ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನೀನೆ ನೀನೆ

ನನಗೆಲ್ಲಾ ನೀನೆ - ಅಲ್ಲಾ!!! ನಾನು ಬರೆಯ ಹೊರಟಿರುವುದು ಈ ಹಾಡಿನ ಬಗ್ಗೆ ಖಂಡಿತ ಅಲ್ಲ! ಬರೆಯುತ್ತಿರುವುದು, ಭಾರತ ಮತ್ತು ವಿದೇಶದಲ್ಲಿ ಏಕಕಾಲದಲ್ಲಿ ಬಿಡುಗಡೆಯಾದ "ನೀನೆ ನೀನೆ" ಚಿತ್ರದ ಬಗ್ಗೆ. ಚಿತ್ರಕಥೆ ಕೇಳಲಿಕ್ಕೆ ಇಷ್ಟವಿಲ್ಲಾಂದ್ರೆ ದಯವಿಟ್ಟು ಮುಂದೆ ಓದಬೇಡಿ.

ಲಿನಕ್ಸಾಯಣ - ೧೦ - ಲಿನಕ್ಸ್ ನಲ್ಲಿ ಇಂಟರ್ನೆಟ್ ಎಕ್ಸ್ ಪ್ಲೋರರ್

ಲಿನಕ್ಸ್ ನಲ್ಲಿ ವಿಂಡೋಸ್ ನ ಇಂಟರ್ನೆಟ್ ಎಕ್ಸ್ ಪ್ಲೋರರ್ ಬಳಸ್ಲಿಕ್ಕೆ ಸಾಧ್ಯವೇ? ಇದು ಎಲ್ಲರಲ್ಲಿರುವ ಸಾಮಾನ್ಯ ಸಂದೇಹ.

ವೆಬ್ ಸೈಟ್ ಗಳನ್ನ ಅಭಿವೃದ್ದಿಪಡಿಸುವ ಅನೇಕ ಸ್ನೆಹಿತರಿಗೆ ತಮ್ಮ ಕಂಪ್ಯೂಟರ್ ಅನ್ನ ವಿಂಡೋಸ್ ನಲ್ಲಿ ಬೂಟ್ ಮಾಡ್ಬೇಕು ಅಂದ್ರೆ ಸಂಕೋಚ ಅಥವಾ ಆಲಸ್ಯ.ನನಗಂತೂ ವಿಂಡೋಸ್ ನಲ್ಲಿ ನನ್ನ ಲ್ಯಾಪ್ ಟಾಪ್ ಬೂಟ್ ಮಾಡೋದು ದೊಡ್ಡ ಪ್ರಾಜೆಕ್ಟೇ ಸರಿ.

ಈ ರಗಳೆಗಳನ್ನ ಕಳೆದಿದ್ದು ವೈನ್ ಮತ್ತು ಅದರಿಂದ ನೆಡೆಯುವ ies4linux ಅನ್ನೋ ಈ ತಂತ್ರಾಂಶ.

ಸಿಂಹಾಸನ!

ಅಸಿಂಹಾಸನ
ಅಂಕ ೧
[ಕೈಲಾಸ ಲೋಕದಲ್ಲಿ ಈಶ್ವರ ಪಾರ್ವತಿ ಪಗಡೆಯಾಡುತ್ತಾ ಕುಳಿತಿದ್ದಾರೆ. ಗಣೇಶ ಒಳಗೆ ಬರುತ್ತಾನೆ]
ಗಣೇಶ:- ಮಾತಾ ಪಿತರೆ, ಬೆಳಗಿನ ನಮನಗಳನ್ನು ಸ್ವೀಕರಿಸಿ.
ಈಶ್ವರ:- ನಮ್ಮ ಆಶೀರ್ವಾದ ನಿನಗೆಂದೆಂದೂ ಇದೆ ಮಗು.
ಪಾರ್ವತಿ:-ಕಂದ ನಿನ್ನ ಮುಖ ಏಕೆ ಬಾಡಿದೆ? ಕಣ್ಣೆಲ್ಲಾ ಕೆಂಪಾಗಿದೆ. ಮೈಯಲ್ಲಿ ಆರಾಮವಿಲ್ಲವೇ?

