ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಚಿಂತನೆ

ನಿಮ್ಮ ಪ್ರತಿಯೊಂದು ಒಳ್ಳೆಯ ಚಿಂತನೆಯೂ ನೀವೇ ನಿರೀಕ್ಷ್ಹಿಸಿರದಂಥ ಅದ್ಭುತ ಫಲಿತಾಂಶವನ್ನು ನೀಡುತ್ತದೆ.

ನೀತಿ

ಎಷ್ಟೇ ಚೆನ್ನಾಗಿದ್ದರೂ ಭವಿಷ್ಯವನ್ನು ನಂಬಬಾರದು.ಕಳೆದು ಹೋದದ್ದನ್ನು ಕುರಿತು ಚಿಂತಿಸಬಾರದು.ವರ್ತಮಾನದ ಕರ್ತವ್ಯವನ್ನು ಶ್ರದ್ಧೆಯಿಂದ ಮಾಡಬೇಕು.

ಪ್ರೇಮ

ಪ್ರೇಮಕ್ಕೆ ಯಾವ ಶಾಸ್ತ್ರ ಪುರಾಣಗಳೂ ಗೊತ್ತಿಲ್ಲ ಅದಕ್ಕೆ ಗೊತ್ತಿರುವುದು ಹೃದಯದ ಮಿಡಿತ ಮಾತ್ರ.ಪ್ರೇಮಕ್ಕೆ ಯಾವುದೇ ತಾಂತ್ರಿಕ ವಿಚಾರಗಳ ಅಗತ್ಯವಿಲ್ಲ.ಇದಕ್ಕಾವ ತರಬೇತಿಯ ಅಗತ್ಯವೂ ಇಲ್ಲ.ಪ್ರೇಮವೂ ನೀವು ಯಾರಿಂದಲೂ ಕಲಿಯುವಂತಹುದಲ್ಲ.ಕಲಿತ ಪ್ರೇಮ ಪ್ರೇಮವೇ ಅಲ್ಲ.

ಜೂನ್ ೪ - ಅಂತರರಾಷ್ಟ್ರೀಯ ಶೋಷಿತ ಮಕ್ಕಳ ದಿನ, ಗೊತ್ತಾ ನಿಮಗೆ?

