ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಗುರಜಿ ಹಾಡು

ನಾನು ಚಿಕ್ಕವನಿದ್ದಾಗಿನ ನೆನಪು....
ಮುಂಗಾರು ಮಳೆ ಬರುವದು ತಡವಾದರೆ ನಮ್ಮ ಕಡೆ ಗುರಜಿ ಆಡಿಸುವ ಸಂಪ್ರದಾಯ.
ಒಬ್ಬ ಹುಡುಗನನ್ನು ಅರೆಬೆತ್ತಲೆ ಮಾಡಿ (ಅವನೂ ಸಂತೊಷದಿಂದಲೇ ಒಪ್ಪುತ್ತಿದ್ದಾ) ತಲೆಯ ಮೇಲೆ ರೊಟ್ಟಿ ಬಡಿವ ಹಂಚು ಬೋರಲಾಕಿ ಅದರ ಮೇಲೆ ಸಗಣಿ ಗುಳ್ಳವ್ವ ಮಾಡಿ ಆ ಸಗಣಿ ಗುಳ್ಳವ್ವಕ್ಕೆ ಸಲ್ಪ ಹುಲ್ಲು ಸಿಗಿಸಿ ಮನೆ ಮೆನೆಗೆ ಹೋಗಿ ಗುರಜಿ ಹಾಡು ಹಾಡ್ತಾ ಇದ್ವಿ, ಆ ಮನೆಯವರು ಒಂದು ತಂಬಿಗೆ ನೀರನ್ನು ತಂದು ಗುರಜಿ ಮೇಲೆ ಸುರಿಯುತ್ತಿದ್ದರು ಆಗ ಗುರಜಿ ಆದ ಹುಡುಗ ಸಗಣಿ ಕೊಚ್ಚಿ ಹೋಗದಂತೆ ಗುಳ್ಳವ್ವನನ್ನು ಎರಡು ಕೈಯಿಂದ ಮುಚ್ಚಿಕೊಂಡು ತನ್ನ ಮೈ ಸುತ್ತಾ ಸುತ್ತುತ್ತಿದ್ದ ಆಗ ನಾವೆಲ್ಲಾ ಸಂಗಡಿಗರು ಕೆಳಗಿನಂತೆ ಹಾಡು ಹೇಳುತ್ತಿದ್ವಿ.

ಗುರಜಿ...ಗುರಜಿ.....
ಎಲ್ಲಾಡಿ ಬಂದೆ...
ಹಳ್ಳಾ ಕೊಳ್ಳಾ ತಿರುಗಾಡಿ ಬಂದೆ
ಉದ್ದತ್ತಿನ್ಯಾಗಾ ಉರುಳಾಡಿ ಬಂದೆ

ಮ್ಯಾದಾರವ್ವ ಏನ್ ಹಡದಾಳಾ
ಹೆಣ್ನ ಹಡದಾಳ
ಹೆಣ್ಣಿನ ತಲಿಗೆ ಎಣ್ಣಿಲ್ಲೋ ಬೆಣ್ಣಿಲ್ಲೋ

ಕುಂಬಾರಣ್ಣಾ ಮಣ್ಣಾ ತಂದಾನ
ಮಣ್ಣ ಕಲಸಾಕ ನೀರಿಲ್ಲೊ ನಾರಿಲ್ಲೊ

ರಾಯಲ್ ಚಾಲೆಂಜರ್ಸ್, ಬೆಂಗಳೂರು...

