ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬೆಳ್ಳ

ಬೆಳ್ಳ (ವಿಶೇಷಣ)=ಬಿಳಿಯದಾದ
ಬೆಳ್ಳ(ನಾಮಪದ)=ಪ್ರವಾಹ
ಬೆಳ್ಳ(೦)ಗೆಡೆ=ಪ್ರವಾಹವುಂಟಾಗು
ಬೆಳ್ಳವಾಸ=ನೀರಿನ ಪ್ರವಾಹದಲ್ಲಿ ನಿಂತು ತಪಸ್ಸು ಮಾಡುವುದು
ಹೋಲಿಸಿ: ತಮಿೞ್ ಮತ್ತು ಮಲಯಾಳಂನ ವೆಳ್ಳಂ, ತುಳುವಿನ ಬೊಳ್ಳು, ತೆಲುಗಿನ ವೆಲ್ಲುವ

ಅಳೆ

ಅಳೆ (ಕ್ರಿಯಾಪದ)=ಮರಿಮಾಣ ಮಾಡು, ಅಳತೆ ಮಾಡು
ಭಾವನಾಮಗಳು ಅಳತೆ, ಅಳವು
ಉದಾಹರಣೆಗೆ:- ಯಾವುದಕ್ಕೂ ಒಂದು ಅಳತೆ ಬೇಡವೇ?
ಭೀಮನಾರ್ಪಿಂಗಳವುಂಟೇ? ಇಲ್ಲಿ ಅಳವು=ಮಿತಿ (ಮಿತಿ ಕೂಡ ಮೂಲತಃ ಸಂಸ್ಕೃತದ ಮಾ=ಅಳೆ ಇದಱ ಭಾವನಾಮ)

ಹೇರಳವು/ಹೇರಳ= ಹಿರಿದಾದ+ಅಳವು. ದೊಡ್ಡದಾದ ಅಳತೆ. ಹಾಗಾಗಿ ಪುಷ್ಕಳ, ಸಮೃದ್ಧ

ಹೆಸರು/ಪೆಸರ್ ಹೆಸಱು/ಪೆಸಱ್

ಹೆಸರು/ಪೆಸರ್:- ವ್ಯಕ್ತಿ, ವಸ್ತು, ಸ್ಥಳ ಮತ್ತು ಭಾವನೆಯನ್ನು ಗುಱುತಿಸಲು ಬೞಸುವ ಪದ.
ಉದಾಹರಣೆ:- ಮನುಷ್ಯ ಮಾತಾಡಲು ಕಲಿತಂದೇ ಎಲ್ಲದಕ್ಕೂ ಹೆಸರಿಡಲು ಕಲಿತನೇನೋ?
ಬೆಂಗಳೂರು ಒಂದು ಊರಿನ ಹೆಸರು.

ಹೆಸಱು/ಪೆಸಱ್:- ಇಡಿಯಾಗಿದ್ದಾಗ ಹಸಿರು ಸಿಪ್ಪೆ ಹೊಂದಿರುವ ಒಂದು ದ್ವಿದಳ ಧಾನ್ಯ. ಹೆಸಱುಬೇಳೆ, ಹೆಸಱುಕಾಳು
ಉದಾಹರಣೆ:-ಹೆಸಱುಬೇಳೆ ತೊವ್ವೆ ಎಂದರೆ ನನಗಿಷ್ಟ.

ಬ್ರಹ್ಮ ಕಮಲಕ್ಕೆ ಜೊತೆ ನೀಡುತ್ತಿರುವ ಇನ್ನೊಂದು ಸುಂದರ ಪುಷ್ಪ - ಸೌಗಂಧಿಕಾ

ಸೌಗಂಧಿಕಾ ಪುಷ್ಪವೂ ಆಷಾಡ - ಶ್ರಾವಣ ಮಾಸಗಳಲ್ಲಿ ಅರಳಿ ಮನಸ್ಸನ್ನು ಸೆಳೆಯುವುದು. ಭೀಮನು ದ್ರೌಪಧಿಯ ಆಸೆಯನ್ನು ತೀರಿಸಲು ದ್ವಾರಕೆಯಿಂದ ತಂದನೆಂಬ ಪುರಾಣ ಕಥೆಯನ್ನು ಹೊಂದಿರುವ ಈ ಪುಷ್ಪವು ಸೌಂದರ್ಯದಿಂದ ಮಾತ್ರವಲ್ಲದೆ, ತನ್ನ ಮಂದ ಸುಗಂಧದಿಂದಲೂ ಮನಸೆಳೆಯುತ್ತದೆ.

ಬಾಡದಿರು ಸ್ನೇಹದ ಹೂವೇ...