ಅಮ್ಮನ ಉದರದಿಂದ ಧರೆಗಿಳಿದ ಮರುಕ್ಷಣ, ಶುರುವಾಯಿತು ನಮ್ಮೆಲ್ಲರ ಹೊಸ ಬದುಕಿನ ಪಯಣ.
ಅಂತಹ ಅಪೂರ್ವ ಕ್ಷಣಗಳಲ್ಲಿ ಅಮ್ಮ-ಅಪ್ಪರಿಗಾದ ಆನಂದಕ್ಕೆ ಪಾರವೇ ಇರಲಿಲ್ಲ ಅಲ್ಲವೆ?
ಮೊದಲ ಆಳುವಿನಿಂದ ಹಿಡಿದು ಮೊದಲ ಮುಗ್ಧ ನಗುವಿನವರೆಗೆ ಅಮ್ಮನಿಂದ ಪಡೆದ ಅತ್ಯಮೂಲ್ಯವಾದ
ಪ್ರೀತಿ-ಪೋಷಣೆ ಎಲ್ಲರಿಗೂ ಸಿಕ್ಕಿದ್ದುಂಟೇ? ಎಲ್ಲರೂ ಅಷ್ಟೊಂದು
ಭಾಗ್ಯವಂತರಾಗಿರುವುದಿಲ್ಲ. ಕೆಲವರು ಮೊದಮೊದಲು ಅಮ್ಮ-ಅಪ್ಪಂದಿರ ಪೋಷಣೇ ಪಡೆದರೂ ಮತ್ತೆ
ವಂಚಿತರಾಗಿತುತ್ತಾರೆ, ಪೋಷಕರ ತಪ್ಪಿನಿಂದಲ್ಲ, ಮಾನವನ ಹೀನ ಕೃತ್ಯಗಳಾದ
ಯುದ್ಧ-ವಿವಾದಗಳಿಂದ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಶೋಷಣೆಯಿಂದ. ಜಗತ್ತಿನಲ್ಲಿ
ಸುಮಾರು ೩,೦೦,೦೦೦ (ಹೌದು, ಮೂರು ಲಕ್ಷ!)ಕ್ಕೂ ಹೆಚ್ಚು ’ಬಾಲ ಸೈನಿಕ (child
soldiers)’ರಿದ್ದಾರೆ, ಅದರಲ್ಲಿ ೧೦ ವರ್ಷಕ್ಕಿಂತಲೂ ಕಡಿಮೆಯಿರುವ ಎಷ್ಟೋ
ಬಾಲಕಿಯರಿದ್ದಾರೆ. ಹೆಜ್ಜೆ ಹೆಜ್ಜೆಗೂ ಬಾಲ ಸೈನ್ಯದಲ್ಲಿರುವ ಮುಗ್ಧ ಬಾಲಕಿಯರು ಲೈಂಗಿಕ
ಕಿರುಕಿಳಕ್ಕೆ ಒಳಗಾಗುತ್ತಿದ್ದಾರೆ, ವ್ಯೇಶ್ಯಾವಾಟಿಕೆಗೆ ಬಲಿಯಾಗುತ್ತಿದ್ದಾರೆ [2001,
source].
ಕಳೆದ ಎರಡು ದಶಕಗಳಲ್ಲಿ ಸುಮಾರು ಇಪ್ಪತ್ತು ಲಕ್ಷಕ್ಕೂ ಹೆಚ್ಚು ಮಕ್ಕಳು
ಯುದ್ಧ-ವಿವಾದಗಳಿಗೆ ಬಲಿಪಶುಗಳಾಗಿದ್ದಾರೆ, ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬಿಯನ್
ನಾಡಿನಲ್ಲಿ ಪ್ರತಿ ವರ್ಷ ೮೦ ಸಾವಿರಕ್ಕೂ ಹೆಚ್ಚು ಮಕ್ಕಳು ಸಮಾಜದಲ್ಲಿ, ತಮ್ಮ ತಮ್ಮ
ಪ್ರದೇಶದಲ್ಲಿ ನಡೆಯುವ ದೌರ್ಜನ್ಯಕ್ಕೆ ಬಲಿಯಾಗುತ್ತಿರುವುದು ಶೋಚನೀಯ ಸಂಗತಿ[UN].
ಶಾಲೆಯಲ್ಲಿ ಅ-ಆ-ಇ-ಈ ಕಲಿಯಬೇಕಾದ ಮಕ್ಕಳು, ಬಡತನ ಮತ್ತು ಹಸಿವಿನಿಂದಾಗಿ ಬಾಲ
ಕಾರ್ಮಿಕರಾಗುತ್ತಿತುವುದು ಹೊಸದೇನಲ್ಲ. ಅದೇನೆ ಇರಲಿ, ಈ ಮಕ್ಕಳು ಮಾಡಿದ ತಪ್ಪಾದರೂ
ಏನು? ಧರೆಗಿಳಿದು ತಮ್ಮ ಬದುಕಿನ ಪಯಣ ಪ್ರಾರಂಭಿಸಿದ್ದೇ? ಇಲ್ಲ, ಇದು ಮಾನವನ ಹೀನ
ಕೃತ್ಯಗಳಿಗೆ ಪ್ರಕೃತಿ ನೀಡುತ್ತಿರುವ ಶಿಕ್ಷೆ.

"ಭಿಷ್ಟಿ ಪೊಡೇ ಟಪುರ್ ಟುಪುರ್"

ಮಳೆಯಿಲ್ಲದೆ ಮಳೆನೀರ ಹನಿಯ ಸದ್ದು.

ಈ ಶೀರ್ಷಿಕೆ, ಒಂದು ಬಂಗಾಳಿ ಹಾಡಿನ ಸಾಲು. ಟಪ್, ಟಪ್ ಮಳೆ ಬೀಳುತ್ತಿದೆ ಅಂತ ಇದರ ಅರ್ಥ. ಬಾಲ್ಯದಲ್ಲಿ ಕೇಳಿದ ಹಾಡು ಇದು.

