ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಒಂದು ಜೋಕ್ಸ (??????)

ನೆನ್ನೆ ಸಂಜೆ TV9 ವಾರ್ತೆ ನೋಡ್ತಾಇದ್ದೆ.....

BREAKING NEWS ಅಂತಾ ಕೊಟ್ರು : "ಕಿಂಗಫಿಶರ್ ವಿಮಾನದಲ್ಲಿ ತೊಂದರೆಯ ಕಾರಣದಿಂದ ಎಲ್ಲಾ ವಿಮಾನಗಳ ಹಾರಾಟ ರದ್ದು" "ವಿಮಾನ ಬೆಂಗಳೂರಿನಿಂದ ಮುಂಬೈಗೆ ಹೊರಟಿತ್ತು"

ಸ್ವಲ್ಪ ಸಮಯದಲ್ಲೇ ಮೇಲಿನ BREAKING NEWS ಬದಲಾಯಿತು.

"ವಿಮಾನ ಬೆಂಗಳೂರಿನಿಂದ ಕೊಚ್ಚಿನ್ ಗೆ ಹೊರಟಿತ್ತು"

ನೀತಿ "

ಕನ್ನಡದ ಕ್ಲಾಸಿನಲ್ಲಿ ಟೀಚರ್ ಒಬ್ಬ ಹುಡುಗನೊಡನೆ
ಕೇಳಿದರು- ಸತ್ಯಹರಿಶ್ಚಂದ್ರನ ಕಥೆಯಿಂದ ನೀನು
ಎಂತಹ ನೀತಿ ಕಲಿತೆ?
ಹುಡುಗ ಎದ್ದು ನಿಂತು ನುಡಿದ- ಮೇಡಂ
ಕಷ್ಟ ಬಂದಾಗ ಹೆಂಡತಿ ಮಕ್ಕಳನ್ನು ಮಾರಬಹುದು !

ಕವಲ್ ದಾರಿ

ನಾನ್ ಹಟ್ಟಿ ಬುಟ್ಟಿ ಏಷ್ಟ್ ವರ್ಸ ಆಯ್ತು ಅಂತ್ ನಂಗೇ ಜ್ಞಾಪ್ಕ ಇಲ್ಲ. ಮೊದ್ಲಿಗೆ ಒಟ್ಟೆ ಪಾಡು, ಆಮೇಲೆ ಹಿಂತಿರುಗಕ್ಕೆ ಏನೋ ಮುಜುಗ್ರ. ನನ್ನ್ ವೇಸ, ಭಾಸೆ, ಆಡು-ಪಾಡು ಎಲ್ಲಾ ಬದಲಾಗದೆ. ಶುರೂಲಿ ತಿಂಗ್ಳಿಗ್ ಒಂದ್ಸಾರಿ ಹೋಗ್ತಿದ್ದೆ. ಓದಾಗ ಏನೇನೋ - ಬಟ್ಟೆ, ಆಟಸಾಮಾನು, ತಿಂಡಿ, ಪಾತ್ರೆ ಎಲ್ಲಾ ಕೊಂಡ್ಕೊಂಡು ಹೋಗಿ ಕೊಡ್ತಿದ್ದೆ. ಅವ್ರಿಗೆ ಖುಷಿಯಾಗೋದು. ಮೈ ಸವ್ರಿ ಏಂಗಾಗ್ಬುಟ್ಟ ಅನ್ನೋವ್ರು. ಆದ್ರೆ ಈಗೀಗ ವರ್ಷಕ್ಕೊಂದ್ಸಾರಿ ಹೋದ್ರು "ಬಂದ್ಯಾ ಬಾ. ಚೆಂದಾಕ್ಕಿದ್ಯ? ಕೆಲ್ಸ ಎಂಗದೆ?" ಅಂತ ಕೇಳಿ ತಮ್ಮ ಪಾಡ್ಗೆ ತಾವು ಓಯ್ತಾರೆ. ಏನಾದ್ರು ತೊಗೊಂಡ್ ಹೋದ್ರೆ, ಒಂದ್ಸಾರಿ ಕಣ್ ಹಾಯ್ಸಿ ಅಲ್ಲೇ ಇಡ್ತಾರೆ. ಮನ್ಸಿಗ್ ಯಾಕೋ ಬೋ ಬೇಸರ ಆಗತ್ತೆ.

