ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ
ರೈಲ್ವೆ ಗ್ರೂಪ್ ಡಿ ನೇಮಕಾತಿ ಬಗ್ಗೆ ನನಗನಿಸಿದ್ದು...
ಕ.ರ.ವೇ. ಜನರನ್ನು ಈ ನೇಮಕಾತಿ ಬಗ್ಗೆ ಎಚ್ಚರಿಸುವುದರಲ್ಲಿ ಅದ್ಭುತ ಕೆಲಸ ಮಾಡಿದೆ ಆದರೂ ಇದು ಹಲವಾರು ನಿಟ್ಟಿನಲ್ಲಿ ಸೋತಿದೆ.
ಕ.ರ.ವೇ, ಒಂದೇ ಅಲ್ಲ, ಎಲ್ಲ ಕನ್ನಡ ಸಂಘಗಳೂ, ನಮ್ಮ ಸರ್ಕಾರ, ಎಂ.ಪಿ. ಗಳೂ, ಒಟ್ಟಾಗಿ ಎಲ್ಲ ಕನ್ನಡಿಗರೂ ಎಂದರೂ ತಪ್ಪೇನಿಲ್ಲ...
ಲಿನಕ್ಸಾಯಣ - ೨೫ - ಲಿನಕ್ಸ್ ನಲ್ಲಿ ಕನ್ನಡ. ಹ್ಯಾಗೆ?
ಈಗ ತಾನೆ ಉಬುಂಟು ಇನ್ಸ್ಟಾಲ್ ಮಾಡ್ಕೊಂಡೆ ಆದ್ರೆ ಇದರಲ್ಲಿ ಕನ್ನಡ ಹ್ಯಾಗೆ ಟೈಪ್ ಮಾಡೋದು. ಕನ್ನಡ ವೆಬ್ ಸೈಟ್ ಗಳೇ ನೆಟ್ಟಗೆ ಕಾಣ್ತಿಲ್ಲವಲ್ಲ ಅಂತ ತಲೆ ಮೇಲೆ ಕೈ ಇಟ್ಕೊಂಡು ಕುಂತ್ಕೊಂಡಿದೀರಾ?
ಬನ್ನಿ ಹ್ಯಾಗೆ ಕನ್ನಡನ ಲಿನಕ್ಸ್ ನಲ್ಲಿ ಎನೇಬಲ್ ಮಾಡ್ಕೊಳ್ಳೋದು ಅನ್ನೊದನ್ನ ತಿಳಿಸ್ತೇನೆ.
ಇದಕ್ಕು ಮುಂಚೆ, ಉಬುಂಟುನಲ್ಲಿ ಕನ್ನಡವನ್ನ ಹೇಗೆ ತರಿಸೋದು ಅಂತ ಒಂದು ಲೇಖನ ಬರೆದಿದ್ದೆ.
ಲಿನಕ್ಸಾಯಣ - ೧೬ - ಉಬುಂಟು ನನ್ನ ಭಾಷೆಯಲ್ಲಿ? ಇದನ್ನ ನೋಡಿದ್ರೆ ನೀವು ಮಾಡಬೇಕಿರೋ ಮೊದಲನೆ ಕೆಲಸ ನೆನಪಾಗತ್ತೆ. ಇಲ್ಲಿಂದಲೇ ನಾನು ಕನ್ನಡದ ಫಾಂಟು ಇತ್ಯಾದಿಗಳನ್ನ ಇನ್ಸ್ಟಾಲ್ ಮಾಡ್ಲಿಕ್ಕೆ ಶುರು ಮಾಡೋದು.
ವ್ಯತ್ಯಾಸವೇನು...?
ನಾನು ಆಗಾಗ ಗಮನಿಸುತ್ತಿರುತ್ತೇನೆ ,ಕೆಲವರನ್ನು "software programmer"ಗಳೆನ್ನುತ್ತಾರೆ,.ಇನ್ನು ಕೆಲವರನ್ನು "software developer"ಗಳೆನ್ನುತ್ತಾರಲ್ಲ ಇವರ ನಡುವಿನ ವ್ಯತ್ಯಾಸವೇನು ...?
- Read more about ವ್ಯತ್ಯಾಸವೇನು...?
- Log in or register to post comments
ಠಕ್ಕರನ್ನು ಹೆಕ್ಕಿ ಹಿಡಿಯುತ್ತಿರುವ ಟೆಕ್ಕಿ!