ಬೆಂಗಳೂರ್ನಲ್ಲಿ ಬಿಟ್ರೆ ಮಳೆ ಮತ್ತೆಲ್ಲಿ ಶುರುವಾಗಿದ್ಯೋ ಗೊತ್ತಿಲ್ವಲ್ಲ!!. ಇಲ್ಲಿ ತೀರ್ಥಳ್ಳೀಲಿ ಏಪ್ರಿಲ್ ತಿಂಗ್ಳಲ್ಲಿ ಸ್ವಲ್ಪ ಮುಖಹಾಕಿ,"ತಡೀರಿ, ಬರ್ತೀನಿ" ಅಂದಿದ್ದೆ ಅದೆಲ್ಲಿಗ್ಹೋಯ್ತೋ? ಹೆಚ್ಚಿನಂಶ ಮಲೆನಾಡ ಅಡಿಕೆ ಬೆಳೆಗಾರ್ರ ಹಿಡಿಶಾಪಕ್ಕೆ ರೋಸಿ ಎಲ್ಲೋ ಗುಳೇ ಹೋಗಿರ್ಬೇಕು.
ಬೆಂಗ್ಳೂರು ಬೇಡ ಅಂತ ಬಯಸಿ ಬಯ್ಸಿ ನಾನು ಇಲ್ಲಿಗೆ ಬಂದಾಗ ಏನು ಜಲಸಿರಿ!! ಅಬ್ಬಾ ನೆನಸ್ಕೊಂಡ್ರೆ ಮೈಯೆಲ್ಲ ಪುಳಕ ಬರತ್ತೆ! ನನ್ನ ಬಾಲ್ಯಕಾಲದ ಅನೇಕ ನೆನೆಪುಗ್ಳು ಮಳೆ, ಪ್ರವಾಹ, ಮಳೆನೀರಿನ ಸದ್ದು, ಕೊಚ್ಚೆರಾಡಿ ಇವುಗ್ಳ ಜೊತೇನೇ ತೆಕ್ಕೆಯಾಗಿವೆ. ಬಾಲ್ಯಕಾಲದಲ್ಲಿ ಶಿವಮೊಗ್ಗಾದಲ್ಲಿ ಎಷ್ಟು ಮಳೆ ಬರಿತ್ತು ಅಂದ್ರೆ ಹೇಳೋದೇ ಬೇಡ. ದಿನ ಬಿಟ್ದಿನ ಶಾಲೆಗೆ ರಜೆ ಇರ್ತಿತ್ತು. ನದಿ ದಡ್ದಲ್ಲಿ ನಿಂತು ದಡ ಕೊರೀತಾ ಕೆಂಪು ರಾಡಿಯಾಗಿ ಹರಿಯೋ ತುಂಗೆ ನೋಡಿದ್ರೆ ಅದ್ಯಾವ ಪುಣ್ಯಾತ್ಮ "ತುಂಗಾ ಪಾನಂ" ಅಂದ್ನೋ ಅನ್ಸೋದು. ನಮ್ಮ ಮನೆಯ ಹತ್ರಾನೇ ಇದ್ದ ಒಂದು ದೊಡ್ಡ ಮೋರಿ- ವೈತರಣಿ ಅಂತ್ಲೇ ಕರೀತಿದ್ವಿ ಅದನ್ನ- ತುಂಬಿ ನೀರೆಲ್ಲ ಅಕ್ಕ ಪಕ್ಕದ ವಠಾರಕ್ಕೆ ನುಗ್ಗಿ ಒಳ್ಳೇ ಫಜೀತಿ. ನಮ್ಮೂರ ದೇವರ ಅರ್ಚಕರಾದ ರಾಂಭಟ್ರು ತಮ್ಮ ಧಡೂತಿ ಹೆಂಡ್ತೀನ ಅನಾಮತ್ತಾಗಿ ತೋಳಲ್ಲಿ ಬಳಸಿ ಎತ್ಕೊಂಡು ಸೊಂಟಮಟ್ಟ ನೀರಲ್ಲಿ ಅವ್ರನ್ನು ಸುರಕ್ಷಿತ ಜಾಗಕ್ಕೆ ಕರ್ಕೊಂಡ್ಹೋಗ್ತಿದ್ದ ದೃಶ್ಯ ಯಾವತ್ಗೂ ಮರ್ಯೋದೇ ಇಲ್ಲ. ಸೀಗೇಹಟ್ಟಿ ಅನ್ನೋ ಶಿವಮೊಗ್ಗದ ಎಕ್ಸ್‌ಟೆನ್ಶನ್ ಸದಾ ಮಳೆಗಾಲದಲ್ಲಿ ಸುದ್ದಿಯಲ್ಲಿರ್ತಿತ್ತು. ನಾಲ್ಕಾಣೆ ಕೊಟ್ರೆ ಸಾಕು ಪ್ರೈವೇಟ್ ಬಸ್ನೋರು ಗಿಟ್ಟಿಗಿರಿದು ಜನತುಂಬ್ಕೊಡು ಸೀಗೇಹಟ್ಟಿ, ಹರಕೆರೆ, ಗಾಜನೂರು ಎಲ್ಲ ಕಡೆ ಪ್ರವಾಹದ ದೃಶ್ಯ ತೋರ್ಸೋರು.

