ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನನ್ನ ಮಗಳಿಗೆ ಲಾಲಿಪಾಪ್ ಬೇಕಂತೆ

ಲಾಲಿಸಬೇಕೆಂದೆ ನಾನೆನ್ನ ಮಗಳನ್ನು
ಲಾಲನೆ ಪಾಲನೆ ಬೇಡ
ಗೋಲಿಯಾಕಾರದ ಲಾಲಿಪಾಪ್ ಬೇಕೆಂದು
ಬಾಲೆಯಲವತ್ತುಕೊಂಡಳು||

ನಾನಂದುಕೊಂಡೆ ನನ್ನ ಐದು ವರ್ಷದ ಮಗಳನ್ನು ಮುದ್ದಿಸಬೇಕೆಂದು. ನಿನ್ನ ಮುದ್ದು ಬೇಡ ಗಿದ್ದು ಬೇಡ.
ಲಾಲಿಪಾಪ್ ಬೇಕಂತಾಳೆ ನನ್ನ ಮಗಳು.

ಒಂದೇ ರೂಪಾಯಿಯಲ್ಲಿ ಮನೆಯಿಂದ ಕಚೇರಿಗೆ

ಇವತ್ತು ಏಳುವುದು ತಡ. ಕಂಪನಿ ಬಸ್ ತಪ್ಪಿ ಹೋಗಿದೆ. ನನ್ನ ಸಹದ್ಯೋಗಿ ಒಮ್ಮೆ ಹೇಳಿದ್ದು ನೆನಪಿಗೆ ಬಂತು. ನನ್ನ ಏರಿಯ ಇಂದ ಹೊಸ ವೋಲ್ವೋ ಬಸ್ ಇದೆ. ಬೆಳಿಗ್ಗೆ ೮:೩೦ ಕ್ಕೆ ಸರಿಯಾಗಿ ಮನೆ ಹತ್ತಿರ ಬರುತ್ತೆ. ಸರಿ. ಇದೊಂದು ನೋಡೇ ಬಿಡೋಣ ಎಂದು ತಯಾರಾಗಿ ಸಮಯಕ್ಕೆ ಬಸ್ ಸ್ಟಾಪಿಗೆ ಹೋಗಿ ನಿಂತೆ. ವಿಜಯನಗರದಿಂದ ಎಲೆಕ್ಟ್ರಾನಿಕ್ ಸಿಟಿ ವೋಲ್ವೋ ಬಂತು. ಸಾಮಾನ್ಯವಾಗಿ

ಬೋಸಾನ್ಸ್...ದೈವ ಕಣಗಳು!

CERN ಅವ್ರು LHC ಬಳಸಿಕೊಂಡು ಮಾಡುತ್ತಿರುವ ಪ್ರಯೋಗಗಳ ಬಗ್ಗೆ ನಮಗೆಲ್ಲ ಕುತೂಹಲ ಹುಟ್ಟಿದೆ. ಈ ಪ್ರಯೋಗಗಳ ಬಹು ಮುಖ್ಯ ಉದ್ದೇಶಗಳಲ್ಲಿ ಒಂದು ಹಿಗ್ಗ್ಸ್ ಬೋಸಾನ್ ನ ( Higgs boson) ಇರುವಿಕೆಯನ್ನು ಕಂಡುಕೊಳ್ಳುವುದು.

ಈಗ ಪ್ರಶ್ನೆ ಅವುಗಳ ಇರುವಿಕೆಯನ್ನು ಯಾಕೆ ಕಂಡು ಕೊಳ್ಳಬೇಕು?
ಏಕೆಂದರೆ ಈ ಬೋಸಾನ್ಗಳೇ ಒಂದು ವಸ್ತುವಿಗೆ mass ಅನ್ನು ಕೊಡುವುದು ಅನ್ನೋ ತರ್ಕ.

ಸೂಪರ್ ಜಾಹಿರಾತು ಲೆಟ್ಸ್ ಟೀಚ್ ಇಂಡಿಯಾ

ನಾವೆಲ್ಲಾ ಆಗಾಗ್ಗೆ ಗಮನಿಸಿರುತ್ತೇವೆ, ನಮ್ಮ ಸಿನಿಮಾ ನಿರ್ದೇಶಕರು ಸಮಾಜಕ್ಕೆ ಸಂದೇಶ ನೀಡುವಂತಹ ಸಿನಿಮಾ ಮಾಡ್ತಾ ಇದೀವಿ ಅಂತ ಹೇಳುತ್ತಿರುತ್ತಾರೆ.

