ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

೧೦೦ ವರ್ಷಗಳಿ೦ದ ಟಾಟಾ

೧೦೦ ವರ್ಷಗಳು ಕಳೆದರೂ ಕೂಡ ಇನ್ನೂ ನಾವು ಐ.ಐ.ಎಸ್.ಸಿ ಯನ್ನು ಟಾಟಾ ಇನ್ಸ್ಟಿಟ್ಯೂಟ್ ಎ೦ದೇ ಕರೆಯುತ್ತೇವೆ. ಧಾರವಾಡದಲ್ಲಿ ಆಗಲೇ ೬೦೦ ಎಕರೆ ಜಾಗವನ್ನು ಹೊ೦ದಿರುವ ಟಾಟಾರವರಿಗೆ, ಹೋದ ವರ್ಷ ಇನ್ನೂ ೩೦೦ ಎಕರೆ ಜಾಗವನ್ನು ಸರ್ಕಾರ ನೇಮಿಸಿದೆ. ಈ ಜಾಗದಲ್ಲಿ ಬಹುಬೆಲೆಯ ಬಸ್ ನಿರ್ಮಾಣಕ್ಕೆ ಟಾಟಾರವರು ಬ್ರೆಜಿಲ್ ನ ಮಾರ್ಕೊಪೋಲೋ ಕ೦ಪನಿಯ ಜೊತೆ ಒಡ೦ಬಡಿಕೆ ಮಾಡಿಕೊ೦ಡಿದೆ.

‘ಧರಣಿ’ - ಕವನ

ಧರಣಿ

ಉದ್ಯಾನವನದ ಕೊನೆಯಲ್ಲಿ
ಶುರುವಾಗಿತ್ತೊಂದು ಧರಣಿ
ಸರಕಾರವನು ಖಂಡಿಸಿ,
ಅವರವರ ಕಷ್ಟಗಳ ಬಣ್ಣಿಸಿ
ಹಸ್ತಾಕ್ಷರಗಳ ಸಂಗ್ರಹಿಸಿ,
ಆರಂಭದ ಮೊದಲೇ
ಕೊನೆ ಕಂಡಿತಲ್ಲಿ
ಬಹು ಜನರ ಕನಸು ಧರಣಿ.

ಬಾವುಟಗಳ ಹಿಡಿದು
ಧರಣಿಕರ್ತರೆಲ್ಲರೂ ಅಣಿ,
ಗುಡುಗು ಸಿಡಿಲಿನ
ಚುರುಕು ಮಾತಿನ ದನಿ,
ಜೊತೆ ನೀಡುವಂತೆ
ತುಂತುರು ಮಳೆಹನಿ.

ಸಂಪದ ಒಂದು ಮೈಲಿಗಲ್ಲನ್ನು ದಾಟಲಿದೆ!

ಕ್ರಿಕೆಟಿನಲ್ಲಿ ಸಾವಿರ,ನೂರು ಇವನ್ನೆಲ್ಲಾ ಒಂದು ಮೈಲಿಗಲ್ಲು ಅಂತ ತೆಗೆದುಕೊಂಡು ಅದನ್ನು ದಾಟುವ ಕ್ಷಣದ ಪ್ರತೀಕ್ಷೆಯಲ್ಲಿ ಆಟ ಸಾಗುತ್ತದೆ.

ಆ ರೀತಿ ನೋಡಿದರೆ ಸಂಪದವೂ ಒಂದು ಮೈಲಿಗಲ್ಲಿನ ಸಮೀಪ ಇದೆ. ಅದನ್ನು ಯಾವಾಗ ದಾಟುತ್ತದೋ ಎಂಬ ಕ್ಷಣಗಣನೆ ಆರಂಭಿಸಬಹುದು.

