ಆ ನಾರ್ಥಿಗೆ ಇದು ಬೇಕಿತ್ತಾ
ನೆನ್ನೆ ಆತ ಬಂದಿದ್ದ ವಿನಯ ಅಂತೇನೊ ಅವನ ಹೆಸರು ನಾರ್ಥ್ ಇಂಡಿಯನ್ ಕೆಂಪಗೆ ಇದ್ದಾನೆ. ಅವನ್ನ ನೋಡಿದ ತಕ್ಷಣ ಮೈಯ್ಯೆಲ್ಲಾ ಉರಿದು ಹೋಯ್ತು.
- Read more about ಆ ನಾರ್ಥಿಗೆ ಇದು ಬೇಕಿತ್ತಾ
- 19 comments
- Log in or register to post comments
ನೆನ್ನೆ ಆತ ಬಂದಿದ್ದ ವಿನಯ ಅಂತೇನೊ ಅವನ ಹೆಸರು ನಾರ್ಥ್ ಇಂಡಿಯನ್ ಕೆಂಪಗೆ ಇದ್ದಾನೆ. ಅವನ್ನ ನೋಡಿದ ತಕ್ಷಣ ಮೈಯ್ಯೆಲ್ಲಾ ಉರಿದು ಹೋಯ್ತು.
ಅದೊಂದು ಹೊಸ ಅನುಭವ. ದಿನನಿತ್ಯದ ಕೆಲಸಗಳನ್ನು ಬಿಟ್ಟು ಹೊಸ ಕಾರ್ ತಗೊಂಡು ರಸ್ತೆಗಿಳಿದ ದಿನ. ಚಿಕ್ಕಂದಿನಿಂದ ಕೈನಲ್ಲಿ ಪ್ಲಾಸ್ಟಿಕ್ ಕಾರ್ ಹಿಡ್ಕೊಂಡು ಡ್ರೈವ್ ಮಾಡಿದ್ದೋ ಮಾಡಿದ್ದು. ಕಾಲೇಜಿಗೆ ಬರೋವರ್ಗು ಬೈಕ್ ಕೂಡ ಕೈಗೆ ಬಂದಿರಲಿಲ್ಲ. ಪಿ.ಯು ನಲ್ಲಿ ಲೈಸೆನ್ಸ್ ಇಲ್ಲದೆ ೩ ನಿಮಿಷದಲ್ಲಿ ಅಪ್ಪನ ಸ್ಕೂಟರ್ ನಲ್ಲಿ ಮನೆಯಿಂದ ಕಾಲೇಜ್ ತಲುಪೋದು.
ಹಿಂದೆ ಸಿನಿಮಾ ಎಂದರೆ ಮನೊರಂಜನೆ ಅಂತ ಅಂದ್ಕೊಂಡಿದ್ದೆ , ಇತ್ತೀಚೆಗೆ ಮನೊರಂಜನೆಗೆ ಬದ್ಲು ಮಾರಕವಾಗಿದೆ. ಹಿಂದಿನ ಸಿನಿಮಾಗಳಲ್ಲಿ ನೀತಿ, ಸಾತ್ವಿಕ ಪಾತ್ರಗಳು ,ಒಂಥರ ಚೆನ್ನಾಗಿರುತ್ತಿತ್ತು. ಹಿಂದೆ ಒಂದು ಸಿನಿಮ ಬಂತು, ಅದಾದ್ಮೇಲೆ ಕೆಲವು ಹುಡುಗರು ಆಸಿಡ್ಗಳನ್ನು ಹಾಕೋಕೆ ಸ್ಟಾರ್ಟ್ ಮಾಡಿದ್ರು, ತಮ್ಮ ಪ್ರೀತಿಯನ್ನು ನಿರಾಕರಿಸಿದ ಕಾರಣಕ್ಕೆ.
(ಇ-ಲೋಕ-78)(9/6/2008)
ಇದೊಂದು ಥರಹದ ಗೇಮ್
ನಾವು ಸ್ಕೂಲಲ್ಲಿದ್ದಾಗ ಜಗಳ ಆಡಿದರೆ ಹಾಡೇಳಿಕೊಂಡು ಜಗಳ ಆಡ್ತಿದ್ವಿ
eg.
ಯಾರು ತಿಳಿಯರು ನಿನ್ನ ಭುಜಭಲದ ಪರಾಕ್ರಮ
ಜಗಳವಾ ಆಡಿರುವ ಆ ನಿನ್ನ ದುರ್ಮತಿಯ ಮರ್ಮ
ನಿಂಜೊತೆ ಓದ್ತಿರೋದು ನನ್ನಯ ಕರ್ಮಾ
ಅಂತಾ ನಾ ಹೇಳಿದರೆ
ಇನ್ನೊಬ್ಬಳು
ಜೋಕೆ ಬಲು ಜೋಕೆ
ಮಾಯಗಾತಿ ರೂಪ ಬಂದರೆ
ನಾಮ ಪಂಗನಾಮ ಇವಳಜೊತೆ ನಾವು ಇದ್ದರೆ
ಅದಕ್ಕೆ ನಾನು
ಅರುಣೋದಯದ ರಸಮಯ ಸಮಯದ ಘೋಶಣೆ ಮಾದುವ
ನಿದ್ರೆಯಿಂದಾಗಿರುವ ಜಡತೆಯನು ತೊಲಗಿಸುವ
ಹೊಸದಿನಕೆ ಅಣಿಗೊಳಿಸಲು ಹೊಸ ಮನವ
ಬೇಕೇ ಬೇಕು ಬೆಳಗಾಗುತಲೇ ಬಿಸಿ ಬಿಸಿ ಕಾಫಿ . . .
