ಮಾತೆ ಮುತ್ತು , ಮಾತೆ ಮೃತ್ಯು

ಮಾತೆ ಮುತ್ತು , ಮಾತೆ ಮೃತ್ಯು

ಬರಹ

ಸ್ವಲ್ಪ ಹಳೇ ಕಾಲದ ಕತೆ ಅಂತಿಟ್ತ್ಕೊಳಿ

ಒಂದೇ ಜಾತಿಯ ಆದರೆ ಇಬ್ಬರ ಬೇರೆ ಬೇರೆ ಪಂಗಡದ ಹುಡುಗ ಹುಡುಗಿ ಹೀಗೆ ಪ್ರೀತಿಯ ಬಲೆಗೆ ಬಿದ್ದರು

ಇಬ್ಬರ ಮನೆಯೂ ಒಂದೇ ಬೀದಿಯಲ್ಲಿತ್ತು. ಹುಡುಗನ ಪಂಗಡ M ಆಗಿರಲಿ ಹುಡುಗಿಯ ಪಂಗಡ s ಆಗಿರಲಿ.

M ಪಂಗಡದವರಿಗೆ ತಾವೆ ಗ್ರೇಟ್ ಆನ್ನುವ ಅಹಮ್. s ಪಂಗಡದವರನ್ನು ಕಂಡರೆ ತಾತ್ಸಾರ
s ಪಂಗಡದವರಿಗೆ M ಎಂದರೆ ಹಾಸ್ಯದ ವಸ್ತು, ಅವರ ಮಡಿ ಆಚಾರ ವಿಚಾರ ಎಲ್ಲ ಅವರಿಗೆ ತಮಾಷೆ ಯಾಗಿತ್ತು

ಇಂತಹ ಮನೆಗಳ ನಡುವಲ್ಲಿ ಜಗಳ ಇಲ್ಲವಾದರೂ ಮಾತು ಕತೆ ಅಷ್ಟಕ್ಕಷ್ಟೆ
ಇಬ್ಬರೂ ಒಬ್ಬರೊನೂಬ್ಬರು ತೆಗಳಿ, ಇಲ್ಲವೇ , ತಿರಸ್ಕರಿಸಿದರೆ ಅವರಿಗೆ ಸಮಾಧಾನ

ಇಂತಹ ಮನೆತನದ ಹುಡುಗ ಹುಡುಗಿ ತಾವು ಪ್ರೀತಿಸಿದವರನ್ನೇ ಮದುವೆಯಾಗುವುದಾಗಿ ಹಟ ಹಿಡಿದು ಕೂತರು .
ಕೊನೆಗೆ ಪಂಗಡ ಬೇರಾದರೂ ಜಾತಿ ಒಂದೇ ಅಲ್ಲವೇ ಎಂದು ಎರೆಡೂ ಮನೆಗಳ ಹಿರಿಯರು ಮದುವೆಗೆ ಒಪ್ಪಿದರು
ಅಂದು ನಿಶ್ಚಿತಾರ್ಥದ ದಿನ
ಮಾತು ಕತೆ ಸಾಗುತ್ತಿತ್ತು

