ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹೃದಯದ ಭಾವ

ಹೃದಯದ ಭಾವ

ಹೃದಯದ ಭಾವನೆ ಅರಳಿ

ಪ್ರೀತಿಯ ಕಡಲು ಉಕ್ಕುತ್ತಿದೆ

ಕನಸ್ಸಿನ ಪ್ರೀತಿಯ ಹಕ್ಕಿ

ಎದೆಯ ಗೂಡಲಿ ಅವಿತಿದೆ

ಬಂಧವ ಬೆಸೆಯುವ ಪ್ರೀತಿ

ಕಣ್ಣಿಗೆ ಲೋಕವ ಮರೆಮಾಡಿದೆ

 

ಕೆಂಡದ ದಾರಿಯ ಪಯಣ

ಕೆಂಡದ ದಾರಿಯ ಪಯಣ

ಎಲ್ಲೋ ಹುಟ್ಟಿ ಎಲ್ಲೋ ಬೆಳೆದೆ

ಹೆತ್ತವರಿಂದ ನಾ ದೂರವಾದೆ

ನಾ ಬೀದಿಯಲ್ಲಿ ಬಿದ್ದ ಕೂಸು

ದುಷ್ಟರ ಪಾಲಿಗೆ ನಾನಾದೆ ಬಲಿಪಶು

 

ಕೆಂಡದ ರಾಶಿಯೇ ನನಗೆ ಹೆದ್ದಾರಿ

ದುಃಖದ ಮಡುವೆ ಹಾಸಿಗೆಯಾಗಿ

ಧಾರವಾಡಕ ಕಾಡುಕೋಣ ಓಡಿಬಂದಿತ್ತ..!

ಸೂರ್ಯವಂಶಿಗೆ ಬೆಳಿಗ್ಗೆ ೬ಕ್ಕೆ ಮೊಬೈಲ್ ರಿಂಗಣಿಸಿದರೆ ಹೇಗಾಗಬೇಡ? ತಪ್ಪಿ, ಬೇಗ ಏಳಬೇಕು ಎಂದುಕೊಂಡು ‘ಅಲಾರಾಮ್’ ಇಟ್ಟಿದ್ದೇನೆಯೇ?

ಗಿರಿಜನರ ನಾಡು ಕೋರಾಪುಟ್

ಕೋರಾಪುಟ್ ಎಂಬುದು ಒರಿಸ್ಸಾದ ಪಶ್ಚಿಮದಲ್ಲಿನ ಗುಡ್ಡಗಾಡು ಪರಿಸರದ ಒಂದು ಜಿಲ್ಲೆ. ಬರೀ ಅರಣ್ಯ ಮತ್ತು ಬೆಟ್ಟಗುಡ್ಡಗಳಿಂದ ತುಂಬಿದ ಈ ಪ್ರದೇಶದಲ್ಲಿ ವಾಸಿಸುತ್ತಿರುವವರು ಸಹಜವಾಗಿ ಗುಡ್ಡಗಾಡು ಜನರು. ಭೂಪಟದಲ್ಲಿನ ಗಡಿರೇಖೆಗಳ ಪರಿವೆ ಇಲ್ಲದ ಇವರು ಜಾರ್ಖಂಡ್, ಛತ್ತೀಸ್‌ಗಡ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರ ಮತ್ತು ಒರಿಸ್ಸಾಗಳಲ್ಲಿ ವ್ಯಾಪಿಸಿರುವ ಬೃಹತ್ ಅರಣ್ಯದಲ್ಲಿ ಬಾಳುವೆ ಮಾಡುತ್ತಿದ್ದಾರೆ. ಮಳೆ ಬಿಸಿಲು ಚಳಿಗೆ ತಕ್ಕಂತೆ ತಾಣಗಳನ್ನು ಬದಲಿಸುತ್ತಾ ಪ್ರಾಣಿಗಳನ್ನು ಬೇಟೆಯಾಡುತ್ತಾ ಇದ್ದಲ್ಲೇ ಏನಾದರೂ ಬೆಳೆದುಕೊಳ್ಳುತ್ತಾ ಅತಿ ಸ್ವತಂತ್ರರಾಗಿ ಬದುಕುವ ಇವರನ್ನು ನಾಡಿಗರು ಆದಿವಾಸಿಗಳೆನ್ನುತ್ತಾರೆ.

