ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಎಸ್. ಎ. ಪಿ. (ಫ಼ಿಕೋ)

ಎಸ್. ಎ. ಪಿ. (ಫ಼ಿಕೋ) ತಂತ್ರಜ್ನಾನ ಇ. ಆರ್. ಪಿ ಬಗ್ಗೆ.

ಇದೊಂದು ಇ.ಆರ್.ಪಿ. ಪ್ಯಾಕೇಜ್, ಒರಾಕಲ್, ಪೀಪಲ್ ಸಾಫ಼್ಟ್, ಜೆಡಿ ಮಾರ್ಗನ್ ತರಹವೇ, ಇದರ ಬಗ್ಗೆ ನಿಮಗೇನು ಗೊತ್ತು. ಕೆಲಸಗಳು ಎಲ್ಲೆಲ್ಲಿವೆ. ನಿಮ್ಮ ಪ್ರಶ್ನೆಗಳೇನು ? ಯಾವ ಉತ್ತರ ಸರಿ, ಇನ್ನೂ ಹಲವು.

ದೀಪಾವಳಿ - ಚೆಲ್ಲುತಿದೆ ಮನಕೆ ಬೆಳಕು

ಮರಳಿ ಬಂದಿವುದು ದೀಪಾವಳಿ
ಹಚ್ಚಲೆಂದು ಮನೆ ಮಂದಿಯೆಲ್ಲ ದೀಪ
ಚೆಲ್ಲಲಿ ದೀಪದ ಬೆಳಕು ಎಲ್ಲರ ಬಾಳಲ್ಲಿ
ತರಲಿ ಇದು ಹರುಷವ ಎಲ್ಲರ ಮನದಲ್ಲಿ
ಬೆಳಕಾಗಲಿ ಜಗವೆಲ್ಲ ಬೆಳಗಲಿ ಬದುಕೆಲ್ಲ
ಹಚ್ಚೋಣ ದೀಪ ಕಳೆದುಕೊಳ್ಳೋಣ ಪಾಪ
ಉರಿಯಲಿ ದೀಪ ಸದಾ ಎಲ್ಲ ಮನೆಗಳಲ್ಲಿ
ಇದು ಕತ್ತಲೆ ಹೊಡೆದೊಡಿಸೋ ದೀಪ
ಬೆಳಕು ಚೆಲ್ಲಿ ದಾರಿ ತೋರಿಸೋ ದೀಪ

ಕೈ ಜಾರಿದ ಹುಡುಗಿ

ಮರೆತು ಹೋಗು ಮನಸ್ಸಿನಿಂದ
ಮರೆಯಾಗು ಕನಸ್ಸಿನಿಂದ
ಕಣ್ಣೀರು ನಿನ್ನಿಂದ

ಪ್ರೀತಿಯ ಬೆಂಬಲ ನನ್ನ ಮಾತಿನಲ್ಲಿ
ನೋವಿನ ಹಂಬಲ ನನ್ನ ಹ್ನದಯದಲ್ಲಿ
ಕನಸುಗಳೇ ಇಲ್ಲವೆ ನಿನ್ನ ಮನಸ್ಸಿನಲ್ಲಿ
ಕರುಣೆಯೇ ಇಲ್ಲವೆ ಪ್ರೇಮಿಯಲ್ಲಿ

ಮಾತಿನ ಮಾತು ನೀ ಕೊಟ್ಟೆ
ಮಾತನ್ನೇ ಮರೆತು ಮರೆಯಾದೆ
ನನ್ನ ಹ್ನದಯವ ತೊರೆದು ದೂರಾದೆ
ಪ್ರೀತಿಸಿ ಪ್ರೀತಿಯ ಉಳಿಸೋ ಪ್ರೇಮಿನೀನಲ್ಲ

ಕೆ.ಎಸ್.ನ.

ಪ್ರೀತಿಯ ಮೊರೆ ಕೇಳಿ, ಆತ್ಮದ ಮೊರೆ ಕೇಳಿ ನೀನಿಲ್ಲಿ ಬಂದು ದೀಪ ಹಚ್ಚ. ಇದು ಕೆ.ಎಸ್. ನರಸಿಂಹಸ್ವಾಮಿಯವರ ನಾ ಕೇಳಿದ ಅತ್ಯುತ್ತಮ, ಹಾಗೂ ನನಗೆ ಬಲು ಮೆಚ್ಚಿಗೆಯಾದ ಗೀತೆ, ನಿಮ್ಮಲ್ಲೂ ಇದೇ ತರಹದ ನೂರಾರು ಭಾವಗೀತೆಗಳಿರಬಹುದು.

