ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕಾಣದ ನಾಡಲ್ಲಿ ಹೀಗೊ೦ದು ದಿನ..

ಹದಿನೇಳು, ಏಪ್ರಿಲ್ ೨೦೦೪ ಬೆಳಿಗ್ಗೆ. ಬಿಡಲಾರೆ ಎ೦ದು ಅಳುತ್ತಿದ್ದ ಕಣ್ರೆಪ್ಪೆಗಳಿಗೆ ಬಲವ೦ತ ಮಾಡಿ ಬಿಡಿಸಿ ಕಣ್ಣು ಬಿಟ್ಟಾಗ ಬೆಳಿಗ್ಗೆ ೫ ಗ೦ಟೆ. ಸ್ವಲ್ಪ ಹೊತ್ತಿಗೇ ವಿಮಾನದವರು ಮಲೇಶಿಯಾದಲ್ಲಿ ಸಮಯ Actually ೭.೩೦ ಎ೦ದು ಬದಲಿಸಿದರು. ಎಲ್ಲಾ ಲಗ್ಗೇಜು ತೆಗೆದುಕೊ೦ಡು ಹೊರಗೆ ಬ೦ದು ಅದೊ೦ದು ಟ್ರೈನ್ ಹತ್ತಿ ಮಲೇಶಿಯಾದ ಏರ್ ಪೋರ್ಟ್ ಹೊರವಲಯಕ್ಕೆ ಬ೦ದೆವು. ಆಗ ಬಹುಶಃ ೮ ಗ೦ಟೆ.
ನಾನು ಒ೦ದೇ ವಾಕ್ಯದಲ್ಲಿ ಟ್ರೈನ್ ಹತ್ತಿ ಬ೦ದೆವು ಅ೦ದರೆ ಅಷ್ಟೇ ಸಲೀಸಾಗಿ ಬ೦ದೆವು ಅ೦ದುಕೊಳ್ಳಬಾರದು. ಅಲ್ಲಿ ಬರೆದು ತೂಗಿದ್ದ ಬೋರ್ಡ್‘ಗಳ Arrow mark ಗಳನ್ನು, ಅದರ ಮೇಲಿದ್ದ ಸೂಟ್ ಕೇಸ್ ಚಿತ್ರವನ್ನು ನೆಚ್ಚಿಕೊ೦ಡು ನಡೆಯುತ್ತಿದ್ದ ನಮಗೆ ಇದ್ದಕ್ಕಿದ್ದ೦ತೆ ಅದು ಮರೆಯಾಗಿ ನಮ್ಮ ಮುಖಗಳ ಮೇಲೆ ‘ಕ೦ಗಾಲು ಕಳೆ’ ಆವರಿಸುತ್ತಿದ್ದ೦ತೆ, ಅಲ್ಲೊಬ್ಬಳು ತಿಳಿನೀಲಿ ಸ್ಕಾರ್ಫ್ ಹಾಗೂ ನಿಲುವ೦ಗಿ ಧರಿಸಿದ ಪರಿಚಾರಿಕೆ ಹತ್ತಿರ ಬ೦ದು ‘ತ್ರೇನ್ ತ್ರೇನ್’ ಎ೦ದು ತೋರಿಸಿದಳು. (ಕ೦ಗಾಲು ಕಳೆ ಇರುವ ಮೂತಿಗಳನ್ನು ನೋಟದಲ್ಲೇ ಗುರುತಿಸಿ ಸಹಾಯ ಮಾಡಲೆ೦ದೇ ನಿಯಮಿತಳಾಗಿದ್ದಳೇನೋ!) ಇಷ್ಟು ಬುದ್ಧಿ ಪ್ರದರ್ಶನದ ನ೦ತರ ‘ತ್ರೇನ್’ ಹತ್ತಿ ಬ೦ದೆವು.

ಬಿಟ್ಟರೆ(B) ಮತ್ತೆ(M) ತಿರುಗಿ(T) ಸಿಕ್ಕಲ್ಲ(C) !!

ಸ್ನೆಹಿತರೆ, ನನ್ನ ಬತ್ತಳಿಕೆಯಿ0ದ ಒ0ದು ಕವನ

 

ಇದು ಬೆಂಗಳೂರು ನಗರ ಸಂಚಾರ

ಇಲ್ಲಿ ಹರಿವುದು BMTC ಮಹಾಸಾಗರ,

Timesense ಅನ್ನೊದು ಇದಕ್ಕಿಲ್ಲ

ಹಾಗಂತ ಬಿಟ್ಟರೆ ಮತ್ತೆ ತಿರುಗಿ ಸಿಕ್ಕಲ್ಲ !.