ಓ ಗೆಳೆಯಾ,
ನೀ ಮಾತನಾಡದೆ ಇರುವುದು ಸರಿಯಾ
ಈ ದಿನಗಳಲಿ ನೀ ಕಳೆದು ಹೋದೆಯಾ
ಮಾಡಬಾರದೇ ಪ್ರೀತಿಯಿಂದ ಒಂದು ಕರೆಯಾ!!
ನೀ ತಂದೆ ಎಲ್ಲರ ಮನಸಿನಲ್ಲಿ ಹರುಶವಾ
ಇದೆಲ್ಲಾ ನೋಡಿ ಆಯಿತು ಒಂದು ವರುಶವಾ
ನಮ್ಮ ಮೇಲೆ ತೋರಿಸುವೆಯ ನೀ ಒಂಚೂರು ಕ್ರಪವಾ
ಕೊಡುವೆಯಾ ಒಂದು ಮಿಸ್ಸ್ ಕಾಲವಾ!!
ಏನೇ ಹೇಳು ನೀ ಬಹಳ ಒಳ್ಳೆಯವ
ಅದಕ್ಕೆ ಕೇಳಬೇಡ ಯಾವ ಸಾಕ್ಶಿಯಾ
ಕನ್ನಡದ ’ನಾಱು’ ಶಬ್ದದ ಅರ್ಥ ವಾಸನೆ ಬೀಱು ಎಂದು. ಆದರೆ ಇದಱರ್ಥವನ್ನು ಬಹಳಷ್ಟು ಜನರು ಬಱಿ ಕೆಟ್ಟ ವಾಸನೆ ಬೀಱು ಎಂದು ಬೞಸುತ್ತಿದ್ದಾರೆ. ಆದರೆ ನಾನು ತಿಳಿದಂತೆ ನಾಱು ಮೂಗಿಗೆ ಕಡುವಾಗಿ (ಗಾಢವಾಗಿ) ಹೊಡೆಯುವ ವಾಸನೆ ಬೀಱು ಎಂಬರ್ಥದಲ್ಲಿ ಎಂದು ಭಾವಿಸಿದ್ದೇನೆ.
ನಿನ್ನ ಜೊತೆ ಹೋಗುವ ಪಯಣ
ದೂರಾಗದ ತೀರದ ನದಿಯಂತೆ
ಬಾನನ್ನು ಅಪ್ಪಿಕೊಳ್ಳುವ
ಕಾಮನ ಬಿಲ್ಲಿನ ನೀಳದಂತೆ
ಬಾಗುವ ಮನವ ಹೊತ್ತು ಹೀಗಾದೆ
ಪ್ರೀತಿಯಲ್ಲಿ ಬಿದ್ದರೂ ಗಾಯವಿಲ್ಲದೆ ಚೂರಾದೆ
ವ್ಯವಹಾರ ಜ್ಞಾನದ ಪ್ರೀತಿಯ ತೋರಿಸಿ
ಗಿಡದಂತೆ ಆಸೆ ಹೆಮ್ಮರವಾಗಿದೆ
ಪಾಠ ಪುಸ್ತಕದಲ್ಲೂ ಕಲಿತಿಲ್ಲ
ಯಾರು ಇದ್ದನ್ನು ಕಳಿಸಿಲ್ಲ
ಪ್ರೀತಿ ಹೀಗೆ ಹುಟ್ಟಿ ನಿಂತಿದೆ
ಶಿಲ್ಪಿಯಾದ ನನ್ನ ಕೊಂದು ಶಿಲ್ಪಮಾಡಿ ಹೋದ ಹೆಣ್ಣೆ
ಮುಟ್ಟಿ ಇಂದು ಮರೆಯಾಗೋ ಪಶ್ಚಿಮದಾರಿ ಹುಡುಕೋ ಹೆಣ್ಣೆ
ಮನದಲ್ಲೂ, ಹೃದಯದಲ್ಲೂ ನಿನಗೊಂದು ಭದ್ರ ಸ್ಥಾನ
ಸ್ಪಷ್ಟಪಡಿಸಿದ ಪ್ರೀತಿಗೆ ಭಾವನೆಗಳ ಬಾನೆತ್ತರದ ಮೌನ
ಇದು ನ್ಯಾಯವೇ ಹೇಳು ಬಾರೆ
ನಿನ್ನಹಾಗೆ ಮನಸ್ಸು ನನ್ನಲಿಲ್ಲ ಮುಳ್ಳಿನ ತೇರೆ
ನೀ ಮಳೆಯೆಂದಾಗ ನಾ ಕೊಡೆಯಾದೆ
ನೀ ಬಿಸಿಲೆಂದೆ, ನಾ ನಂಬಿ ನೆರೆಲಾದೆ