ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಶಾಂತಿ

ಶಾಂತಿ (ನಾಮಪದ) [ಸಂಸ್ಕೃತಮೂಲ]
೧. ನೆಮ್ಮದಿ; ಚಿತ್ತಸ್ವಾಸ್ಥ್ಯ
೨. ತಾಳ್ಮೆ; ಸೈರಣೆ
೩. (ಭಾವೋದ್ರೇಕ ಮೊದಲಾದವನ್ನು) ಉಪಶಮನ ಮಾಡುವುದು; ಸಮಾಧಾನಪಡಿಸುವುದು
೪. ಅನಿಷ್ಟಪರಿಹಾರಕ್ಕಾಗಿ ಮಾಡುವ ಜಪ, ತಪ, ಹೋಮ ಮುಂತಾದ ವಿಧಿ (=ಶಾಂತಿಕ)
೫. ಒಳ್ಳೆಯ ಅದೃಷ್ಟ; ಸೌಭಾಗ್ಯ
೬. ಕೋಮಲತೆ; ಮೃದುತ್ವ
೭. ವಿರಾಮ; ವಿಶ್ರಾಂತಿ
೮. ಮೌನ; ನೀರವತೆ
೯. ಯುದ್ಧದ ಗಲಭೆಯಿಲ್ಲದ ಸ್ಥಿತಿ

ಬಿರುದು, ಬಿಮ್ಮಾನಗಳಿರದ ಹಾಡುಹಕ್ಕಿಯ ಸಂಗೀತ ಕಚೇರಿ ಇದು!

‘ಹಕ್ಕಿಗಳುಲಿಯಲು, ಹೂವುಗಳರಳಲು
ತೆರೆವುದು ದಿನ ದಿನ ಸಗ್ಗದ ಬಾಗಿಲು’- ರಾಷ್ಟ್ರಕವಿ ಕುವೆಂಪು.

‘ಹಕ್ಕಿಯ ಗಾಯನ ಕೌಶಲ್ಯದ ಕುರಿತು ನಾನು ಲೇಖನ ಬರೆಯುತ್ತಿದ್ದೇನೆ’ ಎಂದಾಗ ನವಲಗುಂದದ ನನ್ನ ವಿದ್ಯಾರ್ಥಿ ಮಿತ್ರ ಸಿದ್ದು ಪೂಜಾರ ಅಚ್ಚರಿಯ ವಿಷಯ ತಿಳಿಸಿದರು.

‘ಟ್ಟೀ..ಟ್ಟೇ..ಟೀವ್..ಟ್ಟೀಂವ್’ ಎಂದು ಕೂಗುವ, ನೆಲದ ಮೇಲೆಯೇ ಗೂಡು ಕಟ್ಟುವ ಟಿಟ್ಟಿಭ ಹಕ್ಕಿ ಕೂಗಿದರೆ ಅವರ ಅಮ್ಮ ಅಪಶಕುನ ಎಂದು ಭಾವಿಸುತ್ತರಂತೆ! ಮುಂದಿನ ಕೆಲವೇ ದಿನಗಳಲ್ಲಿ ಆಪ್ತೇಷ್ಠರ ಸಾವಿನ ಸುದ್ದಿಯನ್ನು ಹೊತ್ತು ತರುವ ಸಂದೇಶದ ಪೂರ್ವಭಾವಿಯಾಗಿ ಈ ಹಕ್ಕಿ ಕೂಗುತ್ತದೆ ಎಂದು ನಮ್ಮ ಗ್ರಾಮೀಣ ಭಾಗದಲ್ಲಿ ಬಲವಾದ ನಂಬಿಕೆ ಇದೆ.

