ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹಾಸ್ಯ-ಉತ್ತರ ಕರ್ನಾಟಕದ ಧಾಟಿಯಲ್ಲಿ ಹಾಲಿವುಡ್ ಸಿನಿಮಾ ಹಾಗು ರಾಜ್ ಸಿನಿಮಾ ಹಾಲಿವುಡ್ನಲ್ಲಿ..

****************************************************
ಉತ್ತರ ಕರ್ನಾಟಕ ಧಾಟಿಯಲ್ಲಿ ಹಾಲಿವುಡ್ ಸಿನಿಮಾಗಳು
****************************************************
Bend it like beckham____________ಬಸಪ್ಪನ ಗತೆ ಬಗ್ಗಿಸು
What Lies Beneath?____________ಬಡ್ಯಾಗ್ ಏನ್ ಐತಿ?
Saving Private Ryan____________ಹವಾಲ್ದಾರ್ ರಾಮ್ಯಾನ ಉಳಸ್ರಿ
Honey I shrunk the kids!________ಏ ಇಕಿನ,ನಾ ಹುಡುಗನ್ನ ಈಟ ಮಾಡೀನಿ
Body heat ___________________ಮೈಯಾಗಿನ್ ಬಿಶಿ
V for vendetta________________ವ ಅಂದ್ರ ವಂಡತನ

ಜಿ ಟಿ ಎನ್ ಹಾಗೂ ನೆನಪುಗಳು

ನೆನ್ನೆ ಸಂಜೆ ಸಂಪದ ನೋಡಿದಾಗ ಕಂಡದ್ದು ಇದು.

ಇಸ್ಮಾಯಿಲ್ ಬರೆದ ಅತೀ ದುಃಖದ ಸಮಾಚಾರ.

ಜಿಟಿಎನ್ ಇನ್ನಿಲ್ಲ.

ಅವರ ಆತ್ಮಕ್ಕೆ ಶಾಂತಿ ಸಿಗಲಿ ಅನ್ನಲೇ? ಅದು ಕೇವಲ ಔಪಚಾರಿಕವಾಗುತ್ತೆ. ಅಷ್ಟೇ.

ಕನ್ನಡದಲ್ಲಿ ವೈಜ್ಞಾನಿಕ ಬರಹಗಳು ಎಂದಾಗ ಮೊತ್ತಮೊದಲು ಮನಸ್ಸಿಗೆ ಬರುವ ಹೆಸರೇ ಜಿಟಿನಾರಾಯಣರಾಯರದ್ದು.  ಸುಧಾ ಮೊದಲಾದ ಪತ್ರಿಕೆಗಳಲ್ಲಿ ಅವರ ಹಲವು ಬರಹಗಳು ಬೆಳಕು ಕಾಣುತ್ತಿದ್ದವು.

ಆಗ ಪ್ರಕಟವಾಗುತ್ತಿದ್ದ ಕನ್ನಡ ವಿಶ್ವಕೋಶ ಸ್ವಂತಕ್ಕೆ ಕೊಳ್ಳಲು ಬೆಲೆ ಕೈಗೆಟುಕುವಂತಿರಲಿಲ್ಲ.  ಲೈಬ್ರರಿಯಲ್ಲಿ ಸಿಗುವುದರ ಮಾತಂತೂ ಸ್ವಲ್ಪ ಕಷ್ಟವೇ! ಮತ್ತೆ ಐದನೇ ತರಗತಿಯವರೆಗೆ ಇಂಗ್ಲಿಷ್ ಕಲಿತಿಲ್ಲದ ಕಾರಣ ಎನ್ಸೈಕ್ಲೋಪಿಡಿಯಾ ಬ್ರಿಟಾನಿಕಾ ಅಂತಾಹವಂತೂ ನನಗೆ ಸ್ವಲ್ಪ ದೂರವೇ. ಇದೆಲ್ಲಾ ಸೇರಿ, ನಾನು  ಜಿಟಿಎನ್ ಅವರ ಬರಹಗಳು ಎಲ್ಲಿ ಕಂಡರೂ ತುಂಬ ಆಸಕ್ತಿಯಿಂದ ಓದುತ್ತಿದ್ದೆ.

ರೂಪ್ ಕುಂಡ್: ಅಸ್ಥಿಪಂಜರಗಳ ಸರೋವರ

ಜಮ್ಮು ಕಾಶ್ಮೀರದಿಂದ ಅಸ್ಸಾಮಿನವರೆಗೂ ಭಾರತದ ಮಹಾಗೋಡೆಯಾಗಿ ನಿಂತಿದೆ ಹಿಮಾಲಯ. ಹಿಮಾಲಯದ ಮಡಿಲಲ್ಲಿ ಅನೇಕ ನಿಗೂಢ ಸಂಗತಿಗಳನ್ನು, ಸ್ಥಳಗಳನ್ನು ಕಾಣಬಹುದು. ಇಂತಹ ಒಂದು ಸ್ಥಳ ರೂಪ್‌ಕುಂಡ್. ಉತ್ತರಾಂಚಲ ರಾಜ್ಯದ ಚಮೋಲಿ ಜಿಲ್ಲೆಯಲ್ಲಿ ಜನಜೀವನವೇ ಇಲ್ಲದ ಎತ್ತರದ ಹಿಮಾಲಯದ ಪರ್ವತಗಳ ನಡುವೆ ೭೦೦೦ಮೀ ಎತ್ತರದ ತ್ರಿಶೂಲ್ ಪರ್ವತದ ಮಡಿಲಲ್ಲಿರುವ ಚಿಕ್ಕ ಕೆರೆ ರೂಪ್‌ಕುಂಡ್.

