ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬಹುಮಾನಿತ ಕಥೆ

ಇದ್ದಕಿದ್ದಂತೆ ಒಬ್ಬ ಮುದಿಯ ಆ ಹುಡುಗಿ ಹತ್ರಕ್ಕೆ ಹೋದ. ಎನೇನೊ ವಿಚಿತ್ರವಾಗಿ ಹಲ್ಲು ಕಿಸೀತಾ ಇದ್ದಿದ್ದು ನೋಡಿದ್ರೆ ನನ್ನ ಅನುಮಾನ ನಿಜ ಅಯ್ತು. ಇನ್ನೇನು ಅವಳ ಮೈಮೆಲೆ ಬಿದ್ದೆ ಬಿಟ್ಟ ಅನ್ನೋವಾಗ ಒಬ್ಬ ಧಡಿಯ ಬಂದು ಮುದುಕನ್ನ ಒಂದೇ ಕೈಯಲ್ಲಿ ಎತ್ತಿ ಹುಡುಗಿ ಇಂದ ಒಂದು ಮೀಟರ್ ದೂರ ನಿಲ್ಲಿಸಿಬಿಟ್ಟ. "ಲೇ ಮುದಿಯ ನೀ ಕೊಡೊ ಕಾಸಿಗೆ ಅವಳ ಕಾಲುಂಗರ ಕೂಡ ಮುಟ್ಟಕಾಗಲ್ಲ, ತೊಲಗಾಚೆ" ಅಂತ ಹಿಂದೀಲಿ ಬೈದು ಕಳಿಸಿಬಿಟ್ಟ. ನಾನು ಒಳಗೊಳಗೆ ಖುಶಿ ಪಡ್ತ ಇದ್ದೆ; ಎರಡು ಹೊತ್ತಿನ ಊಟಕ್ಕೆ ಒಂದು ದಾರಿ ಆಯ್ತು ಅಂತ.

ಕೂಲಿಯ ಕೇಳದ ಕಾರ್ಮಿಕ(ಪ್ರೇರಕ ಪ್ರಸಂಗಗಳು)

ಒಂದು ಹೊಸ ರಸ್ತೆ ಹಾಕುವ ಕೆಲಸ ನಡೆದಿತ್ತು.ಎಲ್ಲ ಕೆಲಸಗಾರರು ನೆಲ ಅಗೆಯುವ,ಮಣ್ಣು ಒಗೆಯುವ
ಕೆಲಸದಲ್ಲಿ ತೊಡಗಿದ್ದರು.ಅದರಲ್ಲೊಬ್ಬ ದಷ್ಟ-ಪುಷ್ಟ ಕಾರ್ಮಿಕ ಅತ್ಯಂತ ಹುರುಪಿನಿಂದ ಮಣ್ಣು ಅಗೆಯುತ್ತಿದ್ದ.
ಅವನು ಅಂದಿನ ಹೊಸ ಕೂಲಿಕಾರ ಇರಬೇಕೆಂದು ನೋಡುತ್ತ ನಿಂತಿದ್ದ ಗುತ್ತಿಗೆದಾರನಿಗೆ ಅವನ ಕೆಲಸ

ಕವಿತೆ ಬರೆಯೋಣ್ವಾ?

ಇದು ಒಂದು ಪುಟ್ಟ ಸವಾಲು.

ಒಂದಿಷ್ಟು ಹಯಕು ಅಥವಾ ಚುಟುಕು ಮಾದರಿಯ ಬರಹಗಳನ್ನು ಬರೆಯೋಣ್ವೆ? ಒಂದೇ ನಿಬಂಧನೆ ಎಂದರೆ, ಸೂಕ್ತವಲ್ಲದಿದ್ದರೂ ಹಿಂದೆ ಬರೆದ ಚುಟುಕುಗಳನ್ನು ಸುಮ್ಮನೇ ಪೋಸ್ಟ್‌ ಮಾಡಬಾರದು. ಕವಿತೆಯಲ್ಲಿ ’ಪಂಚ್‌’ ಇರಲಿ. ಧಾರವಾಡದ ಭಾಷೆಯಲ್ಲಿ ಹೇಳುವುದಾದರೆ, ’ಧಾಡಸಿ’ ಇರಲಿ.