ಸ್ನೇಹದ ಅಂಗಳದಲ್ಲಿ ಕಿರು ನಗೆ ಬೀರುತ್ತಾ ಮತ್ತೊಮ್ಮೆ ಫ್ರೆಂಡ್‌ಶಿಪ್ ಡೇ ಸನ್ನಿಹಿತವಾಗಿದೆ. ಸ್ನೇಹಬಂಧದಲ್ಲಿನ ಗೆಳತನದ ಸವಿಯನ್ನು ನೆನಪಿಸಲು ಮೊಬೈಲ್, ಇಮೇಲ್ ಇನ್‌ಬಾಕ್ಸ್‌ಗಳಿಗೆ ಬಂದು ಸೇರುವ ಸಂದೇಶಗಳೆಷ್ಟು? ಸ್ನೇಹಿತರನ್ನು ಪರಸ್ಪರ ಹೆಣೆಯುವ ಅಂತರ್ಜಾಲ ಸಾಮಾಜಿಕ ಸಮೂಹಗಳಾದ ಆರ್ಕುಟ್, ಫೇಸ್ ಬುಕ್ ಮೊದಲಾದವುಗಳ ಮೂಲಕ ತಲುಪುವ ರಂಗುರಂಗಿನ ಸ್ಕ್ರಾಪ್‌ಗಳು. ಗೆಳೆತನದ ಸ್ನೇಹವನ್ನು ಬಿಂಬಿಸಲು ಎಷ್ಟೆಷ್ಟು ವಿಧಾನಗಳು?. ಒಂದಂತೂ ನಿಜ, ಕಾಲ ಬದಲಾಗುತ್ತಿದ್ದಂತೆ ಗೆಳೆತನದ ರೂಪವೂ ಬದಲಾಗುತ್ತಾ ಬರುತ್ತಿದೆ. ಪುರಾಣಗಳಲ್ಲಿ ಕೃಷ್ಣ -ಸುಧಾಮನ ಗೆಳೆತನದ ಕತೆಯನ್ನು ಓದಿ ಬೆಳೆದವರು ನಾವು. ಇಂತಹ ಗೆಳೆತನವು ಇಂದು ನಮ್ಮೆಲ್ಲೆಡೆಯಲ್ಲಿದೆಯೇ? ಇದ್ದರೂ ಅಪರೂಪವಾಗಿದ್ದು, ಅಂತಹ ಗೆಳೆತನವನ್ನು ಸವಿದವರು ನಿಜವಾಗಿಯೂ ಭಾಗ್ಯಶಾಲಿಗಳೆಂದೇ ಹೇಳಬೇಕು. ಯಾಕೆಂದರೆ ಇದು ಕಲಿಯುಗ! ಇಂದು ತಮ್ಮ ಕಾರ್ಯಸಾಧನೆಗಾಗಿ ಗೆಳೆತನವನ್ನು ಬಳಸಿಕೊಳ್ಳುತ್ತಿರುವವರೇ ಹೆಚ್ಚು. ಏನೇ ಇರಲಿ, ಫ್ರೆಂಡ್‌ಶಿಪ್ ಡೇ ಬಂತೆಂದರೆ ಫ್ರೆಂಡ್‌ಶಿಪ್ ಬ್ಯಾಂಡ್ ಕೈಗೆ ಬಿಗಿದ ಮಾತ್ರಕ್ಕೆ ಗೆಳೆತನದ ಭರವಸೆಯನ್ನು ನಿಭಾಯಿಸಿದಂತೆ ಆಗುತ್ತದೆಯೇ? ಯೇ ದೋಸ್ತಿ ಹಮ್‌ ನಹೀ ಚೋಡೆಂಗೆ..ಎಂದು ನಮ್ಮ ಆಟೋಗ್ರಾಫ್‌ನಲ್ಲಿ ಬರೆದ ಗೆಳೆಯ ಗೆಳತಿಯರು ಎಲ್ಲಿದ್ದಾರೋ ಎಂಬುದು ನಮಗಿಂದು ತಿಳಿದಿಲ್ಲವಾದರೂ ಅಂದಿನ ಗೆಳೆತನದ ಸಿಹಿ-ಕಹಿ ನೆನಪುಗಳು ಮನಸ್ಸಿನಲ್ಲಿ ಎಂದೂ ಹಚ್ಚ ಹಸುರಾಗಿಯೇ ಇವೆ.

ನೆರೆ, ನೆಱೆ, ನಿಱಿಸು

೧)ನೆರೆ=ಒಂದು ಕಡೆ ಗುಂಪುಗೂಡು, ಒಟ್ಟಾಗು.
ಉದಾಹರಣೆ:- ಜನರೆಲ್ಲ ಸಭೆಯಲ್ಲಿ ನೆರೆದಿದ್ದಾರೆ
ಒಟ್ಟಿಗೆ ಸೇರಿದರೆ ಸಹಾಯವಾಗುವುದಱಿಂದ ಇದಱ ಭಾವನಾಮ ನೆರವು=ಸಹಾಯ, ಗಂಡು ಹೆಣ್ಣುಗಳ ಮಿಲನವೂ ನೆರವು. ನೆರವಿ=ಗುಂಪು

೨)ನೆಱೆ=ಪೂರ್ಣವಾಗು, ತುಂಬು. ವಿಶೇಷಣವಾಗಿ ತುಂಬಾ, ಸಂಪೂರ್ಣವಾಗಿ
ಉದಾಹರಣೆಗೆ:-ನಾನು ದೇವರನ್ನು ನೆಱೆ ನಂಬಿದೆ
ನೆಱೆವೆರೆ=ನೆಱೆ=ಪೂರ್ಣ+ಪೆಱೆ=ಚಂದ್ರ