ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ವಿಜ್ಞಾನಿಗಳೊಡನೆ ರಸನಿಮಿಷಗಳು

ಜಿ.ಟಿ. ನಾರಾಯಣ್ ರಾವ್ ರವರ ಬಗ್ಗೆ ಚಿಂತಿಸುತ್ತ ನನ್ನ ಪುಸ್ತಕದ ಆಲ್ಮೇರಾ ಬಳಿ ಪುಸ್ತಕಗಳನ್ನು ಹುಡುಕುತ್ತಿದ್ದಾಗ ಕಣ್ಣಿಗೆ ಬಿದ್ದವರು ಜೆ.ಆರ್.ಲಕ್ಷ್ಮಣರಾವ್ ರವರು. ಅವರ ಪುರ್ಣ ಹೆಸರು ಜಗಲೂರು ರಾಘವೇಂದ್ರ ರಾವ್ ಲಕ್ಷ್ಮಣ ರಾವ್. 1921ರಲ್ಲಿ ಜನಿಸಿದ ಇವರು 1943ರಿಂದ 38 ವರ್ಷಗಳ ಕಾಲ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಪರಮಾಣು ಚರಿತ್ರೆ, ಬೈಜಿಕ ವಿದ್ಯುತ್ ಹೀಗೆ ಅನೇಕ ವೈಜ್ಞಾನಿಕ ಲೇಖನಗಳನ್ನು ಬರೆದಿದ್ದಾರೆ.
ನಾವು ಸಾಧಾರಣವಾಗಿ ವಿಜ್ಞಾನಿಗಳು ಎಂದರೆ ನಮ್ಮಂತೆ ಸಾಮಾನ್ಯ ಮನುಷ್ಯರು ಎಂದು ಪರಿಗಣಿಸುವುದೇ ಇಲ್ಲ. ಅವರೆಲ್ಲೋ ಎತ್ತರದಲ್ಲಿ ಇರುವ ವಿಶಿಷ್ಟ ಮನೊಭಾವದ ವ್ಯಕ್ತಿಗಳಾಗಿರುತ್ತಾರೆ, ನಮ್ಮ ನಿಮ್ಮ ಹಾಗೆ ಸಾಮಾನ್ಯ ವಿಚಾರಗಳು ಅವರಿಗೆ ಬರುವುದೇ ಇಲ್ಲ, ಸದಾ ಗಂಭೀರ ಪ್ರವೃತ್ತಿಯವರಾಗಿ ಇರುತ್ತಾರೆ ಎಂದೆಲ್ಲ ಅವರ ಬಗ್ಗೆ ಚಿಂತಿಸಿರುತ್ತೇವೆ. ಸಾಮಾನ್ಯ ಜನರಂತೆ ಅವರು ಸಂತೋಷ ಆದಾಗ ಕುಣಿದಾಡುವುದು, ಸಣ್ಣ ತಪ್ಪು ಮಾಡಿ ಪೇಚಿಗೆ ಸಿಕ್ಕಿ ಹಾಕಿಕೊಳ್ಳುವುದು ಮುಂತಾದವು ಅವರಿಂದ ಬಲು ದೂರ ಎಂದುಕೊಳ್ಳುತ್ತೇವೆ. ಆದರೆ ಜೆ.ಆರ್. ಲಕ್ಷ್ಮಣ ರಾಯರು ವಿಜ್ಞಾನವಲ್ಲದೇ ವಿಜ್ಞಾನಿಗಳ ಬಗ್ಗೆಯೂ ಹೆಚ್ಚು ಆಸಕ್ತಿಯುಳ್ಳವರಾಗಿ ಅವರ ದಂತಕಥೆಗಳಿಂದಲೂ ಆಕರ್ಷಿತರಾದರಂತೆ. ಹೀಗಾಗಿ ತಾನು ಸವಿದು ಬಾಯಿ ಚಪ್ಪರಿಸಿದ ಸುದ್ದಿಗಳನ್ನು ನಮಗಾಗಿ “ವಿಜ್ಞಾನಿಗಳೊಡನೆ ರಸನಿಮಿಷಗಳು” ಎಂಬ ಕೃತಿ ರಚಿಸಿ ಮನರಂಜನೆ ನೀಡಿದ್ದಾರೆ. ಅವುಗಳನ್ನು ಓದುತ್ತಿದ್ದರೆ ಆ ವಿಜ್ಞಾನಿಗಳೆಲ್ಲಾ ನಮಗೆ ತೀರಾ ಹತ್ತಿರದವರೆನ್ನಿಸುತ್ತಾರೆ. ಅಪಾರ ಬುದ್ಧಿಶಕ್ತಿಯ ಅವರ ಹಸುಳೆ ಸ್ವಭಾವ, ವಿನೋದ ಪ್ರಿಯತೆ, ಮಾನವೀಯತೆ ಮತ್ತು ಮರೆಗೂಳಿತನ ನಮ್ಮ ಹೃದಯವರಳಿಸಿ ತುಟಿಯಂಚಿನಲ್ಲಿ ನಗು ಅರಳುವಂತೆ ಮಾಡುತ್ತವೆ. ಜೆ.ಆರ್. ಲಕ್ಷ್ಮಣರಾವ್ ರವರು ಇಲ್ಲಿ ಮೆರೆಸಿರುವ ಹಾಸ್ಯ ಯಾರ ಮನಸ್ಸನ್ನೂ ಘಾಸಿಗೊಳಿಸದ ಹಿತವಾದ ನಗೆರತ್ನಗಳಂತಿವೆ. ಈ ಪುಸ್ತಕದಲ್ಲಿನ ಒಂದು ಪ್ರಸಂಗವನ್ನು ಇಲ್ಲಿ ಉದಾಹರಿಸುತ್ತೇನೆ.