ವಿಶಾಖಪಟ್ಟಣದಿಂದ ರಾಯಗಡದವರೆಗಿನ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ೪೩ರಲ್ಲಿ ಸಾಗುವ ಲಾರಿಗಳು ಕೋರಾಪುಟ್ ಜಿಲ್ಲೆಯ ಸಿಮಿಲಿಗುಡ ಎಂಬ ಊರಿನಲ್ಲಿ ನೀರು ನೆರಳಿಗಾಗಿ ನಿಂತು ಸಾಗುವೆಡೆ ಈ ಆದಿವಾಸಿಗಳ ಸಂತೆ ನೆರೆಯುತ್ತದೆ. ರಾಗಿ, ತರಕಾರಿ, ಉಪ್ಪು, ಎಣ್ಣೆ, ಕಾಳುಕಡಿ, ಬಟ್ಟೆ, ಬಳೆ, ಕತ್ತಿ ಕುಡುಗೋಲು, ಆಡುಕುರಿ ಇವೆಲ್ಲ ಬಿಕರಿಯಾಗುವುದು ಪರಸ್ಪರ ವಿನಿಮಯ ಲೆಕ್ಕದಲ್ಲಿ. ಅರ್ಥಾತ್ ಇಲ್ಲಿ ಹಣದ ವಿನಿಮಯ ಅತಿ ಕಡಮೆ. ಗಂಡಸರು ಬರೀ ಲಂಗೋಟಿಯಲ್ಲಿದ್ದರೆ ಹೆಂಗಸರು ಲಂಗೋಟಿ ಜೊತೆಗೆ ಸೀರೆಯನ್ನು ಮಾಮೂಲಾಗಿ ಉಡದೆ ಶಾಲಿನಂತೆ ಹೊದ್ದುಕೊಳ್ಳುತ್ತಾರೆ.

ದಿನಕ್ಕೊಂದು ಪದ : ಕಾಣ್, ಕಾಣು

ಕಾಣ್, ಕಾಣು (ಕ್ರಿ೦
ಕಂಡ್ಯ (ಭೂತಕೃ); ಕಂಡು (ಭೂತನ್ಯೂ); ಕಾಂಬ, ಕಾಣ್ಬ, ಕಾಬ (ಭವಿಕೃ).

೧. ನೋಡು; ಈಕ್ಷಿಸು
೨. ಭೇಟಿಯಾಗು; ಸಂದರ್ಶಿಸು
೩. ಎಣಿಸು; ಭಾವಿಸು; ತಿಳಿದುಕೋ; ಅರಿತುಕೊ
೪. ಹೊಂದು; ಪಡೆ
೫. ತೋರು; ಕಣ್ಣಿಗೆ ಬೀಳು; ಗೋಚರಿಸು

ಜಗನ್ನಾಥನ ತಬ್ಬಲಿ ಮಕ್ಕಳು

[ಈ ಸಾವಿನ ಸುದ್ದಿ ನೋಡಿ]

ಜೀವ ದಿಟ ಅನಿಸಲಿಲ್ಲವೇ ನಿನಗೆ?
ದೇವ ಸುಳ್ಳು ಅನಿಸಲಿಲ್ಲವೆ ನಿನಗೆ?
ನಂಬಿಕೆಯೇ ಎಲ್ಲ ಮೀರಿದ ಸತ್ಯ ನಿನಗೆ
ಬುಡವಿಲ್ಲದಿದ್ದರೂ ಅಲ್ಲವೆ?

ಟೈಮಿಗಿಲ್ಲ ಟೈಮ್ ಸೆನ್ಸು

ಕಾಲ ನಾವಂದುಕೊಂಡಂತೆ ಬಾರದು.ಅದಕ್ಕೆ ಆ ಕಾಲನ 'ಸಮಯ'ಕ್ಕೆ ಹೀಗೆ ಒಂದಿಷ್ಟು ಬೈಗುಳ ನೀಡುವತ್ತ..

ಟೈಮಿಗಿಲ್ಲ ಟೈಮ್ ಸೆನ್ಸು
ಸ್ವಲ್ಪ ಕೂಡ ಕಾಮನ್ ಸೆನ್ಸು ||

ನಾ ಖುಷಿಯಾಗಿದ್ದಾಗ ಓಡಿಹೋಗುತ್ತೆ
ದುಃಖದಲ್ಲಿದ್ರೆ ನಿಂತೇ ಬಿಡತ್ತೆ
ಖಾಲಿಯಾಗಿದ್ರೆ ಕೂತು ಊಟ ಮಾಡುತ್ತೆ
ಮಲಗಿದ್ರೆ ತಾನೂ ಮಲಗೇ ಬಿಡತ್ತೆ ||

ಟೈಮಿಗಿಲ್ಲ ಟೈಮ್ ಸೆನ್ಸು..

ಕನಸಿನ ಕನ್ಯ

ಕನಸಿನ ಕನ್ಯ

ರವಿಯ ರಮ್ಯತೆಯಲಿ ರಮಿಸಿರುವೆ ರತ್ನದಂತೆ
ಕವಿಯ ಕವಿತೆಯಲಿ ಕುಳಿತಿರುವೆ ಕರಗದಂತೆ
ದಿನದ ದಿನಚರಿಯ ಧರಿಸಿರುವೆ ಧರಿತ್ರಿಯಂತೆ
ಮನದ ಮಮತೆಯಲಿ ಮಲಗಿರುವೆ ಮಗುವಿನಂತೆ ||೧||

ಸುಧೆಯ ಸವಿಸಿರುವೆ ಸುಂದರ ಸಮುದ್ರದಂತೆ
ಹ್ರುದಯ ಹೊಮ್ಮಿಸಿರುವೆ ಹೊಸ ಹುಮ್ಮಸ್ಸಿನಂತೆ
ಚಿತ್ತವ ಚೆಲ್ಲಿರುವೆ ಚಿತ್ತಾರದ ಚಿತ್ರದಂತೆ

ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?

