ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸ್ವಲ್ಪ ನಗಿ

ಗುಂಡ ಪರೀಕ್ಷೆ ಬರಿಯೋದಕ್ಕೆ ಕಾಲೇಜಿಗೆ ಬಂದ, ಬೆಂಕಿ ಆಕಸ್ಮಿಕ ಸಂಭವಿಸಿ ಪ್ರಶ್ನೆಪತ್ರಿಕೆಗಳಿದ್ದ ಕೊಠಡಿ ಸುಟ್ಟು ಸಂಪೂರ್ಣ ಭಸ್ಮವಾಯಿತು. ಏನು ಮಾಡುವುದೆಂದು ಪ್ರಿನ್ಸಿಪಾಲ್, ಲೇಚ್ರರ್ಸ್ ಗಳು ಮಾತನಾಡುತ್ತಿದ್ದರು, ಗುಂಡ ಅವರ ಹತ್ತಿರ ಬಂದ.

ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ

"ಅಮ್ಮ ಆರ್ ವಿ ದೇರ್ ಯೆಟ್?"
ಹರಟೆ ಆಟ ನೋಟ ಎಲ್ಲ ಮುಗಿಸಿದರೂ ಮುಗಿಯದ ವಿಮಾನಯಾತ್ರೆಯಿಂದ ಆದಿಗೆ ಬೇಸರ ಬಂದಿತ್ತು.
"ಇನ್ನೊನ್ನವರ್ ಕಣೋ ಆದಿ ನೀನು ಪzಲ್ ಬುಕ್ ಫಿನಿಶ್ ಮಾಡೋದ್ರಲ್ಲಿ ಅಟ್ಲಾಂಟದಲ್ಲಿರ್ತೀವಿ"
"ಓ..ಇನ್ನು ಒನ್ ಅವರ್ರಾ..ಸೋ ಬೋರಿಂಗ್"
ಆದಿಯ ಕುಯ್ಯೊಮರ್ರೊ ಕೇಳಿ ಹಿಂದಿನ ಸೀಟಲ್ಲಿ ಕುಳಿತಿದ್ದ ಗೌರಜ್ಜಿ ಎರಡು ಸೀಟುಗಳ ಸಂದಿಯಲ್ಲಿ ಮೂಗು ತೂರಿಸಿ
"ಹುಚ್ಚ ಮುರುವ ಹುರಳೀ ಬಿತ್ದ ಹೊತ್ತಿಗ್ ಮೂರ್ಸಲ ಕಿತ್ ಕಿತ್ ನೋಡ್ದ ಅನ್ನೊ ಹಾಗೆ ಘಳಿಗ್ ಘಳಿಗೆಗೂ ಊರು ಬಂತಾ ಬಂತಾ ಅಂದ್ರೆ ಬಂದ್ಬುಡತ್ತೇನೋ? ಸಮಾಧಾನವಾಗಿ ಕೂತ್ಕೊಬೇಕಪ್ಪ. ಲೇ ಅನು ನಿನಗಿರೊ ವ್ಯವಧಾನ ನಿನ್ನ ಮಗನಿಗೆ ಬರಲಿಲ್ಲ ಬಿಡು. ಎಲ್ಲಾ ಪ್ರಶಾಂತಂದೇ ಪಡಿಯಚ್ಚು" ಎಂದರು.
"ಕಿರೀಕು ಕಣೆ ನಿಮ್ಮಜ್ಜಿ. ಚಾನ್ಸ್ ಸಿಕ್ತು ಅಂದ್ರೆ ಸಾಕು ನಂಗೇ ಬತ್ತಿ ಇಡಕ್ಕೆ ನೋಡ್ತಿರತ್ತೆ. ಮಾಲಿ ಮದ್ವೇಗ್ಬೇರೆ ಕರ್ಕೊಂಡು ಹೋಗ್ತಾ ಇದೀವಿ. ಏನೇನೋ ಮಾತಾಡಿ ಆಭಾಸ ಮಾಡ್ದೇ ಇರೋ ಹಾಗೆ ನೀನೆ ಸ್ವಲ್ಪ ಕಂಟ್ರೊಲ್ ಮಾಡ್ಬೇಕು.ಬಾಲ ಅಂಕಲ್ ಬೇರೆ ಒಂಥರಾ" ಪ್ರಶಾಂತ ಪಿಸುಗುಟ್ಟಿದ.
ಗೌರಜ್ಜಿಯ ಬಾಯಿಗೆ ಬೀಗ ಹಾಕುವಂತಹ ಯಾವುದೇ ಪೊಳ್ಳು ಪ್ರಾಮಿಸ್ ಮಾಡಲು ಹೆದರಿ "ಸೋಚನಾ ಕ್ಯಾ ಜೋಭಿ ಹೋಗ ದೇಖಾ ಜಾಯೇಗ" ಹಾಡೊಂದನ್ನು ಗುನುಗಿ ಅವನ ಕೈ ಅಮುಕಿದೆ. ಯಾಕೋ ತಣ್ಣಗೆ ಕೊರೆಯುತ್ತಿತ್ತು.ಆಜ್ಜಿ ಆಡೋ ಗಾದೆಗಳನ್ನೋ ಅಥವಾ ತೆಗೆದ ತಗಾದೆಗಳನ್ನು ನೆನೆಸ್ಕೊತಾ ಇದ್ನೋ ಏನೊ! ಮಗಳು ಆದ್ಯ ಮಾತ್ರ ಬೆಚ್ಚಗೆ ಅವನೆದೆಗೊರಗಿ ನಿದ್ದೆ ಹೋಗಿದ್ದಳು.

