ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮುಸುಱ್/ಮುಸುಱು

ಮುಸುಱ್, ಮುಸುಱು (ಕ್ರಿಯಾಪದ)=ಮುತ್ತು, ಆವರಿಸು, ಮುಗಿಬೀೞು
ಉದಾಹರಣೆ: ಸಕ್ಕರೆಗೆ ಇಱುವೆಗಳು ಮುಸುಱುತ್ತವೆ.

ಭೂತಕೃದ್ವಾಚಿ: ಮುಸುಱಿ
ವರ್ತಮಾನಕೃದ್ವಾಚಿ: ಮುಸುರ್ವ/ಮುಸುಱುವ

’ಕೊಲಂಬಿಯ ಪೋಸ್ಟ್ ಆಫೀಸ್’

ಅಮೆರಿಕದಲ್ಲಿ ಬಂದು ಎರಡು ತಿಂಗಳಾಗಿವೆ. ನಾನು ಒಮ್ಮೆ ಮಿಸ್ಸೂರಿ ರಾಜ್ಯದ ’ಬೂನ್ ಕೌಂಟಿ,’ ಯಲ್ಲಿರುವ, ಒಂದು ಅಂಚೆ-ಕಚೇರಿಯ ದರ್ಶನಮಾಡಿ, ಸುಮಾರು ಎರಡುಗಂಟೆ ಅಲ್ಲೇ ಕುಳಿತು ವಿದ್ಯಮಾನಗಳನ್ನೆಲ್ಲಾ ವೀಕ್ಷಿಸುತ್ತಿದ್ದೆ.

ಅದರ ಒಂದು ಸಮೀಕ್ಷೆ ಹೀಗಿದೆ  :

ನೋಡಿ. ಕೊಲಂಬಿಯ ಹಳ್ಳಿಯ ಅಂಚೆ ಕಚೇರಿಯ ಕಟ್ಟಡವನ್ನು ೧೯೬೬ ರಲ್ಲಿ ಲಿಂಡನ್. ಬಿ. ಜಾನ್ಸನ್ ರವರು ಉದ್ಘಾಟಿಸಿದರು. ಅಂಚೆಕಚೇರಿಯನ್ನು ನೋಡಿದಾಗ ಆದ ಆನಂದ, ವಿಸ್ಮಯದಿಂದ ನನಗೆ ಒಮ್ಮೆಲೇ ದೀರ್ಘವಾದ ಉಸಿರುಬಿಟ್ಟಂತಾಗಿತ್ತು. ಕಾರಣ ಇಷ್ಟೆ. ನಾನು ನಮ್ಮ ಮುಂಬೈ ನ ಘಾಟ್ಕೋಪರಿನ ಅಂಚೆ ಕಚೇರಿಯನ್ನು ಇದಕ್ಕೆ ಹೋಲಿಸಿದಾಗ, ನಾಚಿಗೆಯಾಯಿತು. ಕೊಲಂಬಿಯ ಒಂದು ಹಳ್ಳಿ. ಎಂತಹ ಅಚ್ಚುಕಟ್ಟು. ಒಂದು ಯಾವುದೋ ನವ-ಬ್ಯಾಂಕಿಗೆ ಹೋದಂತಹ ಅನುಭವ ! ಅಲ್ಲಿನ ಕೌಂಟರಿನಲ್ಲಿ ಕುಳಿತ ನೌಕರರು ಎಷ್ಟು ವಿನಯ, ಹಾಗೂ ಪ್ರೀತಿಗಳಿಂದ ಎಲ್ಲರೊಡನೆ ನಡೆದುಕೊಳ್ಳುವ ರೀತಿ ಅದ್ಭುತವಾಗಿತ್ತು. ಅಲ್ಲಿನ ವ್ಯವಸ್ಥೆಗಳನ್ನು ನಾವು ಮೆಚ್ಚಲೇಬೇಕು.

ಪೋಸ್ಟ್ ಆಫೀಸ್ ಎಂದು ಯಾರೂ ಅದರ ವ್ಯವಸ್ಥೆಯನ್ನು ಅಲ್ಲಗಳೆಯುವುದಿಲ್ಲ. ಎಲ್ಲರೂ ಸುಮಾರು ನಮ್ಮದೇಶದಷ್ಟೇ ಹಳೆಯ ಪೋಸ್ಟ್ ಆಫೀಸ್ ನ್ನು ಆದರಿಸಿ ಗೌರವಿಸುತ್ತಾರೆ. ತಮ್ಮಕೆಲಸದ ಬಗ್ಗೆ ಆತ್ಮವಿಶ್ವಾಸ ಹಾಗೂ ಗೌರವವಿದೆ. ಕೆಲವು ಶಾಖೆಗಳನ್ನು ಉತ್ತಮಗೊಳಿಸಿದ್ದಾರೆ. ಎಲ್ಲೆಲ್ಲಿ ತೊಂದರೆಯಿದೆಯೋ ಅದನ್ನು ಸುಲಲಿತಗೊಳಿಸಲು, ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಸವಲತ್ತುಗಳನ್ನು ಒದಗಿಸುವ ಬಗ್ಗೆ ಅಲ್ಲಿ ಕೆಲಸಮಾಡುವ ನೌಕರರು ತಮ್ಮ ಸ್ವಬುದ್ಧಿಯಿಂದ ಕೆಲಸಗಳನ್ನು ನಿರ್ವಹಿಸುತ್ತಾರೆ.