ಪ್ರತಾಪ ಸಿಂಹ ಅವರ web site ನಲ್ಲಿ ಈ ಲೇಖನ ಸಿಕ್ಕಿತು.
http://pratapsimha.com/bettale-jagattu/sunny/
ಅಲ್ಲಿರುವ ಅಂಕಣವನ್ನು copy-paste ಮಾಡಬಹುದೋ ಇಲ್ಲವೋ ಗೊತ್ತಿಲ್ಲ ಅದಕ್ಕೇ ಲಿಂಕ ಕೊಟ್ಟಿದ್ದೀನಿ.
ವಿನಾಯಕ
- Read more about ಠಕ್ಕರನ್ನು ಹೆಕ್ಕಿ ಹಿಡಿಯುತ್ತಿರುವ ಟೆಕ್ಕಿ!
- 1 comment
- Log in or register to post comments
ಮಳೆಹನಿಯ ಸು೦ದರ ಜೀವನ.
ಎಲ್ಲಿ ಹುಟ್ಟಿದೆ ತಿಳಿಯದು ನನಗೆ,
ಹೇಗೆ ಹೀಗಾದೆ ಅದೂ ತಿಳಿಯದು ನನಗೆ,
ತೇಲಾಡುತ ತೂರಾಡುತ ಬ೦ದೆ ನಾನು.
ನನ್ನಹಾಗೆ ಕಾಣುವವರೊಡನೆ ಜೊತೆಗೂಡಿದೆ.
ಎಲ್ಲಿ ನಮ್ಮ ಇ ಪಯಣ ?
ಯಾರಿಗೂ ಮಾತಾಡುವ ಮನಸ್ಸಿಲ್ಲಾ,
ಮನದಲ್ಲಿ ಎನೂ ದುಗುಡ ಆತ೦ಕ.
ಸುತ್ತಲು ಬೆಟ್ಟದ ಸಾಲು
ಹಸಿರನ ಹೊತ್ತ ಧರೆಯು
ಹಸಿರ ಬಿಟ್ಟು ಕಾಣದು ಮತ್ತೆನು..
ಸುತ್ತ ಗೆಳೆಯರ ಸಾ೦ಕ್ರಾಮಿಕ ನಗು,
- Read more about ಮಳೆಹನಿಯ ಸು೦ದರ ಜೀವನ.
- Log in or register to post comments
ಗೋಮೂತ್ರ, ಗೋಹತ್ಯೆ, ಮತಾಂತರ - ಅವಧಿ, ಜೋಗಿ, ಕೆಂಡಸಂಪಿಗೆ
ಕನ್ನಡದ ಅಂತರ್ಜಾಲ ಪ್ರಪಂಚ ಬದಲಾದ ಕಾಲಘಟ್ಟವನ್ನು ದಾಖಲಿಸುತ್ತ ಎರಡು ವಾರಗಳ ಹಿಂದೆ "ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ," ಎಂಬ ಬ್ಲಾಗ್ ಲೇಖನ ಬರೆದಿದ್ದೆ. ಆ ಲೇಖನದಲ್ಲಿ ಪ್ರಾಸಂಗಿಕವಾಗಿ ಮಂಗಳೂರಿನ ಡಾ. ಕಕ್ಕಿಲಾಯರ "ಆರೋಗ್ಯ ಸಂಪದ" ತಾಣವನ್ನು ಉದಾಹರಿಸಿದ್ದೆ. ಡಾ. ಕಕ್ಕಿಲಾಯರ ಹಲವಾರು ಲೇಖನಗಳನ್ನು ಓದಿದ್ದ ನನಗೆ ಅವರ ಇತ್ತೀಚಿನ ಲೇಖನವಾದ "ಗೋಮಯ, ಗೋಮೂತ್ರ: ಔಷಧಗಳೋ, ಅಪಮಾನವೋ?" ನಮ್ಮ ಸದ್ಯದ ಸ್ಥಿತಿಗೆ ಬಹಳ ಪ್ರಸ್ತುತವಾಗಿ ಕಂಡಿತು. ಖುಷಿಯ ವಿಚಾರ ಏನೆಂದರೆ, ಇದಾದ ನಂತರ ಅವಧಿಯವರೂ ಕಕ್ಕಿಲಾಯರವರ ಈ ಲೇಖನವನ್ನು ಅವರ ಬ್ಲಾಗಿನಲ್ಲಿಯೂ ಪ್ರಕಟಿಸಿ ಅದಕ್ಕೆ ಅಂತರ್ಜಾಲದ ಕನ್ನಡ ಓದುಗರಲ್ಲಿ ವಿಸ್ತೃತವಾದ ವೇದಿಕೆ ಒದಗಿಸಿಕೊಟ್ಟರು. ತನ್ನ ಓದುಗ ವಲಯದಲ್ಲಿ ಜನಪ್ರಿಯವಲ್ಲದ ಇಂತಹ ಲೇಖನವನ್ನು ಚರ್ಚೆಗೆ ತೆರೆದಿಟ್ಟ ಅವಧಿಯ ಕಾರ್ಯ ಶ್ಲಾಘನೀಯವಾದದ್ದು.