ಹುಡುಕಾಟ

ಇರುವೆ ಜೊತೆಗೆ ಮನದ ಭಾವದೊಳಗೂಡಿ,
ಬರುವೆ ನಿನ್ನಂತರಂಗದಮಾತುಗಳೇ ನಾನಾಗಿ,
ಎಂದೆಲ್ಲಾ ಹೇಳಿ, ಮನ ಸೇರಿ,
ಬರಿಯ ಮೌನವಾದನಲ್ಲಾ...!
ನಲ್ಲ- ಬರಿಯ ಮೌನವಾಗಿಹನಲ್ಲಾ?!

ಕಣ್ಣೀರ ಹನಿಗೆಲ್ಲಾ ಕರಗಿ ನೀರಾದವನು,

ಈ ಬ್ಲಾಗ್‌ ಪೋಸ್ಟಿಗೆ ಹೆಸರಿಲ್ಲ.

ಆಗಲೇ ನಿನ್ನ ಹುಟ್ಟುಹಬ್ಬವಾಗಿ ಮೂರ್ನಾಕು ದಿನ ಕಳೆದಿದೆ. ನೆನಪೇ ಆಗಲಿಲ್ಲ. ಒಂದು ಗ್ರೀಟಿಂಗ್ ಆದರೂ ಕಳಿಸಬಹುದಿತ್ತು. ಈಗ ಒಳ್ಳೊಳ್ಳೆ ಗ್ರೀಟಿಂಗ್ ಕಾರ್ಡುಗಳು ಸಿಗುತ್ತವೆ. ಬಣ್ಣಬಣ್ಣದ್ದು, ಫಳಫಳ ಹೊಳೆಯುವದು. ಕೆಲವದರಲ್ಲಿ ಇಂಗ್ಲೀಷಿನ ಒಳ್ಳೊಳ್ಳೇ ಸಾಲುಗಳು ಇರುತ್ತವೆ. ಇನ್ನು ಕೆಲವಲ್ಲಿ ಕೆಟ್ಟಕೆಟ್ಟ ಪ್ರಾಸದ ಸಾಲುಗಳು. ಶುಭದ ಬಗ್ಗೆ, ಬದುಕಿನ ಬಗ್ಗೆ, ವಿಸ್ಮಯದ ಬಗ್ಗೆ, ಪುಣ್ಯ,ಅದೃಷ್ಟದ ಬಗ್ಗೆ ಹಾಗೂ ಪ್ರೀತಿ-ಶಾಂತಿಯ ಬಗ್ಗೆ. ಬಣ್ಣಬಣ್ಣದ್ದು. ಫಳಫಳ ಹೊಳೆಯುವದು. ನನಗೆ ಕೊಳ್ಳೋದಕ್ಕೆ ಕಷ್ಟವೇನಿಲ್ಲ. ಕೈತುಂಬಾ ಸಂಬಳ. ಸರಿಯಾಗಿ ಪರಿಚಯವಿಲ್ಲದವರಿಗೂ ಕಾರ್ಡು ಕಳಿಸಿರುವಾಗ, ನಿನಗೆ ಸ್ವಲ್ಪ ಹೆಚ್ಚಿನ ಬೆಲೆಯದ್ದೇ ಕೊಳ್ಳಬಹುದಿತ್ತು.

ಆದರೆ ನೀನೀಗ ಎಲ್ಲಿದ್ದಿ ಅಂತ ಗೊತ್ತಿಲ್ಲದ್ದರಿಂದ ಗ್ರೀಟಿಂಗ್ ಕಾರ್ಡಿನಿಂದ ಏನೂ ಪ್ರಯೋಜನವಿಲ್ಲ, ಬಿಡು. ಇದರಿಂದ ಬೇಸರವೇನೂ ಇಲ್ಲ. ಯಾಕೆಂದರೆ ನಿನ್ನನ್ನು ಹುಡುಕೋದನ್ನೇ ಬಿಟ್ಟುಬಿಟ್ಟಿದ್ದೇನೆ. ನಿನ್ನನ್ನು ಹುಡಕೋಕೆ ಹೋದರೆ ಈಗೀಗ ಸಿನಿಕತೆ, ಕುಹಕ, ಅನುಮಾನ ಸಿಗತ್ತವೆ. ಅವೆಲ್ಲಾ ಇರಲಿ ಅಂದರೂ, ಅವೆಲ್ಲಾ ಸರಿಯಾದ ಕಾರಣಕ್ಕ ಅನ್ನೋದು ಮುಖ್ಯ ಪ್ರಶ್ನೆ.

