ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಿಜಸ್ಥಿತಿ ಮರೆಮಾಚುವ ಹೆಮ್ಮೆಯ ಸಂಗತಿ

ಬೆಳಗಾಗಿ ನ್ಯೂಸ್ ಓದೋವಾಗ ಒಂದು [:http://www.ibnlive.com/news/emergency-pill-for-west-pharma-giant-indias-arrives/67029-7.html|ರಾಷ್ಟ್ರೀಯ ಸುದ್ದಿ ಪ್ರಸಾರ ಸಂಸ್ಥೆಯ] ವೆಬ್ಸೈಟಿನ ಸುದ್ದಿಯೊಂದು ಹೀಗಿತ್ತು:

"India is emerging as a destination for high value R&D alongside the lower value manufacturing and clinical trial work for western pharmaceutical giants, says a study by US based academic Vivek Wadhwa."

"ಕ್ಲಿನಿಕಲ್ ಟ್ರಯಲ್" ನಡೆಸಲು ಭಾರತ ದೇಶ ನೆಲೆಯಾಗಿರುವುದು "emerging" ಅಥವ "high value" ಅನ್ನೋ ಪದಗಳ ಜೊತೆ ಮೂಡುವುದೇ ಸರಿಯಿಲ್ಲ. ಒಂದೊಮ್ಮೆ ಮೂಡಿದರೆ 'ಎಮರ್ಜಿಂಗ್' ಮತ್ತು 'ಹೈ ವ್ಯಾಲ್ಯೂ' ಎನ್ನುವುದು ಯಾರಿಗೆ ಎಂಬ ಪ್ರಶ್ನೆ ಹಾಕಿಕೊಳ್ಳಬೇಕಾಗುತ್ತದೆ! ಭಾರತ ಹೀಗೊಂದು "ಕ್ಲಿನಿಕಲ್ ಟ್ರಯಲ್" ಅಥವ ಹೊಂದಿಕೊಂಡಂತೆ "R&D" ನೆಲೆಯಾಗಿರುವುದು ಇಲ್ಲಿ ದುಡ್ಡು ಕೊಟ್ಟು ಪ್ರಯೋಗಗಳಿಗೆ ಬೇಕಾದುದನ್ನೆಲ್ಲವನ್ನೂ ಹೆಚ್ಚಿನ ತಲೆನೋವಿಲ್ಲದೆ ರೆಡಿಮಾಡಬಹುದಾಗಿರುವುದರಿಂದ ಅಷ್ಟೆ. ಪ್ರಯೋಗಕ್ಕೆ ಒಪ್ಪುವ ಬಡ ಪೇಶೆಂಟುಗಳು ಸಿಗುತ್ತಾರೆ. ಏನು ನಡೆಯುತ್ತಿದ್ದರೂ ಹೆಚ್ಚು ತಲೆಕೆಡಿಸಿಕೊಳ್ಳದ ತಲೆಕೆಡಿಸಿಕೊಳ್ಳಬೇಕಾದವರು ಸಿಗುತ್ತಾರೆ. ತಮ್ಮ ಸ್ವಾರ್ಥಕ್ಕೆ ಯಾವುದೋ ಹೊಸ ಡ್ರಗ್ಗುಗಳನ್ನ ಏನೂ ಹಿಂಜರಿಕೆಯಿಲ್ಲದೇ ಬರೆದುಕೊಡುವ ಡಾಕ್ಟರರು ಸಿಗುತ್ತಾರೆ. ಡ್ರಗ್ ಕಂಪೆನಿಗಳ ಲಾಬಿ ಅಲ್ಲಿಲ್ಲಿ ಹೊರಬಂದ ದನಿಯನ್ನು ಹತ್ತಿಕ್ಕುವಷ್ಟು ಕ್ಷಮತೆಯುಳ್ಳದ್ದಾಗಿದೆ. ಹೀಗಿರುವಾಗ ಭಾರತದಲ್ಲಿ ಇವೆಲ್ಲ ನಡೆಯುತ್ತಿರುವುದು ಆಶ್ಚರ್ಯದ ಸಂಗತಿಯಲ್ಲ.

