ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಚಿಕಾಗೋ ನಗರದ, ’ಗ್ಲೋಬಲ್ ಮಾರುಕಟ್ಟೆ,’ ಯಲ್ಲಿ, ತರಕಾರಿ ಹಣ್ಣು-ಹೂಗಳ ಜೊತೆಯಲ್ಲಿ, ತೆಂಗಿನ ಕಡ್ಡಿಯ ಕಸಬರಿಗೆ ಲಭ್ಯ !

ಹಾಗೇ ಚಿಕಾಗೊನಗರದಲ್ಲಿ ಅಲ್ಲಿ-ಇಲ್ಲಿ ಸುತ್ತಿದಮೇಲೆ, ಮನೆಗೆ ವಾಪಸ್ಸಾಗುವ ಮೊದಲು, ’ಗ್ಲೋಬಲ್ ಮಾರ್ಕೆಟ್ ’, ಗೆ ಹೋಗುವ ವಾಡಿಕೆ. ಇಲ್ಲಿ ಚಕ್ಕಲಿ ತುಂಬಾಚೆನ್ನಾಗಿರುತ್ತೆ. ಸೀಮೆಬದನೆಕಾಯಿಯನ್ನು ಹೋಲುವ ತರಕಾರಿ ಅತಿ-ರುಚಿಕರ ! ನಮ್ಮ ಭಾರತೀಯಗೆಳೆಯರು ತಮ್ಮ ಸ್ನೇಹಿತರಿಗೂ ತರಕಾರಿ, ಸಾಮಾನುಗಳನ್ನು ಖರೀದಿಸುತ್ತಾರೆ.

ಆ ಬಿಂದು ಎಲೆಯಲ್ಲೇ ಕುಣಿದಾಡುತಿರಲು ....

ಆ ಮಂಜು ಗಿರಿಯನ್ನು
ಚುಂಬಿಸುತಲಿರಲು

ಆ ಮೋಡ ಬಾನನ್ನು
ಬಿಡಲೊಲ್ಲೆನೆನಲು

ಆ ಬಿಂದು ಎಲೆಯಲ್ಲೇ
ಕುಣಿದಾಡುತಿರಲು

ನಿನ್ನ ನೆನಪೇ ಸುಳಿಯುವುದು
ಮನದಲ್ಲಿ ಮೊದಲು ...


ಅನುಪ್ ಮಲೆನಾಡು

ಱೞೋಪಾಖ್ಯಾನ ಓದಿ

ನನ್ನ "ೞ ಮತ್ತು ಳ ಹಾಗೂ ಱ ಮತ್ತು ರ ಉಚ್ಚಾರವ್ಯತ್ಯಾಸ" ಲೇಖನದಡಿ ಱೞ(ೞಕಾರ)ದ ಶಬ್ದಗಳನ್ನು ಶೃಂಗಾರ ಕವಿ ಕೊಟ್ಟಂತೆ ಉದಾಹರಿಸಿರುವುದನ್ನು ದಯವಿಟ್ಟು ನೋಡಿ.

ಲಿನಕ್ಸಾಯಣ - ೨೦ - ನೆಟ್ವರ್ಕ್ ನಲ್ಲಿ ಇಣುಕಿ ನೋಡು

ನೆಟ್ವರ್ಕ್ ಗೆ ನನ್ನ ಲಿನಕ್ಸ್ ಅನ್ನ ಕನೆಕ್ಟ್ ಮಾಡ್ಕೊಂಡ್ರೆ, ಇತರೆ ಕಂಪ್ಯೂಟರ್ಗಳನ್ನ ನಾನು ನನ್ನ ಡೆಸ್ಕ್ಟಾಪ್ ನಿಂದಲೇ ಸಂಪರ್ಕಿಸ ಬಹುದೇ? ಆ ಕಂಪ್ಯೂಟರ್ ನ ಫೈಲ್ ಗಳನ್ನ ಹೆಕ್ಕಿ ತೆಗೆಯ ಬಹುದೇ ಅನ್ನೋ ಪ್ರಶ್ನೆಗಳು ನಿಮ್ಮಲ್ಲಿರ ಬೇಕಲ್ವಾ?

ಈ ಪುಟ್ಟ ಕಂದಮ್ಮನ ತಪ್ಪಾದ್ರೂ ಏನು??