ಶಾಸ್ತ್ರೀಯ ಭಾಷೆ ಸ್ತಾನಮಾನವನ್ನು ಕನ್ನಡಕ್ಕೆ ನೀಡಬೇಕೆಂದು ಆಗ್ರಹಿಸಿ ರಾಜಭವನದ ಮುತ್ತಿಗೆ - ಕ.ರ.ವೇ.

ಶಾಸ್ಟ್ರೀಯ ಭಾಷೆ ಸ್ಥಾನಕ್ಕೆ ಬೇಕಾದ ಎಲ್ಲಾ ಅಹ೯ತೆಗಳು ಕನ್ನಡಕ್ಕೆ ಇದ್ದರೂ ಕೇಂದ್ರ ಸರಕಾರ ಅನುಸರಿಸುತ್ತಿರುವ ವಿಳಂಬ ನೀತಿಯನ್ನು ವಿರೋಧಿಸಿ ನಡೆಸುತ್ತಿರುವ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಸಾವಿರಾರು ಕರವೇ ಕಾರ್ಯಕರ್ತರು ೨೪-೧೦-೨೦೦೮ ಬೆಳಿಗ್ಗೆ ೧೧ ಕ್ಕೆ ಸರ್ಕಾರಿ ಕಲಾ ಕಾಲೇಜು ಮೈದಾನದಿಂದ ಹೊರಟು ರಾಜಭವನಕ್ಕೆ ಮುತ್ತಿಗೆ ಹಾಕಲಿದ್ದಾರ

ಅಜ್ಜಿ ಮತ್ತು ಮುಗ್ಧ ಮನಸ್ಸು

ಹೇಳ್ತಾರೆ, ಮುಗ್ಧತೆಗೆ ಇನ್ನೊಂದು ಹೆಸರೇ ಮಕ್ಕಳು ಎಂದು. ಅದು ಅಕ್ಷರಸಹ ನಿಜ. ಅವರಾಡುವ ಮಾತುಗಳನ್ನು ಕೇಳುತ್ತ ಇದ್ದರೆ ನೋವೆಲ್ಲ ಮರೆತು ಹೋಗುತ್ತದೆ.ಈಗಂತೂ ಬದಲಾದ ಕಾಲದಲ್ಲಿ ಮಕ್ಕಳ ಮಾತು ಕೇಳಲು ಸಿಗುವುದೇ ಅಪರೂಪ. ಹಿಂದಿನ ಹಳ್ಳಿ ಜೀವನದಲ್ಲಿ ಅಕ್ಕಪಕ್ಕದ ಮನೆ ಮಕ್ಕಳೋ, ಇಲ್ಲ ಸಂಬಂಧಿಕರ ಮಕ್ಕಳೋ ಆಡುವ ಮಾತುಗಳನ್ನು, ಕೀಟಲೆಗಳನ್ನು ನೋಡಿ ಸಂತಸಪಡುತಿದ್ದೆವು.

ತಲೆಗೆ ಕಸರತ್ತು

ಇಬ್ಬರು ಹುಡುಗರಲ್ಲಿ ನಿಮ್ಮ ವಯಸು ಎಷ್ಟೆಂದು ಕೇಳಿದಕ್ಕೆ ಅವರು ಸರಿಯಾದ ವಯಸ್ಸು ಹೇಳಿದರು. ನಂತರ ಇಬ್ಬರ ವಯಸ್ಸನ್ನು ಕೂಡಿಸಿ ಹೇಳಿ ಎಂದರೆ ಮಾತ್ರ ಒಬ್ಬ ಕಳೆದು ೪೪ ಎಂದ ಇನ್ನೊಬ್ಬ ೧೨೮೦ ಎಂದು ಗುಣಿಸಿ ಹೇಳಿದ. ಹಾಗಾದರೆ ಅವರಿಬ್ಬರ ವಯಸೆಷ್ಟು?

ತಲೆಗೆ ಕಸರತ್ತು

ಲಕ್ಷ್ಮಿಯ ಹಣದ ಚೀಲದಲ್ಲಿ ೭೦೦ ರೂ.ಗಳಿವೆ. ಅದರಲ್ಲಿ ೨೫ ಪೈಸೆ ಪಾವಲಿಗಳು, ೫೦ ಪೈಸೆಯ ಪಾವಲಿಗಳು ಮತ್ತು ೧ ರೂ. ಪಾವಲಿಗಳು. ಎಲ್ಲಾ ಪಾವಲಿಗಳು ಒಂದಕ್ಕೊಂದು ಸಮವಾಗಿದೆ. ಪ್ರತಿಯೊಂದು ಎಷ್ಟು ಪಾವಲಿಗಳು ಹೇಳುವಿರಾ?