ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬಾಗಿಲು ತೆರೆಯೆ, ಪುಟ್ಟಮ್ಮ .....!

ಒಮ್ಮೆ ಹಿಂತಿರುಗಿ ನೋಡಿದಾಗ, ನೆನಪಿನ ಬುತ್ತಿಯನ್ನು ಬಿಚ್ಚಿ ವೀಕ್ಷಿಸಿದಾಗ, ತಾಯ್ನಾಡಿನಿಂದ ದೂರಸರಿದಾಗ, ಕಾಣುವ ಒಳನೋಟ ಅದ್ಭುತ !

ಕನ್ನಡದಲ್ಲಿ ಧಾತುಗಳೇ ವಿಶೇಷಣಗಳಾಗಿ ಬಳಕೆಯಾಗುತ್ತವೆ.

ನನಗೆ ಗೊತ್ತಿರುವಂತೆ ತೀರು, ತುಂಬು, ನೆಱೆ ಮತ್ತು ಹೆಚ್ಚು ಈ ಧಾತುಗಳೇ ಕ್ರಿಯಾಪದ ಅಥವಾ ನಾಮಪದಗಳ ವಿಶೇಷಣಗಳಾಗಿ ಬಳಕೆಯಾಗುವುದು ಕಂಡುಬರುತ್ತದೆ.
ಹೆಚ್ಚು ಮಾತಾಡು
ತೀರಾ ಕಡಿಮೆ
ತುಂಬಾ ಜಾಸ್ತಿ.
ನೆಱೆ ನಂಬಿದೆ ನಿನ್ನ ಇತ್ಯಾದಿ ಇತ್ಯಾದಿ.

ನಿಮಗಿನ್ನಾವುದಾದರೂ ಕ್ರಿಯಾಪದಗಳೇ ವಿಶೇಷಣಗಳಾಗಿ ಬಳಕೆಯಾಗುತ್ತಿದ್ದರೆ ದಯವಿಟ್ಟು ತಿಳಿಸಿ.

ಮನಸುಖರಾಯನ ಮನೋಲೋಕ

ಶ್ರೀನಿವಾಸ ವೈದ್ಯರು ಇವನ್ನೆಲ್ಲ ಕಥಾರೂಪಿ ಹರಟೆ, ಹರಟೆ ರೂಪಿ ವ್ಯಕ್ತಿ ಚಿತ್ರಣ ಅಥವಾ ಶುದ್ಧ ತಲೆಹರಟೆ ರೂಪಿ ಹರಟೆ ಎಂದು ಕರೆದಿದ್ದಾರೆ. ಅಂದರೆ ಎಲ್ಲದರಲ್ಲೂ ಹರಟೆಯ ಅಂಶ ಸ್ವಲ್ಪ ಹೆಚ್ಚೇ ಇದ್ದರೆ ಅದು ದೋಷವಲ್ಲ, ಗುಣ ಎಂದೇ ಪರಿಗಣಿಸುವುದು ಅನಿವಾರ್ಯ. ಆದರೆ ಇಲ್ಲಿ ಬರುವ ಎಲ್ಲ ವ್ಯಕ್ತಿಗಳೂ ಘಟನೆಗಳೂ ಕಾಲ್ಪನಿಕ. ಈ ಸ್ಥೂಲ ಪರಿಚಯದೊಂದಿಗೇ ಇಲ್ಲಿನ ಕತೆಗಳನ್ನು ಪ್ರವೇಶಿಸಿದರೆ ಗುಂಗು ಹತ್ತಿಸುವ ವಿವರಗಳು, ಹೃದಯದ ಭಾವಕ್ಕೆ ಮೆದುಳಿನ ತರ್ಕದ ಸ್ಪರ್ಶ, ಹಾಗೆ ಲಾಜಿಕ್‌ಗೆ ಭಾವದ ಸಂವೇದನೆ, ಹೊಸದೇ ಆದ ಬಿಂಬ ಪ್ರತಿಬಿಂಬಗಳ ಕೊಲಾಜ್ ಹುಟ್ಟಿಸುವ ಒಂದು ವಿಶಿಷ್ಟ ಲಯವಿನ್ಯಾಸ ಎದುರಾಗುತ್ತದೆ. ಮನಸ್ಸು ಉಲ್ಲಾಸಗೊಳ್ಳುತ್ತ, ಚುರುಕುಗೊಳ್ಳುತ್ತ, ಮುದುಡುತ್ತ, ಅರಳುತ್ತ ಹೊಸ ಲೋಕವೊಂದನ್ನು ತಡಕುತ್ತದೆ.

ಮನಸುಖರಾಯನ ಮನೋಲೋಕ

ಪುಸ್ತಕದ ಲೇಖಕ/ಕವಿಯ ಹೆಸರು
ಶ್ರೀನಿವಾಸ ವೈದ್ಯ
ಪ್ರಕಾಶಕರು
ಮನೋಹರ ಗ್ರಂಥ ಮಾಲಾ, ಧಾರವಾಡ
ಪುಸ್ತಕದ ಬೆಲೆ
೭೫ ರೂ.