ಇವತ್ತು ಬೆಳಿಗ್ಗೆಯ "ಕೆಂಡಸಂಪಿಗೆ" ಮುಖಪುಟ ನಿಜಕ್ಕೂ ಶಾಕ್ ಉಂಟುಮಾಡಿತು. ಪ್ರತಿದಿನವೂ ಓದುವ ಮತ್ತು ಪ್ರತಿದಿನವೂ ಬರೆಯುವ ಕನ್ನಡದ ಇತ್ತೀಚಿನ ಜನಪ್ರಿಯ ಲೇಖಕ ಜೋಗಿ ಇಲ್ಲಿಯತನಕ ಎಲ್ಲರ ಪರವೂ ಇರುವಂತೆ ಬರೆದುಕೊಂಡು ಬಂದವರು. ಕವಿ, ಕವಿತೆ, ಕವಿಸಮಯ, ಕತೆ, ಕಾದಂಬರಿ, ಸಾಹಿತ್ಯ್ಯ, ರಸಾನುಭವ, ಇಂತಹ ಯಾರಿಗೂ ನೋವುಂಟು ಮಾಡದ, ಆದರೆ ಓದುಗರನ್ನು ಯಾವುದೊ ಒಂದು ತೃಪ್ತಿಯಲ್ಲಿ ನಿಲ್ಲಿಸುವ ಬರವಣಿಗೆ ಮಾಡಿಕೊಂಡು ಬಂದವರು. ಮತ್ತು ಅದೇ ಕಾರಣಕ್ಕೆ ಅಪಾರ ಓದುಗರನ್ನು (ವಿಶೇಷವಾಗಿ ಯುವಓದುಗರನ್ನು) ಸೃಷ್ಟಿಸಿಕೊಂಡವರು. ವಿವಾದಾಸ್ಪದ ವಿಷಯಗಳಿಂದ ದೂರ ಉಳಿದವರು. ಆದರೆ ಅವರು ತಮ್ಮ ಇವತ್ತಿನ ಲೇಖನದಲ್ಲಿ ಒಂದಲ್ಲ, ಹಲವಾರು ವಿಷಯಗಳ ಮೇಲೆ ತಮ್ಮ ಖಚಿತ ನಿಲುವುಗಳನ್ನು ಜಾಹೀರು ಮಾಡಿಬಿಟ್ಟಿದ್ದಾರೆ. ಗೋಮೂತ್ರದ craze ಗೆ ಹಿನ್ನೆಲೆ, "ಗೋವಿನ ಪಾವಿತ್ರ್ಯವನ್ನು ಸಾರಲು ಗೋಮೂತ್ರಕ್ಕೆ ವೈದ್ಯಕೀಯ ಗುಣಗಳನ್ನು ಆರೋಪಿಸಿರುವುದು" ಎಂದು ಬರೆದಿದ್ದಾರೆ. ಬಹುಶ: ಭೈರಪ್ಪನವರ ಇತ್ತೀಚಿನ ಅಭೂತಪೂರ್ವ-ಸತ್ಯಸ್ಯಸತ್ಯ-ದಾರ್ಶನಿಕ-ಬೋಲ್ಡ್-ಸುದೀರ್ಘ ತಪಸ್ವಿನ-ಕ್ರಾಂತಿಕಾರಿ-ಸಂಶೋಧನಾತ್ಮಕ-ಸತ್ಯದ ಪ್ರಪ್ರಥಮ ಅನಾವರಣ-ಮಹಾನ್ ಆದ ಮತಾಂತರದ ಮೇಲಿನ ಅಗ್ರ-ಲೇಖನಕ್ಕೆ ಪ್ರತಿಕ್ರಿಯಿಸುತ್ತ, ಪರೋಕ್ಷವಾಗಿ ಎನ್ನುವುದಕ್ಕಿಂತ ನೇರವಾಗಿಯೆ, ಭೈರಪ್ಪನವರನ್ನು "ನೀವು ಮನುಷ್ಯರಂತೆ ಕಾಣಿಸುವುದಿಲ್ಲ," ಎಂದುಬಿಟ್ಟಿದ್ದಾರೆ. ಹೀಗೆ ಹೇಳುವ ಮೂಲಕ ಜೋಗಿ ಒಂದೇ ದಿನದಲ್ಲಿ ತಮ್ಮ ಅರ್ಧಕ್ಕರ್ಧ ಅಭಿಮಾನಿಗಳನ್ನು ಕಳೆದುಕೊಂಡು ಬಿಟ್ಟಿದ್ದಾರೆ ಎಂದರೆ ಅದು ಉತ್ಪ್ರೇಕ್ಷೆ ಅಲ್ಲ ಎಂದುಕೊಳ್ಳುತ್ತೇನೆ. ಅದಕ್ಕೆ ಕೆಲವು ಸಾಕ್ಷಿಗಳು ಆ ಲೇಖನಕ್ಕೆ ಈಗಾಗಲೆ ಬಂದಿರುವ ಪ್ರತಿಕ್ರಿಯೆಗಳಲ್ಲಿಯೆ ಇದೆ. ಕರ್ನಾಟಕದ ಇತ್ತೀಚಿನ ಬೆಳವಣಿಗೆಗಳಿಂದ ಏನಾಗುತ್ತಿದೆ ಅಂದರೆ, people, especially writers, will not have an option to be neutral. They will have to choose between right and wrong.