 

ಬಡವರ ಬಂಧು ,ಧೀನ ದಯಾಳು.

ಸಾರ್ವಜನಿಕರ ನಿಯ್ಯತ್ತಿನ ಆಳು

ಇದನ್ನೆರಲು ಎರಡು ಹೆಬ್ಬಾಗಿಲು

ಇದಕ್ಕೆ ಕಂಡಕ್ಟರೇ ಕಾವಲು !

 

ದುಡ್ಡಿನ ಮಿತವ್ಯಯ

ಅಂದರೆ, "ಕಾಸಿಗೆ ತಕ್ಕ ಕಜ್ಜಾಯ".

ಸೀಟಿಗಾಗಿ ಕಿತ್ತಾಟ ಸಿಗದಿದ್ದರೆ, ಪುಟ್ ಬೊರ್ಡ ನೆತಾಟ. !

 

ಹಳ್ಳ-ಕೊಳ್ಳಗಳ ಹಾರಿ

ಸಂದಿ-ಗೊಂದಿಗಳ ತೂರಿ

ನಡೆಸುವುದು ಸವಾರಿ

ಮೆಚ್ಚಲೆ ಬೇಕು ಇದರ ಕಾಯಕದ ಪರಿ !

ಎಲ್ಲಾ ರೀತಿಯ ಹಿಂದಿ ಹೇರಿಕೆಯನ್ನು ವಿರೋಧಿಸೋಣ

ಒಕ್ಕೂಟ ವ್ಯವಸ್ಥೆಯಲ್ಲಿ ಕನ್ನಡಕ್ಕೆ ಇರುವಷ್ಟೇ ಸ್ಥಾನಮಾನ ಹಿಂದಿಗೆ ಇದ್ದರೂ , ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿಸುವ ನಿಟ್ಟಿನಲ್ಲಿ ಕರ್ನಾಟಕದಲ್ಲಿರುವ ಉದ್ಯೋಗಕ್ಕೆ ಹಿಂದಿ ಭಾಷೆ ಕಲಿಯಬೇಕು, ಕನ್ನಡದ ಮಕ್ಕಳು ಹಿಂದಿಭಾಷೆಯನ್ನು ಶಾಲೆಯಲ್ಲಿ ಓದಬೇಕು. ಇದೇ ತರದ ಹತ್ತು ಹಲವಾರು ರೀತಿಯಲ್ಲಿ ಹಿಂದಿಯನ್ನು ಕನ್ನಡಿಗರ ಮೇಲೆ ಬಲವಂತವಾಗಿ ಹೇರಲಾಗುತ್ತಿದೆ.

'ಟಾಟಾ' ಹೋದ 'ಟಾಟಾ'!

ಇದೀಗ ಬಂದ ಸುದ್ದಿಯಂತೆ, ಜನಜನಿತವಾಗಿದ್ದ 'ಟಾಟಾ' ಎಂಬ ಪದವು ನಿಗೂಢ ರೀತಿಯಲ್ಲಿ ಜನತೆಯ ಬಾಯಿಂದ ನಾಪತ್ತೆಯಾಗಿದೆ.
ಸುಮಾರು ೧೫-೨೦(?) ವರ್ಷಗಳಿಂದ ಗೆಳೆಯರನ್ನು, ಅತಿಥಿಗಳನ್ನು ಬೀಳ್ಕೊಡಲು ಬಳಸುತ್ತಿದ್ದ ಈ ಪದ, ಈ ರೀತಿ ಮಾಯವಾಗಿರುವುದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ಧಾರವಾಡದಲ್ಲಿ ಧ್ಯಾನ

ನಾನು ಧಾರವಾಡಕ್ಕೆ ಹೋದಾಗಲೆಲ್ಲ ಪುರ್ಸೊತ್ತು ಮಾಡ್ಕೊಂಡು ಅಲ್ಲೆ ಕರ್ನಾಟಕ ಯುನಿವರ್ಸಿಟಿಗೆ ಹೋಗ್ತೇನಿ . ಕೈ ಕಾಲು ತಾಕಿಸಿಕೊಂಡು ಓಡಾಡುವ, ಬಗೆಬಗೆಯ ಸದ್ದಿನಲ್ಲಿ ಮಾತು ಕೇಳಿಸದ ಈ ಮುಂಬೈ ಎಲ್ಲಿ , ಅಲ್ಲಿ ಹೆಚ್ಚುಕಡಿಮೆ ನೀರವ ನಿರ್ಜನ ಜಾಗವೆಲ್ಲಿ ... ಅಲ್ಲಿ ಎತ್ತರೆತ್ತರ ಮರಗಳು ಮೌನದಲ್ಲಿ ಬಿಸಿಲು/ಮಳೆ /ಗಾಳಿಯಲ್ಲಿ ಗಪ್ಪ ನಿಂತಿರ್ತಾವ .