ಶ್ರೀನಿವಾಸ ವೈದ್ಯರು ಇವನ್ನೆಲ್ಲ ಕಥಾರೂಪಿ ಹರಟೆ, ಹರಟೆ ರೂಪಿ ವ್ಯಕ್ತಿ ಚಿತ್ರಣ ಅಥವಾ ಶುದ್ಧ ತಲೆಹರಟೆ ರೂಪಿ ಹರಟೆ ಎಂದು ಕರೆದಿದ್ದಾರೆ. ಅಂದರೆ ಎಲ್ಲದರಲ್ಲೂ ಹರಟೆಯ ಅಂಶ ಸ್ವಲ್ಪ ಹೆಚ್ಚೇ ಇದ್ದರೆ ಅದು ದೋಷವಲ್ಲ, ಗುಣ ಎಂದೇ ಪರಿಗಣಿಸುವುದು ಅನಿವಾರ್ಯ. ಆದರೆ ಇಲ್ಲಿ ಬರುವ ಎಲ್ಲ ವ್ಯಕ್ತಿಗಳೂ ಘಟನೆಗಳೂ ಕಾಲ್ಪನಿಕ. ಈ ಸ್ಥೂಲ ಪರಿಚಯದೊಂದಿಗೇ ಇಲ್ಲಿನ ಕತೆಗಳನ್ನು ಪ್ರವೇಶಿಸಿದರೆ ಗುಂಗು ಹತ್ತಿಸುವ ವಿವರಗಳು, ಹೃದಯದ ಭಾವಕ್ಕೆ ಮೆದುಳಿನ ತರ್ಕದ ಸ್ಪರ್ಶ, ಹಾಗೆ ಲಾಜಿಕ್‌ಗೆ ಭಾವದ ಸಂವೇದನೆ, ಹೊಸದೇ ಆದ ಬಿಂಬ ಪ್ರತಿಬಿಂಬಗಳ ಕೊಲಾಜ್ ಹುಟ್ಟಿಸುವ ಒಂದು ವಿಶಿಷ್ಟ ಲಯವಿನ್ಯಾಸ ಎದುರಾಗುತ್ತದೆ. ಮನಸ್ಸು ಉಲ್ಲಾಸಗೊಳ್ಳುತ್ತ, ಚುರುಕುಗೊಳ್ಳುತ್ತ, ಮುದುಡುತ್ತ, ಅರಳುತ್ತ ಹೊಸ ಲೋಕವೊಂದನ್ನು ತಡಕುತ್ತದೆ.

ಮೌನವೇ ಸೃಷ್ಟಿಯೊಳಿರದಿರೆ ನೀನು... ಬೇರೆಲ್ಲಿಯೂ ನೀನಿಲ್ಲ

ಕಳೆದ ವಾರ ಮಡಿಕೇರಿಯ ತಲಕಾವೇರಿಯಲ್ಲಿ ಮಳೆಗಾಲದ ದಿನಗಳಾದ್ದರಿಂದ ಮೋಡಗಳು ರಾಶಿರಾಶಿಯಾಗಿ ಮುಗಿಲನ್ನೂ ಬೆಟ್ಟ ಕಾಡು ಕಣಿವೆಗಳನ್ನೂ ತುಂಬಿಕೊಂಡಿದ್ದವು. ಮೊದಲ ಮಳೆಗಳು ಸುರಿದು ಸುತ್ತಲಿನ ಹಸುರೆಲ್ಲಾ ತೊಯ್ದು ನವಚೇತನದಿಂದ ಪ್ರಶಾಂತದಲ್ಲೇ ರಾರಾಜಿಸುತ್ತಿತ್ತು.

ಛಂದಸ್ಸು ಪ್ರಾಸ ಬೇಡವೇ?

ಪದ್ಯಗಳು ಹಾಡುವಂತಿರಬೇಕು. ಅಲ್ಲಿ ಆದಿಪ್ರಾಸವೋ, ಅಂತ್ಯಪ್ರಾಸವೋ ಅಥವಾ ಅನುಪ್ರಾಸವೋ ಅಥವಾ ಇವೆಲ್ಲವೂ ಇದ್ದು ಅದೊಂದು ಚೌಕಟ್ಟಿನಲ್ಲಿದ್ದರೆ (ಛಂದಸ್ಸು) ಹಾಡಲು ಸರಾಗ. ಸಂಗೀತಕ್ಕಳವಡಿಸಲು ಸುಲಭ. ಹಾಗಾಗಿ ಕನ್ನಡದಲ್ಲಿ ಅಕ್ಷರವೃತ್ತ, ಮಾತ್ರಾವೃತ್ತ ಹಾಗೂ ಅಂಶಗಣಗಳಿಂದ ಕೂಡಿದ ಸಾಂಗತ್ಯ ಹಾಗೂ ಪಿರಿಯಕ್ಕರವಿವೆ.

ಮೈಲಾರಲಿಂಗ ಮತ್ತು ತಿರುಪತಿ ತಿಮ್ಮಪ್ಪ

ತಿರುಪತಿ ತಿಮ್ಮಪ್ಪ. (ವೆಂಕಟ ರಮನ)

ವೆಂಕಟೆಶ್ವರನಿಗೆ ತಿಮ್ಮಾಪ್ಪ ಎಂದು ಮತ್ತು ಅವರು ನೆಲಿಸಿದ ಬೆಟ್ಟಕ್ಕೆ ತುರುಪತಿ ಎಂದು ಎಕೆ ಕರೆಯಲಾಗುತ್ತದೆ? ನಿಮಗೆ ತಿಳಿದಿದ್ದರೆ ನನಗೆ ದಯಮಾಡಿ ತಿಳಿಸಿ

ಈ ವಿಚಾರವನ್ನು ನಾನು ಒಬ್ಬ ಕುರುಬನಿನ್ದ ತಿಳಿದುಕೊಂಡೆ.