ಒಂದು ಚುಟುಕದ ಮೂಲಕ ನಾನು ಪ್ರಾರಂಭಿಸುತ್ತೇನೆ.

ಸಮಯದ ಬೆಲೆ(ಪ್ರೇರಕ ಪ್ರಸಂಗಗಳು)

ಪ್ರಸಿದ್ಧ ವಿಜ್ಞಾನಿ ಬೆಂಜಾಮಿನ್ ಫ್ರೆಂಕ್ಲಿನರದು ಪುಸ್ತಕ ಅಂಗಡಿ ಇತ್ತು.

ಒಮ್ಮೆ ಒಬ್ಬ ವ್ಯಕ್ತಿ ತನಗೆ ಬೇಕಾದ ಪುಸ್ತಕ ಆಯ್ಕೆ ಮಾಡಿಕೊಂಡನು.ಅದನ್ನು ತೋರಿಸುತ್ತ-

"ಇದರ ಬೆಲೆ ಎಷ್ಟು?" ಎಂದ.

"ಒಂದು ಡಾಲರ್" ಗುಮಾಸ್ತ ಹೇಳಿದ.

"ಒಂದು ಡಾಲರ್ ಗಿಂತ ಕಡಿಮೆಯಾಗುವುದಿಲ್ಲವೆ?"

"ಇಲ್ಲ!" ಎಂದ ಗುಮಾಸ್ತ.

ಶ್ರೀ ಶ್ರೀ ದತ್ತ ಗೋವಿಂದನಿಗೆ ಜಯವಾಗಲಿ!

ನಮ್ಮೂರಲ್ಲಿ ಈಗ ದೊಡ್ಡದೊಂದು ಸಮಾರಾಧನೆ ನಡೀತಿದೆ. ಅದೊಂದು ಸಾಂಸ್ಕೃತಿಕ ಹಬ್ಬ. ಪ್ರತಿ ವರ್ಷ ನಡೆಯುತ್ತೆ, ಈ ವೇಳೆಗೆ. ಸಂಗೀತ ದಿಗ್ಗಜರೆಲ್ಲಾ ಬರ್ತಾರೆ. ಹಾಡ್ತಾರೆ. ಸನ್ಮಾನಿತಗೊಳ್ತಾರೆ. ಈ ವೇದಿಕೆಯನ್ನ ಹೊಗಳ್ತಾರೆ. ಆದರೆ ಮುಂದಿನ ವರ್ಷ ನಡಿಯತ್ತೋ ಇಲ್ಲವೋ, ಅನುಮಾನ.

ಬಲೇ ಬಲೇ ಹೆಣ್ಣೇ ! ಅದೇನು ನಿನ್ನ ಕಣ್ಣೇ !

ಬಲೇ ಬಲೇ ಹೆಣ್ಣೇ..ಅದೇನು ನಿನ್ನ ಕಣ್ಣೇ.
ಮೋಹದ ಬಲೆಯ ಹಣೆಯುವ ಆ ದೇಹವೇನು ಬರೀ ಮಣ್ಣೇ.
ವೇದಾ೦ತವೆಲ್ಲಾ ನಿನ್ನ ಕಣ್ಣ ಮು೦ದೆ ಬರೀ ಸೊನ್ನೆ.ಸೊನ್ನೆ.ಸೊನ್ನೆ. :)

ಅದೇನು ಮೋಹ ಮಾಯಾ ಶಕ್ತಿ
ಇದ ಗೆಲ್ಲೋಕೆ ಶಿವನಿಗೂ ಇಲ್ಲಾ ಯುಕ್ತಿ..
ಹೆಣ್ಣಿಗೆ ಗ೦ಡು - ಗ೦ಡಿಗೆ ಹೆಣ್ಣೂ ಅನ್ನೋದೆ ಪರಮ ಭಕ್ತಿ.
ನಿನ್ನಾ ಕಣ್ಣ ದೃಷ್ಟಿಯಲ್ಲಿ ಈ ಮಣ್ಣ ಸೃಷ್ಟಿಯ ಮರೆಯೋದೇ ವಿರಕ್ತಿ. :)