ಸ್ನೇಹಿತರೆ,

ಇತ್ತಿಚೆಗೆ ಗಮನಿಸಿದ್ದಿರಾ? ಬೆಂಗಳೂರಿನಲ್ಲಿ ಪುಟ್ಟ ಕಂದಮ್ಮರ ಮೇಲೆ ಅತ್ಯಾಚಾರದ ಪ್ರಕರಣಗಳು ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಲಿವೆ. ಈ ಎಲ್ಲ ಘಟನೆಗಳಲ್ಲಿ, ದಿನಕ್ಕೆ ೪ ಕನ್ನಡ ಪತ್ರಿಕೆ ಓದೋ ನನಗೆ ಕಂಡ ಎರಡು ಕಾಮನ್ ಅಂಶಗಳು ಏನಂದ್ರೆ,

ಈ ಪುಟ್ಟ ಕಂದಮ್ಮನ ತಪ್ಪಾದ್ರೂ ಏನು??

ಸ್ನೇಹಿತರೆ,

ಇತ್ತಿಚೆಗೆ ಗಮನಿಸಿದ್ದಿರಾ? ಬೆಂಗಳೂರಿನಲ್ಲಿ ಪುಟ್ಟ ಕಂದಮ್ಮರ ಮೇಲೆ ಅತ್ಯಾಚಾರದ ಪ್ರಕರಣಗಳು ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಲಿವೆ. ಈ ಎಲ್ಲ ಘಟನೆಗಳಲ್ಲಿ, ದಿನಕ್ಕೆ ೪ ಕನ್ನಡ ಪತ್ರಿಕೆ ಓದೋ ನನಗೆ ಕಂಡ ಎರಡು ಕಾಮನ್ ಅಂಶಗಳು ಏನಂದ್ರೆ,

ಭಾರತದಲ್ಲಿಯ ಇಸ್ಲಾಮ್ ಮೂಲಭೂತವಾದಿಗಳನ್ನು ಮತ್ತು ಕೋಮುವಾದವನ್ನು ಎದುರಿಸುವುದು ಹೇಗೆ?

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಸೆಪ್ಟೆಂಬರ್ 26, 2008 ರ ಸಂಚಿಕೆಯಲ್ಲಿನ ಲೇಖನ.)

ಮತ್ತೆ ಇನ್ನೊಂದು ದೊಡ್ಡ ಊರಿನಲ್ಲಿ ಬಾಂಬ್‌ಗಳು ಸ್ಫೋಟಿಸಿವೆ. ಕಳೆದ ವಾರ ದೆಹಲಿಯಲ್ಲಿ ನಡೆದ ಸ್ಫೋಟಗಳಿಂದ ಇಲ್ಲಿಯವರೆಗೆ 21 ಜನ ಸತ್ತಿದ್ದಾರೆ. ಭಾರತದಲ್ಲಿನ ಪ್ರಜಾಪ್ರಭುತ್ವವನ್ನು ಮತ್ತು ಇಲ್ಲಿಯ ವೈವಿಧ್ಯತೆಯನ್ನು ಸಹಿಸದ ಕೆಲವು ವಿಕೃತ ಮನಸ್ಸಿನ ಜನ ಕೈಗೊಂಡ ದಾಳಿ ಇದು. ವಿಪರ್ಯಾಸ ಏನೆಂದರೆ, ಮತಾಂಧತೆ ಮತ್ತು ಜನಾಂಗದ್ವೇಷದಿಂದ ನರಳುವ ಈ ಗುಂಪಿನ ಪ್ರತಿ ಕಾರ್ಯವೂ ಅವರಂತಹುದೆ ಆಲೋಚನೆಗಳ ಇನ್ನೊಂದು ಗುಂಪಿಗೆ ಬಲವನ್ನು ನೀಡುತ್ತ್ತಿದೆ. ಆ ಮಟ್ಟಿಗೆ ಅವರ ಕೃತ್ಯಗಳಿಗೆ ದುಪ್ಪಟ್ಟು ವಿನಾಶಕಾರಿ ಬಲವಿದೆ. ಇಂತಹ ಘಟನೆ ಘಟಿಸುವ ಪ್ರತಿಸಲವೂ ದೇಶ ತಕ್ಕಷ್ಟು ಮಟ್ಟಿಗೆ ಅಸ್ಥಿರವೂ ಅನಾಗರಿಕವೂ ಆಗುತ್ತಿದೆ. ದೇಶ ಇಂತಹುದನ್ನು ತಡೆದುಕೊಳ್ಳಬಲ್ಲ ಬಲ ಕ್ಷೀಣಿಸುತ್ತಿದೆ.