ಹೀಗೇ ಅತ್ತು, ಸುಮ್ಮನಾಗುವ ಹೊತ್ತು!

ನಿನ್ನೆ ಬೆಳಿಗ್ಗೆಯಿಂದ ಏಕೋ ಖಿನ್ನತೆ.

ಒಂದು ಸುತ್ತು ಅತ್ತು ಸುಮ್ಮನಾಗಿದ್ದರೂ ದುಃಖ ಮಡುಗಟ್ಟಿದಂತಿರುವ ಮೋಡ ಯಾವಾಗ ಬೇಕಾದರೂ ಅಳಲು ಸಿದ್ಧವಾಗಿದೆ. ಹೊರಗೆ ಮಂಕು ಆಕಾಶ. ವಸುಂಧರೆಗೆ ಬೈದ ನಾಚಿಕೆಯೇನೋ, ಸೂರ್ಯ ತಲೆ ಮರೆಸಿಕೊಂಡಿದ್ದಾನೆ. ಹಸಿರು ತುಂಬಿದ ರಸ್ತೆಗಳು ಮೋಡದ ಕಣ್ಣೀರಿಗೆ ತೋಯ್ದು ಕಪ್ಪಾಗಿ ಕಾಣುತ್ತಿವೆ. ಒಳಗೆ ಅವ್ವ ಒಗ್ಗರಣೆ ಕೊಡುವ ಸದ್ದು. ಗಾಳಿಯಲ್ಲಿ ಹಿತವಾದ ಘಮ. ಆಕಾಶವಾಣಿ ಧಾರವಾಡದಲ್ಲಿ ಚೌಡಿಕೆ ಪದದ ರಣನ. ಅಪ್ಪ ಪೇಪರ್‌ ಓದುತ್ತಿರಬೇಕು. ನಾನು ಮೌನವಾಗಿ ಕೂತು ಖಿನ್ನತೆಯನ್ನು ಅಕ್ಷರಗಳನ್ನಾಗಿಸುತ್ತಿದ್ದೇನೆ.

ಏಕೋ ಬೇಸರ. ಅಡಿಗರು ನೆನಪಾಗುತ್ತಾರೆ. ’ಮತ್ತದೇ ಬೇಸರ, ಏನೋ ಕಾಡಲು, ಏನೋ ತೀಡಲು ಹೊತ್ತಿ ಉರಿವುದು ಕಾತರ’ (ಪೂರ್ತಿ ನುಡಿ ನೆನಪಾಗುತ್ತಿಲ್ಲ). ನನ್ನ ಮನದಲ್ಲಿ ಬೇಸರವೊಂದಿದೆ. ಆದರೆ, ಕಾತರ ಇಲ್ಲವಾದಂತಿದೆ.