Openoffice.orgತನ್ನ ದೈನಂದಿನ ಕೆಲಸ ಕಾರ್ಯಗಳಿಗೆ ಪ್ರತಿನಿತ್ಯ ಕಂಪ್ಯೂಟರ್ ಅನ್ನ ಅವಲಂಬಿಸಿ ಕೊಂಡು ಬರಲಿಕ್ಕೆ ಸರ್ಕಾರಿ ಇಲಾಖೆಗಳು ಪ್ರಾರಂಭಿಸಿ ವರ್ಷಗಳು ಕಳೆದಿರಬಹುದು. ಅಂದಿನಿಂದ ಇಂದಿನವರೆಗೆ ಪತ್ರಗಳನ್ನ, ಇತರೆ ಕಡತಗಳನ್ನ ಸಂಪಾದಿಸಲಿಕ್ಕೆ ಸಮಾನ್ಯವಾಗಿ ಉಪಯೋಗಿಸಿ ಕೊಂಡು ಬಂದಿರುವ ತಂತ್ರಾಂಶ ಮೈಕ್ರೋ ಸಾಫ್ಟ್ ಆಫೀಸ್ ಅಲ್ವೇ? ಇದನ್ನ ಮೈಕ್ರೋಸಾಫ್ಟ್ ನಿಂದ ಕೊಂಡು ಉಪಯೋಗಿಸಿದವರನ್ನ ನಾನು ಕಂಡದ್ದೇ ಇಲ್ಲ. ಸರ್ಕಾರ ಇದನ್ನ ಉಪಯೋಗಿಸಲಿಕ್ಕೆ ಪ್ರತಿಯೊಂದು ಕಂಪ್ಯೂಟರ್ಗೆ ಲೈಸೆನ್ಸ್ ಕೊಂಡುಕೊಳ್ಳ ಬೇಕಾಗುತ್ತದೆ. ಸ್ವಲ್ಪ ಲೆಕ್ಕ ಹಾಕಿ, ಒಂದೊಂದು ಸರ್ಕಾರಿ ಆಫೀಸಿಗೆ ಈ ತಂತ್ರಾಂಶ ಕೊಳ್ಳಬೇಕೆಂದರೆ ಲಕ್ಷಗಟ್ಟಲೆ ಹಣ ಸುರಿಯ ಬೇಕಾಗುತ್ತದೆ. ಹಣ ಎಲ್ಲಿಂದ ಬರತ್ತೆ? ಇದೆಯಲ್ಲ ನಾನು, ನೀವು ಕೊಟ್ಟ ಟ್ಯಾಕ್ಸ್ ಹಣ. 

ಈ ರೀತಿ ಹೊರ ದೇಶದ ಒಂದು ಕಂಪೆನಿಗೆ ಹರಿದು ಹೋಗೋ ಹಣವನ್ನ ತಡೆಯೋದ್ ಹ್ಯಾಗೆ? ಟ್ಯಾಕ್ಸ್ ಹಣ ಉಳಿಸಿ ಅದನ್ನ ಅಭಿವೃದ್ದಿ ಕಾರ್ಯಗಳಿಗೆ ಬಳಸೋದ್ ಸಾಧ್ಯಾನಾ? ಕೆಲ ತಿಂಗಳುಗಳ ಹಿಂದೆ ಕರ್ನಾಟಕ ಸರ್ಕಾರ ಮೈಕ್ರೋಸಾಫ್ಟ್ ನೊಂದಿಗೆ ಅದರ ತಂತ್ರಾಂಶಗಳನ್ನ ಉಪಯೋಗಿಸುವುದಕ್ಕೆ ಒಪ್ಪಂದವನ್ನ ಮಾಡಿಕೊಳ್ಳ ಹೊರಟಾಗ ಅದನ್ನ ವಿರೋಧಿಸಿ ಒಂದು ಹೋರಾಟವನ್ನ ಪ್ರಾರಂಭಿಸಿದ್ದೆವು. ವಿದೇಶಿ ತಂತ್ರಾಂಶದಿಂದಾಗ ಎದುರಾಗ ಬಹುದಾದ  ತೊಂದರೆಗಳನ್ನ ಎಲ್ಲರ ಮುಂದಿಟ್ಟಿದ್ದೆವು. ಸೆಕ್ಯೂರಿಟಿಯ ಮಟ್ಟಿಗೆ ಕೂಡ ಹಿಂದೆ ನೆಡೆದ ಲಾಜಿಕ್ ಬಾಂಬ್ ಘಟನೆಗಳನ್ನ ವಿವರಿಸಿದ್ದೆವು.