‘ಥೂ..ಥೂ..’ ಎಂದು ಮೂರು ಬಾರಿ ಉಗಿದು, ಮನೆ ದೇವರಿಗೆ ದೀಪ ಹಚ್ಚಿ ಪ್ರಾರ್ಥಿಸಿ ಬಿಟ್ಟರೆ ಅಪಶಕುನ ದೂರವಾಗುತ್ತದೆಯಂತೆ! ಹಾಗೆಯೇ ಕಾಗೆ ನಮ್ಮ ಮನೆಯ ಹಿತ್ತಲಿನ ಮಾಳಿಗೆಯ ಮೇಲೆ ಕುಳಿತು ಸತತ ಕೂಗಿದರೆ (ಅದು ಆಹಾರ ನೋಡಿ ತನ್ನ ಬಳಗ ಕರೆಯಲು ವಾಸ್ತವದಲ್ಲಿ ಕೂಗುತ್ತಿರುತ್ತದೆ.) ನೆಂಟರು, ಬೀಗರು ದೂರದ ಊರಿನಿಂದ ಬರುವರು ಎಂಬ ಪೂರ್ವ ಪೀಠಿಕೆ ಅದು! ಎಂದು ಭಾವಿಸಲಾಗುತ್ತದೆ.
ಒಟ್ಟಾರೆ ನಮ್ಮ ನಂಬಿಕೆ, ಆಚಾರ, ವಿಚಾರ, ಸಂಪ್ರದಾಯ, ಪದ್ಧತಿಗಳು ಹಕ್ಕಿಯ ಹಾಡಿಗೂ ಹಣೆಪಟ್ಟಿ ಅಂಟಿಸಿವೆ.

ಸುದ್ಧಿಗಳು ಮತ್ತು ಸಿದ್ಧಾಂತಗಳು

ಮನೆಯಲ್ಲಿ ಟಿ.ವಿ. ನೋಡುವುದಾದರೆ ನನ್ನ ನೆಚ್ಚಿನ ಕಾರ್ಯಕ್ರಮಗಳೆಂದರೆ ’ವಾರ್ತೆಗಳು’. ಅವುಗಳಲ್ಲಿ ನನಗೆ ಹೆಚ್ಚು ಮೆಚ್ಚಿಗೆಯಾಗುವುದು ಉದಯ ಟಿ.ವಿ ಯ ನ್ಯೂಸ್. ಒಂದು ರೀತಿಯ ಮಸಾಲೆ ಫಿಲಂ ಥರ ಯಾವುದು ಅತಿರಂಜಿತವೋ ಅತಿ ಅಮೋಘವೋ ಹಾಗೆಯೇ ಅತ್ಯಂತ ಪ್ರಸ್ತುತವೋ ಅದನ್ನೇ ತೋರಿಸುತ್ತಾರೆ. ಸುದ್ಧಿ ಒಂದು ರೀತಿಯ ಮೊನಚಿರುತ್ತದೆ.

ಒ೦ದು ಬೆಚ್ಚನೆಯ ನೆನಪು..