ಭೂಮಿ ಮೇಲೆ ಬ್ಲ್ಯಾಕ್ ಹೋಲ್

ಚಿತ್ರ: LHC ಇಂದ ಅಣುಗಳ ಹೊರಹೊಮ್ಮುವಿಕೆ

"ಅಣ್ಣ ಇವತ್ತು ಭೂಮಿಯಲ್ಲಿ ಬ್ಲ್ಯ್ಯಾಕ್ ಹೋಲ್ ಆಗತ್ತಂತೆ!"

ಹೀಗೆ ನನ್ನ ತಂಗಿ ನನಗೆ ಹೇಳಿದಾಗ ಅಚ್ಚರಿಯಾಯಿತು! "ಯಾರು ನಿಂಗೆ ಈ ರೀತಿ ತಪ್ಪು ಇನ್ಫೊರ್ಮೇಶನ್ ಕೊಟ್ಟಿದ್ದು? ಬ್ಲ್ಯಾಕ್ ಆಗೋದು

ನಕ್ಷತ್ರಗಳು ಮಾತ್ರ. ಭೂಮಿ ಮೇಲೆ ಅದನ್ನು ಮಾಡಬೇಕಂದ್ರೆ ದೊಡ್ಡ ಸಾಹಸವೇ ಮಾಡಬೇಕಾಗತ್ತೆ, ಮಾಡಿದ್ರೂ ಸಣ್ಣ ಪ್ರಮಾಣದಲ್ಲಿ

ಮಾಡಬಹುದು" ಅಂದೆ.

"ಏನೋಪಾ ಯಾರೋ ಹೇಳ್ತಾ ಇದ್ರು! ನಂಗೊತ್ತಿಲ್ಲ", ಅಂದಳು ನನ್ ತಂಗಿ

"ಅಯ್ಯೋ! ಹೀಗೆ ಯಾರೋ ಹೇಳೊ ಮಾತಿಗೆ ತುಂಬಾ ಕಿವಿಕೊಡ್ತಾರೆ ನಂ ಜನ". ಹಾಗೆ ಹೇಳಿ ಅಂತರಿಕ್ಷದ ಬಗ್ಗೆ ನನಗಿರುವ ಇಂಟರೆಸ್ಟಿಂದ ಅಂತರ್ಜಾಲದಲ್ಲಿ ಏನಿದು ಹೊಸ ನಿವ್ಸು ಅಂತ ಗೂಗಲ್ ಮಾಡಿದೆ. ಆಗ ತಿಳಿದದ್ದು ಜೆನೀವಾದಲ್ಲಿ ನಡೆಯುತ್ತಿರುವ ಪರೀಕ್ಷೆ ಬಗ್ಗೆ.

ಕವನ ಸಂಕಲನ

ನನಗೆ ಕವನ ಸಂಕಲ ಎಂದು ಬರೆಯಲು ಒಪ್ಪಿಗೆ ಆಗುತ್ತಿಲ್ಲ. ಕವನ ಸಂಕಲನ ಎರಡೂ ಸಕ್ಕದ ಒರೆಗಳು. ಸಕ್ಕದ "ಕವನ" ಕ್ಕೆ ಬದಲಾಗಿ ಕನ್ನಡದ "ಕಬ್ಬ" ಸಿಕ್ಕಿದೆ. ಆದರೆ ಸಕ್ಕದ ಸಂಕಲನಕ್ಕೆ ನನಗೆ ಯಾವುದೇ ಕನ್ನಡದ ಬದಲಿ ಒರೆ ಸಿಗುತ್ತಿಲ್ಲ. ಹಾಗೆನೇ ನಾನೊಂದು ಬದಲಿ ನುಡಿ ಬರೆದೆ. ಆ ಪದ ಈಗಿದೆ. ಕವನ ಸಂಕಲನ (ಸಕ್ಕ)----->"ಕಬ್ಬಸಿವುಡಿ" (ಕನ್ನಡ). .