ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹೊರಟಿದೆ ಎತ್ತ, ನಮ್ಮ ಸಾಹಿತ್ಯ?

ಕನ್ನಡದಲ್ಲಿ ಕಾವ್ಯ ಸತ್ತಿದೆ.

ಇದರರ್ಥ ಕವಿತೆಗಳನ್ನು ಬರೆಯುವವರು ಇಲ್ಲವೆ೦ದಲ್ಲ. ಅವರ ಸ೦ಖ್ಯೆ ಮೊದಲಿಗಿ೦ತ ಹೆಚ್ಚಾಗಿದೆ. ಆದರೆ ಅವರು ಬರೆದಿದ್ದನ್ನೆಲ್ಲಾ ಕವಿತೆ ಎ೦ದು ಒಪ್ಪಿಕೊಳ್ಳುವುದು ಕಷ್ಟ. ಅದಕ್ಕೆ ಹೇಳಿದ್ದು ಕನ್ನಡದಲ್ಲಿ ಕಾವ್ಯ ಸತ್ತಿದೆ ಎ೦ದು.

ಹೊರಟಿದೆ ಎತ್ತ, ನಮ್ಮ ಸಾಹಿತ್ಯ?

ಕನ್ನಡದಲ್ಲಿ ಕಾವ್ಯ ಸತ್ತಿದೆ.

ಇದರರ್ಥ ಕವಿತೆಗಳನ್ನು ಬರೆಯುವವರು ಇಲ್ಲವೆ೦ದಲ್ಲ. ಅವರ ಸ೦ಖ್ಯೆ ಮೊದಲಿಗಿ೦ತ ಹೆಚ್ಚಾಗಿದೆ. ಆದರೆ ಅವರು ಬರೆದಿದ್ದನ್ನೆಲ್ಲಾ ಕವಿತೆ ಎ೦ದು ಒಪ್ಪಿಕೊಳ್ಳುವುದು ಕಷ್ಟ. ಅದಕ್ಕೆ ಹೇಳಿದ್ದು ಕನ್ನಡದಲ್ಲಿ ಕಾವ್ಯ ಸತ್ತಿದೆ ಎ೦ದು.

ನಿಮ್ಮ ಊರಿನಲ್ಲಿ ನಡೆಯುವ ವಿಶೇಷ ಘಟನೆಗಳು, ವಿಶೇಷ ವ್ಯಕ್ತಿಗಳು, ಇದ್ದರೆ ನಮಗೆ ತಿಳಿಸಿ 0-98454 89452

ಸಾ...ತ್ - ಬಾ...ತ್ - ನಮ್ಮ ಬೆಂಗಳೂರು
ನಮ್ಮ ತಂಡ ಸದಾ ನಿಮ್ಮ ಸಂಗಡ...24x365... Helpline : 0-98454 89452

(ನಿಮ್ಮ ಮನದಾಳದ ನೋವಿಗೆ ಮದ್ದಾಗಲು ನಮ್ಮ ತಂಡ ಸದಾ ಸಿದ್ದ)

ಸರಳ ಜೀವನ

ಕೆಲದಿನಗಳ ಹಿಂದೆ ನಮ್ಮನೆಗೊಬ್ಬರು ಹಿರಿಯರು ಬಂದಿದ್ದರು ೮೦ ವರ್ಷ ದಾಟಿದ ತುಂಬು ಜೀವ. ಹುಟ್ಟಿ ಬೆಳೆದು ಸರ್ವೀಸು ಮಾಡಿ ರಿಟೈರಾದಮೇಲೆ ಕಾಲ ಕಳೆಯುತ್ತಿರುವುದೂ ಒಂದು ಚಿಕ್ಕ ಊರಿನಲ್ಲಿ. ಮನೆಯ ಹತ್ತಿರದ ಒಂದು ಸರ್ಕಾರಿಸಂಸ್ಥೆಯಲ್ಲಿ ಕೆಲಸಮಾಡಿಬಂದವರು. ಯಾರೋ ತಾತ ಮುತ್ತಾತನಕಾಲಕ್ಕೆ ಬ್ರಿಟಿಷರಿಂದ ಕೊಡಲ್ಪಟ್ಟ ಒಂದು ಮನೆಯಲ್ಲಿ ವಾಸವಿದ್ದರಂತೆ.

ಚುಕ್ಕಿಗಳಂತ ಹಲ್ಲು

ಆತ ಆಕೆಗೆ ಅಂದ,

’ನಿನ್ನ ಹಲ್ಲುಗಳು ಇರುಳಲಿ ಮೂಡುವ ಚುಕ್ಕಿಗಳಂತಿವೆ!!’,

’ಹೌದು’ ಎಂದ ಆಕೆ, ’ಅವುಗಳಂತೆಯೇ ಇವು ಕೂಡ,

ಇರುಳಲ್ಲಿ ಹೊರಬರುವವು’ ಅನ್ನುತ್ತ,

ತನ್ನ ಹಲ್ಲಿನ ಸೆಟ್ಟನ್ನು ತೆಗೆದಿರಿಸಿ, ಮಲಗಿ ಬಿಟ್ಟಳು.!!

ಹಗಲು-ಇರುಳು

ಕಣ್ಣ ತುಂಬ ತುಂಬಿರುವ ನಿನ್ನ ನಲ್‍ಮೆಯ ಬೆಳಕಲ್ಲಿ
ಜಗವು ಕಾಣದಾಗಿದೆಯಲ್ಲೇ!!