ಪುಣ್ಯಪುರುಷರೂ, ಸಂತರೂ ಆದವರ ಸನ್ನಿಧಿಯಲ್ಲಿ ಒಬ್ಬ ಮನುಷ್ಯ "ಈ ತಪಸ್ವಿಗಳು ಶಾಪ ಕೊಟ್ಟರು. ಆ ಧರ್ಮದ್ರೋಹಿಗಳು ಬೀದಿಗೆ ಬಿದ್ದರು," ಎಂದುಬಿಟ್ಟ. ಸಂತರು ಗಾಬರಿಬಿದ್ದರು. ನಮ್ಮ ಪುರಾಣಗಳಲ್ಲಿ ಒಂದು ಕಲ್ಪನೆ ಇದೆ. ಅದು, "ಯಾರಿಗಾದರೂ ಕೆಟ್ಟದು ಬಯಸಿದರೆ, ಅಂದರೆ ಶಾಪ ಕೊಟ್ಟರೆ, ಕೊಟ್ಟವರ ತಪ:ಶಕ್ತಿ ಕರಗಿ ಬಿಡುತ್ತದೆ," ಎನ್ನುವುದು. ಹಾಗಾಗಿಯೆ, ಪುರಾಣಗಳಿಂದಲೆ ಹೊಟ್ಟೆಹೊರೆಯುವ ಆ ಸಂತರು ಗಾಬರಿಬಿದ್ದದ್ದು. ಪ್ರಜಾರಾಜ್ಯ ಎಂಬ ಈ ಕಲಿಕಾಲದಲ್ಲಿ ತಮ್ಮ ತಪ:ಶಕ್ತಿ ಕಳೆದುಕೊಳ್ಳಲು ಯಾರು ಇಷ್ಟಪಡುತ್ತಾರೆ, ಅಲ್ಲವೆ? ಜೊತೆಗೆ, ಎದ್ದವರು ಬೀಳುವ, ಬಿದ್ದವರು ಮೇಲೆ ಏಳುವ ಕಾಲ ಇದು. ಅದಕ್ಕಾಗಿಯೆ ಸಂತರು "ಶಾಂತಂ ಪಾಪಂ, ನಾನು ಯಾರಿಗೂ ಶಾಪ ಕೊಡಲಿಲ್ಲ," ಎಂದರಂತೆ. ಪಾಪ ಆ ಸಂತರ ಪರವಾಗಿ ಸುಳ್ಳುಸುಳ್ಳೆ ಏನನ್ನೊ ಹೇಳಿಬಿಟ್ಟ ರಾಮಾನುಯಾಯಿ "ಯದ್ವಾ-ತದ್ವಾ ಈಶ್ವರಪ್ಪ !!" ಬಗ್ಗೆ "ಸುದ್ದಿ ಮಾತು" ಬ್ಲಾಗಿನಲ್ಲಿ ಲೇಖನವೊಂದು ಪ್ರಕಟವಾಗಿತ್ತು. ನಾಲ್ಕೈದು ವರ್ಷಗಳ ಹಿಂದೆ ಇದೇ ಈಶ್ವರಪ್ಪನವರು ಗೋಮಾಂಸ ಭಕ್ಷಕರ ನಾಲಿಗೆ ಸೀಳುವುದಾಗಿ ಹೇಳಿದ್ದರು. ಆಗ ಸಕಾರಣವಾಗಿಯೆ ಭಯಭೀತನಾಗಿದ್ದ ನಾನು ಏನೇನೊ ಕಾರಣಗಳನ್ನು ಕೊಟ್ಟುಕೊಂಡು ನಿರೀಕ್ಷಣಾ ಜಾಮೀನು ಹಾಕಿಕೊಂಡಿದ್ದೆ. ಆ ನಿರೀಕ್ಷಣಾ ಜಾಮೀನು ದಟ್ಸ್‌ಕನ್ನಡದಲ್ಲಿ ಪ್ರಕಟವಾಗಿತ್ತು. ಬಹುಶಃ ಆ ತಾಣದಲ್ಲಿನ ತಾಂತ್ರಿಕ ಸುಧಾರಣೆಗಳಿಂದಾಗಿ ಎರಡು ಮೂರು ವರ್ಷಗಳ ಹಿಂದಿನ ಲೇಖನಗಳು ಅಲ್ಲಿ ಈಗ ಸಿಗುತ್ತಿಲ್ಲ. ಅದಕ್ಕಾಗಿಯೆ ಆ ಜಾಮೀನನ್ನು ಇಲ್ಲಿ ಈಗ ಹಾಕಿಕೊಳ್ಳುವ ಮೂಲಕ
