ಕನಕದಾಸರ ಕೀರ್ತನೆಗಳು ಮತ್ತು ಅದರ ತಾತ್ಪರ್ಯ ಇಂದಿಗೂ ಪ್ರಸ್ತುತ-೨

ಕನಕದಾಸರ ಕೀರ್ತನೆಗಳು ಮತ್ತು ಅದರ ತಾತ್ಪರ್ಯ ಇಂದಿಗೂ ಪ್ರಸ್ತುತ-೨

ಅಹುದಾದಡಹುದೆನ್ನಿ ಅಲ್ಲವಾದಡಲ್ಲವೆನ್ನಿ
ಸಹಜವಿದು ಸಜ್ಜನರ ಮನಕೆ ಸಮ್ಮತವು

ಕರಿಕೆಯಿಲ್ಲದ ಬಾಳು ಕರಿವರದನ ದಯೆ ಕೇಳು
ಅರಿತವರಿರೆ ಮನೆಯೊಳು ಅದು ಸ್ವರ್ಗವು ಕೇಳು
ಕರಣಿಕರೊಳಗಣ ನಂಟು ಕಟ್ಟಿದ ಹಣವಿನ ಗಂಟು
ಗುರುವಿನ ವಾಕ್ಯದ ಭಕ್ತಿ ಇಹ-ಪರಕದು ಮುಕ್ತಿ

ಒಕ್ಕಲಿಗಾಗದ ಗವುಡ ರೊಕ್ಕವ ಪಡೆವಾ ಕೊರಗ
ಮಕ್ಕಳ ಪಡೆವುದು ಪುಣ್ಯ ಕೇಳಿರಿಯಣ್ಣ
ಇಕ್ಕುವ ಅನ್ನವು ಧರ್ಮ ಇಹ-ಪರಕದು ಅತಿ ಧರ್ಮ
ಬಿಕ್ಕಳಿಕಿಕ್ಕಿದ ವ್ಯಾಧಿ ಯಮಪುರಕದು ಹಾದಿ

ಕಂಡರೆ ಸೇರದ ನಾರಿ ಕೆಂಡವನುಗುಳುವ ಮಾರಿ
ದಂಡವ ತೆರಿಸುವ ಪುತ್ರ ಹಗೆಗಳಿಗವ ಮಿತ್ರ
ಉಂಡರೆ ಸೇರದ ತಾಯಿ ಉರಗನ ಮೆಕ್ಕೆಯ ಕಾಯಿ
ಹಿಂಡನು ಅಗಲಿದ ಗೋವು ಹುಲಿಗಿಕ್ಕಿದ ಮೇವು

ಪರನಾರಿಯರೊಡನಾಟ ಗರಳವನಟ್ಟುಂಬಾಟ
ಬರೆದೂ ಅರಿಯದ ಲೆಕ್ಕ ಕಡೆಯಲಿ ಬಲು ದುಃಖ
ಇರಿತಕೆ ಬೆದರುವ ಮದಕರಿ ಮರಿಯೆಂಬ ಕೋಡಗಮರಿ
ಕರೆಬರಲರಿಯದ ಗಂಡ ಅವ ನಾಚಿಕೆ ಭಂಡ

ಸಮಯಕ್ಕೊದಗದ ಅರ್ಥ ಸಾವಿರವಿದ್ದರು ವ್ಯರ್ಥ
ಸವತಿಯರೊಳಗಣ ಕೂಟ ಎಳನಾಗರ ಕಾಟ
ಅಮರರಿಗೊದಗದ ಯಾಗ ಆಡಿನ ಮೇಲಣ ರೋಗ
ಆದಿಕೇಶವಭಕ್ತ ಅವ ಜೀವನ್ಮುಕ್ತ

ಬಿ.ವೆಂಕಟ್ರಾಯ
ಪ್ರತಿಕ್ರಿಯೆಯಲ್ಲಿ ಹಾಕಿದ ಮೇಲೆ ಆ ಸಾಲನ್ನು ಸರಿಪಡಿಸಿರುವೆನು- ಮೊದಲ ಸಾಲು ಹೀಗಿತ್ತು:-
ಅಹುದಾದರಹುದೆನ್ನಿ ಅಲ್ಲವಾದರಲ್ಲವೆನ್ನಿ

Rating
No votes yet

Comments