ಶ್ರೀಬಸವೇಶ್ವರರ ವಚನಗಳು-2

ನೀನೊಲಿದರೆ ಕೊರಡು ಕೊನರುವುದಯ್ಯ
ನೀನೊಲಿದರೆ ಬರಡು ಹಯನಹುದಯ್ಯ
ನೀನೊಲಿದರೆ ವಿಷವಮೃತವಹುದಯ್ಯ
ನೀನೊಲಿದರೆ ಸಕಲ ಪಡಿಪದಾರ್ಥ ಇದಿರಲಿಪ್ಪವು
ಕೂಡಲಸಂಗಮದೇವ

ನೀರಿಂಗೆ ನೈದಿಲೆಯೇ ಶೃಂಗಾರ
ಊರಿಂಗೆ ಅಕನೆಯೇ ಶೃಂಗಾರ
ಸಮುದ್ರಕ್ಕೆ ತೆರೆಯೇ ಶೃಂಗಾರ
ನಾರಿಗೆ ಗುಣವೇ ಶೃಂಗಾರ
ಗಗನಕ್ಕೆ ಚಂದ್ರಮನೇ ಶೃಂಗಾರ
ನಮ್ಮ ಕೂಡಲಸಂಗಮನ ಶರಣರಿಗೆ
ನೊಸಲ ವಿಭೂತಿಯೇ ಶೃಂಗಾರ

ಈ ಮಗುವನ್ನು ಪೋಷಿಸುತ್ತಿರಲ್ಲ?

ಕನ್ನಡದ ಒಂದು ಸಮಾಜಿಕ ಸಂಪರ್ಕ ಕಲ್ಪಿಸುವ ತಾಣವನ್ನು ನೋಡಿ ಖುಷಿಯಯಿತು. ನನ್ನ ಬಗ್ಗೆ ಹೇಳಬೇಕೇಂದರೆ ನಾನೊಬ್ಬ ಇಂಜಿನಿಯರಿಂಗ್ ವಿದ್ಯಾರ್ಥಿ. ಸಂಪದವನ್ನು ಆಕಸ್ಮಿಕವಾಗಿ ಕಂಡೆ, ಖುಷಿಯಾಯಿತು. ನಾವೆಲ್ಲ ಒಂದು ರೀತಿಯಲ್ಲಿ ಸಾಮಾನ ಮನಸುಳ್ಳ ಕನ್ನಡದವರು. ನಾನು ಇನ್ಮೇಲೆ ನಿಮ್ಮ ಜೊತೆ ಸೇರಲು ಇಷ್ಟಪಡುತ್ತೇನೆ.

ಮರಗಳ ಮಹತ್ವ

ಅಶ್ವತ್ಥಮೇಕಂ ಪಿಚುಮಂದಮೇಕಮ್
ನ್ಯಗ್ರೋಧಮೇಕಂ ದಶ ತಿಂತ್ರಿಣೀಶ್ಚ
ಕಪಿತ್ಥಬಿಲ್ವಾಮಲಕಾಮ್ರವೃಕ್ಷಾನ್
ಧರ್ಮಾರ್ಥಮಾರೋಪ್ಯ ಸ ಯಾತಿ ನಾಕಂ||

ಕನ್ನಡ ನಾಡಿಗೆ ಒಂದು ಅಯ್ ಅಯ್ ಟಿ(Indian Institute of Technology) ಬೇಕಲ್ಲವೆ?