ಬಿಹಾರದಲ್ಲಿ ಪ್ರವಾಹ

ನೇಪಾಳ ಗಡಿಭಾಗದ ಕುಶಾದಲ್ಲಿ ಕೋಸಿ ನದಿಗೆ ಕಟ್ಟಿದ ಒಡ್ಡು ಒಡೆದ ಪರಿಣಾಮ ಕೆಲವೇ ಗಂಟೆಗಳಲ್ಲಿ ಉತ್ತರ ಬಿಹಾರದ ಐದು ಜಿಲ್ಲೆಗಳಾದ ಸುಪೌಲ್, ಅರಾರಿಯ, ಸಹರ್ಸಾ, ಮಾಧೇಪುರ ಮತ್ತು ಪುರ್ನಿಯಾ ಅಸ್ತಿತ್ವವೇ ಇಲ್ಲದಂತೆ ಜಲಾವೃತಗೊಂಡವು. ಈ ಪ್ರಾಂತಗಳು ಪ್ರತಿ ವರ್ಷ ಎದುರಿಸುತ್ತಿದ್ದ ಪ್ರವಾಹಕ್ಕಿಂತ ದುಪ್ಪಟ್ಟು ನಷ್ಟವನ್ನು ಈ ಬಾರಿಯ ವಿಪತ್ತು ತಂದೊಡ್ಡಿದೆ. ಬಿಹಾರದ ಕಣ್ಣೀರ ನದಿಯೆಂದೆ ಜನಜನಿತವಾಗಿರುವ ಕೋಸಿ ನದಿಯ ಪ್ರವಾಹದಿಂದಾಗಿ ಬಿಹಾರದ ಜನತೆ ಅಕ್ಷರಶಃ ತಮ್ಮ ಜೀವನದೊಂದಿಗೆ ಹೋರಾಟಕ್ಕಿಳಿದಿದ್ದಾರೆ. ಲಕ್ಷಾಂತರ ಮಂದಿ ಪ್ರವಾಹದಿಂದಾಗಿ ತಮ್ಮ ಮನೆಮಠ, ಕುಟುಂಬಿಕರು, ಸಂಬಂಧಿಗಳು ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಭೀಕರ ಪ್ರವಾಹದ ಪರಿಣಾಮ ಬಿಹಾರದ ಜನತೆ ತುಂಬಲಾರದ ನಷ್ಟಕ್ಕೀಡಾಗಿದ್ದಾರೆ; ಎಲ್ಲವನ್ನೂ ನೆರೆ ಕೊಚ್ಚಿಕೊಂಡು ಹೋಗಿದೆ. ಪ್ರವಾಹದ ಬಲಿಪಶುಗಳಲ್ಲಿ ಹೆಚ್ಚಿನವರು ಮಕ್ಕಳು. ಸಾವಿರಾರು ಮಕ್ಕಳು ನಿರ್ಗತಿಕರಾಗಿದ್ದಾರೆ. ನೇಪಾಳದಲ್ಲಿ ಪ್ರವಾಹ ತಡೆಗಾಗಿ ನಿರ್ಮಿಸಿದ್ದ ಮೊರಿಯು ಒಡೆದ ಕಾರಣ ಕೋಸಿ ನದಿ ಉಕ್ಕಿ ಹರಿಯುತ್ತಿದ್ದು, ಬಿಹಾರದ 16 ಜಿಲ್ಲೆಗಳು ಸಂಕಷ್ಟಕ್ಕೀಡಾಗಿವೆ.

ರಸ ಪ್ರಶ್ನೆಗಳು ಭಾಗ - ೨

ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ. ನನ್ನ ಈ ಪ್ರಯತ್ನ ಸ್ಪರ್ಧತ್ಮಕ ಪರೀಕ್ಷೆ ಬರೆಯುವವರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಈ ಜ್ಞಾನ ದೀವಿಗೆಯ ವರ್ಗದಡಿಯಲಿ ಲೇಖನಗಳನ್ನು ತರುತ್ತಿದ್ದೇನೆ.