ಪರಿಸರ ಗೀತೆ - ಸಾಹಿತ್ಯ ಸಿಗುತ್ತಾ?

ಬೆಂಗಳೂರು ದೂರದರ್ಶನದ ಹೊಸತರಲ್ಲಿ ಪರಿಸರದ ಬಗ್ಗೆ, ಪರಿಸರ ಮಾಲಿನ್ಯ ತಡೆಯೋದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸೋವಂತಹ ಕೆಲವು ಹಾಡುಗಳನ್ನ ಪ್ರಸಾರ ಮಾಡುತ್ತಿದ್ದರು.ಅದರಲ್ಲಿ ಈ ಕೆಳಗಿನದ್ದೂ ಒಂದು..

"ಹೃದಯಾಂತರಾಳದಲಿ ಅಡಗಿರುವ ನೋವುಗಳು ನೂರುಂಟು ನನ್ನ ನಲ್ಲಾ..
ಬರಿಯಾ ನೋವುಗಳಲ್ಲಾ...ಭಯದಾ ಆತಂಕಗಳು ಕಾಡುತಿವೆ ವಿಶ್ವಾವೆಲ್ಲಾ...

ಗೋಕಾಕ ಮಾದರಿಯ ಚಳುವಳಿ ಎಂದರೇನು?

ನಾನು ತುಂಬಾಸರ್ತಿ ಕೇಳಿರೋಪದ "ಗೋಕಾಕ ಮಾದರಿಯ ಚಳುವಳಿ" ಏನು ಈ ಚಳುವಳಿ.. ಏನಿದರ ವಿಶೇಷತೆ?
ಇವತ್ತು ಸಂಪದದಲ್ಲೇ ಒಬ್ಬರು ಈ ಪದವನ್ನ ಪ್ರಯೋಗಿಸಿದ್ದಾರೆ..
http://sampada.net/article/12332#comment-31461

----------
ವಿನಾಯಕ

ಲಿನಕ್ಸ್ ಗೆ ೧೭ ವರ್ಷದ ಹರೆಯ

 

ಲಿನಕ್ಸ್ ಗೆ ಈಗ ೧೭ ವರ್ಷ. ಲಿನಕ್ಸ್ ಜರ್ನಲ್ ನಲ್ಲಿ ಕಂಡು ಬಂದ ಈ ಲೇಖನವನ್ನ ಒಮ್ಮೆ ಓದಿ. ೧೯೯೧ರಲ್ಲಿ ಲಿನಸ್ ಟೋರ್ವಾಲ್ಡ್ಸ್ "ನಿಮ್ಮ ಅಗತ್ಯಕ್ಕೆ ತಕ್ಕಂತೆ ಬದಲಿಸಿ ಉಪಯೋಗಿಸಿಕೊಳ್ಳ ಬಲ್ಲಂತಹ ಮಿನಿಕ್ಸ ಆಪರೇಟಿಂಗ್ ಸಿಸ್ಟಂ" ನ ಬಗ್ಗೆ ಜಗತ್ತಿಗೆ ಸಾರಿ ಹೇಳಿದ. ಇದನ್ನ ನೆನಪಿಸಿಕೊಳ್ಳಲು Encyclopedia Brittanica ಮೊನ್ನೆ ತನ್ನ ಮುಖಪುಟದ ವಿಷಯವನ್ನಾಗಿ "ಲಿನಕ್ಸ್ ಹುಟ್ಟು ಹಬ್ಬವನ್ನ" ಆಯ್ದು ಕೊಂಡಿತ್ತು. ಗಣಕ ತಂತ್ರಜ್ಞಾನದಲ್ಲಿ ಹೊಸದೊಂದು ಮೈಲಿಗಲ್ಲನ್ನೇ ಹಾಕಿಕೊಟ್ಟ ಟೋರ್ವಾಲ್ಡ್ಸನ ಕೆಲಸಕ್ಕೆ ಬೆನ್ನಲುಬಾಗಿದ್ದು, ಗ್ನು ಪ್ರಾಜೆಕ್ಟನ ಮೂಲಕ ೧೯೮೩ರಲ್ಲಿ ಜನರಿಗೆ ಸ್ವತಂತ್ರ ತಂತ್ರಾಂಶವನ್ನ ಪರಿಚಯಿಸಿದ "ರಿಚರ್ಡ್ ಸ್ಟಾಲ್ಮನ್" ಮತ್ತು ಗ್ನು ಪ್ರಾಜೆಕ್ಟ್ ನ ತಂತ್ರಾಂಶಗಳು. ಮಿಲಿಯಾಂತರ ಫೀ ಮತ್ತು ಓಪನ್ ಸೋರ್ಸ್ ಪ್ರಾಜೆಕ್ಟ್ ಗಳಿಗೆ ಇದು ಮಾದರಿಯಾಯ್ತು. ಜಗತ್ತಿನ ಕಂಪ್ಯೂಟರುಗಳಿಗೆ ಸ್ವತಂತ್ರ ತಂತ್ರಾಂಶವನ್ನ ಹುಟ್ಟುಹಾಕುವುದರೊಡನೆ, ಅನೇಕ ಹೊಸ ಆವಿಷ್ಕಾರಗಳು ಸಾಧ್ಯವಾದವು. ಮೈಕ್ರೋಸಾಫ್ಟ್ ವಿಂಡೋಸ್ ನ ಅಧಿಪತ್ಯವನ್ನ ಅಲುಗಾಡಿಸಿದ ಈ ತಂತ್ರಾಂಶ ಇಂದು ಕಂಪ್ಯೂಟರ್ ಗಳಲ್ಲದೆ, ಪಿಡಿಎ, ಮೊಬೈಲ್ ಫೋನು, ಎಮ್ಬೆಡೆಡ್ ಸಿಸ್ಟಂ ಹೀಗೆ ಅನೇಕ ಹಾರ್ಡ್ವೇರ್ಗಳಲ್ಲಿ ನಿರಾಳವಾಗಿ ಕಾರ್ಯನಿರ್ವಹಿಸುತ್ತಿದೆ.