ಈಗ ತಾನೆ ಒಂದು ಸುದ್ದಿ ನೋಡಿದೆ. ಅದರಲ್ಲಿ ಕನ್ನಡ ನಾಡಿನಲ್ಲಿ ಅಯ್ ಅಯ್ ಟಿ ಗಾಗಿ ಕೆಲವರು ದೆಲ್ಲಿ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರಂತೆ.
ನಮ್ಮ ನಾಡಿನಲ್ಲಿ ಇರುವುದು ಒಂದೆ  ಅಯ್ ಅಯ್ ಎಸ್ ಸಿ(Indian Institue of Scince IISc). ನಮ್ಮ ನಾಡಿನಲ್ಲಿ ಅದರಲ್ಲೂ ನಡು ಮತ್ತು ಬಡಗು ನಾಡಿನಲ್ಲಿ ಇಂತ ಯಾವ ಕಲಿಕೆಯ ಮತ್ತು ಅರಯ್ಯು ಮಾಡುವ ಕಲ್ಮನೆಗಳಿಲ್ಲ.

ಬಿಜೆಪಿಯ ಕಾಂಗ್ರೆಸ್ ರಾಜಕಾರಣ!

ಬಿಜೆಪಿಯ ಕಾಂಗ್ರೆಸ್ ರಾಜಕಾರಣ!

ಯಡಿಯೂರಪ್ಪನವರ ನೇತೃತ್ವದದಲ್ಲಿ ಸಚಿವ ಸಂಪುಟ ಪ್ರಮಾಣ ವಚನ ಸ್ವೀಕರಿಸುತ್ತಿದ್ದ ಸಮಾರಂಭದ ಸಂಭ್ರಮದಿಂದ ಸ್ವಲ್ಪ ಮತ್ತೇರಿದಂತಿದ್ದ ನನ್ನ ಸ್ನೇಹಿತರೊಬ್ಬರು, ಯಡಿಯೂರಪ್ಪ ನಿಜವಾಗಿ ಒಂದು ಒಳ್ಳೆಯ ಸರ್ಕಾರ ನೀಡಿದರೆ ಈ ಕಾಂಗ್ರೆಸ್ಸಿಗರು ಒಂದಿಪ್ಪತ್ತು ವರ್ಷ ಅಧಿಕಾರದ ಕಡೆ ಮುಖ ಕೂಡ ಹಾಕಿ ಮಲಗಲಾರರು ಎಂದಾಗ, ನನ್ನ ತುಟಿಗಳಲ್ಲಿ ನನಗೆ ಗೊತ್ತಿಲ್ಲದಂತೆಯೇ ಒಂದು ಮುಗುಳ್ನಗೆ ಹಾದು ಹೋಯಿತು! ಯಡಿಯೂರಪ್ಪನವರ ಕಷ್ಟ ಯಡಿಯೂರಪ್ಪನವರಿಗಷ್ಟೇ ಗೊತ್ತು!! ಐದು ಶನಿಗಳನ್ನು ಹೆಗಲೇರಿಸಿಕೊಂಡು ಹೊರಟಿರುವ ಯಡಿಯೂರಪ್ಪ ಐದು ವರ್ಷಗಳ ಪೂರ್ಣಾವಧಿಯನ್ನು ನೆಮ್ಮದಿಯಿಂದ ಮುಗಿಸಿದರೇ ಸಾಕಾಗಿದೆ ಎನ್ನುವಷ್ಟು ಸಂಕಷ್ಟಗಳಿಗೆ ಆ ಪಕ್ಷ ಆರಂಭದಲ್ಲೇ ಎದುರಾಗಿದೆ. ಇದನ್ನು ಆ ನನ್ನ ಸ್ನೇಹಿತರಿಗೆ ಹೇಳಿದಾಗ, ಅವರು ಇದೆಲ್ಲ ಬಿಜೆಪಿ ವಿರೋಧಿ ಮನೋಭಾವನೆಯ ಊಹೆಗಳಷ್ಟೆ ಎಂದು ಬೇಸರ ಮಾಡಿಕೊಂಡು ಎದ್ದು ಹೋದರು.

