆ ಎಂದು ಪ್ರಾಣಿ ಶಾಸ್ತ್ರಜ್ನರು ನಂಬಿದ್ದ ವಿಶ್ವದ ಅತ್ಯಂತ ಅಪರೂಪದ ಬಾವಲಿಯನ್ನು ಇತ್ತೀಚೆಗೆ (೨೦೦೬-೦೭) ಪತ್ತೆ ಹಚ್ಚಲಾಗಿದೆ. ಸದ್ಯ ಆ ಬಾವಲಿಯ ಆಹಾರ, ವಿಹಾರ, ಸಂತತಿ ಹಾಗು ಜೀವನ ಪದ್ಧತಿ ಕುರಿತು ಹೊಸ ಆಲೋಚನೆಗಳು, ಸಂಶೋಧನೆಗಳು ನಡೆದಿವೆ.

ರೋಟನ್ಸ್ ಫ್ರೀ ಟೇಲ್ಡ್ ಬ್ಯಾಟ್ (Wroughton's Free Tiled Bat) ಎಂಬ ಹೆಸರಿನ ಈ ಬಾವಲಿಯ ವೈಜ್ನಾನಿಕ ಹೆಸರು (Otomops Wroughtoni). ಬಾಲವಿಲ್ಲದ ಈ ತೊಗಲು ಬಾವಲಿಯು ಪಶ್ಚಿಮ ಘಟ್ಟದ ವಿವಿಧೆಡೆ ಚಾರಣಿಗರಿಗೆ ಕಾಣಸಿಕ್ಕಿರುವುದು ನಮ್ಮ ಭಾರತೀಯ ಪ್ರಾಣಿ ಶಾಸ್ತ್ರಜ್ನರಿಗೆ ಸಂಶೋಧನೆಯ ಹೊಸ ಅವಕಾಶಗಳನ್ನು ಹಾಗು ಹೊಸ ಓದಿನ ಅವಕಾಶ ಕಲ್ಪಿಸಿದೆ.

ಗುರಿಯನರಸಿ

ಬಿಡದ ಛಲದ ನಂಬಿಕೆ
ಮನದ ಹಠದ ಕೂಗಿಗೆ
ಶರಣಾಗಿ ಬಂದೆ ನಾ ನಿನಗೆ

ದೂರದಿ ಕಂಡು
ನನ್ನ ಸನಿಹ ಕರೆದು
ನಡೆದಿಹೆ ನೀ ಮುಂದು

ಪ್ರೀತಿ ಬಿಟ್ಟು, ಸ್ನೇಹ ಬಿಟ್ಟು
ನಿನ್ನರಸಿ ಬಂದೆ
ನಾನೆಲ್ಲಾ ಬಿಟ್ಟು

ಹರೆಯದಾಟ ಬೇಡ ಎಂದೆ
ಬರಿಯ ಹಣ ಒಲ್ಲೆ ಎಂದೆ
ನಿನ್ನ ತಲುಪಲೆನ್ನ ಗಮನ ಒಂದೆ

ನೀ ಬದುಕಿನರ್ಥ ನನಗೆ
ನಿನ್ನ ಹುಡುಕಿ ಮನದಿ ಮಿಡುಕಿ
ಬಾಳು ವ್ಯರ್ಥ ವಾಗದೆನಗೆ