ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕಾರಣ

ಮೋಡ ಕವಿದ ವಾತಾವರಣ
ಮುಸುಕು ಕವಿದ ಅಂತಃಕರಣ
ಕಳೆದು ಹೋಗಿದೆ ಬಾಳ ಕವಿತೆಯ ಚರಣ
ಹುಡುಕಬೇಕಿದೆ ಇದಕೆಲ್ಲ ಕಾರಣ!!

-Vರ ( Venkatesha ರಂಗಯ್ಯ )

ಯಾಕೆ ಹೀಗಾಯ್ತು ???

ಹೂವಿನ ಅಂದ ಮೈಯರಳಿ ನಿಲ್ಲುವುದು ಕಿರಣಗಳ ಸ್ಪರ್ಶದಿಂದ
ದುಂಬಿಯೊಂದು ಹರ್ಷಿಸುವುದು ಪರಿಮಳ ಭರಿತ ಮಲ್ಲಿಗೆಯ ರಸಪಾನದಿಂದ
ಪದಗಳು ಹುಟ್ಟುವುದು ನಿನ್ನ ಅಂದದಿಂದ
ಮೈಮರೆತು ಹಾಡೊಂದು ಗುನುಗುತಿರುವೆನು ನಿನ್ನ ನಾ ಕಂಡ ಕ್ಷಣದಿಂದ !!!

-Vರ ( Venkatesha ರಂಗಯ್ಯ )

ಎ೦.ಎಫ್ ಹುಸೇನ್ ಸಹಾಯಕ್ಕೆ ಸುಪ್ರೀ೦ ಕೋರ್ಟ್

ಭವ್ಯ ಭಾರತದ ಸುಪ್ರೀ೦ ಕೋರ್ಟ್ ಎ೦.ಎಫ್ ಹುಸೇನ್ ಸಹಾಯಕ್ಕೆ ಬ೦ದಿದೆ. ಭಾರತ ಮಾತೆಯನ್ನು ನಗ್ನವಾಗಿ ಚಿತ್ರಿಸಿದ್ದರೂ ಅದು ಕೇವಲ ಕಲಾಕೃತಿ ಎ೦ದಿದೆ (ಟೈಮ್ಸ್ ಸುದ್ದಿ ).

ನಮ್ಮ ರೈತರು ‘ಪರಿಸರ ಸ್ನೇಹಿ ನೆಲಮೂಲಜ್ನಾನ’ದ ಅದ್ಭುತ ವಿಜ್ನಾನಿಗಳು..!

ನಮ್ಮ ರೈತರಿಗೆ ಪರಿಸರವೇ ಶಿಕ್ಷಕ ಎಂಬುದರಲ್ಲಿ ಎರಡು ಮಾತಿಲ್ಲ. ನಿಸರ್ಗವೇ ಅವರ ‘ಅನುಭವ ಕಲಿಕೆ’ಯ ಅತ್ಯುತ್ತಮ ಅನುಭಾವಿ ಪ್ರಯೋಗಶಾಲೆ ಎಂಬುದರಲ್ಲಿ ಸಂದೇಹವೇ ಇಲ್ಲ. ಕೃಷಿ, ಕೃಷಿ ಸಂಬಂಧಿ ಕಾಯಕ ಹಾಗು ಗ್ರಾಮೀಣ ಬದುಕಿಗೆ ಸಂಬಂಧಿಸಿದಂತೆ ಅವರಲ್ಲಿರುವ ಪರಿಸರ ಸ್ನೇಹಿ ನೆಲಮೂಲಜ್ನಾನದ ಪ್ರಯೋಗಗಳು ನಮಗೆ ಬೆರಗು ಹುಟ್ಟಿಸಬಲ್ಲವು. ಇರಲಿ..ಇಲ್ಲದಿರಲಿ. ಶಿವ ಕೊಡಲಿ..ಕೊಡದಿರಲಿ. ಆ ಸಂತೃಪ್ತಿಯ, ನೆಮ್ಮದಿಯ ಬದುಕು ಅವರು ಕಂಡುಕೊಂಡಿದ್ದು, ಕಟ್ಟಿಕೊಂಡಿದ್ದು ಇದೆಯಲ್ಲ..ಬಹಳ ಸಾರಿ ನನ್ನಲ್ಲಿ ವಿಸ್ಮಯ ಮೂಡಿಸಿದೆ.

ಯಾವ ವಿಶ್ವವಿದ್ಯಾಲಯದಲ್ಲಿಯೂ ಕಲಿಸಲಾಗದ. ನಾಲ್ಕು ಗೋಡೆಗಳ ಮಧ್ಯೆ ಹೇಳಿಕೊಡಲಾಗದ, ತಮ್ಮ ಅನುಭವ, ಸಾಂದರ್ಭಿಕ ಸಮಸ್ಯೆಗಳನ್ನು ಆಧರಿಸಿ ತಕ್ಷಣ ಪರಿಹಾರ ಕಂಡುಕೊಳ್ಳುವ ವಿಶಿಷ್ಠ ಪ್ರಯೋಗಗಳ ಜ್ನಾನ ಭಂಡಾರ ಅವರಲ್ಲಿದೆ. ಹಾಗಾಗಿ ‘ವಿಜ್ನಾನಿಗಳು’ ನಮ್ಮ ನೇಗಿಲಯೋಗಿಗಳು. ಅನುಭವದಲ್ಲಿ ಅಮೃತತ್ವ ಸವಿದ, ಸಿಹಿ-ಕಹಿಯ ಸಮಪಾಕದ ಬದುಕನ್ನು ಅನುಭವಿಸಿ ಅರಿತವರು ಅವರು.