ಓದಿದ್ದು ಕೇಳಿದ್ದು ನೋಡಿದ್ದು 41 ವಾರೆಕೋರೆ: ಕನ್ನಡಿಗರನ್ನು ನಗಿಸಲೊಂದು ಹೊಸ ಪತ್ರಿಕೆ

ಪ್ರಕಾಶ್ ಶೆಟ್ಟಿಯವರು ಗೊತ್ತಲ್ಲ? ಮೂವತ್ತಮೂರು ವರ್ಷಗಳಿಂದ ವ್ಯಂಗ್ಯಚಿತ್ರಗಳದ್ದೇ ಧ್ಯಾನ
ಮಾಡುತ್ತಿದ್ದಾರೆ. ಕನ್ನಡಿಗರ ಹುಬ್ಬೇರಿಸಿದ "ಸಂತೋಷ" ಮಾಸಪತ್ರಿಕೆಯೊಂದಿಗೆ ವೃತ್ತಿ ಆರಂಭ.prakash

ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...

ಇಂತಹದೊಂದು ವಿಶ್ವಾಸ ನನಗೆ ಮೊದಲಿನಿಂದಲೂ ಇತ್ತು. ಆರ್ಥಿಕ ಅಭಿವೃದ್ಧಿ ಕೊನೆಗೂ ತಳವರ್ಗಗಳನ್ನೂ, ಗ್ರಾಮಾಂತರವನ್ನೂ ಮುಟ್ಟುತ್ತದೆ ಮತ್ತು ಅದು ಕಾಲಾಂತರದಲ್ಲಿ ಅಂತರ್ಜಾಲದಲ್ಲೂ ಪ್ರತಿಬಿಂಬಿಸುತ್ತದೆ ಎನ್ನುವುದೇ ಆ ವಿಶ್ವಾಸ.

ನಾನು ಬರೆಯಲಾರಂಭಿಸಿದ್ದು 2003 ರಲ್ಲಿ. ಆಗ ನನ್ನಂತಹ ವಿದೇಶದಲ್ಲಿದ್ದವನಿಗೆ ಕನ್ನಡದಲ್ಲಿ ಏನಾದರೂ ಬರೆದರೆ ಪ್ರಕಟಿಸುವ ಅವಕಾಶ ಇದ್ದದ್ದು ದಟ್ಸ್‌ಕನ್ನಡ ವೆಬ್‌ಸೈಟಿನಲ್ಲಿ. ಶಾಮಸುಂದರ್ ಮತ್ತವರ ಬಳಗ ನನ್ನಂತಹ ಅನೇಕ ಭಿನ್ನ ವೈಚಾರಿಕ ಹಿನ್ನೆಲೆ ಇರುವವರಿಗೆಲ್ಲ ವೇದಿಕೆ ಕೊಟ್ಟಿದ್ದರು. ಬಹುಶಃ, ಸಂವಾದಕ್ಕೆ ಆಸ್ಪದವಿದ್ದ ಮೊದಲ ಕನ್ನಡ ತಾಣ ಅದು.

ಅಷ್ಟಿದ್ದರೂ, ಕನ್ನಡ ಅಂತರ್ಜಾಲ ಪ್ರಪಂಚದಲ್ಲಿ ಮೊದಲಿನಿಂದಲೂ ಬಹುಸಂಖ್ಯಾತರಾಗಿದ್ದವರು ಕೋಮುವಾದಿಗಳು ,