ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕತ್ತೆ=ಕುದುರೆ=ಸಮಾನತೆ

ಶೀರ್ಷಿಕೆ ತಮಾಷೆಯಾಗಿದೆಯಲ್ವಾ?

ವಾಸ್ತವ ಅದಕ್ಕಿಂತ ಹೆಚ್ಚು ತಮಾಷೆಯಾಗಿರುತ್ತದೆ. ಅಷ್ಟೇ ಅಲ್ಲ, ಅನೇಕ ಸಾರಿ ದುರಂತವೂ ಆಗಿರುತ್ತದೆ.

ಒಂದು ಕತೆ ಕೇಳಿ. ಕಂಪನಿಯೊಂದರಲ್ಲಿ ಹಲವಾರು ಮಹತ್ವದ ಹುದ್ದೆಗಳು ಖಾಲಿ ಇದ್ದವು. ಸುದ್ದಿ ತಿಳಿಯುತ್ತಲೇ ಕುದುರೆಗಳು ಅರ್ಜಿ ಹಾಕಿದವು. ಸ್ವಲ್ಪ ದಿನಗಳ ನಂತರ ಸಂದರ್ಶನಕ್ಕೆ ಕರೆ ಬಂದಿತು.

ದಾಟುವ ಮುನ್ನ ಜಾರುವ ಮನ

ಬೆಳಗಿನ ಬೆಂಗಳೂರು ಟ್ರಾಫಿಕ್‌ ಅದು. ಅರ್ಜೆಂಟಿದ್ದರೆ ಭಯಾನಕ. ಅವಸರ ಹೆಚ್ಚಾದಷ್ಟೂ ನಿಧಾನ. ಪ್ರತಿ ಅರ್ಧ ನಿಮಿಷಕ್ಕೆ ಗಡಿಯಾರ ನೋಡುತ್ತ, ಕಿಟಕಿಯಾಚೆ ಇಣುಕುತ್ತ, ಯಾರನ್ನೋ ಶಪಿಸುತ್ತ ಕಾಯುವುದನ್ನು ಬಿಟ್ಟರೆ ಮಾಡುವಂಥದ್ದು ಬೇರೆ ಏನೂ ಇರುವುದಿಲ್ಲ.

ಕನ್ನಡದ ನಾರೀಮಣಿಗಳೆಲ್ಲಿ??

ನಾನು ಇತ್ತೀಚೆಗಷ್ಟೆ ಸಂಪದದ ಲೇಖನಗಳನ್ನು/ಅಭಿಪ್ರಾಯಗಳನ್ನೂ ಓದುತ್ತಾ, ಸ್ವಲ್ಪ ಮಟ್ಟಿಗೆ ಬರೆಯುತ್ತಾ ಇದ್ದೇನೆ...ಆದರೆ..
ಒಂದು ಅಂಶ ಗಮನಿಸಿದೆ...ಎಲ್ಲೂ...ಮಹಿಳೆಯರಿಂದ ಬರೆದಂತಹ ಲೇಖನಗಳಾಗಲೀ... ಅಭಿಪ್ರಾಯಗಳಾಗಲೀ.. ಕಾಣಲಿಲ್ಲ...
ಕಾರಣ ಏನು??
ಮಹಿಳೆಯರಿಗೆ ಸಂಪದದಲ್ಲಿ ಪ್ರವೇಶವಿಲ್ಲವೋ???

ನಮಸ್ಕಾರ.....ನಮಸ್ಕಾರ.....ನಮಸ್ಕಾರ.....

ನಾನು ಸಂಪದಕ್ಕೆ ಹೊಸ ಸದಸ್ಯನಲ್ಲ. ಆದರೆ ಇಲ್ಲಿನ ಚಟುವಟಿಕೆಗಳಿಗೆ ಹೊಸಬ.
ಸ್ವಲ್ಪ ದಿನಗಳ ಹಿಂದೆಯೇ.. ನಾನು ಸದಸ್ಯನಾದೆ... ಆದರೆ ಕಾರಣಾಂತರಗಳಿಂದ ಇದರ ಹೊಳಹೊಕ್ಕು ನೋಡುವ ಅವಕಾಶವಿರಲಿಲ್ಲ. ಈಗ.. ದಿನಬೆಳಗಾದರೆ ಸಂಪದದ ಮುಖ ನೋಡಲಿಲ್ಲ ಅಂದರೆ ಏನೋ ಕಳಕೊಂಡಂತೆ.

