ಒಂದೇ ರೂಪಾಯಿಯಲ್ಲಿ ಮನೆಯಿಂದ ಕಚೇರಿಗೆ

ಒಂದೇ ರೂಪಾಯಿಯಲ್ಲಿ ಮನೆಯಿಂದ ಕಚೇರಿಗೆ

ಇವತ್ತು ಏಳುವುದು ತಡ. ಕಂಪನಿ ಬಸ್ ತಪ್ಪಿ ಹೋಗಿದೆ. ನನ್ನ ಸಹದ್ಯೋಗಿ ಒಮ್ಮೆ ಹೇಳಿದ್ದು ನೆನಪಿಗೆ ಬಂತು. ನನ್ನ ಏರಿಯ ಇಂದ ಹೊಸ ವೋಲ್ವೋ ಬಸ್ ಇದೆ. ಬೆಳಿಗ್ಗೆ ೮:೩೦ ಕ್ಕೆ ಸರಿಯಾಗಿ ಮನೆ ಹತ್ತಿರ ಬರುತ್ತೆ. ಸರಿ. ಇದೊಂದು ನೋಡೇ ಬಿಡೋಣ ಎಂದು ತಯಾರಾಗಿ ಸಮಯಕ್ಕೆ ಬಸ್ ಸ್ಟಾಪಿಗೆ ಹೋಗಿ ನಿಂತೆ. ವಿಜಯನಗರದಿಂದ ಎಲೆಕ್ಟ್ರಾನಿಕ್ ಸಿಟಿ ವೋಲ್ವೋ ಬಂತು. ಸಾಮಾನ್ಯವಾಗಿ
ನಾನು: ಒಂದು ಎಲೆಕ್ಟ್ರಾನಿಕ್ ಸಿಟಿ ಕೊಡಿ.
ಕಂಡಕ್ಟರ್: ಒಂದು ರುಪಾಯಿ ಕೊಡಿ.
ನನಗೋ ಗೊಂದಲ. ನನಗೆ ಗೊತ್ತಿದ್ದ ಪ್ರಕಾರ ಟಿಕೆಟ್ ಬೆಳೆ ೪೦ ರೂಪಾಯಿಗಿಂತ ಕಡಿಮೆ ಇಲ್ಲ.
ನಾನು: ಏನಂದ್ರಿ?
ಕಂಡಕ್ಟರ್: ಒಂದು ರುಪಾಯಿ ಚಿಲ್ಲರೆ ಕೊಡಿ.
ನಾನು: ತಮಾಷೆ ಮಾಡ್ತಾ ಇದ್ದೀರಾ?
ಕಂಡಕ್ಟರ್: ಪೇಪರ್ ಓದಿಲ್ವಾ? ರೇಡಿಯೋ ಕೇಳಿಲ್ವಾ?
ನಾನು: ಇಲ್ಲಾರಿ, ಓದಿಲ್ಲ. ಏನಾಯ್ತು?
ಕಂಡಕ್ಟರ್: ಇನ್ನೂ ಎರಡು ಮೂರೂ ದಿನ ಬರೀ ಒಂದೇ ರುಪಾಯಿ ಇ ವೋಲ್ವೋ ಬಸ್ಸಿಗೆ.
ನಾನು: ಅದು ಡಿಸೇಲ್ ಹಕೊಕ್ಕು ಸಾಲೋದಿಲ್ಲ.
ಕಂಡಕ್ಟರ್: ಬರೀ ಪಬ್ಲಿಸಿಟಿ ಸಲುವಾಗಿ ರೀ.
ನಾನು: ಅದರೂ ಬಸ್ ಖಾಲಿ ಹೊಡಿತ ಇದೆ.
ಕಂಡಕ್ಟರ್: ನಿಮ್ಮ ಥರ ಎಲ್ಲ ಜನರಿಗೆ ಇನ್ನೂ ಗೊತ್ತಾಗಿಲ್ಲ ಅನ್ಸುತ್ತೆ.
ಸರಿ. ಒಂದು ರುಪಾಯಿ ಕೊಟ್ಟು ಟಿಕೆಟ್ ತಗೊಂಡೆ. ಬಂದು ಪೇಪರ್ ಓದಿದಾಗ ಗೊತ್ತಾಯಿತು. ಬರುವ ರವಿವಾರದ ತನಕ ವೋಲ್ವೋ ಬಸ್ ಟಿಕೆಟ್ ಬೆಳೆ ಬರೀ ಒಂದೇ ರುಪಾಯಿ.

Rating
No votes yet