ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮಿಂಚಿನ ಸುದ್ದಿ : ಬೆಂಗಳೂರಿನಲ್ಲಿ 3 ಕಡೆ ನಿಗೂಢ ಸ್ಫೋಟ. ಬೆಂಗಳೂರಿನ ನಾಗರಿಕರೆ, ಸಾವಧಾನರಾಗಿರಿ .

ದಟ್ಸ್ ಕನ್ನಡ ಇ-ಪತ್ರಿಕೆಯಲ್ಲಿ ಬಂದ ಸುದ್ದಿ ಇದು. ಸಂಪದೀಯರಿಗೆ ಮನವಿಯೆಂದರೆ, ದಯಮಾಡಿ ಹೊರಗೆ ಹೋಗುವಾಗ ರೇಡಿಯೊದಲ್ಲಿ ವಾರ್ತೆ ಕೇಳಿ, ಟಿವಿ ಯಲ್ಲಿ ಸುದ್ದಿಪ್ರಸಾರವನ್ನು ಆಲಿಸಿ. ಮತ್ತು ಗೆಳೆಯರಿಗೆ ಎಚ್ಚರದ ಸುದ್ದಿ ತಲುಪಿಸಿ. ಇನ್ನೂ ಹೆಚ್ಚಿನ ಮಾಹಿತಿ ಸಂಗ್ರಹಿಸಿ. ಧನ್ಯವಾದಗಳು.

’ಮಿಂಚಿನ ಸುದ್ದಿ’

ಬೆಂಗಳೂರಿನಲ್ಲಿ 3 ಕಡೆ ನಿಗೂಢ ಸ್ಫೋಟ

‘ಅನಾಗರಿಕರ ಬಾಂಬ್’ ಉತ್ತರವೇ? ಪ್ರಶ್ನೆಯೇ?

ಬಾಂಬ್ ಹಾರಿಸಿ ಅಮಾಯಕರನ್ನು ಕೊಲ್ಲುವುದರಿಂದ, ಮುಗ್ಧ ಜನರನ್ನು ಗಾಯಗೊಳಿಸಿ,ನಾಗರಿಕ ಸಮಾಜವನ್ನು ಭಯಭೀತಗೊಳಿಸಿವುದರಿಂದ ಯಾವುದಾರೂಂದು ಸಮಸ್ಯೆಗೆ ಕೊನೆಪಕ್ಷ ಪರಿಹಾರ ಸಿಗುವುದು ಎಂದಾದರೆ ಎಲ್ಲರೂ ಅದನ್ನೇ ಮಾಡೋಣ.

ಬೆಂಗಳೂರಲ್ಲಿ ಏಳು ಕಡೆ ಬಾಂಬ್ ಬ್ಲಾಸ್ಟ್ !!!!!!!!!!!

ಬೆಂಗಳೂರಲ್ಲಿ ಏಳು ಕಡೆ ಬಾಂಬ್ ಬ್ಲಾಸ್ಟ್ ಆಗಿದೆ...

ಸಂಪದಿಗರೇ ನಿಮಗೆಲ್ಲ ಕನ್ನಡಮ್ಮನ ನೆರಳಿರಲಿ....

ಶ್ರೀ

ಬೆಂಗಳೂರಲ್ಲಿ ಬಾಂಬ್ ಬ್ಲಾಸ್ಟ್ *ಅಂತೆ*

ಬೆಂಗಳೂರಲ್ಲಿಂದು ಶಂಕಿತ ಬಾಂಬ್ ಬ್ಲಾಸ್ಟ್ ಅಂತ ಟಿವಿ9 ಬ್ರೇಕಿಂಗ್ ನ್ಯೂಸ್ ಫ್ಲಾಶ್ ಆಗುತ್ತಿತ್ತು. ಮಡಿವಾಳ, ಮೈಸೂರು ರಸ್ತೆ ಅಂತ ಫ್ಲಾಶ್ ನ್ಯೂಸ್ ನಲ್ಲಿ ನೋಡಿದ ನೆನಪು. ಇದನ್ನೋದುತ್ತಿರುವ ಎಲ್ಲರೂ ಇದು ನಿಜವೋ ಸುಳ್ಳೋ ಒಟ್ಟು ಹುಷಾರಾಗಿರಲಿ ಎಂದು ಬರೆಯುತ್ತಿರುವೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸೋಣ.