ನಮ್ಮೂರ ಮಂದಾರ ಹೂವು ಸಿನಿಮಾದ ಭಯಾನಕ ದೃಶ್ಯ

ಇ-ಟಿವಿ ಚಾನೆಲ್‌ನಲ್ಲಿ ಯಾವುದೋ ಚಲನಚಿತ್ರ ಪ್ರದರ್ಶನವಾಗುತ್ತಿತ್ತು. ಪ್ರಾಯಶ: "ನಮ್ಮೂರ ಮಂದಾರ ಹೂವೇ". ಅದರಲ್ಲಿ ನೀರಿಗೆ ಬಿದ್ದ ಹುಡುಗನೋರ್ವನನ್ನು ಶಿವರಾಜ ಕುಮಾರ್ ರಕ್ಷಿಸುತ್ತಾರೆ. ಹುಡುಗನ ಹೊಟ್ಟೆ ಅದುಮಿ ನೀರು ತೆಗೆಯುತ್ತಾರೆ. ಹುಡುಗ ಚಲನೆ ತೋರಿಸುವುದಿಲ್ಲ.ಕೃತಕ ಉಸಿರಾಟ ಮಾಡಿ ಹುಡುಗನನ್ನು ಬದುಕಿಸಲು ಶಿವರಾಜ ಕುಮಾರ್ ಪ್ರಯತ್ನಿಸುತ್ತಾರೆ.

ಮುರಳಿ

'ಟೆಕ್ ಸಂಪದ'ದ ಒಟ್ಟಾರೆ ವಿಶನ್ನಿನ ಹಿಂದಿರುವ ಮನಸ್ಸು ಹಾಗೂ ಯೋಜನೆಯ ಟೀಮ್ ಲೀಡರ್ ಸಂಪದದ ಗೆಳೆಯ [:http://sampada.net/user/muralihr|ಮುರಳಿ]. ನಿತ್ಯ "ಲೇ, ಬೇಗ ರೆಡಿ ಮಾಡೋ - ಇದು ಇಂಪಾರ್ಟೆಂಟು" ಅನ್ನುತ್ತ ಕೆಲಸವನ್ನು push ಮಾಡುವವ ಇವನೆ. ಟೆಕ್ ಸಂಪದಕ್ಕಾಗಿ ಕಳೆದ ಹಲವು ತಿಂಗಳುಗಳಿಂದ ಸತತ ಸಕ್ರಿಯನಾಗಿರುವವನೂ ಕೂಡ ಇವನೇ. ತಂತ್ರಜ್ಞಾನದ ಹಲವು ವಿಷಯಗಳಿಂದ ಗ್ರಾಸ್ ರೂಟ್‌ ಟಚ್ ಮಾಡುವ ನಿಜವಾದ ಕಾಳಜಿ ಉಳ್ಳವ. ಸಂಪದದ [:http://sampada.net/user/5/|ಐದನೇ ಸದಸ್ಯ].

ನಿನ್ನೆ ಮುರಳಿ ಅವನ ಡಿ ಎಸ್ ಎಲ್ ಆರ್ ಕ್ಯಾಮೆರಾ ಹಿಡಿದು ಮನೆಗೆ ಬಂದಿದ್ದ. ಅವನ ಕ್ಯಾಮೆರಾದಲ್ಲಿಯೇ ಅವನ ಫೋಟೋ ಬಂದದ್ದು ಹೀಗೆ:

Murali H R