ಹುಡುಗನ ಅತ್ತಿಗೆಗೆ ಸ್ವಲ್ಪ ಮಾತಿನ ಚಪಲ ಜಾಸ್ತಿ
ಹೀಗೆ ಮಾತಿನ ಭರದಲ್ಲಿ ಹುಡುಗಿಯ ತಾಯಿಗೆ "ನೀವೆಷ್ಟು ದಿನ ನಮ್ಮನ್ನ ಹೀಯಾಳಿಸಿದ್ದೀರಾ, ನಮ್ಮ ಆಚಾರ ವಿಚಾರಾನ ನೋಡಿ ನಕ್ಕಿದ್ದೀರಾ, ಈಗ ನಿಮ್ಮ ಹುಡುಗೀಗೆ ನೀವು ನಗ್ತಾ ಇದ್ದ ಮನೆತನದವನೇ ಬೇಕಾದನಲ್ಲ, ಮಾತಿಗೆ ಹೇಳ್ತೀನಿ, ನಿಮ್ಮ ಹುಡುಗಿ ನಮ್ಮ ಆಚಾರಾನೆಲ್ಲಾ ಕಲ್ತುಕೊಳ್ತಾಳೆ . ನೋಡಿ ಹೇಗಿದೆ ಕಾಲ" ಎಂದು ಕೊಂಚ ಹಾಸ್ಯ ಮಾಡಿದಳು
ಹುಡುಗಿಯ ತಾಯಿಗೆ ಕೋಪ ಬಂತು ಮಾತಾಡದೇ ಎದ್ದು ಹೋಗಿ ಗಂಡನ ಕಿವಿಯಲ್ಲಿ ಉಸುರಿದಳು.
ಅಪ್ಪ ದೂರ್ವಾಸ ಮುನಿಯ ಅಪರಾವತಾರ ಹುಡುಗನ ಅತ್ತಿಗೆ ಕ್ಷಮೆ ಕೇಳುವ ತನಕ ಈ ಮದುವೆ ನಡೆಯುವುದಿಲ್ಲ , ಎಂದು ಹಟ ಹಿಡಿದ
ಹುಡುಗನ ಅಣ್ಣಾ ಹಾಗು ಅಪ್ಪನೊ ಕಡಿಮೆ ಇರಲಿಲ್ಲ
s ಆಗಿ ನಿಮಗೆ ಇಷ್ಟು ಹಟ ಇರಬೇಕಾದರೆ ನಮಗೆ ಇನ್ನೆಷ್ಟು ಇರಬೇಡ ಎಂದು ಕ್ಯಾತೆ ತೆಗೆದರು
ಮಾತಿಗೆ ಮಾತು ಬೆಳೆದು ಜಗಳವಾಯ್ತು, ಜಗಳ ಮಹಾಭಾರತದ ಹದಿನೆಂಟು ದಿನಗಳ ಘೋರಕ್ಕಿಂತಲೂ ಹೆಚ್ಚಾಯಿತು.
ತಿಂಗಳು ಕಳೆದರೂ ಜಗಳ ಬಗೆಹರಿಯಲಿಲ್ಲ . ಇನ್ನೂ ದೊಡ್ಡದಾಯ್ತು
ಹುಡುಗಿ ಕಂಗಾಲಾದಳು . ಅಪ್ಪ ಹಾಗು ಅಮ್ಮನ ಅವಮಾನವಾದಾಗ ತಾನು ಅವನನ್ನೇ ಮದುವೆಯಾಗುತ್ತೇನೆ ಎನ್ನಲು ಮನಸು ಬರಲಿಲ್ಲ. ಅಳುತ್ತಾ ಕುಳಿತಳು.
ಹುಡುಗನಿಗೂ ಏನೂ ಮಾಡಲಾಗಲಿಲ್ಲ
ಎಲ್ಲಾದರೂ ತಲೆ ಮರೆಸಿಕೊಂಡು ಹೋಗಿ ಮದುವೆಯಾಗೋಣ ಎಂದರೆ ಹುಡುಗೀ ಒಪ್ಪಲಿಲ್ಲ
ಹುಡುಗಿಗೆ ಬೇರೆಡೆ ಮದುವೆ ನಿಶ್ಚಯವಾಯ್ತು. ಆದರೆ ಹುಡುಗಿ ಮರುದಿನ ನೇಣಿಗೆ ಶರಣಾಗಿದ್ದಳು. ಹುಡುಗಿಯ ತಂದೆಯ ರೋಷ ಇನ್ನೂ ಹೆಚ್ಚಾಯಿತು
ಹುಡುಗಿಯ ಸಾವಿಗೆ ಹುಡುಗನೇ ಕಾರಣ ಎಂದು ಹುಡುಗನ ಮೇಲೆ ಕಂಪ್ಲೈಂಟ್ ಕೊಟ್ಟ . ಹುಡುಗನನ್ನು ಪೋಲಿಸರು ಎಳೆದುಕೊಂಡು ಹೋಗಿ ಹಿಗ್ಗಾಮುಗ್ಗ ಜಾಡಿಸಿ ಮನೆಗೆ ಕಳಿಸಿದರು
ಹುಡುಗನಿಗೆ ಜೀವನದ ಮೇಲಿನ ಆಸೆಯೇ ಹೊರಟು ಹೋಯ್ತು ಕುಡಿತದ ದಾಸನಾದ . ಕೆಟ್ಟ ಚಟಗಳಿಗೆ ಬಿದ್ದ . ಒಮ್ಮೆ ಮನೆಯನ್ನೇ ಬಿಟ್ತು ಹೊರಟು ಹೋದ
ಇದನ್ನು ನೋಡಲಾರದೆ ಹುಡುಗನ ಅಪ್ಪ ಇಹ ಲೋಕ ತ್ಯಜಿಸಿದ
ಅಮ್ಮನೂ ಗಂಡನ ದಾರಿಯನ್ನೇ ಹಿಡಿದಳು
--------------------------------**********************--------------------------------------------------

ಹೌದಲ್ವಾ ಒಮ್ಮೊಮ್ಮೆ ಮಾತಿನ ಚಪಲಕ್ಕೆ ಬಿದ್ದು ಆಡಿದ ಮಾತು ಎಷ್ಟೊಂದು ಅನಾಹುತಕ್ಕೆ ದಾರಿ ಮಾಡಿಕೊಡುತ್ತದೆ

ಅಂದಹಾಗೆ ಇದು ನಂಗೆ ಹೊಳೆದದ್ದು ಮೂರುವರ್ಷ್ದದ ಹಿಂದೆ
ನನ್ನ ಮದುವೆಯ ನಿಶ್ಚಿತಾರ್ಥದ ದಿನ ನನ್ನ ವಾರಗಿತ್ತಿ ಮೇಲಿನ ಮಾತನ್ನೇ ಹೇಳಿದ್ದರು
ಅದಕ್ಕೆ ನಮ್ಮ ಅಮ್ಮ ಕೊಟ್ಟ ಉತ್ತರ
" ಇಲ್ಲ ನನ್ನ ಮಗಳು ನಮ್ಮ ಆಚಾರನೂ ನಿಮ್ಮ ಅಚಾರನೂ ಎರೆಡು ಮಾಡ್ತಾಳೆ ಬಿಡಿ . ನಮ್ಮದಿರ್ಲಿ ನಿಮ್ಮನೆ ದೀಪಾನೆ ನಮ್ಮ ಹುಡುಗಿ ಹಚ್ತಾಳಲ್ಲ ಅದಕ್ಕೇನು ಅಂತೀರಾ ?"
ನಮ್ಮ ಮನೆಯಲ್ಲಾಗಲಿ ಅವರ ಮನೆಯಲ್ಲಾಗಲಿ ಅಂತಹ ದೂರ್ವಾಸ ಮುನಿಗಳೇನೂ ಇರದಿದ್ದುದರಿಂದ ಅಂತಹ ಸಮಸ್ಯೇ ಏನೂ ಬರಲಿಲ್ಲ ಬಿಡಿ