ನೀ ದೂರವಾಗಿ ಹೋದರೇನು ಗತಿ
ತೊರೆಯದಿರು ನನ್ನ ನಲ್ಲೆ!!

ಕಣ್ಣ ತುಂಬ ತುಂಬುವ ವಿರಹದ ಕತ್ತಲೆಯಲ್ಲಿ
ಜಗವೇ ಕಾಣದಾಗುವುದಲ್ಲೇ!!

ನೀ ಜೊತೆ ಇರುವವರೆಗಸ್ಟೇ ಹಗಲು
ನೀ ದೂರಾದ ಮರುಗಳಿಗೆ ನೆಟ್ಟಿರುಳು!!

ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.

ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯಿಂದ ರಾಮನಗರಕ್ಕೆ ಹೋಗುವ ರಸ್ತೆ. ಗಣೇಶಗುಡಿ ಮುಖ್ಯ ರಸ್ತೆ ಸಹ ಇದೆ. ಈ ಹಾದಿಯ ಮೇಲೆ ೧೬ ಮೈಲಿ ಕ್ರಮಿಸಿದರೆ ಬಲಬದಿಗೆ ಶಿಂಗರಗಾಂವ್ ಕ್ರಾಸ್. ಈ ಕತ್ತರಿಯಲ್ಲಿ ಸುಮಾರು ೬ ಮೈಲಿ ಹೋದರೆ ಜಗಲಬೇಟ್ ಕ್ರಾಸ್. ಇಲ್ಲಿಂದ ಬಲಬದಿಗೆ ೮ ಮೈಲಿ ನಡೆದರೆ ಸಿಗುವ ಹಳ್ಳಿ ಕೂಡಲ್ ಗಾಂವ್. ಇದೊಂದು ರೀತಿ ನಮ್ಮ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಜುಗಾರಿ ಕ್ರಾಸ್ ಇದ್ದಂತೆ!

ಅದೊಂದು ಸುಂದರ ಹಳ್ಳಿ. ಸ್ವಚ್ಛಂದ ಪರಿಸರ. ಸಮೃದ್ಧ ಕಾಡು. ಪ್ರಾಣಿ-ಪಕ್ಷಿಗಳ ಕಲರವದ ರಮಣೀಯ ವಾತಾವರಣ. ಅಲ್ಲಲ್ಲಿ ಹರಿಯುವ ಸುಂದರ ಝರಿಗಳು. ನೀರಿನ ತೊರೆಗಳು. ಕಾಡನ್ನು ಸೀಳಿಕೊಂಡು ಹೋಗಿರುವ ಕಾಲು ದಾರಿಗಳು. ಹತ್ತಾರು ಮೈಲಿಗಳನ್ನು ಗದ್ದೆಯ ಬದುಗಳ ನಡುವಿನ ‘ಸುಂದರಿಯ ಬೇತಲೆ ಮಣಿ!’ ಮೇಲೆ ಕಾಲ್ನಡಿಗೆಯಲ್ಲೇ ಕ್ರಮಿಸುವ ಜನ. ಅಬ್ಬಾ ಮೈನವಿರೇಳಿಸುವ ಅನುಭವ!

‘ಇಲ್ಲೊಂದು ಹಳ್ಳಿ ಇದೆ, ೩೦ ಹೆಂಚಿನ ಮನೆಗಳಿವೆ, ಸುಮಾರು ೧೦೦ ಜನರ ವಸತಿ ಇದೆ’ ಎಂದು ಪತ್ತೆ ಹಚ್ಚಿದ ಪರಿಸರವಾದಿ, ಕ್ರಿಯಾಶೀಲಗೆಳೆಯರು ಬಳಗದ ಅಧ್ಯಕ್ಷ ಮುಕುಂದ ಮೈಗೂರ ಅವರಿಗೆ ‘ಹ್ಯಾಟ್ಸ್ ಆಫ್’.

ಕತೆಗಾರ್ತಿ ದೊಡ್ಡಮ್ಮ

"ರೂಪವ್ವ ಬಾರೆ , ಆನಂದ ಬಾರಲಾ , ಒಂದ್ಕತೆ ಯೇಳ್ತೀನಿ " ಅಂತಾ ಆ ಹೆಂಗಸು ಕರೆದ ತಕ್ಶಣ, ಏನೇ ಮಾಡುತ್ತಿದ್ದರೂ ನಾವು ಅವಳ ಮುಂದೆ ಹಾಜಾರಾಗುತ್ತಿದ್ದೆವು.
ಅವಳ ಹೆಸರೇ ದೊಡ್ಡಮ್ಮ. ಪಕ್ಕದ ಮನೆಯವರಿಗೆ ಯಾವುದೋ ಸಂಬಂಧದವಳು. ಅವಾಗ ವಯಸ್ಸು ಎಷ್ಟು ಅಂತ ಗೊತ್ತಾಗ್ತಿರಲಿಲ್ಲ, ಅದೆಲ್ಲಾ ಬೇಕಾಗೂ ಇರಲಿಲ್ಲ.
ಈಗ ಅನ್ನಿಸುತ್ತಿದೆ ಸುಮಾರು ೬೫ -೭೦ ವರ್ಷವಿರಬೇಕು.