ತಾತ

ತಾತ=ತಂದೆ. ಅದು ಯಾಕೋ ಹೇಗೋ ತಾತನ ತಾತ=ಅಜ್ಜ ಎಂದು ಜನ ಬೞಸುತ್ತಾರೆ.
ಈ ಪದ್ಯ ನೋಡಿ
ತಾತ ಮಕ್ಕಳ ಮಾಱಿದೊಡೆ ನಿಜ-
ಮಾತೆ ವಿಷವಿಕ್ಕಿದೊಡೆ ಇಲ್ಲಿ ತಾತ=ತಂದೆ.

ಸಾರ್ಥಕತೆ

                         
ಅತ್ರಪ್ತಿ ಜೀವನದಲ್ಲಿ ತ್ರಪ್ತಿ ಎನ್ನೋದು ಸಿಗದಾಗ
ಅರ್ಥವಿಲ್ಲದ ಜೀವನವ, ಜೀವಿಸಿ ಎನ್ನ ನಿನ್ನ
ಜೀವನದಲ್ಲಿ ತ್ರಪ್ತಿ ಹುಡುಕುವೇಯಾ? ಮಾನವ.  

ಮನದ ಅಂತರಾಳದಲ್ಲಿ ಕುಂದು ಕೊರತೆಗಳು   
ಅಡಗಿರುವ ನಿನ್ನ, ಜೀವನವ ವ್ಯರ್ಥವಾಗಿ  
ಕಳೆಯುವೇಯಾ? ಮಾನವ.

ನಿನ್ನ ಅಂತರಾಳವ ಅರಿಯದ 'ಎಲೇ' ಮಾನವ,
ತ್ರಪ್ತಿ ಜೀವನ ನಡೆಸುವೆ ಎಂಬ ಬಯಕೆಯನ್ನು

ವಿಘ್ನಸಂತೋಷಿಗಳ ವಿಕೃತಿಗೆ ಪ್ರಾಣತೆತ್ತ ನಿರುಪದ್ರವಿ ಪ್ಯಾಂಗೋಲಿನ್.

ಅಂದು ಮಂಗಳವಾರ. ಧಾರವಾಡದ ‘ಸೂಪರ್ ಸಮಸ್ಯೆಗಳ ಕೂಪ’! ಎಂಬ ಅಪಖ್ಯಾತಿಯ ಸುಪರ್ ಮಾರುಕಟ್ಟೆಯಲ್ಲಿ ವಾರದ ಸಂತೆ ನೆರೆದಿತ್ತು. ನೂರಾರು ಜನ ಮಾರಾಟಗಾರರು..ಅಷ್ಟೇ ಸಂಖ್ಯೆಯಲ್ಲಿ ಭಾರ ಹೊರುವವರು.

ಜನ-ದನ ಬೇಧವಿಲ್ಲದೇ ಒಬ್ಬರಿಗೊಬ್ಬರು ಮೈ ಉಜ್ಜುತ್ತ..ಮಾರಾಟಗಾರರ ಹಾಗು ಗಿರಾಕಿಗಳ ಪಲ್ಯ ಕಸಿಯಲು ಹೊಂಚುಹಾಕುವ ಬಿಡಾಡಿ ದನಗಳು ಒಂದೆಡೆ..ಅಲ್ಲಿಯೇ ಕೆಸರಿನಲ್ಲಿ ಹೊರಳಾಡಿ ಎದ್ದ ಆಕಳ ಕರುವಿನ ಗಾತ್ರದ ವರಾಹಗಳು ತಮ್ಮ-ತಮ್ಮ ಕಚ್ಚಾಟದಲ್ಲಿ ಜನರಿಗೆ ಕೆಸರು ಎರಚುವಲ್ಲಿ ತಲ್ಲೀನ! ಪಾಲಿಕೆಗೆ ಹಿಡಿ ಶಾಪ ಹಾಕುತ್ತ ಕ್ಯಾಕರಿಸಿ ಉಗಿಯುತ್ತ, ಖೆಮ್ಮುತ್ತ..ಮೂಗಿಗೆ ಕರವಸ್ತ್ರ ಅಂಟಿಸಿಕೊಂಡು..ಉಸಿರು ಬಿಗಿ ಹಿಡಿದು ಖರೀದಿಯಲ್ಲಿ ಮಗ್ನ ಸಾವಿರಾರು ಜನ.

