ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಲೈನಿಕ್ಸ್ ಬೇಕಿದೆ ತುರ್ತು ಅಗತ್ಯ

ಲೈನಿಕ್ಸ್ ಸಿಡಿ ಬೇಕಿದೆ ಅಥವ ಕೊಂಡಿ ಕೊಟ್ಟರೂ ಆದೀತು. ಆದರೆ ಡೌನ್ ಲೋಡ್ ಟೈಮ್ ಬಗ್ಗೆ ವರಿ.
ನಾನು ಹುಡುಕುತ್ತಾ ಇದೀನಿ
ಅಂದು ಲೈನಿಕ್ಸ್ ಹಬ್ಬ ತಪ್ಪಿಸಿಕೊಂದಿದ್ದರ ಫಲ ಇದು :)

ಜವರಾಯನಿಗಿಲ್ಲ ಕರುಣೆ ಒಂದಿನಿತೂ

ನಡುಬೀದಿಯಲ್ಲಿ ನಿಂತ ಅವಳು ಗಿರಾಕಿಗಾಗಿ ಅತ್ತಿತ್ತ ನೋಡುತ್ತಿದ್ದರೂ ಮನಸಿನ ಕಣ್ಣಿನ ಮುಂದೆ ಮಾತ್ರ ಹಸಿವು ಎಂದು ಅಳುತ್ತಿದ್ದ ತನ್ನ ಕಂದನ ಚಿತ್ರವೇ ಕುಣಿಯುತ್ತಿತು. ಯಾರದರೂ ಸಿಕ್ಕರೆ ಸಾಕು ಕಾಸು ತೆಗೆದುಕೊಂಡು ಮೊದಲು ಮಗುವಿಗೆ ಇಡ್ಲಿ ಕೊಡಿಸಿ ನಂತರ ಬರುವುದಾಗಿ ಹೇಳಬೇಕು

ಬಾನುಲಿ ನಾಟಕಗಳು

ಗೆಳೆಯರೇ,
ಎಫ್. ಎಂ. ೧೦೧.೩ ರೈನ್-ಬೋ ನಲ್ಲಿ, ದಿನಾ ರಾತ್ರಿ ೮:೦೦ ರಿಂದ ೮:೩೦ ವರೆಗೆ "ನಾಟಕ ಶತಕ " ಎಂಬ ಕಾರ್ಯಕ್ರಮದಡಿ ಬಾನುಲಿ ನಾಟಕಗಳು ಪ್ರಸಾರವಾಗುತ್ತಿವೆ. ಸಾಂಸಾರಿಕ, ಹಾಸ್ಯ, ಪತ್ತೇದಾರಿ, ವೈಜ್ಞಾನಿಕ, ಖಗೋಳಿಕ, ಏಕ-ಪಾತ್ರಿಕ, ರಾಜಕೀಯ, ಚಾರಿತ್ರಿಕ, ವರ್ತಮಾನಿ, ಭವಿಷ್ಯತ್-ಕಾಲದ ಹೀಗೆ ಹತ್ತು-ಹಲವು ವಿವಿಧ ವಿಷಯಗಳುಲ್ಲ ನಾಟಕಗಳನ್ನು ಆಸಕ್ತರು ಕೇಳಬಹುದು.

ಹೆಣ್ಣಿಗೆ ರೂಪ ಮುಖ್ಯವೋ ಗುಣವೋ

ನೋಡಿ ಎಷ್ಟು ವಿಚಿತ್ರ
ಮೂರುವರ್ಷದ ಹಿಂದೆ ನಾನೆ ವಧುವಾಗಿ ಈ ತಮಿಳ್ಗನ್ನಡಿಗರ ಮನೆಗೆ ಬಂದಿದ್ದೆ.
ಈಗ ನಾನೆ ನಮ್ಮ ಮೈದುನನ(ಇವರ ಚಿಕ್ಕಮ್ಮನ ಮಗ)ನಿಗೆ ಹೆಣ್ಣು ನೋಡಬೇಕಾಗಿ ಬಂದಿದೆ. ಅವರಿಗೆ ನನ್ನ ರೀತಿ ಕನ್ನಡದ ಹುಡುಗೀನೆ ಬೇಕಿದೆಯಂತೆ. :)
ಸರಿ ಯಾರನ್ನು ಹುಡುಕೋದು.
ತುಂಬಾ ಚೆನ್ನಾಗಿರೋರನ್ನ? ಅಥವಾ?
ತುಂಬಾ ಒಳ್ಳೆಯವರನ್ನ?
ಸೌಂದರ್ಯ ಕಣ್ಣಿಗೆ ಕಾಣುತ್ತದೆ

ದೀನ ನಾ ಬಂದಿರುವೆ... ಬಾಗಿಲಲಿ ನಿಂದಿರುವೆ...