ನಗು

ಆಳುವಾಗ ಒಂಟಿಯಾಗಿ ಆಳು, ನಗುವಾಗ ಎಲ್ಲರೊಡನೆ ನಗು.

ಮಾತು

ಮಾತು ಮನಸ್ಸುಗಳನ್ನು ಒಂದುಗೂಡಿಸಬೇಕೆ ಹೊರತು ಒಡೆಯಬಾರದು

ಅಪ್ಪಾ..‘ಟೊಮೆಟೋ’ ಅಂದರೇನಪ್ಪಾ?

ಅಪ್ಪಾ..ಟೊಮೆಟೋ ಅಂದರೇನಪ್ಪಾ?

ಛೇ..ಇದೆಂಥಾ ಮಾಮೂಲಿ ಪ್ರಶ್ನೆ?.. ಟೊಮೆಟೋ ಅಂದರೆ ಏನು ಅಂತ ಗೊತ್ತಿಲ್ವಾ! ಇದೇನಪ್ಪಾ? ಅಂತ ನೀವು ಆಶ್ಚರ್ಯ ಪಡಬೇಡಿ. ಈ ಪ್ರಶ್ನೆ ೨೦೦೮ನೇ ಇಸ್ವಿಯದ್ದಲ್ಲ. ೨೦೨೦ರದ್ದು! ಅಂದು ನಮ್ಮ ಮೊಮ್ಮಕ್ಕಳು ಕೇಳುವ ಪ್ರಶ್ನೆ ಇದು.

ರಚ್ಚೆ

ರಚ್ಚೆ(ನಾ)
೧.ಕಟ್ಟೆ; ವೇದಿಕೆ; ಜಗಲಿ
೨.ಚಾವಡಿ; ಪಂಚಾಯತಿ ಸಭೆ
೩.ಪ್ರತಿಪಾದನೆ; ವಿವರಣೆ; ನಿರೂಪಣೆ
೪.ಮುಚ್ಚುಮರೆಯಿಲ್ಲದ ಸ್ಥಿತಿ; ಬಹಿರಂಗ
೫.ಗುಂಪು; ಸಮೂಹ
(ರಚ್ಚೆಕಚ್ಚು = ಚರ್ಚಾಗೋಷ್ಠಿ; ರಚ್ಚೆಗೆ ತರು = ಬಯಲಿಗೆ ತರು, ಬಹಿರಂಗಪಡಿಸು; ರಚ್ಚೆಗೆ ಬೀೞ್ = ಬಯಲಾಗು; ರಚ್ಚೆಕಟ್ಟೆ = ಪಂಚಾಯತಿ ಕಟ್ಟೆ; ರಚ್ಚಿಸು = ಗುಂಪಾಗು, ಒಟ್ಟುಸೇರು)

ರಚ್ಚೆ (ನಾ)
ಒಂದು ಬಗೆಯ (ಸಂಗೀತ) ತಾಳ

ಚರ್ಚಿಸಲೂ ನಮಗೆ ಪುರುಸೊತ್ತಿಲ್ಲ!

ಏನು ಬ್ಯೂಸಿ ಅಂತೀರಾ...ನಮ್ಮ ಮಾತುಗಳು ಆರಂಭವಾಗುವುದೇ ಇಲ್ಲಿಂದ. ಪಿಕ್‌ನಿಕ್‌ಗೆ ಪುರುಸೊತ್ತು ಇದೆ, ಚಲನಚಿತ್ರ ಅಂದ್ರೆ ನಮ್ಮ ಕೆಲಸಗಳೆಲ್ಲಾ ಮರೆತು ಹೋಗತ್ತೆ. ಧಾರಾವಾಹಿ ನೋಡಲು ನಮ್ಮಲ್ಲಿ ಸಾಕಷ್ಟು ಸಮಯವಿದೆ. ಆದ್ರೂ ಒಂದಿಷ್ಟು ಕೆಲಸಗಳಿಗೆ ಮಾತ್ರ ನಮ್ಮದು ಅದೇ ರಾಗ!