ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬೀಸಣಿಗೆಯ ನೆಪದಲ್ಲಿ ...

ಮೊನ್ನೆ ಒಂದು ದಿನ ವಿಪರೀತ ಸೆಖೆ ಇಲ್ಲಿ. ಬೇಸಿಗೆ ಶುರುವಾಗಿದೆ. ಪ್ರತಿ ದಿನ 10 - 12 ಡಿಗ್ರಿ ಇದ್ದ ವಾತಾವರಣ ... ಈಗ ಕೆಲವೊಮ್ಮೆ 20 ಡಿಗ್ರಿ ಆದಾಗಲೂ ಸೆಖೆ ತಡೆಯಲಾಗುವುದಿಲ್ಲ. ಅಮ್ಮ ಕೊಟ್ಟ ಲಾವಂಚದ ಬೀಸಣಿಗೆಯಿಂದ ಗಾಳಿ ಹಾಕುತ್ತಾ ಕುಳಿತವಳಿಗೆ ಜತಿನ್ ದಾಸ್ ರ ನೆನಪಾಯಿತು .

ಲಿನಕ್ಸ್ ಹಬ್ಬದ ಜ್ವರ ಮತ್ತು ಸಡಗರ

ನಾವು ಲಿನಕ್ಸ್ ಹಬ್ಬ ಮಾಡ್ತಾ ಇದೀವಿ ಅಂತ ಎಲ್ಲರ ಹತ್ರ ಹೇಳ್ಕೊಳೋದೇ ಖುಷಿ ಆಗ್ಬಿಟ್ಟಿತ್ತು. ಜಿಮೈಲಲ್ಲಿ, ಆರ್ಕುಟ್  ಅಲ್ಲಿ ಎಲ್ಲಾ ಕಡೆ ಸ್ಟೇಟಸ್ ಮೆಸೇಜ್ ಹಬ್ಬದ ಬಗ್ಗೆನೇ !

ಯಥೇಚ್ಛವೋ ಯಥೇಷ್ಟವೋ?

 

ನಮ್ಮಲ್ಲಿ ಬೇಕಾದಷ್ಟು , ಧಂಡಿಯಾಗಿ ಎಂಬ ಅರ್ಥದಲ್ಲಿ ಯಥೇಚ್ಛ ಶಬ್ದ ಬಳಸುತ್ತೀವಿ.

 

ಆದರೆ ಇದೇ ಅರ್ಥದಲ್ಲಿ ಯಥೇಷ್ಟ ಶಬ್ದ ಬಳಸಿದ್ದು ಇವತ್ತು ಓದಿದೆ.

 

 

ಶ್ರೀಬಸವೇಶ್ವರರ ವಚನಗಳು

ದಯವಿಲ್ಲದ ಧರ್ಮವಾವುದಯ್ಯಾ ?
ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ
ದಯವೇ ಧರ್ಮದ ಮೂಲವಯ್ಯೂ
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯೂ !!

ತನಗೆ ಮುನಿವವರಿಗೆ ತಾ ಮುನಿಯಲೇಕಯ್ಯಾ?
ತನಗಾದ ಆಗೇನು? ಅವರಿಗಾದ ಚೇಗೇನು?
ತನುವಿನ ಕೋಪ ತನ್ನ ಹಿರಿಯತನದ ಕೇಡು?
ಮನದಾ ಕೋಪ ತನ್ನರಿವಿನಾ ಕೇಡು
ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ
ನೆರೆಮನೆಯ ಸುಡದು ಕೂಡಲಸಂಗಮದೇವಾ !!

ಸರಿಯಾಗಿ ಯಾಕೆ ಬರುತ್ತಿಲ್ಲಾ

ನಾನು ಬರೆಯುವದು ತುಂಬಾ ಕಡಿಮೆ ಆದರೆ ಓದುವದು ಜಾಸ್ತಿ. ನಾನು ಸಂಪದದಲಿ ಕಂಡ ಒಂದು ಸಣ್ಣ ಬರವಣಿಗೆಯ ತಪ್ಪಿನ ಬಗ್ಗೆ ಇಲ್ಲಿ ಹೇಳುವೆ.

ಜಗದೊಳಗೆ ಮೊದಲು ಜನಿಸಿದಳು ಹುಡುಕಿದರೆ ಮೂಲ ಸಿಗದಯ್ಯ

ಸವಿ ಸವಿ ನೆನಪು ಸಾವಿರ ನೆನಪು

ಸಾವಿರ ಕಾಲಕು ಸವೆಯದ ನೆನಪು

ಎದೆಯಾಳದಲಿ ಬಚ್ಚಿಕೋಡಿರುವ ಅಚ್ಚಲಿಯದ ನೂರೊಂದು ನೆನಪು

ಸವಿ ಸವಿ ನೆನಪು ಸವಿ ಸವಿ ನೆನಪು ಸಾವಿರ ನೆನಪು

ಎದೆಯಾಳದಲಿ ಬಚ್ಚಿಕೋಡಿರುವ ಅಚ್ಚಲಿಯದ ನೂರೊಂದು ನೆನಪು

ಏನೊ ಒಂದು ತೊರೆದ ಹಾಗೆ ..

ಯಾವುದೊ ಒಂದು ಪಡೆದ ಹಾಗೆ ..

ಅಮ್ಮನು ಮಡಿಲ ಅಪ್ಪಿದಹಾಗೆ ..