ಹಾಗೆ ನೋಡಿದರೆ ಈಗ ಯಾರಿಗೇ ಆಗಲಿ, ಕಟ್ಟಾ ಬಿಜೆಪಿ ವಿರೋಧಿಯಾಗಲು ಅಂತಹ ಕಾರಣಗಳೇ ಇಲ್ಲ. ಈಗ ಆ ಪಕ್ಷದ ತುಂಬಾ - ಸದ್ಯದ ಅದರ ಶಾಸಕಾಂಗ ಪಕ್ಷವೂ ಸೇರಿದಂತೆ - ಅರ್ಧಕ್ಕರ್ಧ ಬಿಜೆಪಿಯೇತರ ಪಕ್ಷಗಳಿಂದ (ಮುಖ್ಯವಾಗಿ ಕಾಂಗ್ರೆಸ್ಸಿನಿಂದ) ಬಂದವರೇ ಇದ್ದಾರೆ. ಇವರ್ಯಾರಿಗೂ ನಾವು ಬಿಜೆಪಿಯನ್ನು ವಿರೋಧಿಸಲು ಮುಖ್ಯ ಕಾರಣವನ್ನು ಒದಗಿಸಿದ್ದ ಆರ್.ಎಸ್.ಎಸ್.ನ ಹಿನ್ನೆಲೆ ಇಲ್ಲ. ಅವರಲ್ಲಿ ಬಹಳಷ್ಟು ಜನ ಬಿಜೆಪಿ ಸೇರಿರುವುದು, ಇತರ ಪಕ್ಷಗಳಲ್ಲಿ ಸರಿಯಾದ ಜಾಗ ದೊರೆಯದಾಗಲೋ ಅಥವಾ ಆ ಪಕ್ಷಗಳಲ್ಲಿ ತಾವು ಇನ್ನು ಇರಲಾಗದಷ್ಟು ಪರಿಸ್ಥಿತಿ ಬಿಗಡಾಯಿಸಿದಾಗಲೋ! ಅಷ್ಟೇ ಅಲ್ಲ, ಆರೆಸ್ಸೆಸ್ ಹಿನ್ನೆಲೆಯಿಂದ ಬಂದ ನಾಯಕರೂ ಕಳೆದ ಇಪ್ಪತ್ತು ವರ್ಷಗಳಲ್ಲಿ ಆ ಪಕ್ಷ ಕಂಡ ಅಧಿಕಾರದ ನಿರೀಕ್ಷೆ ಮತ್ತು ರುಚಿಗಳಿಂದ ಎಷ್ಟು 'ಮಾಗಿ' ಹೋಗಿದ್ದಾರೆಂದರೆ, ಅವರ ಪಾಲಿಗೆ ಆರೆಸ್ಸೆಸ್ ಈಗ ಮನೆಯಲ್ಲಿ ಮೂಲೆ ಹಿಡಿದು ಸಾಂಕೇತಿಕ ಗೌರವಕ್ಕೇ ಅರ್ಹರಾದ ಹಿರಿಯರಂತಾಗಿದೆ! ಇಲ್ಲದಿದ್ದರೆ, ಲಾಠಿ ಹಿಡಿದೇ ಬಿಜೆಪಿ ಪ್ರವೇಶಿಸಿದ ಯಡಿಯೂರಪ್ಪನವರಂತಹ ಯಡಿಯೂರಪ್ಪನವರೇ - ಅವರೇ ಒಮ್ಮೆ ವಿಷಾದಪೂರ್ಣವಾಗಿ ಒಪ್ಪಿಕೊಂಡಂತೆ - ಅಧಿಕಾರದ ಚಕ್ರವ್ಯೂಹದಲ್ಲಿ ದಾರಿಗಾಣದಂತಾಗಿದ್ದಾಗ ಜೆಡಿಎಸ್ ಸೇರಲು ಮುಂದಾಗುತ್ತಿದ್ದರೇಕೆ?