ಒಂದು ನಾಯಿ ಕತೆ

ಹೀಗೆ ಒಬ್ಬ ತನ್ನ ಹೆಂಡತಿಯೊಂದಿಗೆ ಜಗಳಾಡಿಕೊಂಡು ಮನೆ ಬಿಟ್ಟು ಹೊರಟ. ಮನೆ ಬಿಟ್ರೆ ಕಚೇರಿ, ಕಚೇರಿ ಬಿಟ್ರೆ ಮನೆ ಅಂತಿದ್ದೋನಿಗೆ ಈಗ ಎಲ್ಲಿಗೆ ಹೋಗಲೂ ತೋಚಲಿಲ್ಲ. ಸುಮ್ಮನೆ ಒಂದು ಪಾರ್ಕಿನಲ್ಲಿ (ಉದ್ಯಾನದಲ್ಲಿ) ಬೆಂಚಿನ ಮೇಲೆ ಕುಳಿತುಕೊಂಡ. ಮನ ಖಾಲಿಯಾಗಿತ್ತು.

ಬಂಗಾಳಿಯಲ್ಲಿ ಬೀಸಿದ ಮುಂಗಾರಿನ ಗಾಳಿ

http://www.screenindia.com/news/Premer-Kahini/303194/

ಕನ್ನಡದ ಚಿತ್ರವೊಂದು ಮೊದಲ ಬಾರಿಗೆ ಬಂಗಾಳಿಯಲ್ಲಿ ರೀಮೇಕ್ ಆಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರವೊಂದು ಪಡೆಯಬಹುದಾದ ಪ್ರಚಾರದಲ್ಲಿ ಅತ್ಯಂತ ಹೆಚ್ಚಿನದ್ದನ್ನು 'ಮುಂಗಾರು ಮಳೆ' ಪಡೆಯುತ್ತಿದೆ.

 

 

sampada.net ಬದಲಿಗೆ ಸಂಪದ.ಕನ್ನಡ

ವೆಬ್-ಸೈಟುಗಳ ಹೆಸರಿನ ಮುಂದೆ .com, .net ನಂತಹ ನಿಗದಿತ ‘ಟಿ.ಎಲ್.ಡಿ’ಗಳ ಬದಲಿಗೆ ಯಾವುದೇ ಶಬ್ಧಗಳನ್ನು ಬಳಸಲು ಅನುಮತಿ ನೀಡಲು ಐಕನ್ನ್ ಅನುಮತಿ ನೀಡಿದೆ. http://www.icann.org/en/announcements/announcement-4-26jun08-en.htm

hi!

ಸಂಪದದ ಮನ
ಬನದೊಳಗೆ
ಅಲೆದಲೆದು
ಕವನ ವನಗಳ
ಗಾಳಿ ಗಂಧದಲಿ
ಕಳೆದು ಹೋದೆ
ಆದ್ರೇನು ಮಾಡುವುದು
ಸಮಯದ ಯಮ
ನಿಯಮಗಳಿಗೆ
ಬದ್ಧಳಾಗಿ
ನೆಟ್ಟು ಬಿಟ್ಟು
ಏಳಬೇಕಾಗಿದೆ!

ಗ್ರಾಹಕರೇ, ನಿಮಗಿದು ಗೊತ್ತೇ..?

ಒಂದಂತೂ ಸತ್ಯ. ಪ್ರತಿಯೊಬ್ಬ ಮನುಷ್ಯನೂ ಗ್ರಾಹಕನೇ. ದೇಶದ ರಾಷ್ಟ್ರಪತಿಯೇ ಇರಲಿ... ಸಾಮಾನ್ಯ ಪ್ರಜೆ ಇರಲಿ.. ಮಕ್ಕಳಿರಲಿ ಮುದುಕರಿರಲಿ... ಎಲ್ಲರೂ ತಮಗೆ ಬೇಕಾದ ವಸ್ತುಗಳನ್ನು ಹಣ ಕೊಟ್ಟು ಕರೀದಿಸಲೇಬೇಕು. ಈಗಂತೂ ಮಾರುಕಟ್ಟೆಯಲ್ಲಿ ಸಿಗುವ ಬ್ರಾಂಡ್ ಗಳು ಅನೇಕ.. ವಿಧವಿಧದ ಜಾಹಿರಾತುಗಳು ಪ್ರತಿದಿನ ನಮ್ಮ ಕಣ್ಣು ಸೆಳೆಯುತ್ತಲೇ ಇರುತ್ತದೆ.

ಹೊಂಗಿರಣ

ಬದುಕು ಒಂದು ಸುಂದರವಾದ ಪಯಣ. ಆದರೆ ಕೆಲವರು ಈ ಬದುಕನ್ನು ,ಸಮುದ್ರಕ್ಕೆ ಮತ್ತೆ ಕೆಲವರು ,ನರಕ ಎಂದು ಕರೆಯುವುದು ಎಷ್ಟರಮಟ್ಟಿಗೆ ಸರಿ.! ಆಲೊಚಿಸಿ ಬಸವಣ್ಣನವರು ಹೇಳಿದಹಾಗೆ''ಕಾಯಕವೇ ಕೈಲಾಸ ' ದುಡಿದವನಿಗೆ ಕಷ್ಟವಿಲ್ಲ ಸೋಮಾರಿಗೆ ಸುಖವಿಲ್ಲ. ಎನ್ನುವ ಹಾಗೆ ನಾವೆಲ್ಲರು ಕಷ್ಟ ಪಟ್ಟು ದುಡಿದರೆ ಫಲ ಸಿಗುತ್ತದೆ ಎಂದು ಬೇರೆ ಹೇಳ ಬೇಕಾಗಿಲ್ಲ.