ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಬಿದಿಗೆ

ನೆನ್ನೆ ನವರಾತ್ರಿ ಆರಂಭವಾಯಿತು. ಹೆಣ್ಣುಮಕ್ಕಳಿರೋ ಮನೆಯಲ್ಲಿ ಗೊಂಬೆಗಳನ್ನ ಅಟ್ಟ, ಪೆಟ್ಟಿಗೆ - ಎಲ್ಲೆಲ್ಲಿ ಜೋಪಾನ ಮಾಡಿಟ್ಟಿದ್ರೋ, ಅಲ್ಲಿಂದ ತೆಗೆದು ಜೋಡಿಸೋ ಕೆಲಸ. ಬಹುಶ: ಗೊಂಬೆಗಳಿಗೂ ವರ್ಷ ಪೂರ್ತಿ ಒಳಗೇ ಕುಳಿತು ಜಡ್ಡುಗಟ್ಟಿರುತ್ತೋ ಏನೋ. ಆದಕ್ಕೆ ಹೊರಬಂದ ತಕ್ಷಣ ಗಾಳಿ ಕುಡಿದು ಕಳೆಕಳೆಯಾಗಿಬಿಡುತ್ತವೆ!

ನವರಾತ್ರಿ ಎಂದರೆ ಅಲ್ಲಲ್ಲಿ ಸಂಗೀತೋತ್ಸವಗಳು ನಡೆಯುವುದು ರೂಢಿ. ಅದೇ ಕಾರಣಕ್ಕೆ ಹೋದಬಾರಿಯಂತೆ ನಾನೂ ಸಂಗೀತದ ಬಗ್ಗೆಯೇ ಬರೆಯತೊಡಗಿದ್ದೇನೆ. ಇವತ್ತು ನನ್ನ ಮನಸ್ಸಿಗೆ ಬಂದ ಕೃತಿ ತ್ಯಾಗರಾಜರ ’ಗತಿ ನೀವನಿ’ ಎನ್ನುವ ತೋಡಿ ರಾಗದ ರಚನೆ.

ತ್ಯಾಗರಾಜರ ಘನರಾಗ ಪಂಚರತ್ನ ಕೃತಿಗಳು ಬಹಳ ಪ್ರಖ್ಯಾತ ರಚನೆಗಳು - ಅದರಲ್ಲೂ ಕೊನೆಯ ಪಂಚರತ್ನ ಕೃತಿಯಾದ ಎಂದರೋ ಮಹಾನುಭಾವುಲು ಎನ್ನುವುದಂತೂ ಸಂಗೀತವನ್ನು ಅಷ್ಟಾಗಿ ಕೇಳಿ ತಿಳಿಯದವರಿಗೂ ಗೊತ್ತಿರುವುದುಂಟು. ಆದರೆ, ಈ ಪಂಚರತ್ನ ಕೃತಿಗಳಲ್ಲದೇ, ಇನ್ನೂ ಕೆಲವು ಗುಂಪು-ರಚನೆಗಳನ್ನೂ ತ್ಯಾಗರಾಜರು ರಚಿಸಿದ್ದಾರೆ. ಆವುಗಳಲ್ಲಿ ಲಾಲ್ಗುಡಿ ಪಂಚರತ್ನ ಎಂಬ ಗುಂಪೂ ಒಂದು.

ಕನ್ನಡಿಗನಿಗಲ್ಲ ಈ ದಸರಾ..!!

ದಸರಾ ಬ೦ದೇ ಬಿಡ್ತು. ನಮ್ಮ ನಾಡ ಹಬ್ಬವನ್ನು ಇನ್ನೂ ಹೆಚ್ಚಿನ ಆಡ೦ಬರದೊ೦ದಿಗೆ ಈ ಬಾರಿ ಆಚರಿಸಲಾಗುತ್ತಿದೆ. ಆದರೆ ನಮ್ಮೂರ ದಸರಾ ಇತಿಹಾಸವನ್ನು ಮತ್ತದರ ಕಾರ್ಯಕ್ರಮಗಳನ್ನು ದಯವಿಟ್ಟು ಕನ್ನಡದಲ್ಲಿ ಮಾತ್ರ ಕೇಳಬೇಡಿರಿ.

ಗ್ನು/ಲಿನಕ್ಸ್ ಹಬ್ಬದ ದಿನ ಅರವಿಂದ ಕನ್ನಡದಲ್ಲಿ ಬರೆದಾಗ

ಮೈಸೂರಿನಲ್ಲವತ್ತು ಗ್ನು/ಲಿನಕ್ಸ್ ಹಬ್ಬ. ಕನ್ನಡದಲ್ಲಿ passionate ಆಗಿ ಬರೆಯಬೇಕೆಂದರೆ [:user/aravinda|ಅರವಿಂದನಿಗಿಂತ] ಉತ್ತಮ ಬೇರೆ ಯಾರೂ ಇರಲಿಕ್ಕಿಲ್ಲ. ಕನ್ನಡ ಅಂದ ಕೂಡ್ಲೆ ಇವನಿಗೆ ಶ್ರದ್ಧೆ, ಆಸಕ್ತಿ ದುಪ್ಪಟ್ಟು ಆಗುವುದು ಅಂತ ಹೇಳಿದರೂ ಉತ್ಪ್ರೇಕ್ಷೆಯಲ್ಲ! ನೀವೇ ನೋಡಿ. :-)
ಅವನಿಗೂ ತಿಳಿಸದೆ ಈ ಚಿತ್ರಗಳ ಸಿರೀಸ್ ಇರುವ ಅನಿಮೇಶನ್ ಹಾಕುತ್ತಿದ್ದೇವೆ ಇಲ್ಲಿ. :-)

ನಾಗರಹೊಳೆಯಲ್ಲಿ ಒಂಟಿ ಸಲಗ...

೨೭.೦೯.೦೮ ರಂದು ನಾವು ಬೆಂಗಳೂರಿನಿಂದ ಹೆಗ್ಗಡದೇವನಕೋಟೆ ಮೂಲಕ ನಾಗರಹೊಳೆಗೆ ಪ್ರಯಾಣ ಬೆಳೆಸುತ್ತಿದ್ದಾಗ ರಾಜೀವ್ ಗಾಂಧಿ ನ್ಯಾಷನಲ್ ಪಾರ್ಕ್ ನಲ್ಲಿ ಕಂಡ ಒಂಟಿ ಸಲಗ...

ದಸರಾ ಹಬ್ಬ

ಐತಿಹಾಸಿಕ ಮೈಸೂರು ದಸರಾ ಮಹೋತ್ಸವಕ್ಕೆ ಮಂಗಳವಾರ ಬೆಳಿಗ್ಗೆ 10-50ಕ್ಕೆ ಸಿದ್ದಗಂಗಾ ಮಠದ ಶ್ರೀಗಳಾದ ಡಾ.ಶಿವಕುಮಾರ್ ಸ್ವಾಮೀಜಿಯವರು ಚಾಮುಂಡಿಬೆಟ್ಟದಲ್ಲಿ ಅಧಿಕೃತವಾಗಿ ಚಾಲನೆ ನೀಡಿದರು. ಸಾಂಸ್ಕೃತಿಕ ನಗರದಾದ್ಯಂತ ಪ್ರವಾಸಿಗರ ಮಹಾಪೂರವೇ ತುಂಬಿದ್ದು,ಎಲ್ಲೆಡೆ ಶೃಂಗಾರದಿಂದ ಕಂಗೊಳಿಸುತ್ತಿರುವ ದಸರಾಕ್ಕೆ ಇಂದು ಚಾಲನೆ ದೊರೆತಿದೆ.