ನಾಳೆಯಿಂದ ಜಗತ್ತಿನ ನಾಶ ಶುರುವಂತೆ

ಶರಣು ಸಂಪದಿಗರಿಗೆ,
ನಾಳೆಯಿಂದ ಜಗತ್ತಿನ ನಾಶ ಶುರುವಂತೆ, ಅದನ್ನು ಜರ್ಮನಿಯ ವಿಜ್ಞಾನಿಗಳು ಪ್ರಯೋಗ ಮಾಡ್ತಾರಂತೆ!!!
೨೧-೧೨-೨೦೧೨ ಕ್ಕೆ ಪೂರ್ತಿ ಭೂಮಿ ನಾಶವಾಗುತ್ತಂತೆ....
ಬೇಕಾದರೆ ಈ ಲಿಂಕನ್ನು ನೋಡಿ.
http://in.news.yahoo.com/32/20080909/1072/ten-will-the-world-end-tomorrow.html

ಇದು ನಿಜವೋ ಸುಳ್ಳೋ ಒಂದು ತಿಳಿತಾಯಿಲ್ಲ....
ಗೊತ್ತಿದ್ದೋರು ದಯವಿಟ್ಟು ತಿಳಿಸಿ.

ನಿಮ್ಮ,
ಗಿರೀಶ ರಾಜನಾಳ.

ಕವಿ- ತೆ

ಕವಿ- ತೆ
ಕವಿಯ
ಮುಖವಾಡ ಹೇಗೂ
ಇರಬಹುದು.
ನಗು, ಗಂಭೀರ,
ವಾಚಾಳಿ........
ಕವಿತೆ,
ಇದು ಮುಖವಾಡವಲ್ಲ.
ಒಳಗಿನ ತುಡಿತ
ಮನಸ್ಸಿನ ಕುದಿತ
ಅಂತರಾಳದ ಸುಪ್ತ
ಅಗ್ನಿಕೆಂಡ.....
ನಿಧಾನವಾಗಿ ಬಿಸಿಯೇರಿದಂತೆ
ಕವಿಯ ಮುಖಕ್ಕೆ ಹಿಡಿದ
ನಿಜದ ಕನ್ನಡಿ
ಕವಿತೆ

ಅನಾಮಿಕೆಯ ಪುರಾಣ

ಈ ಹಿಂದೆ ಶಿವಕುಮಾರರವರು ಮಧ್ಯಮ ಬೆರಳಿನ ಬಗ್ಗೆ ಬರೆದಿದ್ದರು. ನನಗೂ ಸಂಸ್ಕೃತದಲ್ಲಿ ಅನಾಮಿಕಾ (ಉಂಗುರ ಬೆರಳಿನ) ಬಗ್ಗೆ ತಿಳಿಸಬೇಕೆನ್ನಿಸಿದೆ.
ಸಂಸ್ಕೃತದಲ್ಲಿ
ಅಂಗುಷ್ಠ=ಹೆಬ್ಬೆರಳು
ತರ್ಜನೀ=ತೋಱುಬೆರಳು (ಕೆರೆಯುವ ಬೆರಳು. ಸಾಮಾನ್ಯವಾಗಿ ಈ ಬೆರಳಿನಿಂದಲೇ ಕೆರೆಯುವುದು).
ಮಧ್ಯಮಾ=ನಡುವಿನ ಬೆರಳು
ಅನಾಮಿಕಾ=ಹೆಸರಿಲ್ಲದವಳು
ಕನಿಷ್ಠಿಕಾ=ಕಿಱುಬೆರಳು.

IT ಜೀವನ ನೀರ ಮೇಲಣ ಗುಳ್ಲೇನಾ

ವಿಪ್ರೊ ದವರು ೧೦೦೦ ಜನಕ್ಕೆ ಕೈ ಎತ್ತಿದರಂತೆ! :(
http://www.siliconindia.com/shownews/46257
ನನ್ನೊಬ್ಬ ಕ್ಲಾಸ್ಮೇಟ್ ಸಹಾ ಈ ಲಿಸ್ಟ್ ನಲ್ಲಿ ಸೇರಿಕೊಂಡಿದ್ದು ನನಗೆ ತುಂಬಾನೆ ಬೇಸರ ತರಿಸಿತು.

ಎಲ್ಲಿವರ್ಗೂ ನಮ್ಮಿಂದ ಲಾಭ ಬರುತ್ತೋ ಅಲ್ಲಿವರ್ಗೂ ಹೊಗಳ್ತಾ.. ಹೈಕ್ ಕೊಡ್ತಾ ...