ಐ-ಪಾಡ್‌ನಿಂದ ಸೋಸಿ ಬರುತ್ತಿದೆ ’ಭಾವಸಂಗಮ’ದಲ್ಲಿಯ ಕವನ. ’ದೂರದೊಂದು ತೀರದಿಂದ, ತೇಲಿ ಪಾರಿಜಾತ ಬಂಧ, ದಾಟಿ ಬಂತು ಬೇಲಿ ಸಾಲ, ಮೀಟಿ ಹಳೆಯ ಮಧುರ ನೋವ’. ಮನಸ್ಸಿನೊಳಗಿಂದ ಖಿನ್ನತೆ ಮತ್ತಷ್ಟು ಒಸರುತ್ತದೆ. ’ಎಲ್ಲಿ ಜಾರಿತೋ ಮನವು...!’

'ಸಂಗೀತ ಸ ರಿ ಇ ಲ ಪಾ'

ನಿರೂಪಕಿ : “ನಿಮ್ಮೆಲ್ಲರ ಅಚ್ಚುಮೆಚ್ಚಿನ ಕಾರ್ಯಕ್ರಮ-‘ಬ್ಲೇಡ್ ಬ್ಯಾಂಕ್’ ನಡೆಸಿ ಕೊಡುವ
‘ಸಂಗೀತ ಸ ರಿ ಇ ಲ್ಲ ಪ್ಪಾ’ ಸ್ಪರ್ಧೆಗೆ ಸ್ವಾಗತ, ಸ್ವಾಗತ, ಸ್ವಾಗತ.

ತಾವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಬ್ಲೇಡ್ ಬ್ಯಾಂಕಲ್ಲಿ ಕಳೆಯಿರಿ ಎಂದು ಹೇಳುತ್ತಾ, ಈದಿನದ ೩ ಜನಪ್ರಿಯ ಜಡ್ಜ್‌ಗಳನ್ನು ಆಹ್ವಾನಿಸುತ್ತಿದ್ದೇನೆ... ..

ಈಗ ಸ್ಪರ್ಧಿ ನಂ. ೧ .. .. .."

ಆಯ್ತು ಡಿಯರ್ - ಗೊ ಅಹೆಡ್

(ಎಲ್ಲೋ ಓದಿದ್ದು)

ಹೀಗೆ ಒಂದೆಡೆ ಜನ ಗುಂಪುಗಟ್ಟ್ ಹರಟೆ ಹೊಡೆಯುತ್ತಿದ್ದರು

ಯಾರದ್ದೊ ಮೊಬೈಲ್ ರಿಂಗ್ ಆಯ್ತು

ಅತ್ತಕಡೆಯಿಂದ
"ಹಾಯ್ ಡಿಯರ್ " ಹೆಣ್ಣು ದ್ವನಿ
"ಹಲ್ಲೊ ಹೇಳು ಡಾರ್ಲಿಂಗ್ " ಇವನು
"ಇವತ್ತು ಒಂದು ಪಾರ್ಟಿ ಇದೆ ಹೋಗಲಾ"
"ಆಯ್ತು ಡಿಯರ್ - ಗೊ ಅಹೆಡ್ "

ಊಹಿಸಿ ಯಾಕೆ ಆಂತ

ಒಂದು ಟ್ರೈನ್ ನಲ್ಲಿ ಟಿಕೇಟ್ ತೆಗೆದುಕೊಳ್ಳದವರಿಗೆ ದಂಡ ವಿಧಿಸುತ್ತಿದ್ದರು

ಸೀರೆ ಉಟ್ಟವಳಿಗೆ 200 ರೂ
ಚೂಡಿದ್ದಾರವಳಿಗೆ 100 ರ್೦೦
ಮಿಡಿಯವಳಿಗೆ 50 ರೂ
ಮಿನಿಯವಳಿಗೆ 25 ರೂ
ಅವಳ ಪಕ್ಕದವಳಿಗೆ ಮಾತ್ರ ಏನೂ ಇಲ್ಲ

ಯಾಕೆ?