ಈಗ್ಗೆ ಸುಮಾರು ೧೫ ವಸ೦ತಗಳ ಹಿ೦ದೆ ಒ೦ದು ದಿನ. ನಾವು ಶಿವಮೋಗ್ಗದ ರಾಜೇ೦ದ್ರನಗರದ ಮಕ್ಕಳಿಗೆಲ್ಲ ಬೆಳಿಗ್ಗೆಯಿ೦ದ ಹಬ್ಬದ ಸಡಗರ. ಬೇಗ ಬೇಗ ಉಳಿದ ಮಕ್ಕಳೆಲ್ಲಾ ನಮ್ಮ ಮನೆಗೆ ಬರುವ ಮು೦ಚೆ ತಿ೦ಡಿ ತಿ೦ದು, ಸ್ನಾನ ಮಾಡಿ ಮಣ್ಣು ಮಾಡಿಕೊಳ್ಳಬಹುದಾದ ಹಳೆಯ ಬಟ್ಟೆ ಹಾಕಿಕೊ೦ಡು ತಯಾರಾಗಿದ್ದೆವು. ಅರಣ್ಯ ಇಲಾಖೆಯಿ೦ದ ಬ೦ದ ಸುಮಾರು 300 - 400 ಸಸಿಗಳು ಪುಟ್ಟ ಪುಟ್ಟ ಎಲೆಗಳನ್ನು ಹೊಳೆಯಿಸುತ್ತಾ ಕೋಮಲವಾಗಿ ನಮ್ಮ ಮನೆ ಅ೦ಗಳದಲ್ಲಿ ಬಳುಕುತ್ತಿದ್ದವು..
ವಿಷಯ ಇಷ್ಟೆ, ಅವತ್ತು ನಾವು ರಾಜೇ೦ದ್ರ ನಗರದ ಮಕ್ಕಳು ವನ ಮಹೋತ್ಸವ ಆಚರಿಸುತ್ತಿದ್ದೆವು. ಅರಣ್ಯ ಇಲಾಖೆಯವರು ಉಚಿತವಾಗಿ ಸಸಿಗಳನ್ನು ಕೊಟ್ಟಿದ್ದರು, ನಮ್ಮ ಹಿರಿಯರೆಲ್ಲಾ ದುಡ್ಡು ಹಾಕಿ ಅವಕ್ಕೆ ಬೇಲಿಗಳನ್ನು ವ್ಯವಸ್ಥೆ ಮಾಡಿದ್ದರು. ಎಲ್ಲ ನಮ್ಮ ಮನೆಗೆ ಬ೦ದು ಸೇರಿದರು. ಮಕ್ಕಳ ಸೈನ್ಯ ದಿಗ್ವಿಜಯಕ್ಕೆ ಹೊರಟ ಯೋಧರ೦ತೆ ಎದೆಯುಬ್ಬಿಸಿ ಕೈಯಲ್ಲಿ ಕತ್ತಿಯ ಬದಲು ಒ೦ದೊ೦ದು ಸಸಿ ಹಿಡಿದು ನಡೆದೆವು ಜೊತೆಯಲ್ಲಿ ನಾವೊ೦ದಿಷ್ಟು ಮಕ್ಕಳ ಅಪ್ಪ೦ದಿರು..ಒ೦ದಿಷ್ಟೇನು ಹೆಚ್ಚು ಕಮ್ಮಿ ಎಲ್ಲಾ ಅಪ್ಪ೦ದಿರೂ ಕೈಯಲ್ಲಿ ಗುದ್ದಲಿ ಸಲಾಕೆಗಳನ್ನು ಹಿಡಿದು ನಮ್ಮ ಜೊತೆಗೆ ಅಪರೂಪಕ್ಕೆ ಸಿಕ್ಕ ತಮ್ಮ ಸ್ನೇಹಿತರ ಜೊತೆ ಮಾತಾಡುತ್ತಾ ಬ೦ದರು. ಬರಲು ಅನುಮಾನಿಸುತ್ತ ಗೇಟಿನಲ್ಲಿ ನಿ೦ತು ನೋಡುತ್ತಿದ್ದ ಅಪ್ಪ೦ದಿರನ್ನು ಹೊರಟವರು ’ಇರಲಿ ಬಾರೋ ಇವುಗಳ ಕೈಯಲ್ಲಿ ಒ೦ದಿಷ್ಟು ಗಿಡ ನೆಡಿಸಿ ಬರೋಣ’ ಎನ್ನುತ್ತಾ ಅವರನ್ನೂ ಸೇರಿಸಿಕೊ೦ಡು ದೊಡ್ಡ ದೊ೦ಬಿ ಮಾಡುತ್ತಾ ಹೊರಟೆವು..ಬೆಳಗಿನ ಹೂಬಿಸಿಲಲ್ಲಿ ಮೊದಲನೇ ಕ್ರಾಸ್ ನಿ೦ದ ಗಿಡಗಳನ್ನು ನೆಡುತ್ತಾ ಬ೦ದೆವು. ಆ ಗು೦ಪಿನಲ್ಲಿದ್ದ ಮಕ್ಕಳ ಮನೆ ಬ೦ದರೆ ಅವರೆ ಗಿಡ ನೆಡುತ್ತಿದ್ದರು. ಅ೦ತೂ ಇಡೀ ರಾಜೇ೦ದ್ರ ನಗರ ಹೀಗೇ ಮರಗಳಾಗುವ ಗಿಡಗಳನ್ನು ನೆಟ್ಟೆವು.
ನಮ್ಮ ಮನೆಯ ಮು೦ದೆ ನೆಟ್ಟ ಮರ ನಾನೇ ನೆಟ್ಟದ್ದು. ನಾನು ಅಕ್ಕ ಇಬ್ಬರೂ ಇದ್ದೆವು ಆದರೆ ಅಕ್ಕನಿಗೆ ನಾನು ಮುದ್ದಿನ ತ೦ಗಿ ಆದ್ದರಿ೦ದ ಅವಳ ಪಾಲಿಗೆ ನಾನು ಮಾಡಿದ ಕೆಲಸ ಜಗತ್ತಿನಲ್ಲೇ ’ಬೆಸ್ಟ್’ (ಈಗಲೂ ಅವಳು ಅದೇ ಭ್ರಮೆಯಲ್ಲೇ ಇದ್ದಾಳೆ ಬಿಡಿ..) ಹಾಗಾಗಿ ನಾನು ನೆಟ್ಟರೆ ಆ ಮರ ಜಗತ್ತಿನಲ್ಲೇ ಬೆಸ್ಟ್ ಆಗುವುದರಿ೦ದ ಅದನ್ನು ನೆಡುವ ಸುಯೋಗ ನನಗೇ ಬ೦ತು. ನಮ್ಮ ಮನೆ ಮು೦ದೆ ನೆಟ್ಟದ್ದು ಹಳದಿ ಹೂವು ಬಿಡುವ ರೈನ್ ಟ್ರೀ.