ಈ ಸಂದರ್ಭದಲ್ಲಿ ನಮ್ಮ ಸರ್ಕಾರಗಳು ಕೋಮುವಾದವನ್ನು ಇಷ್ಟು ದಿನ ಎದುರಿಸಿದ್ದಕ್ಕಿಂತ ಬೇರೆ ರೀತಿಯಲ್ಲಿ ಎದುರಿಸದಿದ್ದರೆ ನಮ್ಮ ದೇಶದ ಭವಿಷ್ಯ ಇನ್ನೂ ಕರಾಳವಾಗಲಿದೆ. ಅದು ಅಪನಂಬಿಕೆಯಿಂದ, ಸಂಘರ್ಷಗಳಿಂದ, ಅಂತಃಕಲಹಗಳಿಂದ, ಭೀಭತ್ಸ ಘಟನೆಗಳಿಂದ ಕೂಡಲಿದೆ. ಈಗ ಘಟಿಸುತ್ತಿರುವ ಘಟನೆಗಳಿಂತ ಹೆಚ್ಚು ಪಾಲು ಮುಂದಕ್ಕೆ ಘಟಿಸುವ ಸಾಧ್ಯತೆಗಳಿವೆ. ಕಳೆದ ಒಂದು ವರ್ಷದಲ್ಲಿ ಆಗಿರುವ ಬಾಂಬ್ ಸ್ಫೋಟಗಳನ್ನು ಮತ್ತು ಕೋಮುಹಿಂಸಾಚಾರಗಳನ್ನು ಗಮನಿಸಿದರೆ ಸಾಕು, ಭಯೋತ್ಪಾದನೆ ಮತ್ತು ಕೋಮುವಾದದ ಸಮಸ್ಯೆಯನ್ನು ಮುಂದೂಡುವ ಸ್ಥಿತಿಯಲ್ಲಿ ಭಾರತೀಯ ಸಮಾಜ ಇಲ್ಲದಿರುವುದನ್ನು ಅದು ತೋರಿಸುತ್ತದೆ.

ನಮ್ಮ ದೇಶದ ಜನಸಂಖ್ಯೆಯಲ್ಲಿ ಶೇ. 13 ರಷ್ಟಿರುವ ಭಾರತೀಯ ಮುಸಲ್ಮಾನರು ನಮ್ಮದೇ ನೆಲದವರು. ಇವರಲ್ಲಿನ ಬಹುಪಾಲು ಜನ ನಾನಾ ಕಾರಣಗಳಿಗೆ ಹಿಂದೂ ಸಮಾಜದಿಂದ ಮುಸಲ್ಮಾನ ಮತಕ್ಕೆ ಮತಾಂತರವಾದವರು. ಇತರೆಲ್ಲರಂತೆ ಸಹಸ್ರಾರು ವರ್ಷಗಳಿಂದ ಭಾರತದ ನೆಲದಲ್ಲಿ ಬೇರು ಬಿಟ್ಟವರು. ಆದರೆ, ಭಾರತದ ಇವತ್ತಿನ ಸಂದರ್ಭದಲ್ಲಿ ತೀರಾ ಅಪನಂಬಿಕೆಯಿಂದ, ಪರಕೀಯತೆಯಿಂದ, ಬಡತನದಿಂದ, ರಾಜಕೀಯ ಮತ್ತು ಸಾಂಸ್ಕೃತಿಕ ನಾಯಕತ್ವದ ದಾರಿದ್ರ್ಯದಿಂದ, ತನ್ನದೇ ಮತದ ಪುರೋಹಿತಶಾಹಿಯಿಂದ ನರಳುತ್ತಿರುವ ದೊಡ್ಡ ಸಮುದಾಯ ಎಂದರೆ ಅದು ಈ ಮುಸಲ್ಮಾನ ಸಮುದಾಯ. ಇದನ್ನು ನಾವು ಕೇವಲ ಭಾರತೀಯ ಮುಸಲ್ಮಾನರ ದುರಂತ ಎನ್ನಲಾಗದು. ಅದು ನಿಜಕ್ಕೂ ಭಾರತದ ದುರಂತ. ಪ್ರತಿ ಏಳು ಭಾರತೀಯರಲ್ಲಿ ಒಬ್ಬ ಈ