ಹಂಗಂತ ಹಟ್ಟಿಗ್ ಹೋಗೋದು, ಬಿಡಕ್ ಆಯ್ತದ? ಯೋಳಿ! ಹಂಗೇ ಯೋಚ್ಸ್ಕೊಂಡ್ ಹೋದೆ ಹಟ್ಟಿ ಕಡೆ ಈ ಬಾರಿನು. ಈ ಸಾರಿ, ಎರಡ್ ವರ್ಷ ಆಮೇಲೆ ಹೋಯ್ತಿರೋದು ಹಟ್ಟಿಗೆ. ಎಂಗೆಂಗಾಗೈತೋ, ಎಂಗೆಂಗವ್ರೋ ವಸಿ ನೋಡಾಣ ಅಂತ ಹೊರಟೆ. ನಮ್ ಪಟ್ಟಣದಾಗೆ ಒಂದ್ ಬಸ್ ಹಿಡ್ಕಂಡ್ ಹೋದ್ರೆ ನಮ್ ಕಾಡಿನ್ತವ ಇರೋ ಒಂದ್ ಹಳ್ಳಿಗ್ ತಂದ್ ನಿಲ್ಸ್ತಾನೆ. ಅಲ್ಲಿಂದ ಬೋ ದೂರ ನಡ್ಕಂಡ್ ಹೋಗ್ಬೇಕು. ಅರ್ಧ ದಿನಾನೆ ಬೇಕು ನಡ್ಯಾಕ್ಕೆ. ಒಬ್ಬನೇ ಬೇರೆ. ಅಭ್ಯಾಸ ಬೇರೆ ತಪ್ಪಿ ಹೋಗದೆ. ಉಸ್ಸಪ್ಪ ಅನ್ಕೋಂಡ್ ಹೋಗ್ಬೇಕಲ್ಲಪ್ಪ ಅಂತ ಯೋಚ್ಸ್ಕೊಂಡು ಬಸ್ ಹತ್ದೆ. ಒಂದೆರಡ್ ಗಂಟೆ ಕಳೀತು. ಒಳ್ಳೆ ನಿದ್ದೆ ಮಾಡಿದ್ದೆ. ಕಂಡಕ್ಟ್ರಪ್ಪಾ ನನ್ ಮುಖ್ದಾಗೆ ಸೀಟಿ ಊದಿ ಎಬ್ರಸ್ದ. "ನಿನ್ ಹಳ್ಳಿ ಬಂದೈತೆ ಇಳ್ಕಳಣ್ಣೌ" ಅಂದ. ನಾನು ನನ್ ಗಂಟು, ಮೂಟೆನೆಲ್ಲಾ ಹಿಡ್ದು ಇಳ್ದೆ. ನಾನು ಇಳ್ದ್ ತಕ್ಷಣ ಬಸ್ನವ ಮುಂದಕ್ ಹೊಂಟ್ಬಿಟ್ಟ.

ಬಾಶೆ ಬರೀ ಸಂವಹನ ಮಾದ್ಯಮ ಅನ್ನೋರಿಗೆ ಏನ್ಗುರು ಸಕ್ಕತ್ ಉತ್ತರ...

http://enguru.blogspot.com/2008/03/kannada-premakke-nooru-mukha.html

 ಬಾಶೆ ಬರೀ ಸಂವಹನ ಮಾದ್ಯಮ ಅನ್ನೋರಿಗೆ 'ಏನ್ಗುರು' ಸಕ್ಕತ್ತಾಗಿ ಉತ್ತರ ಕೊಟ್ಟಿದ್ದಾರೆ.. ಬರೀಸಂವಹನ ಅಲ್ಲ ಸಹಕಾರ ಮಾದ್ಯಮ

ಸೊಡರು

ಇಟ್ಟಲ್ಲೆಲ್ಲ ಬೆಳಕು ಚೆಲ್ಲಿದ ಸೊಡರು
ದಿಟ್ಟಿಸಿ ನೋಡಲು ಕಣ್ಣ ಕುಕ್ಕುವುದು
ಮುಟ್ಟಿದರೆ ಸುಡುವುದು ಏನಿದು ಸೋಜಿಗ?

ಪೞೆಯಾದರೂ ಪೊನ್ನು ಪೊಳಪ ಬಿಡುವುದೇ?

ಪೞಗನ್ನಡ ಪೞಗನ್ನಡಮಮೆಂದೇಕೆ
ಬೀಳುಗಳೆಯವರೋ ಪೞಗನ್ನಡಮಲ್ಲಮಿದುಂ ಪಿರಿಗನ್ನಡಮ್
ಪೞೆಯಾದರೂ ಪೊನ್ನು ಪೊಳಪ ಬಿಡುವುದೆ

 

[ಪಿರಿಗನ್ನಡ ಮಾಯ್ಸ ಹೇಳಿದ್ದು. ನನ್ನಿ ಕಣೊ ಮಾಯ್ಸ]

ಜೀವನವೆ೦ಬ ಪತ್ತೆದಾರಿ ಕತೆ

ರಾತ್ರಿಯ ಸಮಯ ಅವನು ನಿದ್ದೆ ಮಾತ್ರೆಗಳನ್ನು ಕೈಯಲ್ಲಿ ಹಿಡಿದುಕೊ೦ಡಿದ್ದ,ಇನ್ನೇನೂ ಅವುಗಳನ್ನು ಬಾಯಿಗೆ ಹಾಕಬೇಕು ತನ್ನ ಬಾಗಿಲಲ್ಲಿ ನಿ೦ತಿದ್ದ ವ್ಯಕ್ತಿಯನ್ನು ಕ೦ಡು ಗಾಭರಿಯಾದ.ಅವನ ತ೦ದೆ ನಿ೦ತಿದ್ದರು.ಗುಳಿಗೆಗಳನ್ನು ಮುಚ್ಚಿಡಬೆಕೆನ್ನುವಷ್ಟರಲ್ಲಿ,ತ೦ದೆಯೆ ಕೇಳಿದರು