ಬೇರೆ ಖಾಸಗೀ ಸಂಸ್ಥೆಗಳಿಗೆ ಹೋಲಿಸಿದರೆ, ಕಟ್ಟಡ ಅಷ್ಟೇನೂ ಆಧುನಿಕವಾಗಿಲ್ಲ. ಎಷ್ಟು ಅಚ್ಚುಕಟ್ಟು, ಶುಚಿ. ಏನಾದರೂ ಸಹಾಯಮಾಡಲು ಕಾತುರರಾಗಿರುವ ಸಿಬ್ಬಂದಿವರ್ಗ. ನನ್ನ ಕೆಲಸಮುಗಿಯಿತು. ಬೇರೆ ಕೌಂಟರ್ ಗೆ ಹೋಗಿ ಯೆನ್ನುವ ಮಾತೇಇಲ್ಲ. ಕ್ಯೂನಲ್ಲಿನ ಜನರೆಲ್ಲಾ ಹೋದಮೇಲೆ, ತಮ್ಮ ಗೆಳೆಯ/ಗೆಳತಿಗೆ ತಮ್ಮ ಮುಂದಿನಕೆಲಸದ ಬಗ್ಗೆ ಪೂರ್ಣ ಮಾಹಿತಿಕೊಟ್ಟು ಜವಾಬ್ದಾರಿಯನ್ನು ಒಪ್ಪಿಸಿ, ತಾವು ಮನೆಗೆ ಹೋಗುವ ದೃಷ್ಯವನ್ನು ಕಂಡಾಗ, ನಮಗೆ ಅಮೆರಿಕನ್ ಕಾರ್ಯ-ವೈಖರಿಯ ಸೂಕ್ಷ್ಮ ಪರಿಚಯವಾಗುತ್ತದೆ. ಯಾವ ವಲಯದಲ್ಲಾದರೂ ಅಮೆರಿಕನ್ ಕೆಲಸದ ವಾತಾವರಣ ಎಂತಹವರಿಗೂ ಸ್ಪೂರ್ಥಿದಾಯಕ.

ಗಣಪನ ಗಂಡಾಂತರಗಳು ಅನೇಕ

ಗಣೇಶ ಚತುರ್ಥಿ ಸಂಬ್ರಮ ಸಡಗರ ಅಚರಣೆಯ ಮೂಲಕ ರಾಜ್ಯಾದ್ಯಂತ ನಡೆದಿದೆ. ವಿವಿಧ ಬಗೆ, ವಿವಿಧ ನಮೂನೆಯ ಗಣೇಶನ ಪ್ರತಿಷ್ಠಾಪಿಸಲಾಗಿದೆ. ಪ್ರತಿಷ್ಠಾಪಿಸಲ್ಪಟ್ಟಿರುವ ಅನೇಕ ವಿಗ್ರಹಗಳು ರಸ್ತೆ, ಬೀದಿ ಎನ್ನದೆ ಎಲ್ಲಾ ಕಡೆಯಲ್ಲೂ ಆಕ್ರಮಿಸಿದೆ. ಆದರೆ ಈ ರೀತಿಯ ಮೂರ್ತಿಯನ್ನು ಕೂರಿಸುವುದಕ್ಕೆ ಅನುಸರಿಸಿರುವ ರೀತಿ ನೀತಿ ಮಾತ್ರ ಅನೇಕ.

ಓ, ಬನ್ನಿ, ಸೋದರರೆ, ಬೇಗ ಬನ್ನಿ!

ಯಾಕೋ ಗೊತ್ತಿಲ್ಲ ... ರಾಷ್ಟ್ರಕವಿ ಕುವೆಂಪು ಅವರು ಬಹಳ ನೆನಪಾದರು
ಅವರ ೧೯೩೫ರಲ್ಲಿ ಹೇಳಿದ ’ಮನುಜ ಮತ ವಿಶ್ವಪಥ’ ಇವತ್ತು ಎಷ್ಟು ಪ್ರಸ್ತುತ ಅಲ್ವಾ
ಅವರ ನೆನಪಲಿ ಅವರ ಓ೦ದು ಸೊಗಸದ ರಚನೆ ಇಲ್ಲಿದೆ
ಅವರ ಕೃತಿಯ ಹಾಗೆ ಅವರ ಮನೆಯೂ ಸು೦ದರ

ರಾಷ್ಟ್ರಕವಿ ಕುವೆಂಪುಗಿದೊ ಸಂಪದದ ಓದುಗರ ನಮನ...