ತಗಡಿನ ಶೆಡ್ಡುಗಳ ಕಾರಬಾರಿನಲ್ಲಿ ಕೆರೆ ಈಗ ಕೇರಿ! ಇದು ಒಂದು ಕಾಲದಲ್ಲಿ ಹಾಲಗೆರೆ ಹನುಮಂತದೇವರ ಕೆರೆ ಎಂದು ಪ್ರಸಿದ್ಧವಾಗಿತ್ತು. ಸಂಜೀವಿನಿ ಪರ್ವತ ಎತ್ತಿ ಹಿಡಿದ ಆಂಜನೇಯ ಇಂದಿಗೂ ಮೂಕ ಪ್ರೇಕ್ಷಕನಾಗಿ ಈ ಬೆಳವಣಿಗೆಗಳನ್ನು ನೋಡುತ್ತಿದ್ದಾನೆ. ಪಕ್ಕದಲ್ಲಿಯೇ ಗಾಂಧಿ ಚೌಕದ ದತ್ತಾತ್ರೇಯ ದೇವಸ್ಥಾನ. ಅದು ಇಂದಿಗೂ ಇದೆ.

ಇಲ್ಲಿ ಅಚಾನಕ್..ಇರುವೆ ತಿಂದು ಬದುಕುವ ಪ್ಯಾಂಗೋಲಿನ್ ಪ್ರತ್ಯಕ್ಷವಾದರೆ ಹೇಗಿರಬೇಡ. ಇದು ಹಾವನ್ನು ಕಂಡ ಜನರ ಗುಂಪಿನ ಪ್ರತಿಕ್ರಿಯೆಗೆ ಸಮನಾಗಿತ್ತು. ಉದ್ದ ನಾಲಿಗೆ. ನಾಚಿಗೆ ಸ್ವಭಾವ. ಮೈತುಂಬ ಚಿಪ್ಪು. ಜನರನ್ನು ನೋಡಿದರೆ ಬೆದರಿ ಮುದುಡುವ ಮನಸ್ಥಿತಿಯ ಪ್ರಾಣಿ ಇರುವೆ ಭಕ್ಷಕ ಪ್ಯಾಂಗೋಲಿನ್ ಸಂತೆಯಲ್ಲಿ ಸೇರಿದ್ದ ಕೆಲ ಪ್ರಭೃತಿಗಳಿಗೆ ಆಟದ ವಸ್ತುವಾಗಿ ಪರಿಣಮಿಸಿತು. ಗಿಲ್ಲಿ ದಾಂಡು ಆಯಿತು. ಬಾಲ್ ಆಯಿತು. ಫುಟ್ ಬಾಲ್ ಆಯಿತು! ನೋಡಿ ಹೇಗೆ ಹೇಸಿಗೆ ಹುಟ್ಟಿಸುತ್ತದೆ ‘ಬುದ್ಧಿವಂತ ಪ್ರಾಣಿ’ಯ ನಡುವಳಿಕೆ?

ಓ ಪ್ರಕೃತಿ ತಾಯಿಯೇ ಇದೊ ನಿನಗೆ ನಮನ....

ಪ್ರತಿಯೂಬ್ಬ ಮಾನವ ಜೀವಿತವು ಸಹ ಅವಲ೦ಬಿತ ವಾಗಿರುವುದು ಪ್ರಕೃತಿ ಮೇಲೆ.. ಅದರ ಸೆಳೆತವು ಸಹ ಅಷ್ಟೆ ರೋಮಾ೦ಚನಕಾರಿಯಾದದ್ದು.

ಅವಳು ಕಥೆಯಾಗಿಯೇ ಉಳಿದಳು!

ಮಳೆ ಜಿಟಿ ಜಿಟಿ ಜಿನುಗುತ್ತಲೇ ಇತ್ತು. ಎ.ಸಿ ರೂಮಿನಲ್ಲಿ ಸೋಫಾಕ್ಕೆ ಒರಗಿ ಕುಳಿತು ಕಿಟಕಿ ಕಿಂಡಿಯಿಂದ ಅಂಗಳದತ್ತ ಇಣುಕಿದರೆ, ಮಗ ಶ್ರವಣ ಸಿಮೆಂಟ್ ಅಂಗಳದಲ್ಲೇ "ಲಗೋರಿ" ಎಂದು ಕಿರುಚುತ್ತಾ ಕುಣಿದು ಕುಪ್ಪಳಿಸುತ್ತಿದ್ದ. "ಜುಮುರು ಮಳೆಯಲ್ಲಿ ತೊಯ್ಯ ಬೇಡವೋ ಥಂಡಿ ಆಗತ್ತೆ" ಅಂತಾ ಕೂಗಿ ಹೇಳಲು ತುಟಿ ತೆರೆದರೆ ಸ್ವರ ಸಹಕಾರ ನೀಡಲಿಲ್ಲ. ಅವಳ ನೆನಪು ಮಾಸಿಯೇ ಹೋಗಿದೆ.