ಹಣತೆಯ ದಾರಿ

ಹತ್ತಿ ಉರಿಯುತಿರಲಿ ಹಣತೆ
ವಿಷಬೀಜದ ಬಸಿರ ಬೆಳಾಕಾಗಿಸಿ,
ಮನದುಗಡ ಗುಡ್ಡಗಳನೇರಿ ಬರಲಿ,
ಕೆಲ ಕಾಲ್ದರಿಯಲಿ ತಪ್ಪಿ ಕಣಿವೆಯ ಸೇರೆ
ಮಿಂಚಂತೆ ಮೀರಿ ಬರಲಿ,
ಮತ್ತೇರು ಹಾದಿಯ ತೋರಲಿ.
ಸವೆದ ದಾರಿಯಲಿ ನೆಳಲ ಹುಡಕದಂತೆ
ಕತ್ತಲೆಯೂ ತುಂಬುತಾ ಇರಲಿ.

ಯಡಿಯೂರಪ್ಪ ಹೆಸರಿನಲ್ಲಿ ಅರ್ಚನೆ

ಮುಜರಾಯಿ ಇಲಾಖೆಯಿಂದ ಹೊರಡಿಸಿದ ಆದೇಶ ವಿವಾದವೆದ್ದು ಈಗ ಆದೇಶವನ್ನೇ ಹಿಂಪಡೆಯಲಾಗಿದೆ.

ಯಡಿಯೂರಪ್ಪನವರ ಹೆಸರಿನಲ್ಲಿ ಅರ್ಚನೆ ಮಾಡಿದ್ದರೆ ಏನು ಲಕ್ಷಾಂತರ ರೂಪಾಯಿ ಖರ್ಚಾಗುತ್ತಿರಲಿಲ್ಲ. ಆದರೂ ಏಕೆ ವಿವಾದವೆಬ್ಬಿಸಿದರು?

ಹಿಂದೆ ರಾಜ ಮಹಾರಾಜರುಗಳ ಕಾಲದಲ್ಲಿ ಹೀಗೆಯೇ ನಡೆಸಲಾಗುತ್ತಿತ್ತು. ಈಗ ಏಕೆ ಇದಕ್ಕೆ ಗೊಣಗಾಟ?

ಗುಜರಾತ್ ಮೋದಿಯ ಮೀಟ್ರು !!

೧೨-೦೬-೯೮ ನಲ್ಲಿ ಕನ್ನಡಪ್ರಭದಲ್ಲಿ ಬಂದ ವರದಿಯನ್ನು ನೋಡಿ.
ಗುಜರಾತ್ ಗೆ ತಾರತಮ್ಯ ತೋರಿಸುತ್ತಿರುವ ಕೇಂದ್ರ ಸರಕಾರಕ್ಕೆ ಮೋದಿ ನೇರ ಸವಾಲೆಸೆದ ಪರಿ ಇದು!
ಮೋದಿಯ ಬಗ್ಗೆ ಪೂರ್ವಗ್ರಹ ಪೀಡಿತರಾಗಿ ಬಾಯಿಬಡಿದುಕೊಳ್ಳುವವರು ಗಮನಿಸಬೇಕು.
ಗುಜರಾತ್ ರೀತಿ ಆಡಳಿತ ಎಂದರೆ ಇದು. ಗುಜರಾತ್ ಮಾದರಿ ಅಭಿವೃದ್ಧಿ ಎಂದರೆ ಇದು.

ಶ್ರೀನಿವಾಸ ಕಲ್ಯಾಣ

ಬೆಂಗಳೂರಿನ ಅರಮನೆ ಮೈದಾನದಲ್ಲಿ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ ನಡೆಸಲು ತಿರುಪತಿ ತಿರುಮಲ ಟ್ರಸ್ಟ್ ನವರು ನಿರ್ಧರಿಸಿದ್ಧಾರಂತೆ ಹಾಗೂ ಅಲ್ಲಿ ಅನ್ನಮಯ್ಯನವರ ಕೀರ್ತನೆಗಳನ್ನು ಹಾಡಿಸುತ್ತಾರಂತೆ.