[:user/khavi|ಖವಾಸಿಯವರು] ಒಂದು ಸಾರಿ ಮನೆಗೆ ಬಂದಿದ್ದಾಗ ಈ ಹಾಡು ಕೇಳಿದ್ದೀರಾ ಎಂದಿದ್ದರು. ಯೂಟ್ಯೂಬಿನಲ್ಲಿ ಹುಡುಕಿ ಪ್ಲೇ ಮಾಡಿದ್ದೆ. ಈಗ ನಿತ್ಯ ಈ ಹಾಡು ಕೇಳುತ್ತಿರುತ್ತೇನೆ ([:user/karihaida|ಕರಿಹೈದರ] ಕೃಪೆಯಿಂದ) - ಪಿ ಬಿ ಎಸ್ ಅವರ ಧ್ವನಿಯಲ್ಲಿದೆ.

"ಬನ್ನಿ ಬ್ರೆಜಿಲ್ಲಿಗೆ ಪಾರಾಗೋಣ"

ಹೈಡ್ರೋಜನ್ ಬಾಂಬ್ ಬಗ್ಗೆ ಆತಂಕ ಪಡಬೇಕೆಂದು ಜಪಾನೀಯರಿಗೆ ಹೇಳಿಕೊಡಬೇಕಾಗಿಲ್ಲ. ಹಿರೋಷಿಮಾ-ನಾಗಾಸಾಕಿಯ ಅನುಭವ ಮುಟ್ಟದೇ ಇರುವ, ಪ್ರತಿವರ್ಷ ಅದರ ನೆನಪಿಗೆ ಒಳಗಾಗದೇ ಇರುವ ಜಪಾನಿಯರೇ ಇರಲಿಕ್ಕಿಲ್ಲ.

ಅಂತಹ ದೇಶದಲ್ಲಿ ಅಕಿರಾ ಕುರೋಸಾವಾ "ಐ ಲೀವ್ ಇನ್ ಫಿಯರ್‍" ಎಂಬ ಚಿತ್ರ ಮಾಡಿದ್ದಾನೆ -೧೯೫೫ರಲ್ಲಿ - ಅಟಾಮಿಕ್ ಬಾಂಬ್ ಸಿಡಿದ ಹತ್ತು ವರ್ಷಕ್ಕೆ. ಚಿತ್ರದ ನಾಯಕ ಒಂದು ಕೋಲ್ ಫೌಂಡ್ರಿಯ ಮಾಲೀಕ. ಬಾಂಬಿಂದ ತಪ್ಪಿಸಿಕೊಳ್ಳಲು ಬ್ರೆಜಿಲ್ಲಿಗೆ ವಲಸೆ ಹೋಗುವುದೊಂದೇ ಉಳಿದಿರುವ ದಾರಿ ಎಂಬ ಅಚಲವಾದ ನಿರ್ಧಾರಕ್ಕೆ ಬಂದಿದ್ದಾನೆ. "ಸಾಯುವುದು ಹೌದು, ಆದರೆ ಕೊಲ್ಲಲ್ಪಡಬಾರದು" ಎಂಬುದು ಅವನ ಸವಾಲು. ಕುಟುಂಬಕ್ಕೆ ಸೇರಿದ ಫೌಂಡ್ರಿಯನ್ನು ಮಾರಿ ಬಂದ ದುಡ್ಡಲ್ಲಿ ಕುಟುಂಬವೆಲ್ಲಾ ಬ್ರೆಜಿಲ್ಲಿಗೆ ಹೋಗಬೇಕೆಂದು ಅವನ ಯೋಚನೆ. ಅದಕ್ಕೆ
ಅವನ ಮಕ್ಕಳಿಂದ ತೀವ್ರ ವಿರೋಧ. ಅವನಿಗೆ ಹುಚ್ಚೆಂದು ಸಾಬೀತು ಮಾಡಿ ವಲಸೆ ತಪ್ಪಿಸಲು ಅವನ ಮಕ್ಕಳು ಫ್ಯಾಮಿಲಿ ಕೋರ್ಟಿಗೆ ಹೋಗುತ್ತಾರೆ.

ಎಲ್ಲಿ ಮನಕಳುಕಿರದೊ, ಎಲ್ಲಿ ತಲೆ ಬಾಗಿರದೊ

Godfrey Rego ಎಂಬುವರು ಸಂಪದ ಸಮುದಾಯಕ್ಕೆ ಬರೆದ ಪತ್ರದಲ್ಲಿ ಹೀಗೆ ಕೇಳಿದ್ದಾರೆ:

"ರಬೀಂದ್ರನಾಥ ಟಾಗೂರರ

'Where the mind is without fear and the head is held high;
Where knowledge is free;

ಕವನವನ್ನು ಕನ್ನಡಕ್ಕೆ ಅನುವಾದ ಮಾಡಿದ ಬಿ. ಎಂ. ಶ್ರೀ "ಇಂಗ್ಲಿಷ್ ಗೀತೆಗಳು" ಎಂಬ ಪುಸ್ತಕದಲ್ಲಿ ಹೊರತಂದಿದ್ದರು. ಕವನದ ಸಾಲುಗಳು ಹೀಗಿವೆ:

“ಎಲ್ಲಿ ಮನಕಳುಕಿರದೊ, ಎಲ್ಲಿ ತಲೆ ಬಾಗಿರದೊ,