ಓ, ಬನ್ನಿ, ಸೋದರರೆ, ಬೇಗ ಬನ್ನಿ!
ಗುಡಿ ಚರ್ಚುಮಸಜೀದಿಗಳ ಬಿಟ್ಟು ಹೊರಬನ್ನಿ,

ನನ್ನ ನೆನಪು ನಿನಗೆ ಬರೋದೇ ಇಲ್ಲವಾ ?

ಈ ಸಾಫ್ಟವೇರ್ ಇಂಜಿನಿಯರ್ ಜೀವನ ಹೇಗೆ ಅಂದ್ರೆ ಸ್ವಲ್ಪ ದಿನ ಸ್ವರ್ಗಾನೆ ತಮ್ಮ ಕೈಲಿ ಇದೆ ಅನ್ನೋವಷ್ಟು ಖುಷಿಯಾಗಿ ಇರ್ತಾರೆ.ಇನ್ನು ಸ್ವಲ್ಪ ದಿನ ಭೂಮಿ ಭಾರ ಎಲ್ಲ ಇವರ ತಲೆ ಮೇಲೆ ಇದೆಯೇನೋ ಅನ್ನೋ ಹಾಗೆ ಇರ್ತಾರೆ. ಒಂದ್ ರೀತಿನಲ್ಲಿ ಹೇಳ್ಬೇಕು ಅಂದ್ರೆ ಇವರುಗಳ ಜೀವನ monsoon change ಆದಾಗೆ ಚೇಂಜ್ ಆಗ್ತಾನೆ ಇರುತ್ತೆ.

ನಿನ್ನ ಕನಸಿನ ಸಿನೆಮಾದಲ್ಲಿ ಹಾರ ಹಾಕಿಸಿಕೊಂಡ ಫೋಟೋವಿನ ಪಾತ್ರ..!

ಕಿಟಕಿಯಾಚೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಬೆಳ್ದಿಂಗಳ ಮೇಲಾಣೆ!

ಮತ್ತೆ ಹೇಳ್ತಿದ್ದೀನಿ,ಐ ಲವ್ ಯು ಕಣೇ..

ಇವತ್ತು ಫೆಬ್ರವರಿ ೧೪.

ನರಸಿಂಹ ಸಾಲಿಗ್ರಾಮ

ಸಾಲಿಗ್ರಾಮಗಳಲ್ಲಿ ಎಶ್ಟು ವಿಧ? ನಾನು ಕೇಳಿರುವಂತೆ ನರಸಿಂಹ ಸಾಲಿಗ್ರಾಮ ಎಂಬುದೊಂದಿದೆ. ಅದು ಉತ್ತರಭಾರತದ ಗಂಡಕಿ ನದಿಯ ದಡದಲ್ಲಿ ಮಾತ್ರವೇ ಸಿಗುವುದಂತೆ. ವಿಷ್ಣು ಸಾಲಿಗ್ರಾಮಗಳ ವಿಷೇಶ ಏನೆಂದರೆ ವಿಷ್ಣು ಸನ್ನಿಧಾನ ಇದರಲ್ಲಿರುತ್ತದೆ ಎನ್ನುತ್ತಾರೆ. ನೀರು ಅಥವಾ ಯಾವುದಾದರೂ ಪಂಚಾಮೃತದಿಂದ ಅಭಿಶೇಖ ಮಾಡುವಾಗ ತನ್ನ ಕಕ್ಷದ ಸುತ್ತಲೂ ಸುತ್ತುತ್ತದಂತೆ.

"ಶಂಖದಿಂದ ಬಂದರೆ ತೀರ್ಥ..."

"ಶಂಖದಿಂದ ಬಂದರೆ ತೀರ್ಥ..."

ಈ ಗಾದೆಯ ಒಳಾರ್ಥ ಗೊತ್ತಿದ್ದರೂ...ಅಕ್ಷರಶಃ ಏನು ಇದರ ಅರ್ಥ ?

ಶಂಖದಿಂದ ಬಂದಾಗ ನೀರಿನಲ್ಲಿ ವೈಜ್ನಾನಿಕ ಬದಲಾವಣೆಗಳನ್ನು ಕಂಡು ಹಿಡಿದಿದ್ದಾರೆ ತಿಳಿಸಿ ....

-ಶ್ರೀ