ರಾಯಲ್ ಚಾಲೆಂಜರ್ಸ್, ಬೆಂಗಳೂರು. ೭ ಪಂದ್ಯಗಳಲ್ಲಿ ೫ನ್ನು ಸೋತ ಬಳಿಕ ಸಿ.ಇ.ಓ ಚಾರು ಶರ್ಮನನ್ನು ಮನೆಗೆ ಕಳಿಸಲಾಗಿದೆ. ಈ ಲೇಖನವನ್ನು ಬೆಂಗಳೂರು ತಂಡ ತನ್ನೆಲ್ಲಾ ಪಂದ್ಯಗಳನ್ನು ಆಡಿದ ಬಳಿಕ ಬರೆಯಬೇಕೆಂದಿದ್ದೆ. ಆದರೆ ಇದುವರೆಗೆ ಈ ತಂಡ ನೀಡಿದ ಹೀನಾಯ ಪ್ರದರ್ಶನದಿಂದ ಬೇಸತ್ತು ಈಗಲೇ ಗೀಚುತ್ತಿದ್ದೇನೆ.

ಆರು ಹುಸಿ ವಿದ್ಯೆಗಳು

ಕನ್ನಡಕಂದರು ಆರು ಬಗೆಯ ಹುಸಿವಿದ್ಯೆಗಳ ಬಗ್ಗೆ ಸಂಸ್ಕೃತ ಸುಭಾಷಿತಗುಚ್ಛವೊಂದನ್ನು ಹಾಕಿದ್ದರು. ನನಗೆ ಅರ್ಥವಾದ ಮಟ್ಟಿಗೆ ಕನ್ನಡಿಸಿರುವೆ.

ಇನ್ನೂ ಒಳ್ಳೆಯ ಅನುವಾದವನ್ನು ಕನ್ನಡಕಂದರು ಕೊಡುವ ಸಾಧ್ಯತೆ ಇದೆ ;) ಅಲ್ಲಿಯವರೆಗೆ ಇದು ಓದಿ!

ಕಲಿತದು ವಿದ್ಯೆ ಮಾಡಲದು ನೆರವು ತನಗೋ ಮೇಣ್ ಪರರಿಗೋ
ಅದಿಲ್ಲದೆ ಬರಿ ಹೊತ್ತಿಗೆಯೊಳಿರಲದರಿಂದೇನು ಭಾರವಿದ್ಯೆಯಿಂ? || 1||

ಹಿರಿಮೆಯಿಂದ ಒಯ್ಯಬೇಕದು ಸಟೆಯಿಂ ದಿಟದೆಡೆಗೆ
ಅಲ್ಲದೆ ದಿಟದಿಂ ಸಟೆಯೆಡೆಗೊಯ್ದರದು ಕೀಳುವಿದ್ಯೆಯು ||2||

ಸುಭಾಷಿತಗಳು

ಷಣ್ಮಿಥ್ಯಾವಿದ್ಯಾಃ
ಉಪಕಾರಾಯ ಯಾ ಪುಂಸಾಂ ನ ಪರಸ್ಯ ನ ಚಾತ್ಮನಃ|
ಗ್ರನ್ಥಸಞ್ಚಯಸಮ್ಭಾರೈಃ ಕಿಂ ತಯಾ ಭಾರವಿದ್ಯಯಾ||೧||
ಅನ್ಯಾಯಃ ಪ್ರೌಢವಾದೇನ ನೀಯತೇ ನ್ಯಾಯತಾಂ ಯಯಾ|
ನ್ಯಾಯಶ್ಚಾನ್ಯಾಯತಾಂ ಲೋಭಾತ್ ಕಿಂ ತಯಾ ಕ್ಷುದ್ರವಿದ್ಯಯಾ||೨||
ಅನುಷ್ಠಾನೇನ ರಹಿತಾ ಪಾಠಮಾತ್ರೇಣ ಕೇವಲಮ್|
ರಞ್ಜಯತ್ಯೇವ ಯಾ ಲೋಕಂ ಕಿಂ ತಯಾ ಶುಕವಿದ್ಯಯಾ||೩||

ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು

ಒತ್ತಕ್ಷರಗಳು ಬೇಱೆ. ಸಂಯುಕ್ತಾಕ್ಷರಗಳು ಬೇಱೆ. ಒತ್ತಕ್ಷರಗಳೆಂದರೆ ಒಂದೇ ವ್ಯಂಜನ ಒತ್ತಲ್ಪಟ್ಟು ಉಚ್ಚರಿಸಲ್ಪಡುವುದು. ಉದಾ: ಕ್ಕ, ಚ್ಚ, ಟ್ಟ, ತ್ತ, ನ್ನ ಇತ್ಯಾದಿ. ಆದರೆ ಸಂಯುಕ್ತಾಕ್ಷರಗಳೆಂದರೆ ಕ್ಷ, ಕ್ಲ ಇತ್ಯಾದಿ ವಿಜಾತೀಯ ವ್ಯಂಜನಗಳು ಸೇರಿ ಆಗುವ ಅಕ್ಷರಗಳು. ಕನ್ನಡವನ್ನು ಚೆನ್ನಾಗಿ ಗಮನಿಸಿದರೆ ಸಂಯುಕ್ತಾಕ್ಷರಗಳು ಸಂಸ್ಕೃತಕ್ಕಿಂತ ಕಡಿಮೆ.

ಬದುಕು ಬವಣೆಯಾಗದಿರಲಿ

ಬದುಕನ್ನು ಬವಣೆಯೆಂದಿಣಸದಿರು

ಬವಣೆಪಟ್ಟರೂ ಜೀವಂತ ಹೋದವರುಂಟೆ?

 

ಸಂಕಟಗಳಿಗೆಲ್ಲ ಆಸೆಯೇ ಬೇರು

ಆಸೆಯ ಬಲೆಯಿಂದ ಪಾರಾದವರುಂಟೆ?

 

ತನ್ನೊಟ್ಟಿಗೆ ತಾನಾಗಿರು

ತಾನಾಗಿ ಎಲ್ಲ ದೊರೆವುದು

 

ತನ್ನಂಬುಗೆ ಇರಲಿ

ಅದು ಜಂಬ ಅನಿಸದಿರಲಿ

 

ಬದುಕಿದು ಒಡೆಯನ ತೇರು

ನಗುನಗುತಲೆ ಎಳೆಯುತಿರು.

ಯಾವುದ ಓದಲಿ? ಯಾವುದ ಕೇಳಲಿ?

ಭಾಷೆಗಳೆಷ್ಟೋ , ಪುಸ್ತಕಗಳೆಷ್ಟೋ
ಓದಲಾರೆ ಎಲ್ಲವನು
ಸಿನೆಮಾಗಳೆಷ್ಟೋ ಛಾನೆಲ್ಲುಗಳೆಷ್ಟೋ
ನೋಡಲಾರೆ ಎಲ್ಲವನು
ಹಾಡುಗಳೆಷ್ಟೋ ಸಂಗೀತವದೆಷ್ಟೋ
ಕೇಳಲಾರೆ ಎಲ್ಲವನು
ಆಯುಷ್ಯವೆಷ್ಟೋ , ದಿನದಲಿ ಬಿಡುವು ಅದೆಷ್ಟೋ
ಕಣ್ಣು ಕಿವಿಗಳಿರುವದೇ ಎರಡು
ಯಾವುದ ಓದಲಿ? ಯಾವುದ ಕೇಳಲಿ ?
ಬಿಟ್ಟೇಬಿಟ್ಟೆನು ಎಲ್ಲವನು !

ಪದವಿ ಪೂರ್ವ ಕಾಲೇಜುಗಳ ಪಟ್ಟಿ

ಕರ್ನಾಟಕದ ಎಲ್ಲಾ ಪದವಿ ಪೂರ್ವ ಶಿಕ್ಷಣ ಸಂಸ್ಥೆಗಳ ಹೆಸರು, ವಿಳಾಸ ಹಾಗೂ ವಿವರಗಳು(pdf) ಈ ಕೆಳಗಿನ ಕೊಂಡಿಯಲ್ಲಿ ಲಭ್ಯವಿರುತ್ತದೆ. ಕೊಂಡಿ: http://pue.kar.nic.in/pdffiles/PUCollegeList.pdf