ನಾನು ಯಾವ ಆತ್ಮ

ಪುಣ್ಯ ಕಾರ್ಯ ಮಾಡಿದವ ಪುಣ್ಯಾತ್ಮ
,

ಪಾಪಗಳನ್ನು ಮಾಡಿದವ ದುರಾತ್ಮ


ಪಾಪವನ್ನು ಮೆಟ್ಟಿ, ಪುಣ್ಯವನ್ನು ಕಟ್ಟಿ

ನೆಡೆದಾಡಿದವ ಇಳೆಯೊಳಗೆ ಮಹಾತ್ಮ

ದೇಶಕ್ಕಾಗಿ ಮಡಿದವ ಹುತಾತ್ಮ,

ಇದರೊಳಗೆ ನಾನ್ಯಾರೆಂದು ತಿಳಿಯದವ ನಿರಾತ್ಮ||

ನನ್ನ ಕಾವ್ಯ

ಇದ್ದಿದ್ದರೆ ಈಗಲೂ

ದುಶ್ಯಂತನಂತ ಗಂಡು,

ಶಾಕುಂತಲೆಯಂತ ಹೆಣ್ಣು,


ಆ ದುಂಬಿ ಹಾಡು,

ಹಚ್ಚ ಹಸಿರು ಕಾಡು,

ಆಗುತ್ತಿತ್ತು ನನ್ನ ಕಾವ್ಯ,

"ಅಭಿಜ್ಞಾನಶಾಕುಂತಲೆ"ಗಿಂತ

ಇನ್ನೂ ನವ್ಯ-ಭವ್ಯ||

ಬಹು ಏಕಾಂಗಿಗಳು

ಉದ್ಯನವನದಲ್ಲಿ ಎಲ್ಲಾ ಕಡೆ
ಬರೀ ಜೊಡಿಗಳು,
ಬಡಪಾಯಿ ದುಂಬಿಯನು
ಅಹ್ವಾನಿಸಿದವು ಹೂವುಗಳು|
ಆಕಾಶದೆಲ್ಲಿಡೆ ಮಿನುಗುತಿವೆ
ನೂರಾರು ತಾರೆಗಳು,
ಒಬ್ಬೊಂಟಿ ಚಂದ್ರನನು
ಸಂತೈಸುತಿದೆ ಭೂಮಿಕರುಳು|
ಕಡಲ ತೀರದಲಿ ಕಚ್ಚಿಕೊಂಡಿವೆ
ಪ್ರೇಮಿಗಳ ಮೈಮನಸ್ಸು,
ಏಕಾಂಗಿ ಸೂರ್ಯನ ಆರೈಸಿದೆ
ಮೋಡಗಳ ಚಲಿಸು-ಬಿರುಸು|
ಏಕಾಂಗಿ-ಒಂದಲ್ಲ,ಒಬ್ಬನಲ್ಲ,
ದುಂಬಿ,ಚಂದ್ರ,ಸೂರ್ಯ ಹೀಗೆ

ಪ್ರಕೃತಿ

ನೀ ಸೂರ್ಯ-ನಿನ್ನ ಆಗಮನ,

ಜೀವಜಂತು-ಲೊಕವೆಲ್ಲಾ ಪ್ರಕಾಶಮಾನ|

ನೀ ಗಾಳಿ-ನಿನ್ನ ಚಲನೆ,

ಇಳೆಯ ತುಂಬಾ ತಂಪು ಸಿಂಚನೆ|

ನೀ ನದಿಸಾಗರ-ನಿನ್ನ ಓಡುವಿಕೆ,

ಸಕಲ ಜೀವರಾಶಿಗಳ ಉದ್ದಾರಕೆ|

ನೀ ಗಿಡಮರ-ನಿನ್ನ ದ್ಯೇಯ,

ಭೂಮಿ ಇರಲಿ ಸದಾ ಹಸಿರುಮಯ|

ನೀ ಚಂದ್ರ- ನಿನ್ನ ನೆರಳು,

ಭುವಿಗೆಲ್ಲಾ ಬೆಳದಿಂಗಳು|

ನಾ ಮನುಜ-ನಿಮ್ಮೆಲ್ಲರ ಅಂಶ,