ಸೊರಗುತ್ತಿರುವ ಸಂಪದ

ಸಂಪದ ಯಾಕೋ ತನ್ನ ಮೊದಲಿನ ಆಕರ್ಶಣೆ ಕಳೆದು ಕೊಳ್ಳುತ್ತಿದೆ ಅನಿಸುತ್ತಾ ಇದೆ. ಮೊದಲು ನಡೆಯುತಾ ಇದ್ದ ಗಂಭೀರ ಚರ್ಚಗಳು , ಕನ್ನಡದ ಬಗೆ ನಡೆಯುತಿದ್ದ brain storming sessionsನ ಜಾಗವನ್ನು ಗಾದೆ ಮಾತುಗಳು, ಸಿನೆಮಾ ಹಾಡುಗಳು ಆಕ್ರಮಿಸಿ ಕೊಂಡಿದ್ದಾವೆ ಅನಿಸುತಾ ಇದೆ ಅನಿಸುತ್ತೆ. ಅರ್ಕುಟ್ ನಲ್ಲಿ ಇಂಥ ಹತ್ತು ಹಲವು ಆಟಗಳನ್ನು ಕಾಣಬಹುದು.

ಹಕ್ಕಿ ಹೋಯ್ತು, ಫೋಟೋ ಬಂತು ಡುಂ ಡುಂ :)

ನಾವು ಚಿಕ್ಕವ್ರಿರೋವಾಗ ಯಾವುದೋ ಕಥೆ ಕೇಳ್ತಿದ್ದ ನೆನಪು. ಅದೇನೋ ಹೋಯ್ತು ಅದೇನೋ ಬಂತು ಡುಂ ಡುಂ ಅಂತ ಅದ್ರಲ್ಲಿ ಬರ್ತಿತ್ತು. ಹಾಳಾದ್ದು ಯಾವ ಕಥೆ ಅಂತ ನೆನಪೇ ಆಗ್ತಿಲ್ಲ ನೋಡಿ.

ಇವತ್ತು ನನ್ನ ಒಬ್ರು ಒಳ್ಳೇ ಗೆಳೆಯರೊಬ್ಬರ ಜೊತೆ ಮಾತಾಡ್ತಿದ್ದೆ.

ದೇಹ ಮತ್ತು ಆತ್ಮ

ಪ್ರತಿ ಮಾನವ ಜನ್ಮದ ಗುರಿಯೂ, ಆಕಾರವುಳ್ಳ ಈ ದೇಹದ ಪರಿಧಿಯನ್ನು ಮೀರಿ ನಿರಾಕಾರವಾದ ಆತ್ಮವನ್ನು ಅರಿತುಕೊಳ್ಳುವುದೆಂದು ಜ್ಞಾನಿಗಳು ಹೇಳಿದ್ದಾರೆ. ಇದು ನಿಜವಾದರೆ, ಹುಟ್ಟಿನಿಂದಲೆ ಮಾನವನಿಗೆ ದೇಹ-ಆತ್ಮದ ಪರಿಜ್ಞಾನ ಏಕಿಲ್ಲ? ಅದನ್ನು ಸಾಧನೆ ಮೂಲಕ ಏಕೆ ತಿಳಿದುಕೊಳ್ಳಬೇಕು? ತಿಳಿದವರು ಕೃಪೆ ಮಾಡಿ ವಿವರಿಸಿ.

ಪ್ರಮಾಣವಚನವನ್ನು ಓದಿಸಬೇಕೇ? ಬೋಧಿಸಬೇಕೇ?

ಸಂವಿಧಾನಕ್ಕೆ ನಿಷ್ಠರಾಗಿರಬೇಕಾದ ಶಾಸಕರು ಹಾಗೂ ಮಂತ್ರಿ ಮಹೋದಯರು ತಮ್ಮ ನಿಷ್ಠೆಯು ಸಂವಿಧಾನದ ಕಡೆಗೆ ಇಲ್ಲ ಎಂದು ರಾಜಾರೋಷವಾಗಿ ಘೋಷಣೆ ಮಾಡುತ್ತಿರುವುದನ್ನು ಕಳೆದ ಕೆಲ್ಲವು ಕಾಲದಿಂದ ನೋಡುತ್ತಿದ್ದೇವೆ.

 ಈ ರೀತಿ ಪ್ರಮಾಣ ವಚನ ಸ್ವೀಕರಿಸುವುದು ಸಂವಿಧಾನಾತ್ಮಕವಾಗಿ ಸಿಂಧು ಎನಿಸಿಕೊಳ್ಳುತ್ತದೆಯೇ?