ಕಣ್ಣಂಚಲ್ಲೀ .... ನಮ್ಮ್ ಅಮ್ಮನ ನೆನಪು

ಪ್ರಭಾವ

ಈ ಕಥೆ ನನ್ನದಲ್ಲಾ, ಯಾವಾಗಲೋ ಕೇಳಿದ್ದು.

ಒಬ್ಬ ಸನ್ಯಾಸಿಯಿದ್ದ, ದಿನವೂ ಊರಿನಲ್ಲಿ ಭಿಕ್ಷೆ ಬೇಡಿ ಬದುಕುತ್ತಿದ್ದಾ, ಯಾರಾದರೂ ಸಮಸ್ಯೆ ತಂದರೆ ತನ್ನ ಕೈಲಾದ ಮಟ್ಟಿಗೆ ಪರಿಹರಿಸುತ್ತಿದ್ದಾ.

ಕ್ರಾಂತಿಯೋಗಿಗೆ ನಮನ

ಕ್ರಾಂತಿಯೋಗಿಗೆ
-------------

ನೀ ಕ್ರಾಂತಿಯೋಗಿಯಣ್ಣ
ನಿನಗಿದೋ ಕೋಟಿ ನಮನ
ಅತ್ಯುನ್ನತ ವಿಚಾರಧಾರೆಗಿದೋ ನಮನ
ನುಡಿದಂತೆ ನೆಡೆದ ಧೀಮಂತಿಕೆಗಿದೋ ನಮನ

ಧಿಕ್ಕರಿಸಿರಿ ಜಾತೀಯತೆ
ಹರಡಿರಿ ಸಮಾನತೆಯೆಂದೆ
ದಯವೇ ಧರ್ಮ
ಏಕತೆಯೆ ಮಂತ್ರ
ಕಾಯಕವೆ ಕೈಲಾಸ
ಭಕ್ತಿಯೇ ನೈವೇದ್ಯವೆಂದೆ

ಸುವಿಚಾರಗಳ ವಿನಿಮಯಕೆ
ಅನುಭವ ಮಂಟಪವೆಂದೆ
ಹಂಚಿ ಬಾಳುವುದೇ ಪರಮಧರ್ಮ,

90ರ ಹೊಸ್ತಿಲಲ್ಲಿ ಬಿ.ವಿ. ಕಕ್ಕಿಲ್ಲಾಯ: ಹೊಸ ಪೀಳಿಗೆಯೊಂದಿಗೆ ಒಂದು ಸಂವಾದ

 ನಮ್ಮ ನಾಡಿನ ಹಿರಿಯ ಮುತ್ಸದ್ಧಿ ಶ್ರೀ ಬಿ.ವಿ. ಕಕ್ಕಿಲ್ಲಾಯರಿಗೆ ಇನ್ನು ತೊಂಭತ್ತರ ಹರೆಯ. ಭಾರತ ಕಮ್ಯೂನಿಸ್ಟ್ ಪಕ್ಷದ ನಾಯಕರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣ ಚಳುವಳಿಯ

ಅದೇ ಚಂದ್ರನಡಿ ಭಾವನೆಗಳ ಭಿತ್ತಿ ...

ಇತ್ತೀಚೆಗೆ ನಾನು ನೋಡಿದ ಸ್ಪಾನಿಷ್ ಚಿತ್ರ.

LA MISMA LUNA ( Under the same moon )
- Director: Patricia Riggen .

ಒಬ್ಬ ಪುಟ್ಟ ಹುಡುಗನ ದಿಟ್ಟ ಪಯಣದ ಕತೆ.
ಒಂಭತ್ತು ವರ್ಷದ ಕಾರ್ಲಿತೋಸ್, ಅಮೇರಿಕಾದಲ್ಲಿರುವ ತನ್ನ ತಾಯಿಯನ್ನು ಸೇರಲು ಮೆಕ್ಸಿಕೋದಿಂದ ಅಮೇರಿಕಾಗೆ ಪ್ರಯಾಣ ಬೆಳೆಸುತ್ತಾನೆ. ಆತನ ತಾಯಿ ರೊಸಾರಿಯೊ ಮಗನ ಉತ್ತಮ ಭವಿಷ್ಯಕ್ಕಾಗಿ ನಾಲ್ಕು ವರ್ಷಗಳಿಂದ ಅನಧಿಕೃತವಾಗಿ ಅಮೇರಿಕಾದಲ್ಲಿ ದುಡಿಯುತ್ತಿರುತ್ತಾಳೆ. ಅನಿವಾರ್ಯ ಕಾರಣಗಳಿಂದಾಗಿ ತಾಯಿ, ಮಗ ಪರಸ್ಪರರನ್ನು ಭೇಟಿಯಾಗಲು ನಿರ್ಧರಿಸುತ್ತಾರೆ.
But, It becomes an emotional journey and a love story between a mother and a son.

ರೊಸಾರಿಯೊಗೆ , ಮಗನನ್ನೂ ಸಹ ಅಮೇರಿಕಾಗೆ ಕರೆದುಕೊಂಡು ಬರುವ ಯೋಚನೆ. ಆದರೆ ತಾನು ಅಮೇರಿಕಾಗೆ ಬಂದಿರುವುದೇ ಕಾನೂನು ಬಾಹಿರ. ಯಾವುದೇ documentಗಳೂ ಆಕೆಯಲ್ಲಿಲ್ಲ. ಇನ್ನು ಮಗನನ್ನು ಕರಕೊಂಡು ಬರುವುದಾದರೂ ಹೇಗೆ ಎಂಬ ಚಿಂತೆ ಆಕೆಯನ್ನು ಕಾಡುತ್ತಿರುತ್ತದೆ.