ಕ್ಷಮೆಯಾಚಿಸುತ್ತ ...
ಅಮ್ಮ ಎನ್ನುವ ಶೀರ್ಷಿಕೆಯಲ್ಲಿ ತಾಯಿಯ ಬಗ್ಗೆ ಕವನ ಬರೆದಿದ್ದೆ. ಕಾರಣಾಂತರಗಳಿಂದ ಈ ಕವನವನ್ನು ಸಂಪದದಿಂದ ತೆಗೆಯಬೇಕಾಗಿದೆ. ಈ ಹಾಡನ್ನು ಸಿನಿಮಾ ಡೈರೆಕ್ಟರ್ ಒಬ್ಬರು ಕೇಳಿರುವುದರಿಂದ ಹಾಗು ಅವರು ಈ ಹಾಡು ಎಲ್ಲು ಪ್ರಕಟಿಸಬಾರದು ಎಂದು ಹೇಳಿರುವುದರಿಂದ ಸಂಪದದಿಂದ ತೆಗೆದಿದ್ದೇನೆ. ದಯವಿಟ್ಟು ಕ್ಷಮಿಸಿ. ಈ ಹಾಡನ್ನು ನೀವೆಲ್ಲರೂ ಆದಷ್ಟು ಬೇಗ ಕೇಳುವಂತಾಗಲಿ
- Read more about ಕ್ಷಮೆಯಾಚಿಸುತ್ತ ...
- 1 comment
- Log in or register to post comments
ಪ್ರಶ್ನೆಗಳಿಗೆ ಉತ್ತರಿಸದ ಪಲಾಯನವಾದ
ಎರಡು ರೀತಿಯ ವ್ಯಕ್ತಿಗಳು ಈ ವಾರ ಅನಾವರಣಗೊಂಡಿದ್ದಾರೆ. ಒಂದು ಎಸ್.ಎಲ್. ಭೈರಪ್ಪ. ಇನ್ನೊಂದು ನಮ್ಮ ಸೋ ಕಾಲ್ಡ್ ಬುದ್ಧಿಜೀವಿಗಳು ಮತ್ತು ಪತ್ರಕರ್ತರು.
- Read more about ಪ್ರಶ್ನೆಗಳಿಗೆ ಉತ್ತರಿಸದ ಪಲಾಯನವಾದ
- 9 comments
- Log in or register to post comments
ಪ್ರಶ್ನೆಗಳಿಗೆ ಉತ್ತರಿಸದ ಪಲಾಯನವಾದ
ಎರಡು ರೀತಿಯ ವ್ಯಕ್ತಿಗಳು ಈ ವಾರ ಅನಾವರಣಗೊಂಡಿದ್ದಾರೆ. ಒಂದು ಎಸ್.ಎಲ್. ಭೈರಪ್ಪ. ಇನ್ನೊಂದು ನಮ್ಮ ಸೋ ಕಾಲ್ಡ್ ಬುದ್ಧಿಜೀವಿಗಳು ಮತ್ತು ಪತ್ರಕರ್ತರು.
- Read more about ಪ್ರಶ್ನೆಗಳಿಗೆ ಉತ್ತರಿಸದ ಪಲಾಯನವಾದ
- 7 comments
- Log in or register to post comments