ನನ್ನ ಹಳ್ಳಿ

ನನ್ನ ಹಳ್ಳಿ

ಹಳ್ಳಿಯ ಸೌಂದರ್ಯ ಸೊಬಗು

ಹಚ್ಚ ಹಸಿರಿನ ಕಾಂತಿಯ ಮೆರಗು

ದಟ್ಟವಾದ ಮರಗಳ ಸಾಲು

ಪ್ರಕೃತಿಯ ಉಳಿವಿಗೆ ಇದರ ಸವಾಲು

 

ತಣ್ಣನೆಯ ಗಾಳಿಯ ತಂಪು

ಸೊಗಸಾದ ಹಕ್ಕಿಯ ಧ್ವನಿಯ ಇಂಪು

ಅಂದು - ಇಂದು

ಅಂದು - ಇಂದು

ಅಂದು

ಅಂದದ ನಾಡು

ಚೆಂದದ ಬೀಡು

ಗಂಧದ ಬೀಡು

 

ಇಂದು

ಭ್ರಷ್ಟರ ನಾಡು

ರೌಡಿಗಳ ನಾಡು

ನಕ್ಸಲೈಟರ ಕಾಡು

ಇದುವೇ ನಮ್ಮ ಕನ್ನಡನಾಡು

ಅಂದಗಾತಿ

ಅಂದಗಾತಿ

ಅಂದಗಾತಿಯೇ ನಿನ್ನ ಮೊಗದಲಿ

ಕಳೆದುಹೋಗಿದೆ ಒಲುಮೆಯ ಚೈತನ್ಯ

ನಿನ್ನಲ್ಲಿ ನಗುವೇ ಕಾಣುತ್ತಿಲ್ಲ

 

ನೀ ನಗದಿರೆ ನಾ ಇಲ್ಲಿಲ್ಲ

ನಾ ಇರದಿರೆ ನೀ ನನ್ನವಳಾಗೊಲ್ಲ

ಓ ನನ್ನ ಹೃದಯವೇ ನೀ ನಗು

 

ಓ ನನ್ನ ಜೀವವೇ

ಓ ನನ್ನ ಜೀವವೇ

ಹೃದಯದ ಪ್ರೀತಿಯ ಕಲರವ

ಎನೋ ಕಳೆದುಹೋದ ಅನುಭವ

ಎದೆಯಲಿ ಪ್ರೀತಿಯ ಕಂಪನ

ಸದಾ ಜಿನುಗುವ ಸಿಂಚನ

 

ಸದಾ ಕಾಡುತ್ತಿದೆ ನಿನ್ನ ನೆನಪು

ಮಾಸಿಹೋದ ನೆನಪುಗಳ ಇಂಪು